ಮೈಸೂರು

ಕಲಾಮಂದಿರದ ಅಂಗಳದಲ್ಲಿ 471 ಭದ್ರತಾ, ಸ್ವಚ್ಛತಾ ಸಿಬ್ಬಂದಿಗೆ ಲಸಿಕೆ
ಮೈಸೂರು

ಕಲಾಮಂದಿರದ ಅಂಗಳದಲ್ಲಿ 471 ಭದ್ರತಾ, ಸ್ವಚ್ಛತಾ ಸಿಬ್ಬಂದಿಗೆ ಲಸಿಕೆ

June 2, 2021

ಮೈಸೂರು, ಜೂ.1(ಎಂಟಿವೈ)- ಕೊರೊನಾ ಸೋಂಕಿನಿಂದ ಪಾರಾಗಲು ಮೈಸೂರಿನ ವಿವಿಧ ಖಾಸಗಿ ಕಂಪನಿಗಳ ಭದ್ರತಾ ಸಿಬ್ಬಂದಿ ಹಾಗೂ ಹೌಸ್ ಕೀಪಿಂಗ್ ಸಿಬ್ಬಂದಿಗೆ ಆದ್ಯತಾ ವಲಯ ದಲ್ಲಿ ಲಸಿಕೆ ಹಾಕಿಸಲು ಕಾರ್ಮಿಕ ಇಲಾಖೆ ಆಯೋಜಿಸಿದ್ದ ಅಭಿಯಾನದಲ್ಲಿ 471 ಮಂದಿ ಲಸಿಕೆ ಪಡೆದರು. ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರದ ಆವರಣದಲ್ಲಿ ಮಂಗಳ ವಾರ ಕಾರ್ಮಿಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಲಸಿಕಾ ಅಭಿಯಾನದಲ್ಲಿ ಮೈಸೂರಿನ ವಿವಿಧೆಡೆ ಭದ್ರತಾ(ಸೆಕ್ಯುರಿಟಿ ಗಾರ್ಡ್) ಹಾಗೂ ಸ್ವಚ್ಛತಾ ಸಿಬ್ಬಂದಿ(ಹೌಸ್‍ಕೀಪಿಂಗ್)…

ಕಂಡ ಕಂಡವರಿಗೆ ಸಾಲ ಕೊಡಿಸಿ  ದೇಶವನ್ನು ದಿವಾಳಿ ಮಾಡಿದ್ದು ಕಾಂಗ್ರೆಸ್
ಮೈಸೂರು

ಕಂಡ ಕಂಡವರಿಗೆ ಸಾಲ ಕೊಡಿಸಿ ದೇಶವನ್ನು ದಿವಾಳಿ ಮಾಡಿದ್ದು ಕಾಂಗ್ರೆಸ್

June 2, 2021

ಮೈಸೂರು, ಜೂ.1(ವೈಡಿಎಸ್)- ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು 70 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಅವರ ಮೆದುಳು 70 ವರ್ಷ ಹಿಂದಕ್ಕೆ ಹೋಗಿದೆಯೋ? ಅಥವಾ ಆಲೋಚನಾ ಶಕ್ತಿಯನ್ನೇ ಕಳೆದುಕೊಂಡಿದೆಯೋ? ಎಂದು ಪ್ರಶ್ನಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಪಿಇ ಕಿಟ್, ಎನ್95 ಮಾಸ್ಕ್ ತಯಾರಾಗದಿದ್ದ ಭಾರತದಲ್ಲಿ ಇಂದು ಇವುಗಳ ತಯಾರಿಸುತ್ತಿದ್ದು, ವಿದೇಶಕ್ಕೂ…

ಏಳು ವರ್ಷ ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವು ಸೇವಾ ಕಾರ್ಯಗಳಿಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಏಳು ವರ್ಷ ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವು ಸೇವಾ ಕಾರ್ಯಗಳಿಗೆ ಶಾಸಕ ರಾಮದಾಸ್ ಚಾಲನೆ

June 1, 2021

ಮೈಸೂರು, ಮೇ 31(ಆರ್‍ಕೆಬಿ)- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತಕ್ಕೆ 7 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ವಿದ್ಯಾರಣ್ಯಪುರಂನ ಬಿಜೆಪಿ ಕಚೇರಿ ಎದುರು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹಲವು ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಉಚಿತ ಸೇವೆಯ ಆಕ್ಸಿಜನ್ ಸೌಲಭ್ಯ ಹೊಂದಿರುವ 2 ಆಂಬುಲೆನ್ಸ್ ನೀಡಿದರು. ಕಾರ್ಮಿಕ ಇಲಾಖೆಯ ವತಿಯಿಂದ ಹಲವು ಫಲಾನು ಭವಿಗಳಿಗೆ ವಿವಿಧ ಯೋಜನೆಗಳಾದ ಸಾಮಾಜಿಕ ಭದ್ರತೆ, ಗುರುತಿನ ಚೀಟಿ, ಮನಸ್ವಿನಿ ಯೋಜನೆ, ಹಿರಿಯ ನಾಗರಿಕರ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆಯ…

ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ  ಬಳಗದಿಂದ ವಕೀಲರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಬಳಗದಿಂದ ವಕೀಲರಿಗೆ ದಿನಸಿ ಕಿಟ್ ವಿತರಣೆ

June 1, 2021

ಮೈಸೂರು,ಮೇ 31(ಪಿಎಂ)- `ಲಾಗೈಡ್’ ಕನ್ನಡ ಕಾನೂನು ಮಾಸಪತ್ರಿಕೆ ಬಳಗದ ವತಿಯಿಂದ ಕೋವಿಡ್ ಸಂಕಷ್ಟದ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯ ಕಿರಿಯರು ಹಾಗೂ ಅಗತ್ಯವುಳ್ಳ ವಕೀಲರ ಕುಟುಂಬಗಳಿಗೆ ನೆರ ವಾಗುವ ನಿಟ್ಟಿನಲ್ಲಿ ದಿನಸಿ ಕಿಟ್ ವಿತರಣೆಗೆ ಸೋಮವಾರ ಚಾಲನೆ ನೀಡಲಾಯಿತು. ಮೈಸೂರಿನ ಚಾಮರಾಜಪುರಂನ ಖಾಸಗಿ ಹೋಟೆಲ್ ಆವರಣದಲ್ಲಿ ಸಾಂಕೇತಿಕವಾಗಿ ಕೆಲವರಿಗೆ ಕಿಟ್ ನೀಡುವ ಮೂಲಕ 800ಕ್ಕೂ ಹೆಚ್ಚು ಕಿಟ್‍ಗಳನ್ನು ವಿತರಿಸುವ ಕಾರ್ಯ ಕ್ರಮಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳ ಸಮ್ಮುಖದಲ್ಲಿ ಚಾಲನೆ ದೊರೆಯಿತು. 25 ಕೆಜಿ ಅಕ್ಕಿ, 5…

ವೈದ್ಯರ ನಿಂದನೆ ಖಂಡಿಸಿ ಆರೋಗ್ಯ ಇಲಾಖೆ ಡಿ ಗ್ರೂಪ್ ನೌಕರರ ಪ್ರತಿಭಟನೆ
ಮೈಸೂರು

ವೈದ್ಯರ ನಿಂದನೆ ಖಂಡಿಸಿ ಆರೋಗ್ಯ ಇಲಾಖೆ ಡಿ ಗ್ರೂಪ್ ನೌಕರರ ಪ್ರತಿಭಟನೆ

June 1, 2021

ಮೈಸೂರು ಮೇ 31(ಎಂಕೆ) ಇತ್ತೀಚೆಗೆ ನಡೆದ ಕೊರೊನಾ ನಿಯಂತ್ರಣ ಸಭೆಯೊಂದರಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅವ ರನ್ನು ಕೆಲವು ಜನಪ್ರತಿನಿಧಿಗಳು ಅವಾಚ್ಯ ಪದಗಳಿಂದ ನಿಂದಿ ಸಿರುವುದನ್ನು ಖಂಡಿಸಿ, ಮೈಸೂರು ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗ್ರೂಪ್-ಡಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನಜರ್‍ಬಾದ್‍ನಲ್ಲಿರುವ ಡಿಹೆಚ್‍ಒ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿ ಯೊಬ್ಬರನ್ನು ಮನಬಂದಂತೆ ನಿಂದಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದರೂ ಪರಿಸ್ಥಿತಿಯನ್ನು ನಿಭಾಯಿಸ ಲಾಗುತ್ತದೆ….

ವೈದ್ಯರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ  ಮಾಡದಿರಿ: ವೈದ್ಯಾಧಿಕಾರಿಗಳ ಸಂಘ ಬೇಸರ
ಮೈಸೂರು

ವೈದ್ಯರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡದಿರಿ: ವೈದ್ಯಾಧಿಕಾರಿಗಳ ಸಂಘ ಬೇಸರ

June 1, 2021

ಮೈಸೂರು,ಮೇ 31(ಎಂಕೆ)- ಮೈಸೂರು ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಅಮರನಾಥ್ ಅವರನ್ನು ಕೆಲವು ಜನಪ್ರತಿನಿಧಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ವೈದ್ಯರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ದೇವಿ ಆನಂದ್ ಬೇಸರ ವ್ಯಕ್ತಪಡಿಸಿದರು. ನಗರದ ನಜರ್‍ಬಾದ್‍ನಲ್ಲಿರುವ ವೈದ್ಯರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 29ರಂದು ನಡೆದ ಕೋವಿಡ್ ನಿಯಂತ್ರಣ ಸಾಮಾನ್ಯ ಸಭೆಯಲ್ಲಿ ಕೆಲವು ಜನಪ್ರತಿನಿಧಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಔಷಧಿಗಳನ್ನು ತರಿಸಿಕೊಂಡಿಲ್ಲ ಎಂಬ…

ಮೈಸೂರು ಮಾಂಸ ಪ್ರಿಯರು  ಭಾನುವಾರ ಶ್ರೀರಂಗಪಟ್ಟಣಕ್ಕೆ ಲಗ್ಗೆ
ಮೈಸೂರು

ಮೈಸೂರು ಮಾಂಸ ಪ್ರಿಯರು ಭಾನುವಾರ ಶ್ರೀರಂಗಪಟ್ಟಣಕ್ಕೆ ಲಗ್ಗೆ

May 31, 2021

ಶ್ರೀರಂಗಪಟ್ಟಣ, ಮೇ 30- ಮೈಸೂರಿನಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾಡಳಿತ ಸಂಪೂರ್ಣ ಲಾಕ್‍ಡೌನ್ ಮಾಡಿದ ಹಿನ್ನಲೆಯಲ್ಲಿ ಮಾಂಸ ಪ್ರಿಯರು ಪಕ್ಕದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಡಿ ಭಾಗವಾದ ಮೊಗರಹಳ್ಳಿ (ಮಂಟಿ), ಪಂಪ್‍ಹೌಸ್ ಸರ್ಕಲ್, ಬೆಳಗೊಳ, ಪೇಪರ್ ಮಿಲ್ ಸರ್ಕಲ್ ಹಾಗೂ ಕೆಆರ್‍ಎಸ್ ಭಾಗಗಳಲ್ಲಿ ಮೈಸೂ ರಿನ ಮಾಂಸ ಪ್ರಿಯರು ಸಾಮಾಜಿಕ ಅಂತರವನ್ನು ಮರೆತು ಅವರಿಗೆ ಇಷ್ಟವಿದ್ದ ಮೀನು, ಮಾಂಸ, ಹಾಗೂ ಕೋಳಿ ಮಾಂಸವನ್ನು ಖರೀದಿಸುವಲ್ಲಿ ತಲ್ಲೀನರಾಗಿದ್ದರು. ಶ್ರೀರಂಗಪಟ್ಟಣ ತಾಲೂಕಿಗೆ ಮೈಸೂರಿನಿಂದ…

ತುಳಸಿದಾಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಹೆರಿಗೆ ಆಸ್ಪತ್ರೆಗೆ ಚಾಲನೆ
ಮೈಸೂರು

ತುಳಸಿದಾಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಹೆರಿಗೆ ಆಸ್ಪತ್ರೆಗೆ ಚಾಲನೆ

May 31, 2021

ಮೈಸೂರು, ಮೇ 30(ಎಂಟಿವೈ)- ನೂತನ ಕಟ್ಟಡವನ್ನೊಳ ಗೊಂಡಿದ್ದ ಸೇಟ್ ಮೋಹನ್‍ದಾಸ್ ತುಳಸಿದಾಸ್ ಆಸ್ಪತ್ರೆ ಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗಾಗಿ 50 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಎಸ್‍ಎಂಟಿ ಆಸ್ಪತ್ರೆ ನೂತನ ಕಟ್ಟಡದಲ್ಲಿ ಆರಂಭಿಸಿರುವ ಕೋವಿಡ್-19 ಹೆರಿಗೆ ಆಸ್ಪತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ತುಳಸಿದಾಸ್ ಹೆರಿಗೆ ಆಸ್ಪತ್ರೆಯ ನೂತನ ಕಟ್ಟಡವನ್ನು ಈಗಾಗಲೇ ಕೋವಿಡ್ ಕೇರ್ ಸೆಂಟರ್, `ಕೋವಿಡ್ ಮಿತ್ರ’ಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆಗೆ…

ಮೈಸೂರು ನಗರ ಬಿಜೆಪಿ ಓಬಿಸಿ ಮೋರ್ಚಾದಿಂದ  ಮಳಿಗೆ ಎದುರು ಚೌಕಾಕಾರ ರಚನೆ
ಮೈಸೂರು

ಮೈಸೂರು ನಗರ ಬಿಜೆಪಿ ಓಬಿಸಿ ಮೋರ್ಚಾದಿಂದ ಮಳಿಗೆ ಎದುರು ಚೌಕಾಕಾರ ರಚನೆ

May 31, 2021

ಮೈಸೂರು, ಮೇ 30(ಪಿಎಂ)- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ 7 ವರ್ಷ ಪೂರ್ಣಗೊಳಿಸಿದ (1ನೇ ಮತ್ತು 2ನೇ ಅವಧಿ ಸೇರಿ) ಪ್ರಯುಕ್ತ ಬಿಜೆಪಿ ಹಿಂದು ಳಿದ ವರ್ಗಗಳ (ಓಬಿಸಿ) ಮೋರ್ಚಾ ಮೈಸೂರು ನಗರ ಘಟಕದ ವತಿಯಿಂದ ನಗರದ ಮಳಿಗೆಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗಲು ಚೌಕಾಕಾರದ ಚಿತ್ರ ಬಿಡಿ ಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಔಷಧ ಮಳಿಗೆ ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳ ಎದುರು ಚೌಕಾಕಾರ ಚಿತ್ರ ರಚಿಸುವ ಕಾರ್ಯಕ್ಕೆ ರಾಮಸ್ವಾಮಿ ವೃತ್ತದ ಬಳಿ…

ಮೈಸೂರು ಜಿಲ್ಲಾಡಳಿತದ ಲೆಕ್ಕ ಪಕ್ಕಾ ಇಲ್ಲ
ಮೈಸೂರು

ಮೈಸೂರು ಜಿಲ್ಲಾಡಳಿತದ ಲೆಕ್ಕ ಪಕ್ಕಾ ಇಲ್ಲ

May 31, 2021

ಮೈಸೂರು,ಮೇ 30(ಪಿಎಂ)- ಕೋವಿಡ್ ಸಾವಿನ ಸಂಖ್ಯೆ ಮರೆಮಾಚಿರುವುದೇ ಪ್ರಧಾನಿ ನರೇಂದ್ರ ಮೋದಿಯವರ 7 ವರ್ಷಗಳ ಆಡಳಿತದ ಸಾಧನೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರ ಗಳು ಕೋವಿಡ್ ಸಾವಿನ ಸಂಖ್ಯೆ ಕಡಿಮೆ ತೋರಿಸುತ್ತಿವೆ. ಮೈಸೂರು ಜಿಲ್ಲಾಡಳಿತವೂ ಇದಕ್ಕೆ ಹೊರತಾಗಿಲ್ಲ. ಇದರ ಲೆಕ್ಕವೂ ಪಕ್ಕಾ ಇಲ್ಲ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಆರೋಪಿಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಭಾನು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾದಿ ಯಾಗಿ ಬಿಜೆಪಿ ಆಡಳಿತವಿರುವ…

1 231 232 233 234 235 1,611
Translate »