ಬೆಂಗಳೂರು, ಮೇ 26-ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಬುಧವಾರ ಮಧ್ಯಾಹ್ನ ನಿಧನರಾದರು. ಅವರಿಗೆ 103 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎಚ್.ಎಸ್. ದೊರೆಸ್ವಾಮಿ ಅವರನ್ನು ಬೆಂಗಳೂರು ಜಯದೇವ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಆದರೆ ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ಅವರು ನಿಧನ ರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ದೊರೆ ಸ್ವಾಮಿ ಅವರಿಗೆ ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೆÇರೆಯ ಉರಿ ಯೂತ) ಸೇರಿದಂತೆ ವಿವಿಧ ವಯೋ…
ಸಿದ್ದರಾಮಯ್ಯರನ್ನು 70 ಸಾವಿರ ಲೀಡ್‍ನಲ್ಲಿ ಗೆಲ್ಲಿಸಿಕೊಂಡು ಬರ್ತೀನಿ!
May 27, 2021ಬೆಂಗಳೂರು, ಮೇ 26- ಯಡಿ ಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳ ಗಿಳಿಸಬೇಕು ಎನ್ನುವ ವಿಚಾರ ಆರೇಳು ತಿಂಗಳಿಂದಲೂ ಇದೆ. ಅದು ಬಿಜೆಪಿ ಪಕ್ಷದ ವಿಚಾರ. ನಾನು ಹೇಗೆ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು. ನನ್ನ ಕ್ಷೇತ್ರದಲ್ಲಿ ನಡೆದ ಅನ್ನದಾನದ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಕರೆದಿದ್ದೆ. ಲಾಕ್‍ಡೌನ್ ವಿಸ್ತರಣೆ ಯಾದರೆ ಮತ್ತೆ ಮೂವತ್ತು ಸಾವಿರ ಜನ ರಿಗೆ ಊಟ ಹಾಕಬೇಕೆಂದಿದ್ದೇನೆ. ಆಗ, ಮತ್ತೆ ನಮ್ಮ ಅಧ್ಯಕ್ಷರನ್ನು ಕರೆಯುತ್ತೇನೆ ಎಂದು ಜಮೀರ್ ಸ್ಪಷ್ಟನೆ…
ರುಕ್ಮಿಣಿ ಮಾದೇಗೌಡ `ಪಾಲಿಕೆ ಸದಸ್ಯತ್ವ ಅಸಿಂಧು’ ಮೇಯರ್ ಸ್ಥಾನಕ್ಕೆ ಕಂಟಕ
May 27, 2021ರಾಜ್ಯ ಹೈಕೋರ್ಟ್ ಮಹತ್ವದ ಆದೇಶ ಆಸ್ತಿ ಸಂಬಂಧ ಸುಳ್ಳು ಮಾಹಿತಿ ಪ್ರತಿಸ್ಪರ್ಧಿ ರಜನಿ ಅಣ್ಣಯ್ಯ ತಕರಾರು ಹೈಕೋರ್ಟ್ ಆದೇಶವನ್ನು ಗೌರವಿಸುತ್ತೇನೆ. ಆದರೆ ಈ ಆದೇಶವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುವ ಬಗ್ಗೆ ವಕೀಲರೊಂದಿಗೆ ಚರ್ಚೆ ನಡೆಸುತ್ತಿದ್ದು, ಸದ್ಯದಲ್ಲೇ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಲಾಗುವುದು. -ರುಕ್ಮಿಣಿ ಮಾದೇಗೌಡ, ಮೇಯರ್ ಮೈಸೂರು, ಮೇ 26-ಮೈಸೂರಿನ ಮೇಯರ್ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವವನ್ನು ಹೈಕೋರ್ಟ್ ಅಸಿಂಧುಗೊಳಿಸಿದ್ದು, ಮೇಯರ್ ಸ್ಥಾನಕ್ಕೆ ಕಂಟಕ ಒದಗಿ ಬಂದಿದೆ. ಹೈಕೋರ್ಟ್ ಆದೇಶದಂತೆ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ…
ಗ್ರಾಮಗಳಲ್ಲಿ ಸೋಂಕು ಹರಡದಂತೆ ಎಚ್ಚರಿಕಾ ಕ್ರಮ ಕೈಗೊಳ್ಳಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಡಿಓಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ
May 27, 2021ಮೈಸೂರು, ಮೇ 26(ಆರ್‍ಕೆ)- ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ರುವ ಗ್ರಾಮಗಳಲ್ಲಿ ಮೈಕ್ರೊ ಕಂಟೈನ್ಮೆಂಟ್ ಜೋನ್ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊರೊನಾ ನಿಯಂತ್ರಣ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಿಡಿಓಗಳೊಂದಿಗೆ ಸಭೆ ನಡೆಸಿದ ಮುಖ್ಯ ಮಂತ್ರಿಗಳು, ಸೋಂಕಿತರ ಸಂಖ್ಯೆ ಹೆಚ್ಚಾಗಿ ರುವ ಗ್ರಾಮಗಳಿಂದ ಯಾರೂ ಹೊರಗೆ ಬರದಂತೆ ಹಾಗೂ ಹೊರಗಿನವರು ಯಾರೂ ಗ್ರಾಮ…
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ
May 27, 2021ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ವಿಶ್ವನಾಥ್ ಜಿಂದಾಲ್‍ಗೆ ಭೂಮಿ ಮಾರಾಟ ಮಾಡದಿರಿ, ಸರ್ಕಾರಿ ಭೂಮಿ ಉಳಿಸಿ ಮೈಸೂರು, ಮೇ 26(ಎಂಟಿವೈ)- ಸಾವಿರಾರು ಕೋಟಿ ರೂ. ಮೌಲ್ಯದ 3667 ಎಕರೆ ಸರ್ಕಾರಿ ಭೂಮಿಯನ್ನು ಜಿಂದಾಲ್ ಕಂಪನಿಗೆ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾ ರದ ಅರಾಜಕತೆ ಕಂಡರೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಕ್ಕೆ ವ್ಯಥೆಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ವಿಷಾದಿಸಿದ್ದಾರೆ. ಮೈಸೂರಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತ ನಾಡಿದ ವಿಶ್ವನಾಥ್, ಜಿಂದಾಲ್ ಕಂಪನಿಗೆ ನೀಡಿದ ಭೂಮಿಯ…
ಅಧಿಕಾರಿಗಳ ನಡುವೆ ತಂದಿಡುವ ಕೆಲಸ ನಿಲ್ಲಿಸಿ…!
May 27, 2021ಜಿಲ್ಲೆಯ ಜನಪ್ರತಿನಿಧಿಗಳ ಇಬ್ಬಗೆ ನೀತಿ: ಸ್ವಪಕ್ಷೀಯರ ವಿರುದ್ಧವೇ ವಿಶ್ವನಾಥ್ ವಾಗ್ದಾಳಿ `ಜಿಲ್ಲಾಧಿಕಾರಿ ನಡೆ-ಹಳ್ಳಿಗಳ ಕಡೆ’ ಕಾರ್ಯಕ್ರಮ ತಡೆದವರೇ ಈಗ `ಡಿಸಿ ಹಳ್ಳಿಗೆ ಹೋಗಲಿ’ ಎನ್ನುತ್ತಿದ್ದಾರೆ ಇಷ್ಟು ದಿನ `ಇಂಥ ಡಿಸಿ ಎಲ್ಲೂ ಇಲ್ಲ’ ಎಂದು ಹೇಳಿದ್ದವರೇ ಈಗ ಡಿಸಿ ವಿರುದ್ಧವೇ ತಿರುಗಿ ಬಿದ್ದಿದ್ದೇಕೆ? ಮೈಸೂರು, ಮೇ 26(ಎಂಟಿವೈ)- `ಜಿಲ್ಲಾಧಿಕಾರಿ ನಡೆ-ಹಳ್ಳಿಗಳ ಕಡೆ’ ಎಂದು ಗ್ರಾಮೀಣ ಪ್ರದೇಶಕ್ಕೆ ಹೋಗಿ ಅಹವಾಲು ಆಲಿಸುತ್ತಿದ್ದ ಜಿಲ್ಲಾಧಿಕಾರಿಯನ್ನು ಆಗ ತಡೆಹಿಡಿದಿದ್ದು ನೀವೇ. ಈಗ ಡಿಸಿ ಗ್ರಾಮೀಣ ಭಾಗಕ್ಕೆ ಹೋಗಬೇಕು ಎಂದು ಒತ್ತಾಯಿಸುವವರೂ ನೀವೇ….
ಕಾವೇರಿ ಜಲ ವಿವಾದ: ಮತ್ತೊಂದು ಹೊಸ ಬೆಳವಣಿಗೆ ಮೇಕೆದಾಟು ಯೋಜನೆ ಸಂಬಂಧ ಚೆನ್ನೈ ಹಸಿರುಪೀಠ ಏಕಾಏಕಿ ಸಮಿತಿ ರಚನೆ
May 27, 2021ಯಾರೂ ದೂರು ನೀಡದಿದ್ದರೂ ಸ್ವಯಂ ಸಮಿತಿ ರಚನೆ ಅಚ್ಚರಿ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ: ಇಂದು ಮುಖ್ಯಮಂತ್ರಿ ಯಡಿಯೂರಪ್ಪರಿಂದ ತುರ್ತು ಉನ್ನತ ಸಭೆ ಬೆಂಗಳೂರು, ಮೇ 26(ಕೆಎಂಶಿ)- ಕಾವೇರಿ ನೀರಿನ ನಮ್ಮ ಹಕ್ಕನ್ನು ಬಳಸಿಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ತುರ್ತಾಗಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಮೇಕೆದಾಟು ಯೋಜನೆಗೆ ಸಂಬಂ ಧಿಸಿದಂತೆ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರುಪೀಠ ಸ್ವಯಂಪ್ರೇರಿತವಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯವರು ಈ ಸಭೆ ಕರೆದಿದ್ದಾರೆ. ಮೇಕೆದಾಟು…
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಿಂದ ಹೋಂ ಐಸೋಲೇಷನ್‍ನಲ್ಲಿರುವ ವಕೀಲರಿಗೆ ಔಷಧ ವಿತರಣೆ
May 27, 2021ಕೋವಿಡ್ ನಡುವೆ ವಕೀಲರ ಸೇವೆ ಮಹತ್ವದ್ದು; ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ ವಕೀಲರನ್ನೂ ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಬೇಕು ಮೈಸೂರು,ಮೇ 26(ಪಿಎಂ)- ಕೋವಿಡ್ ಸೋಂಕಿನಿಂದ ಹೋಂ ಐಸೋಲೇಷನ್ ಆಗಿರುವ ವಕೀಲರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮಾಸ್ಕ್ ಒಳಗೊಂಡಂತೆ 100 ಮಂದಿಗೆ ಆಗುವಷ್ಟು ಔಷಧಗಳನ್ನು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಮೈಸೂರು ವಕೀಲರ ಸಂಘಕ್ಕೆ ಬುಧವಾರ ನೀಡಲಾಯಿತು. ಮೈಸೂರಿನ ನ್ಯಾಯಾಲಯದ ಸಂಕೀ ರ್ಣದ ಆವರಣದಲ್ಲಿರುವ ಮೈಸೂರು ವಕೀ ಲರ ಸಂಘದ ಎದುರು ಸಂಘದ ಅಧ್ಯಕ್ಷ ಆನಂದ್‍ಕುಮಾರ್ ಅವರಿಗೆ ಪ್ರಾಧಿಕಾರದ ಅಧ್ಯಕ್ಷ…
ಕೊರೊನಾ ಮುಕ್ತ ಗ್ರಾಮವಾಗುವತ್ತ ಕೇರ್ಗಳ್ಳಿ
May 27, 2021ಮೈಸೂರು, ಮೇ 26(ಎಸ್‍ಪಿಎನ್)- ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಪರಿಣಾಮ ಕೇರ್ಗಳ್ಳಿ ಕೊರೊನಾ ಮುಕ್ತ ಗ್ರಾಮವಾಗುವತ್ತ ಸಾಗಿದೆ. ಮೈಸೂರು ತಾಲೂಕು ಬೀರಿಹುಂಡಿ ಗ್ರಾಪಂ ವ್ಯಾಪ್ತಿಯ ಕೇರ್ಗಳ್ಳಿ ಗ್ರಾಮದಲ್ಲಿ ಕಳೆದ ಏಪ್ರಿಲ್‍ನಲ್ಲಿ ಹಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮೇ ತಿಂಗ ಳಲ್ಲಿ ಮೂವರಲ್ಲಿ ಸೋಂಕು ಕಾಣಿಸಿಕೊಂ ಡಿದೆ. ಸೋಂಕಿತರು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ಸಲಹೆಯಂತೆಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು ಕೆಲವರು ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಆರೋಗ್ಯ ಸಿಬ್ಬಂದಿ ನೀಡಿದ ಮಾತ್ರೆಗಳನ್ನು ಸೇವಿಸಿ…
ಅರ್ಹ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಸಾರಿಗೆ ಇಲಾಖೆಯಿಂದ ತಲಾ 3 ಸಾವಿರ ಪರಿಹಾರ
May 27, 2021ಬೆಂಗಳೂರು, ಮೇ 26(ಕೆಎಂಶಿ)- ಕೋವಿಡ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಈ ಲಾಕ್ ಡೌನ್‍ನಿಂದಾಗಿ ತೊಂದರೆಯಾಗುವ ಅರ್ಹ ಆಟೋ-ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರಿಗೆ ತಲಾ 3 ಸಾವಿರ ರೂಪಾಯಿ ಯಷ್ಟು ಆರ್ಥಿಕ ಸಹಾಯ ನೀಡಲು ನಮ್ಮ ಸರ್ಕಾರವು ನಿರ್ಧರಿಸಿದಂತೆ ಸಾರಿಗೆ ಇಲಾಖೆಯಿಂದ ಈ ಪರಿಹಾರ ವಿತರಿ ಸಲು ವ್ಯವಸ್ಥೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ವೆಬ್ ಪೋರ್ಟಲ್ ಮೂಲಕ ಸೂಕ್ತ ದಾಖಲೆ ಗಳನ್ನು ಒದಗಿಸಿ ಈ ಪರಿಹಾರ ಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹು ದಾಗಿದೆ ಎಂದು ಉಪ…










