ಬೆಳಗಾವಿ: ದಿವಂಗತ ಸುರೇಶ್ ಅಂಗಡಿ ಅವರಿಗೆ ನಾವೆಲ್ಲ ಋಣ ತೀರಿಸಬೇಕಂದ್ರೆ ಲೋಕ ಸಭೆಯ ಉಪ ಚುನಾ ವಣೆಯಲ್ಲಿ ನಮ್ಮ ಪಕ್ಷ ದಿಂದ ಯಾರೇ ಅಭ್ಯರ್ಥಿ ಯಾದರೂ 2.5 ಲಕ್ಷ ಲೀಡ್‍ನಲ್ಲಿ ಗೆಲ್ಲಿಸಬೇಕು ಅಂತಾ ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ. ಜನಸೇವಕ್ ಸಮಾವೇಶದಲ್ಲಿ ಮಾತ ನಾಡಿದ ಅವರು, ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಕಾಂಗ್ರೆಸ್, ಜೆಡಿಎಸ್ ನೆಲ ಸಮವಾಗಿ ಇಷ್ಟೊಂದು ದೊಡ್ಡ ಮಟ್ಟ ದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ನಿಮ್ಮೆಲ್ಲರ ಶ್ರಮದಿಂದ ಈ ಭಾಗದಲ್ಲಿ ಸಂಘಟನೆ ಬಲ ಆಗೋದಕ್ಕೆ…
ಮೈಸೂರಲ್ಲಿ ನಿರ್ಮಾಣವಾಗಲಿರುವ ಯುದ್ಧ ಸ್ಮಾರಕಕ್ಕೆ ಚಾಮರಾಜನಗರ ಕ್ವಾರಿ ಕಲ್ಲು
January 18, 2021ಮೈಸೂರು, ಜ.17- ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ `ಯುದ್ಧ ಸ್ಮಾರಕ’ ಕಾಮ ಗಾರಿ ಆರಂಭಕ್ಕೆ ಕಾಲ ಸನ್ನಿಹಿತವಾಗಿದ್ದು, ಸ್ಮಾರಕ ನಿರ್ಮಾಣ ಕ್ಕಾಗಿ ಚಾಮರಾಜನಗರ ಜಿಲ್ಲೆಯ ಕ್ವಾರಿಯಲ್ಲಿ ವಿವಿಧ ಆಕಾರದಲ್ಲಿ ಕಲ್ಲುಗಳ ಸ್ಲ್ಯಾಬ್ ರೂಪುಗೊಳ್ಳುತ್ತಿದೆ. ಮೊದಲ ಹಂತ ದಲ್ಲಿ 33 ಕ್ಯೂಬಿಕ್ ಮೀಟರ್ ಉತ್ಕøಷ್ಟ ಕಲ್ಲುಗಳ ಸ್ಲ್ಯಾಬ್‍ಗಳು ಮುಂದಿನ ವಾರ ಮೈಸೂರಿಗೆ ಬರಲಿವೆ. ಮೈಸೂರು ನಗರದಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕಾಗಿ ನಿವೃತ್ತ ಸೈನಿಕರ ಸಂಘದ 20 ವರ್ಷಗಳ ಬೇಡಿಕೆ ಕೊನೆಗೂ ಈಡೇರಿಕೆ ಹಂತಕ್ಕೆ ಬಂದಿದ್ದು, ಯುದ್ಧ…
ಸತ್ಯ ಹೇಳಲು ನಾನು ಹಿಂಜರಿಯುವುದಿಲ್ಲ… ಹಾಗಾಗಿ ಅತೀ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ
January 18, 2021ಮೈಸೂರು, ಜ.17(ಆರ್‍ಕೆಬಿ)- ನೇರ ಹಾಗೂ ಸತ್ಯ ಹೇಳುವ ನಾನು ಕೆಲವೊಮ್ಮೆ ಒರಟು ಮಾತಿನಲ್ಲಿ ಹೇಳುತ್ತೇನೆ. ಸತ್ಯ ಹೇಳಲು ನಾನು ಹಿಂಜರಿಯುವುದಿಲ್ಲ. ಹೀಗಾಗಿ ಅನೇಕ ಸಂದರ್ಭಗಳಲ್ಲಿ ವಿವಾದ ಗಳಿಗೂ ಸಿಲುಕುತ್ತೇನೆ. ಹಾಗಾಗಿ ಅತೀ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ಎಂದರೆ ಅದು ನಾನೇ ಎಂದು ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು. ಮೈಸೂರಿನ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿ ಕನಕ ನೌಕರರ ಸಂಘ ಆಯೋಜಿ ಸಿದ್ದ ಶ್ರೀ ಕನಕದಾಸರ 533ನೇ ಜಯಂತಿ ಹಾಗೂ…
ನಂಬಿಕೆ ಕಳೆದುಕೊಂಡ ಮಾನವ ಸಂಬಂಧ ಕೃತಿ ಬಿಡುಗಡೆ ಸಂದರ್ಭ ಪ್ರಾಧ್ಯಾಪಕಿ ಎನ್.ಕೆ.ಲೋಲಾಕ್ಷಿ ಅಭಿಮತ
January 18, 2021ಮೈಸೂರು,ಜ.17(ಆರ್‍ಕೆಬಿ)-ಇಂದು ಮಾನವ ಸಂಬಂಧಗಳು ನಂಬಿಕೆ ಕಳೆದುಕೊಂಡಿವೆ. ಪರಸ್ಪರ ಅಪನಂಬಿಕೆ ಬರುತ್ತಿದೆ. ಮೊಬೈಲ್ ಹಾವಳಿಯಿಂದ ಇಂದಿನ ಯುವಜನರಿಗೆ ಸಂಬಂಧಗಳು ಬೇಡ ಎಂಬಂತಾಗಿವೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಅಭಿಪ್ರಾಯಪಟ್ಟರು. ಮೈಸೂರು ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಭವನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸಂವಹನ ಪ್ರಕಾಶನ ಭಾನುವಾರ ಆಯೋಜಿಸಿದ್ದ ಲೇಖಕಿ ಶ್ರೀಲತಾ ಮನೋಹರ್ ಅವರ `ಪ್ರೀತಿಯೇ’ ಕವನ ಸಂಕಲನ ಮತ್ತು `ಮತ್ತೆ ಮಳೆ ಬಂದಾಗ’ ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಮಾಜದಲ್ಲಿ…
`ಸ್ವಚ್ಛ ಭಾರತ್’ ಪರಿಣಾಮ ಚಿತ್ರ ಬರೆದು ವಿವರಿಸಿದ ಚಿಣ್ಣರು
January 18, 2021ಮೈಸೂರು, ಜ.17(ಎಂಟಿವೈ)-ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ವರ್ಷದಿಂದ ಯಾವುದೇ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳದೇ ಮನೆಯಲ್ಲಿಯೇ ಇದ್ದ ಚಿಣ್ಣರು ಮೈಸೂರು ಮಹಾನಗರ ಪಾಲಿಕೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡು `ಸ್ವಚ್ಛ ಭಾರತ್’ ಅಭಿಯಾನ ಹೇಗಿರಬೇಕು ಎಂಬ ಪರಿಕಲ್ಪನೆಯಲ್ಲಿ ಚಿತ್ರ ಬರೆದು ಗಮನ ಸೆಳೆದರು. ಮೈಸೂರಿನ ಪುರಭವನದ ಆವರಣದಲ್ಲಿ ನಗರ ಪಾಲಿಕೆ ವಲಯ ಕಚೇರಿ 6ರÀ ವತಿಯಿಂದ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 5ರಿಂದ 14 ವರ್ಷದೊಳಗಿನ 40ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಸ್ವಚ್ಛ ಭಾರತ್ ನಂತರ ಕಂಡುಬಂದ ಮೈಸೂರು, ಮಹಾತ್ಮಗಾಂಧೀಜಿಯ ಪರಿಕಲ್ಪನೆ,…
ಕಾಲಕ್ಕೆ ತಕ್ಕಂತೆ ಧರ್ಮವೂ ಬದಲಾಗಬೇಕು
January 18, 2021ಒಂದಿಷ್ಟು ಚಿಂತಿಸಿ’ ಕಿರುಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕುಂದೂರು ಶ್ರೀ ಹಿತವಚನ ಮೈಸೂರು, ಜ.17(ಎಸ್‍ಪಿಎನ್)- ಕಾಲಕ್ಕೆ ತಕ್ಕಂತೆ ಧರ್ಮ ಬದಲಾಗಬೇಕು. ನಾವು ಆಚರಿಸುವ ಧರ್ಮಗಳು ಸದಾ ಮಾನವೀಯ ನೆಲೆಗಟ್ಟಿನ ಕಡೆಗೆ ಚಲಿಸು ತ್ತಿರಬೇಕು ಎಂದು ಕುಂದೂರು ಮಠದ ಶ್ರೀ ಶರತ್‍ಚಂದ್ರ ಸ್ವಾಮೀಜಿ ಹೇಳಿದರು. ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಾಂಸ್ಕøತಿಕ ಸಮಿತಿ ಹಾಗೂ ಬಸವಕೇಂದ್ರ ಮತ್ತು ತರಳಬಾಳು ಸಮಾಗಮ ಜಂಟಿಯಾಗಿ ಶಂಕರಮಠ ರಸ್ತೆಯ ನಟರಾಜ ಸಭಾಭವನ ದಲ್ಲಿ…
`ಸೀತಾ ಸ್ವಯಂವರಂ’ ನಾಟಕ ಪ್ರದರ್ಶನ
January 14, 2021ಮೈಸೂರು,ಜ.13(ಪಿಎಂ)-ರಂಗಭೀಷ್ಮ ಬಿ.ವಿ.ಕಾರಂತರ ಸಾರಥ್ಯದಲ್ಲಿ ಮೈಸೂರು ರಂಗಾಯಣ ಸ್ಥಾಪನೆ ದಿನವಾದ ನಾಳೆ (ಜ.14) ರಂಗಾಯಣಕ್ಕೆ ಮಹತ್ವದ ದಿನ. ಈ ದಿನವನ್ನು ಅರ್ಥ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಂಗಾಯಣದಲ್ಲಿ ನಾಳೆ `ಸುಬ್ಬಯ್ಯ ನಾಯ್ಡು ಅಭಿನಯ ರಂಗತರಬೇತಿ ಕಾರ್ಯಾಗಾರ’ದ ಸಮಾರೋಪ ಸಮಾರಂಭ ಹಾಗೂ `ಸೀತಾ ಸ್ವಯಂವರಂ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು. ಮೈಸೂರಿನ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 1989 ಜ.14ರಂದು ರಂಗಭೀಷ್ಮ ಬಿ.ವಿ.ಕಾರಂತರ ಸಾರಥ್ಯದಲ್ಲಿ ಮೈಸೂರು ರಂಗಾಯಣ ಸ್ಥಾಪನೆ ಗೊಂಡಿತು….
`ಪರ್ವ’ ನಾಟಕ ಫೆಬ್ರವರಿ ಇಲ್ಲವೇ ಮಾರ್ಚ್‍ನಿಂದ ಪ್ರದರ್ಶನ
January 14, 2021ಮೈಸೂರು,ಜ.13(ಪಿಎಂ)- ಖ್ಯಾತ ಕಾದಂಬರಿಕಾರ, ಹಿರಿಯ ಸಾಹಿತಿಯೂ ಆದ ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ ಅವರ `ಪರ್ವ’ ಕಾದಂಬರಿಗೆ ರಂಗಾಯಣದ ವತಿಯಿಂದ ರಂಗರೂಪದ ಸ್ಪರ್ಶ ನೀಡಲಾಗಿದೆ. ಇದೀಗ ನಾಟಕದ ತಾಲೀಮು ನಡೆಯುತ್ತಿದ್ದು, ಫೆಬ್ರವರಿ ಕೊನೆ ವಾರದಲ್ಲಿ ರಂಗಾಯಣದಲ್ಲಿ `ಪರ್ವ’ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಜೊತೆಗೆ ರಾಜ್ಯದ ವಿವಿಧ ಭಾಗಗಳು ಹಾಗೂ ಹೊರ ರಾಜ್ಯಗಳಲ್ಲಿ ಪರ್ವ ಪ್ರದರ್ಶಿಸಲು ಸಿದ್ಧತೆ ನಡೆಸಿರುವ ರಂಗಾಯಣ, ಇದಕ್ಕಾಗಿ ತನ್ನ ವಾರ್ಷಿಕ ಅನುದಾನದಲ್ಲಿ 10 ಲಕ್ಷ ರೂ. ಮೀಸಲಿರಿಸಿದೆಯಲ್ಲದೆ, 50 ಲಕ್ಷ ರೂ….
ಸಂಪುಟದಲ್ಲಿ ಹಳೆ ಮೈಸೂರು ಭಾಗಕ್ಕೆ ಅನ್ಯಾಯ: ರಾಮದಾಸ್ ವಿಷಾದ
January 14, 2021ಮೈಸೂರು, ಜ.13(ಎಂಟಿವೈ)- ಸಚಿವ ಸಂಪುಟದಲ್ಲಿ ಹಳೆ ಮೈಸೂರು ಭಾಗಕ್ಕೆ ಅನ್ಯಾಯವಾಗಿದೆ. ಮೈಸೂರು ಜಿಲ್ಲೆಯಿಂದ ಒಬ್ಬರನ್ನಾದರೂ ಮಂತ್ರಿ ಮಾಡಬಹು ದಾಗಿತ್ತು ಎಂದು ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ರಾಮದಾಸ್, ಈಗಿನ ಸಂಪುಟ ವಿಸ್ತರಣೆ ವೇಳೆ 7 ಮಂದಿ ಸಚಿವರಾಗಿದ್ದಾರೆ. ಆದರೆ, ಹಳೆ ಮೈಸೂರು ಭಾಗದಲ್ಲಿ ಯಾರೊ ಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ನಾನು ಯುವಮೋರ್ಚಾ ಮೈಸೂರು ನಗರ ಅಧ್ಯಕ್ಷನಾಗಿ ಪಕ್ಷದ ಕೆಲಸ ಪ್ರಾರಂಭಿಸಿದೆ. ಯುವಮೋರ್ಚಾ ರಾಜ್ಯ ಅಧ್ಯಕ್ಷನಾಗಿ ಸತತ 2…
ಸಿದ್ಧ ಉಡುಪುಗಳ ಮೇಲೆ `ಸಂಕ್ರಾಂತಿ’ ಹಬ್ಬದ ವಿಶೇಷ ರಿಯಾಯಿತಿ ಮಾರಾಟ
January 14, 2021ಮೈಸೂರು, ಜ.13- ಸಾರ್ವಜನಿಕರ ಬೇಡಿಕೆ ಮೇರೆಗೆ ಬ್ರಾಂಡೆಡ್ ಕಂಪನಿಗಳ ಸಿದ್ಧ ಉಡುಪುಗಳನ್ನು ಸಂಕ್ರಾಂತಿ ಹಬ್ಬದ ವಿಶೇಷ ರಿಯಾಯಿತಿ ನೀಡಿ ಮೈಸೂರಿನ ಬಿಎನ್ ರೋಡ್‍ನಲ್ಲಿರುವ `ಹೋಟೆಲ್ ಪೈ ವಿಸ್ತಾ’ದಲ್ಲಿ ಜ.14ರ ಗುರುವಾರ ಮಾರಾಟ ಮಾಡಲಾಗುತ್ತಿದೆ. ಪುರುಷರ, ಮಹಿಳೆಯರ ಮತ್ತು ಮಕ್ಕಳ ಸಿದ್ಧ ಉಡುಪ್ರುಗಳು ಇಲ್ಲಿ ಮಾರಾಟಕ್ಕಿವೆ. ಟಿ-ಶರ್ಟ್, ಜೀನ್ಸ್ ಪ್ಯಾಂಟ್ಸ್, ಬರ್ಮುಡಾ, ಕುರ್ತೀಸ್, ಪೈಜಾಮಾ ಗಳು, ಮತ್ತು ಇತರೆ ಸಿದ್ಧ ಉಡುಪುಗಳು ಇಲ್ಲಿ ಲಭ್ಯವಿವೆ. ದಾಸ್ತಾನು ಖಾಲಿ ಮಾಡುವ ಉದ್ದೇಶದಿಂದಲೇ ಭಾರೀ ಪ್ರಮಾಣದ ರಿಯಾಯಿತಿ ನೀಡಲಾಗುತ್ತಿದೆ. ಗ್ರಾಹಕರು ಗುರುವಾರ…










