ಮೈಸೂರು

ಇಂಧನ ಬೆಲೆ ಸತತ ಏರಿಕೆ ಖಂಡಿಸಿ ತಳ್ಳುವ ಗಾಡಿಯಲ್ಲಿ ಬೈಕ್ ಪ್ರದರ್ಶನ
ಮೈಸೂರು

ಇಂಧನ ಬೆಲೆ ಸತತ ಏರಿಕೆ ಖಂಡಿಸಿ ತಳ್ಳುವ ಗಾಡಿಯಲ್ಲಿ ಬೈಕ್ ಪ್ರದರ್ಶನ

February 5, 2021

ಮೈಸೂರು, ಫೆ.4(ಎಂಟಿವೈ)- ಇಂಧನ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರದ್ದು ಜನವಿರೋಧಿ ನೀತಿ ಎಂದು ಟೀಕಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಮೈಸೂರಿನ ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿದರು. ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ತಳ್ಳುವ ಗಾಡಿಯಲ್ಲಿ ಬೈಕ್ ಇರಿಸಿ ಅಣುಕು ಪ್ರದರ್ಶನ ಮಾಡಿದರು. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‍ಗೆ ಕೃಷಿ ಸೆಸ್ ವಿಧಿಸುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಪ್ರಹಾರ ಮಾಡಿದೆ. ಕೊರೊನಾದಿಂದ ಜನರ ಆದಾಯ ಕುಸಿದಿದೆ….

ಭೂ ಪರಿಹಾರ ನೀಡದ ಭೂ ಸ್ವಾಧೀನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಮೈಸೂರು

ಭೂ ಪರಿಹಾರ ನೀಡದ ಭೂ ಸ್ವಾಧೀನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

February 5, 2021

ಮೈಸೂರು,ಫೆ.4(ಆರ್‍ಕೆಬಿ)-ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಗಾಗಿ ಸಂಖ್ಯೆ 150/ಎನ ಚಾಮಲಾಪುರ ನಂಜನಗೂಡು ಭಾಗದಲ್ಲಿ ವಶಪಡಿಸಿ ಕೊಂಡಿರುವ ಭೂಮಿಗೆ ಸಂಬಂ ಧಿಸಿದಂತೆ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ಹೀಗಾಗಿ ಇಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಪಟ್ಟ ಭೂ ಸ್ವಾಧೀನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸರ್ವಜನಾಂಗ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೇಣುಗೋಪಾಲ್ ಆಗ್ರಹಿಸಿದ್ದಾರೆ. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 69 ರೈತರಿಂದ ಈ ಭಾಗದ ಜಮೀನನ್ನು ವಶಪಡಿಸಿಕೊಂಡಿದ್ದು, 2 ವರ್ಷವಾದರೂ ಈವರೆಗೂ ಪರಿಹಾರ ನೀಡದೆ, ರಸ್ತೆ ಕಾಮಗಾರಿ ನಡೆದಿದೆ…

ರೈಲ್ವೆ ನೌಕರರಿಂದ `ಕೇಂದ್ರ ಬಜೆಟ್ ದಿನದಂದು ಗಮನ ಸೆಳೆಯುವ ದಿನ’ ಶೀರ್ಷಿಕೆಯಡಿ ಪ್ರತಿಭಟನೆ
ಮೈಸೂರು

ರೈಲ್ವೆ ನೌಕರರಿಂದ `ಕೇಂದ್ರ ಬಜೆಟ್ ದಿನದಂದು ಗಮನ ಸೆಳೆಯುವ ದಿನ’ ಶೀರ್ಷಿಕೆಯಡಿ ಪ್ರತಿಭಟನೆ

February 2, 2021

ಮೈಸೂರು,ಫೆ.1(ಪಿಎಂ)- ಕೇಂದ್ರ ಸರ್ಕಾರ ಬಾಕಿ ಉಳಿಸಿರುವ ರೈಲ್ವೆ ನೌಕ ರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೌತ್ ವೆಸ್ಟರ್ನ್ ರೆಲ್ವೆ ಮಜ್ದೂರ್ ಯೂನಿಯನ್ ಮೈಸೂರು ವಿಭಾಗದ ವತಿಯಿಂದ `ಕೇಂದ್ರ ಬಜೆಟ್-2021ರ ದಿನದಂದು ಗಮನ ಸೆಳೆಯುವ ದಿನ’ ಶೀರ್ಷಿಕೆಯಡಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಆವರಣದಲ್ಲಿರುವ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್‍ನ ಮೈಸೂರು ವಿಭಾಗದ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರೈಲ್ವೆ ಉತ್ಪಾದನಾ ಘಟಕ ಗಳು, ನೌಕರರ ಖಾಸಗೀಕರಣ…

ಫೆ.6, 7ರಂದು ಮೈಸೂರಲ್ಲಿ ಗೆಡ್ಡೆ-ಗೆಣಸು ಮೇಳ
ಮೈಸೂರು

ಫೆ.6, 7ರಂದು ಮೈಸೂರಲ್ಲಿ ಗೆಡ್ಡೆ-ಗೆಣಸು ಮೇಳ

February 2, 2021

ಮೈಸೂರು,ಫೆ.1(ಆರ್‍ಕೆ)-ಮೈಸೂರಿನ ನಂಜ ರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಫೆಬ್ರ ವರಿ 6 ಮತ್ತು 7ರಂದು ಗೆಡ್ಡೆ-ಗೆಣಸು ಮೇಳವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಯು ರೋಟರಿ ಪಶ್ಚಿಮ ಸಂಸ್ಥೆ ಸಹಯೋಗ ದಲ್ಲಿ ಏರ್ಪಡಿಸಿರುವ ಮೇಳವನ್ನು ಫೆಬ್ರವರಿ 6ರಂದು ಬೆಳಗ್ಗೆ 10 ಗಂಟೆಗೆ ಯುವರಾಜ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾ ಟಿಸಲಿದ್ದು, ವಯನಾಡಿನ ಕೇದಾರಂ ಗೆಣಸು ಸಂರಕ್ಷಣೆಯ ಎನ್.ಎಂ.ಶಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಹಜ ಸಮೃದ್ಧ ಸಂಸ್ಥೆಯ ದೀಪಕ್ ತಿಳಿಸಿದ್ದಾರೆ. ದಟ್ಟ ಅರಣ್ಯದ ಬುಡಕಟ್ಟು…

ಕೊಳಚೆ ಪ್ರದೇಶ ನಿವಾಸಿಗಳಿಗೆ ಆರು ತಿಂಗಳಲ್ಲಿ ಖಾಯಂ ಹಕ್ಕುಪತ್ರ ವಿತರಣೆ ವಸತಿ ಸಚಿವ ವಿ.ಸೋಮಣ್ಣ ಘೋಷಣೆ
ಮೈಸೂರು

ಕೊಳಚೆ ಪ್ರದೇಶ ನಿವಾಸಿಗಳಿಗೆ ಆರು ತಿಂಗಳಲ್ಲಿ ಖಾಯಂ ಹಕ್ಕುಪತ್ರ ವಿತರಣೆ ವಸತಿ ಸಚಿವ ವಿ.ಸೋಮಣ್ಣ ಘೋಷಣೆ

February 2, 2021

ಬೆಂಗಳೂರು,ಫೆ.1(ಕೆಎಂಶಿ)-ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಮಾಲೀಕತ್ವದ ಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಆರು ತಿಂಗಳಲ್ಲಿ ಖಾಯಂ ಹಕ್ಕುಪತ್ರ ವಿತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ. ಸದಸ್ಯ ಜಮೀರ್ ಅಹಮ್ಮದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮದ ಮೂಲಕ ಈ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ, ಶೀಘ್ರದಲ್ಲೇ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿ 600 ಚದರ ಅಡಿ, ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿ, ಪುರಸಭೆ,…

`ಮಿಕ್ಸೋಪತಿ’ ವಿರೋಧಿಸಿ ಆಲೋಪತಿ ವೈದ್ಯರ ಉಪವಾಸ ಸತ್ಯಾಗ್ರಹ ಆರಂಭ
ಮೈಸೂರು

`ಮಿಕ್ಸೋಪತಿ’ ವಿರೋಧಿಸಿ ಆಲೋಪತಿ ವೈದ್ಯರ ಉಪವಾಸ ಸತ್ಯಾಗ್ರಹ ಆರಂಭ

February 2, 2021

ಮೈಸೂರು,ಫೆ.1(ಪಿಎಂ)-ಹಲವು ರೀತಿ ಶಸ್ತ್ರಚಿಕಿತ್ಸೆ ನಡೆಸಲು ಆಯುರ್ವೇದ ವೈದ್ಯ ರಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿರು ವುದನ್ನು ಖಂಡಿಸಿ ಆಲೋಪತಿ ವೈದ್ಯರು ಮತ್ತೆ ಹೋರಾಟಕ್ಕಿಳಿದಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವ ದಲ್ಲಿ ದೇಶದಾದ್ಯಂತ ಸಂಘದ ಎಲ್ಲಾ ರಾಜ್ಯ ಘಟಕಗಳ ಆವರಣದಲ್ಲಿ ಇಂದಿನಿಂದ (ಫೆ.1) ಫೆ.14ರವರೆಗೆ `ಮಿಕ್ಸೋಪತಿ’ ವಿರೋಧಿಸಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ. ಅಂತೆಯೇ ಸೋಮವಾರ ಬೆಂಗಳೂ ರಿನ ಚಾಮರಾಜಪೇಟೆಯಲ್ಲಿರುವ ಐಎಂಎ ಕರ್ನಾಟಕ ರಾಜ್ಯ ಘಟಕದ ಕಚೇರಿ ಆವ ರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸ ಲಾಯಿತು. ಮೊದಲ 24…

ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಮಳಿಗೆ ನಿರ್ಮಿಸಲು ಚಿಂತನೆ
ಮೈಸೂರು

ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಮಳಿಗೆ ನಿರ್ಮಿಸಲು ಚಿಂತನೆ

February 2, 2021

ಮೈಸೂರು,ಫೆ.1(ಆರ್‍ಕೆ)-ಮೈಸೂರಿನ ಹೃದಯ ಭಾಗದಲ್ಲಿರುವ ಅತೀ ಹಳೆಯ ನಂಜ ರಾಜ ಬಹದ್ದೂರ್ ಛತ್ರದ ಆವರಣದ ಪೂರ್ವ ದಿಕ್ಕಿನಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭಾನುವಾರ ಸಂಜೆ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ವ್ಯವಸ್ಥಾಪಕ ಸತೀಶ್‍ರಿಂದ ಮಾಹಿತಿ ಪಡೆದುಕೊಂಡರು. ಪಾರಂಪರಿಕ ಕಟ್ಟಡವಾದ್ದರಿಂದ ಕಲ್ಯಾಣ ಮಂಟಪದ ಆವರಣದಲ್ಲಿ ಎತ್ತರದ ಕಟ್ಟಡ ನಿರ್ಮಿಸಲಾಗದು. ಹಲವು ವರ್ಷಗಳಿಂದ ಆವರಣದ ಜಾಗ ಖಾಲಿ ಇರುವುದರಿಂದ ಬೇರೆ ಬೇರೆ ಇಲಾಖೆಯವರು…

ಟಿಎಪಿಸಿಎಂಎಸ್‍ಗೆ ಸೇರಿದ ಜಾಗಕ್ಕೆ ಬೀಗ: ರೈಲ್ವೆ ಗೂಡ್ಸ್ ಶೆಡ್ ಲಾರಿ ನಿಲುಗಡೆ ಸಮಸ್ಯೆ ಉಲ್ಬಣ
ಮೈಸೂರು

ಟಿಎಪಿಸಿಎಂಎಸ್‍ಗೆ ಸೇರಿದ ಜಾಗಕ್ಕೆ ಬೀಗ: ರೈಲ್ವೆ ಗೂಡ್ಸ್ ಶೆಡ್ ಲಾರಿ ನಿಲುಗಡೆ ಸಮಸ್ಯೆ ಉಲ್ಬಣ

February 2, 2021

ಮೈಸೂರು,ಫೆ.1-ಮೈಸೂರಿನ ಜೋಡಿ ತೆಂಗಿನ ಮರ ರಸ್ತೆಯಲ್ಲಿ ರುವ ರೈಲ್ವೆ ಗೂಡ್ಸ್ ಶೆಡ್ ಲಾರಿ ನಿಲ್ದಾಣದ ಗೇಟ್‍ಗೆ ಟಿಎಸಿಎಂಎಸ್ ವತಿಯಿಂದ ಬೀಗ ಹಾಕಿದ ಪರಿಣಾಮ ಈ ರಸ್ತೆಯಲ್ಲಿ ನೂರಾರು ಲಾರಿಗಳು ನಿಲುಗಡೆಯಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಲಾರಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸುಮಾರು 100 ಲಾರಿಗಳು ಹೊರ ಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದು, ರೈಲು ಗೂಡ್ಸ್ ಗಳಲ್ಲಿ ಸೋಮವಾರ ಬಂದಿರುವ ಪಡಿತರ ಲೋಡ್ ಅನ್ನು ಸಾಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿವರ: ಮೈಸೂರಿನಲ್ಲಿ ಅಧಿಕೃತವಾಗಿ ಲಾರಿ ಸ್ಟ್ಯಾಂಡ್ ಇಲ್ಲ….

ಸೋಮವಾರ ಮೈಸೂರು ಜಿಲ್ಲೆಯಲ್ಲಿ 13 ಜನರಿಗೆ ಸೋಂಕು: 31 ಮಂದಿ ಗುಣಮುಖ
ಮೈಸೂರು

ಸೋಮವಾರ ಮೈಸೂರು ಜಿಲ್ಲೆಯಲ್ಲಿ 13 ಜನರಿಗೆ ಸೋಂಕು: 31 ಮಂದಿ ಗುಣಮುಖ

February 2, 2021

ಮೈಸೂರು, ಫೆ.1(ಎಂಕೆ)- ಜಿಲ್ಲೆಯಲ್ಲಿ ಸೋಮವಾರ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ. 31 ಮಂದಿ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸೋಂಕಿತರ ಸಂಖ್ಯೆ 53,448ಕ್ಕೆ ಏರಿಕೆ ಯಾದರೆ, 52,211 ಮಂದಿ ಗುಣಮುಖ ರಾಗಿದ್ದು, 1,026 ಮಂದಿ ಸಾವನ್ನಪ್ಪಿದ್ದು, 211 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ರಾಜ್ಯದ ವಿವರ: ರಾಜ್ಯದಲ್ಲಿಂದು 388 ಮಂದಿಗೆ ಸೋಂಕು ತಗುಲಿದ್ದು, 470 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,39, 775ಕ್ಕೆ ಏರಿಕೆಯಾಗಿದ್ದು, 9,21,592 ಮಂದಿ…

ಸಾರಿಗೆ ಬಸ್ ಹರಿದು ಮಹಿಳೆ ಸಾವು
ಮೈಸೂರು

ಸಾರಿಗೆ ಬಸ್ ಹರಿದು ಮಹಿಳೆ ಸಾವು

February 2, 2021

ಮೈಸೂರು, ಫೆ.1(ಆರ್‍ಕೆ)- ಗ್ರಾಮಾಂ ತರ ಸಾರಿಗೆ ಬಸ್ ಹರಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು-ಬೆಂಗಳೂರು ಹೆದ್ದಾರಿಯ ಕೆ.ಆರ್.ಮಿಲ್ ಕಾಲೋನಿ ಸಮೀಪ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ಕೃಷ್ಣಯ್ಯ ಅವರ ಪುತ್ರಿ ವೆಂಕ ಟಮ್ಮ(28) ಸಾವನ್ನಪ್ಪಿದವರು. ಮಂಡ್ಯ ನಗರದ ಕಾರ್ತಿಕ ಎಂಬುವರ ಜೊತೆ ಬಜಾಜ್ ಪಲ್ಸರ್ ಬೈಕ್‍ನಲ್ಲಿ ಮೈಸೂರಿನಿಂದ ಶ್ರೀರಂಗಪಟ್ಟಣ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಕೆಎಸ್‍ಆರ್‍ಟಿಸಿ ಬಸ್ ಮಧ್ಯಾಹ್ನ ಸುಮಾರು 1.25 ಗಂಟೆ ವೇಳೆಗೆ ಕೆ.ಆರ್. ಮಿಲ್ ಕಾಲೋನಿ ಬಳಿ ಬೈಕ್‍ಗೆ ಡಿಕ್ಕಿ ಹೊಡೆದಿದೆ….

1 304 305 306 307 308 1,611
Translate »