ಮೈಸೂರು

2023ರಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ   ತಂದು ಕೊನೆಯುಸಿರೆಳೆಯುತ್ತೇನೆ 
ಮೈಸೂರು

2023ರಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ  ತಂದು ಕೊನೆಯುಸಿರೆಳೆಯುತ್ತೇನೆ 

January 6, 2021

ಕಡೂರು,ಜ.5-ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸುತ್ತೇನೆ ಎಂದು ನಾನು ಕನಸಿನಲ್ಲಿಯೂ ನೆನಸಿರಲಿಲ್ಲ. ಹೋರಾಟ ಮಾಡುವ ಶಕ್ತಿಯನ್ನು ನನಗೆ ರಾಜ್ಯದ ಜನತೆ ನೀಡಿದ್ದು, ಜನರ ಮೇಲೆ ನನಗೆ ವಿಶ್ವಾಸವಿದೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕೊನೆಯುಸಿರೆಳೆಯುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ತಾಲೂಕಿನ ಬೀರೂರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಗ್ರಾಪಂ ಚುನಾವಣೆಯಲ್ಲಿ ವಿಜಯ ಸಾಧಿಸಿದ ಜೆಡಿಎಸ್ ಬೆಂಬಲಿತ ಸದಸ್ಯರಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭವನ್ನು…

ಪಕ್ಷದ ಶಿಸ್ತು ಉಲ್ಲಂಘಿಸಿದವರ ಉಚ್ಛಾಟನೆ ಅನಿವಾರ್ಯ
ಮೈಸೂರು

ಪಕ್ಷದ ಶಿಸ್ತು ಉಲ್ಲಂಘಿಸಿದವರ ಉಚ್ಛಾಟನೆ ಅನಿವಾರ್ಯ

January 6, 2021

ಶಾಸಕ ಜಿ.ಟಿ.ದೇವೇಗೌಡರ ವಿಷಯದಲ್ಲಿ ಮಾಜಿ ಸಿಎಂ  ಕುಮಾರಸ್ವಾಮಿ ಹೇಳಿಕೆಗೆ ಸಾ.ರಾ.ಮಹೇಶ್ ಸಮರ್ಥನೆ ಬೆಂಗಳೂರು: ಯಾರೇ ಆದರೂ ಪಕ್ಷದ ಶಿಸ್ತನ್ನು ಉಲ್ಲಂಘಿಸಬಾರದು. ಪಕ್ಷಕ್ಕೆ ಮುಜು ಗರವಾಗುವ ಹಾಗೆ ಹೇಳಿಕೆಗಳನ್ನು ಕೊಡಬಾರದು. ಹಾಗೆ ಮಾಡಿದಲ್ಲಿ ಉಚ್ಛಾಟನೆ ಅನಿವಾರ್ಯ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪ್ರತಿಪಾದಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೈಸೂರಿನಿಂದಲೇ ಉಚ್ಛಾಟನೆ ಆರಂಭ ಎಂಬ ಕುಮಾರ ಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರೂ ಇದನ್ನೇ ಹೇಳಿರೋದು. ಜೆಡಿಎಸ್ ಕಾಲ ಕಾಲಕ್ಕೆ ಬದಲಾಗುತ್ತೆ ಎಂಬುದೆಲ್ಲಾ ಸುಳ್ಳು. ಪಕ್ಷದಲ್ಲೇ ಇದ್ದುಕೊಂಡು ಇಂತಹ…

ಮಾಜಿ ಸಿಎಂ ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡಿದ್ದಾರೆ, ಏನೇನೋ ಮಾತಾಡುತ್ತಾರೆ
ಮೈಸೂರು

ಮಾಜಿ ಸಿಎಂ ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡಿದ್ದಾರೆ, ಏನೇನೋ ಮಾತಾಡುತ್ತಾರೆ

January 6, 2021

ಬೆಂಗಳೂರು: ಕುಮಾರಸ್ವಾಮಿ ಈಗ ತಾಳ್ಮೆ ಕಳೆದುಕೊಂಡಿದ್ದಾರೆ. ಹಾಗಾಗಿಯೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಸ್ವಪಕ್ಷದ ನಾಯಕನ ವಿರುದ್ಧವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರಣಿ ಹೇಳಿಕೆಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಮೊದಲು ಕುಮಾರಸ್ವಾಮಿ ಅವರಿಗೆ ತುಂಬಾ ತಾಳ್ಮೆಯಿತ್ತು. ಅವರಷ್ಟು ಸಮಾಧಾನದ ವ್ಯಕ್ತಿ ಬೇರೆಯವರು ಇಲ್ಲ ಎಂಬಂತ್ತಿದ್ದರು. ಆದರೆ, ಇತ್ತೀಚೆಗೆ ಅದನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಂದಕ್ಕೂ ಹೇಳಿಕೆ ಕೊಡುತ್ತಾರೆ. ಅವರು ಮೊದಲಿನಂತೆ ಇಲ್ಲ…

ಇಂದಿನಿಂದ ರೈಲು ಪ್ರಯಾಣ ದುಬಾರಿ
ಮೈಸೂರು

ಇಂದಿನಿಂದ ರೈಲು ಪ್ರಯಾಣ ದುಬಾರಿ

January 6, 2021

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿರುವ ರೈಲುಗಳ ಕಾರ್ಯಾಚರಣೆಯನ್ನು ಭಾರತೀಯ ರೈಲ್ವೆಯು ಶೀಘ್ರದಲ್ಲೇ ಪುನರಾಂ ಭಿಸಲಿದೆ. ಅದಕ್ಕೂ ಮುನ್ನ ರೈಲು ಇಲಾಖೆ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ್ದು, ಜ.6ರಿಂದ ಹಲವು ರೈಲುಗಳ ಪ್ರಯಾಣ ದರ ಏರಿಕೆ ಮಾಡಲಾಗುತ್ತಿದೆ. ಇನ್ನು ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಸೀಟುಗಳ ಕಾಯ್ದಿರಿಸುವುದು ಕಡ್ಡಾಯವಾಗಿದ್ದು, ಆನ್‍ಲೈನ್‍ನಲ್ಲಿ ರೈಲು ಬರುವ 30 ನಿಮಿಷ ಮೊದಲು ಸೀಟುಗಳ ಕಾಯ್ದಿರಿಸಬಹುದು. ಪ್ರಯಾಣಿಕರು ಪ್ರಯಾಣಿಸ ಬಯಸುವ ದೂರವನ್ನು ಲೆಕ್ಕಿಸದೆ, ಸೀಟುಗಳ ಕಾಯ್ದಿರಿಸುವುದು ಕಡ್ಡಾಯವಾಗಿರುತ್ತದೆ. ಹಾಗಾಗಿ ಎಲ್ಲಾ…

ರೈತ-ಕಾರ್ಮಿಕ ಕರಾಳ ತಿದ್ದುಪಡಿ ಕಾಯ್ದೆಗಳ ರದ್ದು ಮಾಡಲು ಆಗ್ರಹ
ಮೈಸೂರು

ರೈತ-ಕಾರ್ಮಿಕ ಕರಾಳ ತಿದ್ದುಪಡಿ ಕಾಯ್ದೆಗಳ ರದ್ದು ಮಾಡಲು ಆಗ್ರಹ

January 6, 2021

ದೆಹಲಿ ರೈತರ ಹೋರಾಟ ಬೆಂಬಲಿಸಿ ಎಐಯುಟಿಯುಸಿ ಪ್ರತಿಭಟನೆ ಮೈಸೂರು, ಜ.5(ಆರ್‍ಕೆಬಿ)- ದೆಹಲಿ ಯಲ್ಲಿ ನಡೆಯುತ್ತಿರುವ ರೈತರ ಹೋರಾಟ ವನ್ನು ಬೆಂಬಲಿಸಿ ಹಾಗೂ ಕೇಂದ್ರ ಸರ್ಕಾ ರದ ಕಾರ್ಪೊರೇಟ್ ಪರ ಕರಾಳ ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋ ಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕಾರ್ಯಕರ್ತರು ಮೈಸೂರಿನ ರಾಮ ಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರೈತರು ದೆಹಲಿಯಲ್ಲಿ ಕೊರೆಯುವ ಚಳಿಯ ನಡುವೆಯೂ 38 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕರಾಳ ಕೃಷಿ ಕಾಯ್ದೆಗಳನ್ನು…

ಮೈತ್ರಿ ಯೋಜನೆಯಡಿ ಅರ್ಚಕರು, ಪುರೋಹಿತರ ಮದುವೆಯಾದರೆ ವಧುವಿಗೆ 3 ಲಕ್ಷ ರೂ. ಬಾಂಡ್
ಮೈಸೂರು

ಮೈತ್ರಿ ಯೋಜನೆಯಡಿ ಅರ್ಚಕರು, ಪುರೋಹಿತರ ಮದುವೆಯಾದರೆ ವಧುವಿಗೆ 3 ಲಕ್ಷ ರೂ. ಬಾಂಡ್

January 6, 2021

ಬೆಂಗಳೂರು: ಅರ್ಚಕರನ್ನು ಮದುವೆಯಾಗುವ ವಧುವಿಗೆ 3 ಲಕ್ಷ ರೂ. ಮೊತ್ತದ ಬಾಂಡ್ ನೀಡಲಾಗುತ್ತದೆ. ವಧುವಿನ ಹೆಸರಲ್ಲೇ ಮೈತ್ರಿ ಬಾಂಡ್ ವಿತರಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅರ್ಚಕರು, ಪುರೋಹಿತರ ಮದುವೆಯಾಗುವವರಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಮೈತ್ರಿ ಯೋಜನೆಯಡಿ 3 ಲಕ್ಷ ರೂ. ಬಾಂಡ್ ನೀಡಲಾಗುತ್ತದೆ. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಹೆಚ್. ಸಚ್ಚಿದಾನಂದ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಅರ್ಚಕರು ಮತ್ತು ಪೌರೋಹಿತ್ಯ ಮಾಡುವವರನ್ನು ಮದುವೆಯಾಗಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ…

2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪಟ್ಟಿ ಬಿಡುಗಡೆ
ಮೈಸೂರು

2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪಟ್ಟಿ ಬಿಡುಗಡೆ

January 5, 2021

ಚಾಮರಾಜನಗರ, ಜ.4(ಎಸ್‍ಎಸ್)- ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಜಾನಪದ ತಜ್ಞ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಬಿಡುಗಡೆಗೊಳಿಸಿದರು. ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹೊರ ಜಿಲ್ಲೆಯಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮೈಸೂರಿನ ಕುಮಾರಸ್ವಾಮಿ ಅವರಿಗೆ ಕಂಸಾಳೆ ಹಾಡುಗಾರಿಕೆಯಲ್ಲಿ, ಕೊಡಗಿನ ಕುಡಿಯರ ಕೆ.ಪೊನ್ನಪ್ಪ ಅವರಿಗೆ ಬಾಳೋಪಾಟ್‍ನಲ್ಲಿ, ಮಂಡ್ಯದ ಭೂಮಿಗೌಡ ಅವರಿಗೆ ಕೋಲಾಟದಲ್ಲಿ, ಚಾಮರಾಜನಗರದ ಹೊನ್ನಮ್ಮ ಅವರಿಗೆ ಸೋಬಾನೆ ಪದದಲ್ಲಿ ಹಾಗೂ…

ರೈತರಿಗೆ ಹಣ ನೀಡುವ ಬದಲು ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಿ
ಮೈಸೂರು

ರೈತರಿಗೆ ಹಣ ನೀಡುವ ಬದಲು ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಿ

January 5, 2021

ಮೈಸೂರು,ಜ.4(ಎಂಕೆ)-ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿರುವ ಸಾಲ ಮೂರು ಪಟ್ಟು ಹೆಚ್ಚಾಗಿದ್ದು, ಬಡ್ಡಿ ಕಟ್ಟುವುದೇ ಕಷ್ಟ ವಾಗಿದೆ. ಮುಂದಿನ ಮೂರು ವರ್ಷಗಳ ವರೆಗೆ ಯಾವುದೇ ಅಭಿವೃದ್ಧಿಯನ್ನು ನಿರೀ ಕ್ಷಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರೈತ ಕುಟುಂಬಗಳಿಗೆ ವರ್ಷಕ್ಕೆ ಐದಾರು ಸಾವಿರ ರೂ. ಹಣ ನೀಡುವ ಬದಲು ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಿದರೆ ರೈತರ ಬದುಕು ಹಸನಾಗುತ್ತದೆ ಎಂದು ವಿಶ್ರಾಂತ ಡಿಜಿಪಿ ಶಂಕರ ಬಿದರಿ ಅಭಿ ಪ್ರಾಯಪಟ್ಟರು. ಮೈಸೂರು ವಿಜಯನಗರ 1ನೇ ಹಂತದಲ್ಲಿ ರುವ ಜಿಲ್ಲಾ ಸಾಹಿತ್ಯ…

ಮೈಸೂರು-ಬೆಂಗಳೂರು ಎರಡು ಪ್ಯಾಸೆಂಜರ್ ರೈಲು ಸಂಚಾರ ಆರಂಭ
ಮೈಸೂರು

ಮೈಸೂರು-ಬೆಂಗಳೂರು ಎರಡು ಪ್ಯಾಸೆಂಜರ್ ರೈಲು ಸಂಚಾರ ಆರಂಭ

January 5, 2021

ಮೈಸೂರು, ಜ.4(ಎಸ್‍ಬಿಡಿ)- ಮೈಸೂರು-ಬೆಂಗಳೂರು ನಡುವೆ ಸೋಮವಾರ ದಿಂದ ಎರಡು ಸಾಮಾನ್ಯ ರೈಲುಗಳು ಸಂಚಾರ ಆರಂಭಿಸಿವೆ. ಮೈಸೂರಿನಿಂದ ಬೆಳಗ್ಗೆ 6.10 ಹಾಗೂ ಮಧ್ಯಾಹ್ನ 1.45ಕ್ಕೆ ಮೆಮು ಪ್ಯಾಸೆಂಜರ್ ರೈಲುಗಳು ಸಂಚರಿ ಸಿದ್ದು, ಮೊದಲ ದಿನವೇ 500ಕ್ಕೂ ಹೆಚ್ಚು ಜನ ಬೆಂಗಳೂರು ಕಡೆಗೆ ಪ್ರಯಾಣಿಸಿದ್ದಾರೆ. ಅಲ್ಲದೆ ಮೈಸೂರು-ಚೆನ್ನೈ ನಡುವಿನ ಶತಾಬ್ಧಿ ಎಕ್ಸ್‍ಪ್ರೆಸ್ ರೈಲು ಸಂಚಾರವೂ ಇಂದಿನಿಂದ ಆರಂಭವಾಗಿದೆ. ಬುಧವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಮಧ್ಯಾಹ್ನ 2.15ಕ್ಕೆ ಮೈಸೂರಿನಿಂದ ಹೊರಡುವ ಈ ರೈಲು ರಾತ್ರಿ 10ಕ್ಕೆ ಚೆನ್ನೈ ತಲುಪಲಿದೆ. ಬೆಳಗ್ಗೆ 6ಕ್ಕೆ…

ಮುಡಾ ನಿವೇಶನ ಕೊಡಿಸುವುದಾಗಿ ವಂಚಿಸಿದ್ದ ಆರೋಪಿಯಿಂದ ಬೆಂಗಳೂರು, ಬೆಳಗಾವಿಯಲ್ಲೂ ವಂಚನೆ
ಮೈಸೂರು

ಮುಡಾ ನಿವೇಶನ ಕೊಡಿಸುವುದಾಗಿ ವಂಚಿಸಿದ್ದ ಆರೋಪಿಯಿಂದ ಬೆಂಗಳೂರು, ಬೆಳಗಾವಿಯಲ್ಲೂ ವಂಚನೆ

January 5, 2021

ಮೈಸೂರು,ಜ.4-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಿವೇಶನ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚಿಸಿರುವ ಆರೋಪದಡಿ ಬಂಧನ ಕ್ಕೊಳಗಾಗಿರುವ ಸಾಗರ್ ದೇಶಪಾಂಡೆ, ಬೆಂಗಳೂರು ಹಾಗೂ ಬೆಳಗಾವಿಯಲ್ಲೂ ಈ ರೀತಿಯ ಕೃತ್ಯ ನಡೆಸಿದ್ದಾನೆಂದು ತಿಳಿದು ಬಂದಿದೆ. ಮುಡಾದ ನಕಲಿ ಲೆಟರ್‍ಹೆಡ್ ಬಳಸಿ ನಿವೇ ಶನ ಕೊಡಿಸುವುದಾಗಿ ನಂಬಿಸಿ, ಶಿಕ್ಷಕರು, ವಕೀ ಲರು, ವೈದ್ಯರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿಯಿಂದ 2 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೆಸ್ಟೋರೆಂಟ್ ಮಾಲೀಕ ಸಾಗರ್ ದೇಶಪಾಂಡೆ (31)ಯನ್ನು ಮೈಸೂರಿನ…

1 327 328 329 330 331 1,611
Translate »