ಮೈಸೂರು,ಜೂ.29(ಎಸ್‍ಬಿಡಿ)-ಮೈಸೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಹಿನ್ನಡೆಯಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಪ್ರಸಕ್ತ ವರ್ಷದ ಈ 6 ತಿಂಗಳಲ್ಲಿ(ಜನವರಿ-ಜೂನ್) 296.4 ಮಿ.ಮೀ. ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು. ಆದರೆ ಆರಂಭದ 2 ತಿಂಗಳು ಉತ್ತಮ ಮಳೆಯಾಗಿತ್ತಾ ದರೂ ನಂತರದ 4 ತಿಂಗಳಲ್ಲಿ ಮಳೆ ಕೊರತೆ ಎದು ರಾಗಿದೆ. ಜನವರಿಯಲ್ಲಿ 32.6 ಮಿ.ಮೀ., ಫೆಬ್ರವರಿಯಲ್ಲಿ 14.78, ಮಾರ್ಚ್‍ನಲ್ಲಿ 2.7, ಏಪ್ರಿಲ್‍ನಲ್ಲಿ 35.9, ಮೇ ತಿಂಗಳಲ್ಲಿ 72.5 ಹಾಗೂ ಜೂನ್‍ನಲ್ಲಿ 63.2 ಮಿ.ಮೀ (ಈ ದಿನದವರೆಗೆ) ಸೇರಿದಂತೆ…
ಜಿಎಸ್‍ಟಿ ವ್ಯಾಪ್ತಿಗೆ ತೈಲ ಬೆಲೆ ತರುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಿ
June 29, 2021ಮೈಸೂರು,ಜೂ.28(ಪಿಎಂ)-ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕೆಂಬುದೂ ಸೇರಿ ದಂತೆ ವಿವಿಧ ಬೇಡಿಕೆಗಳನ್ನು ಈಡೇ ರಿಸಲು ಆಗ್ರಹಿಸಿ `ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‍ಪೋರ್ಟ್ ಕಾಂಗ್ರೆಸ್’ನ ಕರೆ ಮೇರೆಗೆ ಲಾರಿ, ಟ್ರಕ್ಕರ್ ಸೇರಿದಂತೆ ಎಲ್ಲಾ ರೀತಿಯ ಸರಕು-ಸಾಗಣೆ ವಾಹನ ಮಾಲೀಕರ ಸಂಘಟನೆಗಳ ವತಿಯಿಂದ ಸೋಮವಾರ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸುವ ಮೂಲಕ ದೇಶಾ ದ್ಯಂತ ಕರಾಳ ದಿನ ಆಚರಿಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ರಾಜ್ಯ…
ವಚನಗಳಲ್ಲಿ ಸರ್ವ ವಿಚಾರ ಅಡಕವಾಗಿದೆ
June 29, 2021ಮೈಸೂರು, ಜೂ. 28- ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಏರ್ಪಡಿಸಿದ್ದ 278ನೆಯ ‘ಶಿವಾನುಭವ ದಾಸೋಹ’ ಡಿಜಿಟಲ್ ಕಾರ್ಯಕ್ರಮದಲ್ಲಿ ‘ವಚನ ಗಳಲ್ಲಿ ವೈವಿಧ್ಯತೆ’ ವಿಷಯ ಕುರಿತು ಬೆಂಗಳೂರಿನ ಬಿಎಂಎಸ್ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ. ಶೀಲಾದೇವಿ ಎಸ್.ಮಳೀಮಠ್ ಉಪನ್ಯಾಸ ನೀಡಿದರು. ಬಸವಾದಿ ಶರಣರ ವಚನಗಳಲ್ಲಿ ವಿಜ್ಞಾನ, ಸಮಾಜ, ಶಿಕ್ಷಣ, ಧರ್ಮ, ರಾಜಕೀಯ ಎಲ್ಲ ವಿಚಾರಗಳನ್ನು ಕಾಣ ಬಹುದಾಗಿದೆ. ಕಾಲಕಾಲಕ್ಕೆ ಸಮಾಜ ಸುಧಾರಣೆಗೆ ಬೇಕಾದ ವಿಚಾರಗಳನ್ನು ವಚನಗಳಲ್ಲಿ ತಿಳಿಯಬಹುದು. ಅನುಭವ ಮಂಟಪದಲ್ಲಿ ಎಲ್ಲರಿಗೂ ಮುಕ್ತ…
ವ್ಯಾಪಾರ ವಹಿವಾಟು ನಡೆಸಲು ತಮಗೂ ಅವಕಾಶ ನೀಡುವಂತೆ ಕೆ.ಟಿ.ಸ್ಟ್ರೀಟ್ ವರ್ತಕರ ಆಗ್ರಹ
June 29, 2021ಮೈಸೂರು, ಜೂ. 28(ಆರ್‍ಕೆ)- ತಮಗೂ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವಂತೆ ಮೈಸೂರಿನ ಕೆ.ಟಿ.ಸ್ಟ್ರೀಟ್ ವರ್ತಕರು ಆಗ್ರಹಪಡಿಸಿದ್ದಾರೆ. ಹೋಟೆಲ್ ದಾಸ್‍ಪ್ರಕಾಶ್ ವೃತ್ತದಲ್ಲಿ ಸೋಮವಾರ ಬೆಳಗ್ಗೆ ಏಕಾಏಕಿ ಜಮಾಯಿಸಿದ ಕೆ.ಟಿ. ಸ್ಟ್ರೀಟ್ ಓಲ್ಡ್ ಬ್ಯಾಂಕ್ ರಸ್ತೆ, ಗಾಂಧಿ ಸ್ಕ್ವೇರ್ ಸುತ್ತಮುತ್ತಲಿನ ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ಸ್ ಗೃಹೋ ಪಯೋಗಿ ವಸ್ತು, ಮೊಬೈಲ್ ಶಾಪ್ ಸೇರಿದಂತೆ ಇನ್ನಿತರ ಅಂಗಡಿ ಗಳ ಮಾಲೀಕರು, ಲಾಕ್‍ಡೌನ್ ನಿರ್ಬಂಧ ವಿಧಿಸಿರುವುದರಿಂದ ತಮಗೆ ವ್ಯಾಪಾರವಿಲ್ಲದೆ ತೊಂದರೆಯಾಗಿದೆ ಎಂದು ತಿಳಿಸಿದರು. ದಿನಸಿ, ಹಾಲು, ತರಕಾರಿ, ಕಟ್ಟಡ ಸಾಮಗ್ರಿಗಳು, ಮದ್ಯ…
ಮೈಸೂರಲ್ಲಿ ರಸ್ತೆಗಿಳಿದ ಸಾರಿಗೆ ಬಸ್‍ಗಳು
June 29, 2021ಮೈಸೂರು,ಜೂ.28(ಎಂಟಿವೈ)- ಕೊರೊನಾ 2ನೇ ಅಲೆ ಪ್ರಖರತೆಯಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳು ಮೈಸೂರಲ್ಲಿ 2 ತಿಂಗಳ ಬಳಿಕ ಇಂದು ರಸ್ತೆಗಿಳಿದವು. ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದ ಬಸ್‍ಗಳು ಪ್ರಯಾಣಿಕರ ಸಂಖ್ಯೆಗೆ ಅನು ಗುಣವಾಗಿ ವಿವಿಧೆಡೆ ಪ್ರಯಾಣ ಬೆಳೆಸಿದವು. ಎರಡನೇ ಅಲೆಯಲ್ಲಿ ಸಾವು-ನೋವಿನ ಪ್ರಕರಣ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಏ.28 ರಂದು ಬಸ್‍ಗಳ ಸಂಚಾರ ಸ್ಥಗಿತಗೊಳಿಸ ಲಾಗಿತ್ತು. ಎರಡು ತಿಂಗಳಿಂದ ಡಿಪೋ ದಲ್ಲಿಯೇ ಬೀಡು ಬಿಟ್ಟಿದ್ದ ಬಸ್‍ಗಳು ಇಂದಿನಿಂದ ರಸ್ತೆಗಿಳಿದವು. ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ…
ಎಸ್‍ಎಂಟಿ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರು, ಸಿಬ್ಬಂದಿಗೆ ಸನ್ಮಾನ
June 29, 2021ಮೈಸೂರು,ಜೂ.28(ಆರ್‍ಕೆ)- ಕೊರೊನಾ ಸೋಂಕು ತೀವ್ರವಾಗಿದ್ದ ಸಂದರ್ಭ ರೋಗಿ ಗಳ ಆರೈಕೆ ಮಾಡಿದ ಮೈಸೂರಿನ ಸೇಟ್ ಮೋಹನ್‍ದಾಸ್ ಕೋವಿಡ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯನ್ನು ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಸನ್ಮಾನಿಸಿದರು. ತುರ್ತು ಸಂದರ್ಭದಲ್ಲಿ ಪ್ರಾಣಭಯ ವನ್ನೂ ಲೆಕ್ಕಿಸದೇ ಸೇವೆ ಸಲ್ಲಿಸಿದ ವೈದ್ಯರು, ಸಿಬ್ಬಂದಿ, ಊಟೋಪಚಾರ ಒದಗಿಸಿದವರ ಸೇವೆಯನ್ನು ಸ್ಮರಿಸಿ ಅಭಿನಂದಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. ಮುಡಾ ಸದಸ್ಯ ರಾದ ಜಿ.ಲಿಂಗಯ್ಯ, ಲಕ್ಷ್ಮೀದೇವಿ, ಆಯುಕ್ತ ಡಾ.ಡಿ.ಬಿ.ನಟೇಶ್, ನಗರ ಯೋಜಕ ಸದಸ್ಯ ಜಯಸಿಂಹ, ಕಾರ್ಯದರ್ಶಿ ಎಂ.ಕೆ.ಸವಿತಾ, ಕಾವೇರಿ ಆಸ್ಪತ್ರೆ ಮುಖ್ಯಸ್ಥ…
ಯುವಕರಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ
June 29, 2021ಮೈಸೂರು, ಜೂ.28(ಎಸ್‍ಪಿಎನ್)- ಯುವ ಜನರಿಂದ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ಮೈಸೂರು ಚಾಮುಂಡಿಬೆಟ್ಟದ ತಪ್ಪಲಿ ನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ವತಿ ಯಿಂದ ಆಯೋಜಿಸಿದ್ದ ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರ ಸೇವಾ ಕಾರ್ಯದಲ್ಲಿ ತೊಡಗಿದ್ದ 96 ಮಂದಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಕೊರೊನಾ ಸಂದರ್ಭದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂಸೇವ ಕರು ನಿಸಾರ್ಥ ಸೇವೆ ಸಲ್ಲಿಸಿದ್ದಾರೆ….
ಸದ್ಯ ಮೈಸೂರಲ್ಲಿ ಸೋಂಕು ಇಳಿಮುಖ
June 29, 2021ಮೈಸೂರು, ಜೂ.28(ಎಸ್‍ಬಿಡಿ)- ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ಕೊರೊನಾ ಸೋಂಕು ತಗ್ಗಿದ್ದು, ದಿನದ ಪಾಸಿ ಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಗಣ ನೀಯ ಇಳಿಕೆಯಾಗು ತ್ತಿದೆ. ಮೈಸೂರು ಜಿಲ್ಲೆ ಯಲ್ಲಿ ಸೋಮವಾರ 282 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿ ತರ ಸಂಖ್ಯೆ 1,65,792ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ 576 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 1,59,288 ಮಂದಿ ಗುಣಮುಖ ರಾಗಿದ್ದಾರೆ. ಮತ್ತೆ 8 ಮಂದಿ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 2,153ಕ್ಕೆ ಹೆಚ್ಚಿದೆ….
ವಿಜಯನಗರ 4ನೇ ಹಂತ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ತೆರವು 8 ಕೋಟಿ ಮೌಲ್ಯದ ಆಸ್ತಿ ಮುಡಾ ವಶಕ್ಕೆ
June 29, 2021ಮೈಸೂರು,ಜೂ.28(ಆರ್‍ಕೆ)- ಮುಡಾ ಸ್ವಾಧೀನಪಡಿಸಿಕೊಂಡಿದ್ದ ಜಾಗ ಒತ್ತುವರಿ ಮಾಡಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ಗಳನ್ನು ಪ್ರಾಧಿಕಾರದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು. ಮೈಸೂರು ತಾಲೂಕು, ಹಿನಕಲ್ ಗ್ರಾಮದ ಸರ್ವೆ ನಂ.9ರಲ್ಲಿ ಬರುವ ವಿಜಯನಗರ 4ನೇ ಹಂತ ಬಡಾವಣೆಯಲ್ಲಿ 33 ಗುಂಟೆ ಒತ್ತುವರಿ ಮಾಡಿ ಅಲ್ಲಿ ಶೆಡ್‍ಗಳನ್ನು ನಿರ್ಮಿಸಿ ಕೆಲವರು ಸ್ವಾಧೀನಾನುಭವ ದಲ್ಲಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮುಡಾ ಆಯುಕ್ತ ಡಾ. ಡಿ.ಬಿ. ನಟೇಶ್ ಅವರು ಖುದ್ದಾಗಿ ನಿಂತು ಪೊಲೀಸ್ ಭದ್ರತೆಯೊಂದಿಗೆ ಸೋಮವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದರು. ಜೆಸಿಬಿ, ಟ್ರಕ್ಕರ್‍ಗಳೊಂದಿಗೆ…
ಮಕ್ಕಳ ಪ್ರತ್ಯೇಕ ಆಸ್ಪತ್ರೆ ಆರಂಭಿಸಲು, ವಿದ್ಯುತ್ ಶುಲ್ಕ ಮನ್ನಾಕ್ಕೆ ಒತ್ತಾಯಿಸಿ ಕಾಂಗ್ರೆಸ್‍ನಿಂದ ಅಂಚೆಪತ್ರ ಚಳವಳಿ
June 29, 2021ಮೈಸೂರು,ಜೂ.28(ಪಿಎಂ)- ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆ ಯಲ್ಲಿ ಮಕ್ಕಳ ಪ್ರತ್ಯೇಕ ಆಸ್ಪತ್ರೆ ಆರಂಭಕ್ಕೆ ಒತ್ತಾಯಿಸಿ ಹಾಗೂ 2 ತಿಂಗಳ ವಸತಿ ವಿದ್ಯುತ್ ಶುಲ್ಕ ಮನ್ನಾ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಂಚೆಪತ್ರ ರವಾನಿಸುವ ಮೂಲಕ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಸೋಮವಾರ ಚಳವಳಿ ನಡೆಸಲಾಯಿತು. ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಅಂಚೆ ಪೆಟ್ಟಿಗೆಗೆ ಪತ್ರಗಳನ್ನು ಮಕ್ಕಳು ಹಾಕುವ ಮೂಲಕ ಚಳುವಳಿಗೆ ಚಾಲನೆ ನೀಡಿದರು. ಮಕ್ಕಳಿಗೆ ಪ್ರತ್ಯೇಕ ಆಸ್ಪತ್ರೆ ವ್ಯವಸ್ಥೆ ಮಾಡುವ…










