ಮೈಸೂರು, ಜೂ.5(ಪಿಎಂ)- ಮೈಸೂರು ನಗರದ ಹಸಿರೀಕರಣಕ್ಕೆ ಮುಂದಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, 15ರಿಂದ 20 ಅಡಿ ಎತ್ತರಕ್ಕೆ ಬೆಳೆದಿ ರುವ 3 ಸಾವಿರ ಗಿಡಗಳನ್ನು ಆಂಧ್ರ ಪ್ರದೇಶದ ರಾಜಮಂಡ್ರಿಯಿಂದ ತಂದು ನಗರದಲ್ಲಿ ನೆಡಲು ಉದ್ದೇಶಿಸಿದೆ. ಈಗಾಗಲೇ 20 ಅಡಿ ಎತ್ತರಕ್ಕೆ ಈ ಗಿಡಗಳು ಬೆಳೆದಿ ರುವ ಹಿನ್ನೆಲೆಯಲ್ಲಿ ಅವುಗಳ ಬದುಕುಳಿದು, ಬೆಳೆಯುವ ಪ್ರಮಾಣ ಶೇ.80ರಷ್ಟು ಇರುವ ಕಾರಣಕ್ಕೆ ರಾಜಮಂಡ್ರಿ ಯತ್ತ ಮುಡಾ ಮುಖ ಮಾಡಿದೆ. ಮೈಸೂರಿನ ಹೊರ ವಲಯದ ನಂಜನಗೂಡು ರಸ್ತೆಯ ದೇವರಾಯನ ಕೆರೆ ಪಕ್ಕದ ಹಸಿರು…
ಕೆಆರ್ ಕ್ಷೇತ್ರದ ಪ್ರತಿ ಮನೆಗೆ ತಲಾ ಎರಡು ಆಯುರ್ವೇದ ಗಿಡ ನೀಡುವ ಅಭಿಯಾನಕ್ಕೆ ಚಾಲನೆ
June 6, 2021ಮೈಸೂರು,ಜೂ.5(ಪಿಎಂ)- ವಿಶ್ವ ಪರಿಸರ ದಿನದ ಅಂಗವಾಗಿ ಶಾಸಕ ಎಸ್.ಎ.ರಾಮ ದಾಸ್ ನೇತೃತ್ವದಲ್ಲಿ ಶನಿವಾರ ಗಿಡ ನೆಡುವ ಕಾರ್ಯಕ್ರಮದ ಜೊತೆಗೆ ಕೆಆರ್ ಕ್ಷೇತ್ರದ ಪ್ರತಿ ಮನೆಗೆ ತಲಾ 2 ಆಯುರ್ವೇದ ಗಿಡಗಳನ್ನು ನೀಡುವ ಅಭಿಯಾನಕ್ಕೂ ಚಾಲನೆ ನೀಡಲಾಯಿತು. ಮೈಸೂರು ಮಹಾನಗರ ಪಾಲಿಕೆ ವಾರ್ಡ್ 56ರ ಕೃಷ್ಣಮೂರ್ತಿ ಪುರಂನ ಅನಂತಸ್ವಾಮಿ ಉದ್ಯಾನವನ ಮತ್ತು ಅಶೋಕಪುರಂನ ಡಾ.ಅಂಬೇಡ್ಕರ್ ಉದ್ಯಾನ ವನದಲ್ಲಿ ಸಸಿ ನೆಡಲಾಯಿತು. ಇದೇ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮ ದಾಸ್, ಇಂದು ವಿಶ್ವ ಪರಿಸರ ದಿನ ಇಂದಿಗೇ ಮಾತ್ರವೇ ಪರಿಸರ…
ಮೈಸೂರಿನ ವಿವಿಧೆಡೆ ಗಿಡ ನೆಟ್ಟು `ವಿಶ್ವ ಪರಿಸರ ದಿನ’ ಆಚರಣೆ
June 6, 2021ಮೈಸೂರು, ಜೂ.5(ಎಂಟಿವೈ)- ವಿಶ್ವ ಪರಿಸರ ದಿನದಂಗವಾಗಿ ಮೈಸೂರಲ್ಲಿ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಶನಿವಾರ ಪರಿಸರಕ್ಕೆ ಪೂರಕವಾದ ಗಿಡ ಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷ ಣೆಗೆ ಆದ್ಯತೆ ನೀಡುವ ವಾಗ್ದಾನ ಮಾಡಿದರು. ಅರಣ್ಯ ಇಲಾಖೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ ಮೈಸೂರಿನ ಬಂಡೀಪಾಳ್ಯ ದಲ್ಲಿ ಅರಣ್ಯ ಇಲಾಖೆ ನಿರ್ವಹಿಸುವ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವಿವಿಧ ಜಾತಿಯ ಸಸಿಗಳನ್ನು ವೀಕ್ಷಿಸಿದರು. ಕೋವಿಡ್ ಸಾಂಕ್ರಾ ಮಿಕದ ಕಠಿಣ ಸಂದರ್ಭದಲ್ಲೂ ಅರಣ್ಯ ಇಲಾಖೆ ಸಿಬ್ಬಂದಿ ಉತ್ತಮವಾಗಿ…
ಮೈಸೂರಲ್ಲಿ 25 ಸಾವಿರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ
June 6, 2021ಮೈಸೂರು,ಜೂ.5(ಪಿಎಂ)- ಮೈಸೂರು ಮಹಾನಗರ ಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿ ಸೇರಿದಂತೆ ಇಡೀ ಮೈಸೂರು ನಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಕನಿಷ್ಠ 25 ಸಾವಿರ ಗಿಡಗಳನ್ನು ನೆಡುವ ಅಭಿ ಯಾನಕ್ಕೆ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಚಾಲನೆ ನೀಡಿದರು. ವಿಶೇಷವಾಗಿ ಹೆಚ್ಚು ಆಮ್ಲಜನಕ ನೀಡುವ ಅರಳಿ, ಅತ್ತಿ, ಮತ್ತಿ, ಬಾಗೆ, ಹಲಸು, ನೇರಳೆ, ಮಹಾಗನಿ, ಬೇವು, ಸಂಪಿಗೆ, ನಾಗಲಿಂಗ ಪುಷ್ಪ ಸೇರಿದಂತೆ ವಿವಿಧ ಜಾತಿ ಗಿಡಗಳನ್ನು ನೆಡಲು…
ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಯಶಸ್ವಿಗೊಳಿಸಿ
June 6, 2021ಮೈಸೂರು, ಜೂ.5- ಮೈಸೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ರಮೇಶ್ ಅವರು ದೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ದೊಡ್ಡಕಾಟೂರು ಹಾಗೂ ತಳೂರು ಗ್ರಾಮಕ್ಕೆ ಭೇಟಿ ನೀಡಿ ‘ವೈದ್ಯರ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಶನಿವಾರ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್-19 ತಪಾಸಣೆಗೆ ಅನುಕೂಲವಾಗಲು ಸರ್ಕಾರ ಪ್ರಾರಂಭಿಸಿರುವ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಿಳಿಸಿದರು. ಗ್ರಾಮಗಳಲ್ಲಿ ಸೋಂಕಿನ ಲಕ್ಷಣ ಕಂಡುಬಂದವರನ್ನು ಗುರುತಿಸಿ ಪರೀಕ್ಷೆಗೆ…
ಜೀರೊ ಕಾರ್ಬನ್ ಪ್ರಮಾಣ ಪತ್ರ ಪಡೆದ ‘ಸೈಕಲ್ ಪ್ಯೂರ್ ಅಗರಬತ್ತೀಸ್’
June 6, 2021ಮೈಸೂರು, ಜೂ.5(ಎಂಕೆ)- ಮೈಸೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಸೈಕಲ್ ಪ್ಯೂರ್ ಅಗರಬತ್ತೀಸ್’ ಸಂಸ್ಥೆಯು ವಿಶ್ವದಲ್ಲೇ ಶೂನ್ಯ ಇಂಗಾಲ (ಜೀರೋ ಕಾರ್ಬನ್) ಪ್ರಮಾಣೀಕರಣ ಪತ್ರ ಪಡೆದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪರಿಸರಕ್ಕೆ ಪೂರಕವಾದ ‘ಸೈಕಲ್ ಪ್ಯೂರ್ ಅಗರ ಬತ್ತೀಸ್’ ಕಂಪೆನಿಯ ಕಾರ್ಯವನ್ನು ಯುನೈಟೆಡ್ ಕಿಂಗ್‍ಡಮ್‍ನ ನ್ಯಾಚುರಲ್ ಕ್ಯಾಪಿಟಲ್ ಪಾರ್ಟ್ನಸ್ ಗುರು ತಿಸಿದ್ದು, ಇದು ಹೆಮ್ಮೆಯ ವಿಚಾರ ಎಂದು ಕಂಪೆನಿ ತಿಳಿಸಿದೆ. ಕಂಪೆನಿಯು `ಜೀರೋ ಕಾರ್ಬನ್’ ಸಾಧಿಸಲು ಅನೇಕ ಸಮರ್ಥನೀಯ ಉಪ ಕ್ರಮಗಳೊಂದಿಗೆ ಸಹಕರಿಸಿತು. ತಮಿಳುನಾಡಿನ ಆಂಡಿಪಟ್ಟಿ…
ಆಡಳಿತ ವೈಫಲ್ಯ: ಉಸ್ತುವಾರಿ ಸಚಿವ, ಸಂಸದ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
June 6, 2021ಮೈಸೂರು, ಜೂ.5(ಎಂಕೆ)- ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಅಧಿಕಾರಿಗಳ ಜಟಾಪಟಿ, ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣದಲ್ಲಿ ವಿಫಲ ರಾದ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಂಸದ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗದಿಂದ ಶನಿ ವಾರ ಮೌನ ಪ್ರತಿಭಟನೆ ನಡೆಸಲಾಯಿತು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಂಸದರ ವಿರುದ್ಧ ಭಿತ್ತಿಪತ್ರಗಳನ್ನು ಪ್ರದ…
ಮೈಸೂರು ಜಿಲ್ಲೆ; ಸೋಂಕು ಗಣನೀಯ ಇಳಿಕೆ
June 6, 2021ಮೈಸೂರು, ಜೂ.5(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದರೂ ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲಿ ಶನಿವಾರ 5,800ಕ್ಕೂ ಹೆಚ್ಚು ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 1,155 ಮಂದಿಗೆ ಸೋಂಕು ತಗುಲಿರು ವುದು ದೃಢಪಟ್ಟಿದೆ. ಪಾಸಿಟಿವಿಟಿ ಪ್ರಮಾಣ ಶೇ.19ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕು ಬಾಧಿತರ ಸಂಖ್ಯೆ 1,49,648ಕ್ಕೆ ತಲುಪಿದೆ. 1,633 ಸೋಂಕಿ ತರು ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ ಒಟ್ಟು 1,33,348 ಮಂದಿ ಗುಣಮುಖರಾಗಿದ್ದಾರೆ. ಸೋಂಕು ತಗ್ಗಿದ್ದರೂ ಸಾವಿನ ಪ್ರಮಾಣ ಕಡಿಮೆಯಾಗಿಲ್ಲ….
ಮೈಸೂರಿನ ಭೂ ಮಾಫಿಯಾ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿ
June 3, 2021ಮೈಸೂರು,ಜೂ.2(ಪಿಎಂ)- ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿಯಾಗಿದ್ದು, ಅವರನ್ನು ಟೀಕಿಸುವುದು ಸರಿಯಲ್ಲವೆಂದು ಕೆಲವರ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಸುಮಾರು 25 ವರ್ಷಗಳಿಂದ ಮೈಸೂರಿ ನಲ್ಲಿ ನಡೆದಿರುವ ಭೂ ಮಾಫಿಯಾ ಬಗ್ಗೆ ಸಮಗ್ರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸು ವಂತೆ ಜಿಲ್ಲಾಧಿಕಾರಿಗಳನ್ನು ಕೋರಿದರು. ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದಲ್ಲಿ (ಆರ್ ಗೇಟ್) ಮಲಗಿ ವಿಭಿನ್ನ ವಾಗಿ ಏಕಾಂಗಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೋವಿಡ್ ಹಿನ್ನೆಲೆಯಲ್ಲಿ ಎಸ್‍ಎಸ್ ಎಲ್‍ಸಿ…
ಮೈಸೂರಲ್ಲಿ ಪೌರಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ
June 3, 2021ಮೈಸೂರು, ಜೂ.2(ಎಂಟಿವೈ)- ಕೊರೊನಾ ಹಾವಳಿ ನಡುವೆಯೂ ಪ್ರತಿದಿನ ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿರುವ ಕೊರೊನಾ ವಾರಿಯರ್ಸ್‍ಗಳಾದ ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಬುಧವಾರ 40 ಮಂದಿ ಪೌರಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಯಿತು. ಲಾಕ್‍ಡೌನ್‍ನಲ್ಲಿಯೂ ಪ್ರತಿದಿನ ಮೈಸೂರಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿ ಕರು ಸೋಂಕಿನ ನಡುವೆಯೂ ಸೇವೆ ಮುಂದುವರೆಸುತ್ತಿದ್ದು, ಕೆಲವರು ಈಗಾಗಲೇ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ 15 ದಿನದಲ್ಲಿ ಪಾಲಿಕೆಯ ಮೂವರು ಸಿಬ್ಬಂದಿ ಸೋಂಕಿಗೆ ಬಲಿಯಾದ ಹಿನ್ನೆಲೆಯಲ್ಲಿ ಮುಂಚೂಣಿ ಕಾರ್ಯಕರ್ತರಾದ ಪೌರಕಾರ್ಮಿಕರಿಗೆ ಹಂತ ಹಂತವಾಗಿ ಕೋವಿಡ್ ಪರೀಕ್ಷೆ ನಡೆಸಲು ಪಾಲಿಕೆ…










