ಮೈಸೂರು

ಗಣ್ಯರ ಮೇಲಿನ ಹಲ್ಲೆ, ಹತ್ಯೆ ತಡೆಗೆ ಎಸ್‍ಐಟಿ ರಚಿಸಬೇಕು: ಶಾಸಕ ತನ್ವೀರ್ ಸೇಠ್
ಮೈಸೂರು

ಗಣ್ಯರ ಮೇಲಿನ ಹಲ್ಲೆ, ಹತ್ಯೆ ತಡೆಗೆ ಎಸ್‍ಐಟಿ ರಚಿಸಬೇಕು: ಶಾಸಕ ತನ್ವೀರ್ ಸೇಠ್

January 5, 2021

ಮೈಸೂರು: ಗಣ್ಯರ ಮೇಲಿನ ಹಲ್ಲೆ, ಹತ್ಯೆ ತಡೆಯುವ ಸಂಬಂಧ ಎಸ್‍ಐಟಿ ರಚಿಸ ಬೇಕು. ನನ್ನ ಹತ್ಯೆಗೆ ಯತ್ನಿಸಿದವರು ಯಾರು? ಉದ್ದೇಶ ಏನು? ಎಂಬುದನ್ನೇ ಈವರೆಗೂ ತಿಳಿಸಿಲ್ಲ. ಘಟನೆ ನಡೆದು ಒಂದು ವರ್ಷದ ಮೇಲೆ ಎರಡು ತಿಂಗಳಾದರೂ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ಹೊರ ಹಾಕಿದರು. ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳ ಮೇಲೆ ನಡೆಯುವ ಹಲ್ಲೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ನನ್ನ ಮೇಲಿನ ಪ್ರಕರಣದ ಆರೋಪಿ ಗಳೆಲ್ಲರೂ ಜಾಮೀನಿನ ಮೇಲೆ…

ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಎಸ್‍ಟಿ ಮೀಸಲಾತಿ ನಿಗದಿಪಡಿಸಿ ಮೈಸೂರು ನಾಯಕರ ಪಡೆ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ಆಗ್ರಹ
ಮೈಸೂರು

ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಎಸ್‍ಟಿ ಮೀಸಲಾತಿ ನಿಗದಿಪಡಿಸಿ ಮೈಸೂರು ನಾಯಕರ ಪಡೆ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ಆಗ್ರಹ

January 5, 2021

ಮೈಸೂರು, ಜ.4(ಪಿಎಂ)- ಮೈಸೂರು ಮಹಾನಗರ ಪಾಲಿಕೆಯ ಮುಂದಿನ ಮೇಯರ್ ಸ್ಥಾನದ ಮೀಸಲಾತಿಯನ್ನು ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ನಿಗದಿಪಡಿಸಬೇಕೆಂದು ಮೈಸೂರು ನಾಯಕರ ಪಡೆ ಅಧ್ಯಕ್ಷ, ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ ಆಗ್ರಹಿಸಿದ್ದಾರೆ. ಮೈಸೂರು ನಗರದಲ್ಲಿ ನಾಯಕ ಜನಾಂಗ ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಮೈಸೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು ಮೂರೂವರೆ ದಶಕಗಳು ಕಳೆದರೂ ನಾಯಕ ಜನಾಂಗಕ್ಕೆ ಮೇಯರ್ ಸ್ಥಾನ ಸಿಕ್ಕಿಲ್ಲ. ಕಳೆದೊಂದು ದಶಕದಿಂದಲೂ ನಮ್ಮ ಸಮುದಾಯ…

4 ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿ ಬಿಸಿಯೂಟ ತಯಾರಕರ ಪ್ರತಿಭಟನೆ
ಮೈಸೂರು

4 ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿ ಬಿಸಿಯೂಟ ತಯಾರಕರ ಪ್ರತಿಭಟನೆ

January 5, 2021

ಮೈಸೂರು,ಜ.4(ಪಿಎಂ)-ಬಿಸಿಯೂಟ ತಯಾರಕರಿಗೆ ಕೂಡಲೇ 4 ತಿಂಗಳ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾ ಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‍ನ (ಎಐಟಿಯುಸಿ ಸಂಯೋಜಿತ) ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಕಳೆದ 18 ವರ್ಷಗಳಿಂದ ಮಧ್ಯಾಹ್ನದ ಉಪಾಹಾರ ಯೋಜನೆಯಡಿಯಲ್ಲಿ ಸರ್ಕಾರದ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದೇವೆ. ಸೆಪ್ಟಂಬರ್, ಅಕ್ಟೋ ಬರ್, ನವೆಂಬರ್ ಮತ್ತು ಡಿಸೆಂಬರ್ ಸೇರಿ…

ಕೋವಿಡ್-19 ಮಾರ್ಗಸೂಚಿ ಅನುಸರಿಸಿ  ಹಂತ ಹಂತವಾಗಿ ಏರುತ್ತಿದೆ   ವಿದ್ಯಾರ್ಥಿಗಳ ಹಾಜರಾತಿ
ಮೈಸೂರು

ಕೋವಿಡ್-19 ಮಾರ್ಗಸೂಚಿ ಅನುಸರಿಸಿ  ಹಂತ ಹಂತವಾಗಿ ಏರುತ್ತಿದೆ  ವಿದ್ಯಾರ್ಥಿಗಳ ಹಾಜರಾತಿ

January 5, 2021

ಮೈಸೂರು, ಜ.4(ಆರ್‍ಕೆಬಿ)- ಕೋವಿಡ್ ಲಾಕ್ ಡೌನ್ ಮತ್ತು ನಂತರದ ಮಾರ್ಗಸೂಚಿಗಳಿಂದಾಗಿ ಕಳೆದ 9 ತಿಂಗಳಿನಿಂದ ಮನೆಯಲ್ಲಿಯೇ ಉಳಿದಿದ್ದ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಂದ ಬೇಸತ್ತು, ಜ.1ರಿಂದ ಆರಂಭಗೊಂಡಿರುವ ಶಾಲಾ ಕಾಲೇಜು ಗಳ 10 ಮತ್ತು 12ನೇ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ತರಗತಿ ಆರಂಭವಾಗಿ 3ನೇ ದಿನವಾದ ಇಂದು ಶೇ. 60ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವ ಮೂಲಕ ಪಾಠ ಪ್ರವಚನಗಳತ್ತ ಮುಖ ಮಾಡಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಶಾಲಾ…

7ನೇ ಸುತ್ತಿನ ಮಾತುಕತೆಯೂ ವಿಫಲ; ಜ.8ಕ್ಕೆ ಮತ್ತೊಂದು ಸಭೆ
ಮೈಸೂರು

7ನೇ ಸುತ್ತಿನ ಮಾತುಕತೆಯೂ ವಿಫಲ; ಜ.8ಕ್ಕೆ ಮತ್ತೊಂದು ಸಭೆ

January 5, 2021

ನವದೆಹಲಿ: ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಏಳನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ. ಕೇಂದ್ರ ಸರ್ಕಾರದ ಕೃಷಿ ಕಾನೂನು ತಿದ್ದುಪಡಿ ಪ್ರಯತ್ನಕ್ಕೆ ಒಪ್ಪದ ರೈತರು ಕಾನೂನುಗಳನ್ನು ರದ್ದುಪಡಿಸುವಂತೆ ಪಟ್ಟು ಸಡಿಲಿಸಿಲ್ಲ. ಇದರ ಪರಿಣಾಮ ಇಂದಿನ ಸಭೆ ವಿಫಲವಾಗಿದ್ದು, ಜ.8ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಕೇಂದ್ರ ಹಾಗೂ ರೈತ ಪ್ರತಿನಿಧಿಗಳು ನಿರ್ಧರಿಸಿದ್ದಾರೆ. ಇನ್ನು ಸಭೆಯಲ್ಲಿ ರೈತರು ತಮ್ಮ ಬೇಡಿಕೆಗಳು ಈಡೇರದಿದ್ದರೆ, ಜ.26ರ…

ತುಕ್ಕು ಹಿಡಿದಿದ್ದ ಬ್ಯಾರಿಕೇಡ್ ತೆರವು
ಮೈಸೂರು

ತುಕ್ಕು ಹಿಡಿದಿದ್ದ ಬ್ಯಾರಿಕೇಡ್ ತೆರವು

January 5, 2021

ಮೈಸೂರು, ಜ.4(ಎಸ್‍ಪಿಎನ್)- `ತುಕ್ಕು ಹಿಡಿಯುತ್ತಿರುವ ಬ್ಯಾರಿಕೇಡ್; ನಾಗರಿಕರ ಆಕ್ರೋಶ’ ಜ.2ರಂದು `ಮೈಸೂರು ಮಿತ್ರ’ನಲ್ಲಿ ಪ್ರಕಟ ವಾಗಿದ್ದ ವರದಿಗೆ ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸ್ಪಂದಿಸಿ ದ್ದಾರೆ. ಮೈಸೂರು ರಿಂಗ್‍ರೋಡ್‍ನ ದಟ್ಟಗಳ್ಳಿ ಮಾರ್ಗದ ಆದರ್ಶನಗರ ಸಮೀಪದ(ಪರಸಯ್ಯನಹುಂಡಿ ಮಾರ್ಗ) ರಸ್ತೆ ಪಕ್ಕದಲ್ಲಿ ಜೋಡಿಸಲಾಗಿದ್ದ 10-12 `ಬ್ಯಾರಿಕೇಡ್’ಗಳು ಮಳೆ, ಬಿಸಿಲಿಗೆ ತುಕ್ಕುಹಿಡಿ ಯುತ್ತಿವೆ. ಅಲ್ಲದೆ, ಪಾದಚಾರಿಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ ಎಂದು `ಮೈಸೂರು ಮಿತ್ರ’ನಲ್ಲಿ ಜ.2ರಂದು ವರದಿಯಾಗಿತ್ತು. ಇದೀಗ ಆ ವರದಿಗೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ…

ಡಾ. ವಿಷ್ಣು ನೆನಪಿನೋತ್ಸವದಲ್ಲಿ ಹಳೆಯ ಚಿತ್ರಗೀತೆ ರಂಜನೆ
ಮೈಸೂರು

ಡಾ. ವಿಷ್ಣು ನೆನಪಿನೋತ್ಸವದಲ್ಲಿ ಹಳೆಯ ಚಿತ್ರಗೀತೆ ರಂಜನೆ

January 5, 2021

ಮೈಸೂರು, ಜ.4(ವೈಡಿಎಸ್)- ಮೈಸೂರಿನ ರಾಮಕೃಷ್ಣನಗರ ನೃಪತುಂಗ ಶಾಲೆಯ ರಮಾಗೋವಿಂದ ರಂಗ ಮಂದಿರದಲ್ಲಿ `ಸಾಹಸಸಿಂಹ ಡಾ.ವಿಷ್ಣುವರ್ಧನ್ ನೆನಪಿ ನೋತ್ಸವ ಸಮಿತಿ’, ಕನ್ನಡ ಜನ ಜಾಗೃತಿ ವೇದಿಕೆ, ಕರ್ನಾಟಕ ಕಾವಲು ಪಡೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಸಂಗೀತ ಸಂಜೆ’ಯಲ್ಲಿ ಹಳೆಯ ಕನ್ನಡ ಚಿತ್ರಗೀತೆಗಳ ಗಾಯನ ಸಂಗೀತಪ್ರಿಯ ರನ್ನು ತಲೆದೂಗುವಂತೆ ಮಾಡಿತು. ಇದೇ ವೇಳೆ ಕೊರೊನಾ ವಾರಿಯರ್ಸ್ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಿತು. ಗಾಯಕರಾದ ಅರುಣಾ ಚಲಮ್, ಟಿವಿಎಸ್ ಕುಮಾರ್, ಮಮತಾ, ಎಂ.ವಿ.ಗೋವಿಂದರಾಜು ಮಧುರ ಕಂಠದಲ್ಲಿ ಹೊರಹೊಮ್ಮಿದ ಹಾಡುಗಳು ಸಂಗೀತ…

ಕೋವ್ಯಾಕ್ಸಿನ್, ಕೋವಿಶೀಲ್ಡ್‍ಗೆ ಡಿಸಿಜಿಐ ಹಸಿರು ನಿಶಾನೆ
ಮೈಸೂರು

ಕೋವ್ಯಾಕ್ಸಿನ್, ಕೋವಿಶೀಲ್ಡ್‍ಗೆ ಡಿಸಿಜಿಐ ಹಸಿರು ನಿಶಾನೆ

January 4, 2021

ನವದೆಹಲಿ, ಜ. 3-ಸೇರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‍ನ ಲಸಿಕೆಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‍ಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಹೇಳಿದೆ. ದೆಹಲಿಯಲ್ಲಿ ಡಿಸಿಜಿಐ ಅಧ್ಯಕ್ಷ ವಿ.ಜಿ.ಸೊಮಾನಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಪ್ರಕಟಣೆ ನೀಡಿದ್ದಾರೆ. ತಜ್ಞರ ಸಮಿತಿ ಎರಡು ಕೊರೊನಾ ಲಸಿಕೆ ಬಗ್ಗೆ ಹೇಳಿದ್ದು ಕೋವ್ಯಾಕ್ಸಿನ್ ಹಾಗೂ ಕೋವಿ ಶೀಲ್ಡ್ ಆ ಎರಡು ಲಸಿಕೆಗಳಾಗಿವೆ. ಇವುಗಳನ್ನು ತುರ್ತು ಸಮಯ ದಲ್ಲಿ ಬಳಸಿಕೊಳ್ಳಲು…

ಕೋವಿಡ್-19 ನಿಯಂತ್ರಣಕ್ಕೆ ಮುಂದಿನ ದಿನಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ
ಮೈಸೂರು

ಕೋವಿಡ್-19 ನಿಯಂತ್ರಣಕ್ಕೆ ಮುಂದಿನ ದಿನಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

January 4, 2021

ಮೈಸೂರು,ಜ.3(ಎಂಟಿವೈ)- ಮೈಸೂರಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಮುಂದಿನ ಎರಡು ತಿಂಗಳವರೆಗೂ ಅಧಿಕಾರಿಗಳು ಮೈಮರೆಯದೇ ಕಟ್ಟೆಚ್ಚರದೊಂದಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚಿಸಿದ್ದಾರೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಕೋವಿಡ್-19 ಹಾಗೂ ಇನ್ನಿತರ ವಿಷಯ ಕುರಿತಂತೆ ಭಾನು ವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿದ ಬಳಿಕ ವ್ಯಾಕ್ಸಿನ್ ಬಂದಿದ್ದರೂ ಇನ್ನು 2-3 ತಿಂಗಳು ಮೈಮರೆಯದೇ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ವಿವಿಧ ಇಲಾಖೆಗಳು ಪರಸ್ಪರ ಸಹಕಾರ, ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ…

ಆರೋಗ್ಯ ರಕ್ಷಣೆ ವಿಷನ್ ಗ್ರೂಪ್‍ನಿಂದ ‘ಆರೋಗ್ಯ ಕರ್ನಾಟಕ’
ಮೈಸೂರು

ಆರೋಗ್ಯ ರಕ್ಷಣೆ ವಿಷನ್ ಗ್ರೂಪ್‍ನಿಂದ ‘ಆರೋಗ್ಯ ಕರ್ನಾಟಕ’

January 4, 2021

ಅಧ್ಯಯನ ವರದಿಗೆ 6 ತಿಂಗಳ ಕಾಲಾವಕಾಶ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಬೆಂಗಳೂರು,ಜ.3-ರಾಜ್ಯದ ಜನರ ಸಮಗ್ರ ಆರೋಗ್ಯ ರಕ್ಷಣೆಯೇ ರಕ್ಷಣೆ ವಿಷನ್ ಗ್ರೂಪ್‍ನ ಪ್ರಮುಖ ಗುರಿಯಾಗಿದೆ. ವಿಷನ್ ಗ್ರೂಪ್‍ಗೆ ಆರೋಗ್ಯ ಕರ್ನಾಟಕ ನಿರ್ಮಿಸಲು ವರದಿ ರೂಪಿಸಲು 6 ತಿಂಗಳು ಸಮಯ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬ್ರ್ಯಾಂಡಿಂಗ್, ಆಸ್ಪತ್ರೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಕೆ, ಡಿಜಿಟಲ್ ದಾಖಲಾತಿ, ಜನಸಾಮಾನ್ಯರಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ಬಗ್ಗೆ ಆರೋಗ್ಯ ವಿಷನ್ ಗ್ರೂಪ್…

1 328 329 330 331 332 1,611
Translate »