ಮೈಸೂರು, ಜ.6(ಆರ್‍ಕೆ)-10ಕ್ಕಿಂತ ಹೆಚ್ಚು ಮಂದಿ ಸಿಬ್ಬಂದಿ ಗಳೊಂದಿಗೆ ದಿನದ 24 ಗಂಟೆಯೂ ವಾಣಿಜ್ಯ ವಹಿವಾಟುಗಳನ್ನು ನಡೆಸಬಹುದೆಂಬ ಸರ್ಕಾರಿ ಅಧಿಸೂಚನೆ ಹೋಟೆಲು ಗಳಿಗೂ ಅನ್ವಯಿಸುತ್ತದೆಯೇ? ಎಂಬ ಗೊಂದಲ ಹೋಟೆಲ್ ಮಾಲೀಕರಲ್ಲಿ ಉಂಟಾಗಿದೆ. ಸರ್ಕಾರದ ಈ ಆದೇಶವನ್ನು ಸ್ವಾಗತಿಸಿರುವ ಮೈಸೂರು ಹೋಟೆಲು ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ರಾತ್ರಿ 12 ಗಂಟೆವರೆಗೆ ಹೋಟೆಲುಗಳನ್ನು ತೆರೆ ಯಲು ಅವಕಾಶ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾತ್ರಿ 11.30 ಗಂಟೆಗೆ…
ಚಾಮುಂಡಿಬೆಟ್ಟದಲ್ಲಿ ಗಾಯಗೊಂಡಿದ್ದ ಚಿರತೆ ಬನ್ನೇರುಘಟ್ಟದಲ್ಲಿ ಸಾವು
January 7, 2021ಮೈಸೂರು, ಜ.6(ಎಂಟಿವೈ)- ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 11 ವರ್ಷದ ಹೆಣ್ಣು ಚಿರತೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದೆ. ಚಾಮುಂಡಿಬೆಟ್ಟದಲ್ಲಿ ವಾಹನವೊಂದು ಚಿರತೆಯ ದೇಹದ ಮೇಲೆ ಹರಿದ ಪರಿಣಾಮ ಅದರ ಸೊಂಟದ ಮೂಳೆ ಮುರಿದಿತ್ತು. ನಡೆದಿದ್ದೇನು: ಡಿ.28ರ ಬೆಳಿಗ್ಗೆ 7.45ರಲ್ಲಿ ದೇವಿಕೆರೆ ಸಮೀಪ ರಸ್ತೆ ಬದಿಯಲ್ಲೇ ಹಿಂಗಾಲುಗಳ ಸ್ವಾದೀನ ಕಳೆದುಕೊಂಡು ನರಳಾಡುತ್ತಿದ್ದ ಚಿರತೆ ವಾಯುವಿಹಾರಿಗಳ ಕಣ್ಣಿಗೆ ಬಿದ್ದಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಅರಣ್ಯ ಸಿಬ್ಬಂದಿ ಹಾಗೂ ಪಶುವೈದ್ಯ ಡಾ.ಡಿ.ಎನ್.ನಾಗರಾಜು ರಸ್ತೆ ಪಕ್ಕದ ಪೊದೆ ಯಲ್ಲಿದ್ದ ಚಿರತೆಯನ್ನು ಪರಿಶೀಲಿಸಿದಾಗ…
ಸಾಲಕ್ಕೆ ಅಧಿಕ ಬಡ್ಡಿ ವಸೂಲಿ; ಇನ್ಫೋಸಿಸ್ ಉದ್ಯೋಗಿ ಆತ್ಮಹತ್ಯೆ
January 7, 2021ಮೈಸೂರು, ಜ.6(ವೈಡಿಎಸ್)- ಪಡೆದ ಸಾಲಕ್ಕೆ ಅಧಿಕ ಬಡ್ಡಿ ವಸೂಲಿ ಮಾಡಿದರೆಂದು ಮನನೊಂದ ಯುವಕನೊಬ್ಬ ಡೆತ್‍ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ನಂಜುಮಳಿಗೆಯಲ್ಲಿ ಬುಧವಾರ ನಡೆದಿದೆ. ಇಲ್ಲಿನ ನಿವಾಸಿ ಸತೀಶ್‍ಕುಮಾರ್ ಎಂಬವರ ಪುತ್ರ ಗಗನ್(23) ಆತ್ಮಹತ್ಯೆ ಮಾಡಿ ಕೊಂಡ ಯುವಕ. ಈತ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಬುಧವಾರ ಮಧ್ಯಾಹ್ನ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಇದನ್ನು ಕಂಡ ತಂದೆ ಸತೀಶ್ ಕೂಡಲೇ ಮಗನನ್ನು ಹಗ್ಗದ ಕುಣಿಕೆಯಿಂದ ಕೆಳಕ್ಕಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಗಗನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ….
ಮೈಸೂರು ಭಾಗದಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ
January 7, 2021ಮೈಸೂರು, ಜ.6(ಆರ್‍ಕೆಬಿ)-ಮೈಸೂರು, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಗುರುವಾರ (ಜ.7)ರಂದು ಮೈಸೂರು, ಕೊಡಗು, ಮಂಡ್ಯ ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕೊಡಗು ಜಿಲ್ಲೆಯಲ್ಲಿ 15 ಮಿಮೀ, ಮೈಸೂರು, ಮಂಡ್ಯ, ಚಾ.ನಗರ ಜಿಲ್ಲೆಗಳಲ್ಲಿ ತಲಾ 5 ಮಿ.ಮೀ. ಮಳೆಯಾಗುವ ಸಾಧ್ಯತೆಗಳಿವೆ ಎಂದು ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ತಾಪಮಾನದಲ್ಲಿ…
ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ
January 7, 2021ಮೈಸೂರು, ಜ.6(ಪಿಎಂ)- ವೀರ ಯೋಧರ ಸ್ಮರಣೆಗಾಗಿ ಮೈಸೂರು ನಗರದ ಸೂಕ್ತ ಸ್ಥಳದಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆ ವತಿ ಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ದೇಶದ ರಕ್ಷಣೆಗೆ ಸದಾ ತಮ್ಮ ಜೀವದ ಹಂಗು ತೊರೆದು ಗಡಿಯಲ್ಲಿ ರಾಷ್ಟ್ರವನ್ನು ಕಾಯುತ್ತಿರುವ ನಮ್ಮ ಭಾರತೀಯ ಯೋಧರು ಇಡೀ ವಿಶ್ವಕ್ಕೆ ಮಾದರಿ. ದೇಶದ ನಾಗರಿಕರು ನೆಮ್ಮದಿಯಿಂದ ಇರಬೇಕಾದರೆ ನಮ್ಮ ಯೋಧರ ನಿಸ್ವಾರ್ಥ ಸೇವೆಯನ್ನು ಪ್ರತಿ ಯೊಬ್ಬರು ಸ್ಮರಿಸಬೇಕು….
ಆಶ್ರಯ ಯೋಜನೆಗೆ ಜಮೀನು ಪಡೆಯಿರಿ: ಶಾಸಕ ನಾಗೇಂದ್ರ
January 7, 2021ಮೈಸೂರು, ಜ. 6(ಆರ್‍ಕೆ)- ಮೈಸೂರು ತಾಲೂಕು ಶಾದನಹಳ್ಳಿ, ಬೆಲವತ್ತ ಹಾಗೂ ಹೆಬ್ಬಾಳು ಗ್ರಾಮದ ಸರ್ವೆ ನಂಬರ್‍ಗಳಲ್ಲಿ ಗುರ್ತಿಸಿರುವ ಸರ್ಕಾರಿ ಜಮೀನುಗಳ ದಾಖಲೆಗಳನ್ನು ಆರ್‍ಟಿಸಿಯಲ್ಲಿ ನಮೂದಿಸಿ ಆಶ್ರಯ ಯೋಜನೆಗೆ ಪಡೆಯುವಂತೆ ಚಾಮ ರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಆಶ್ರಯ ಸಮಿತಿ ಸಭೆ ನಡೆಸಿದ ಅವರು, ಆಶ್ರಯ ಯೋಜನೆಗೆ ಅಗತ್ಯವಿರುವ ಯುಎಲ್‍ಸಿ ಜಮೀನುಗಳ ಪಟ್ಟಿ ಮಾಡಿ, ಪಾಲಿಕೆ ವಶಕ್ಕೆ ಪಡೆಯಲು ಕ್ರಮ ವಹಿಸಿ, ಹೆಬ್ಬಾಳು ಗ್ರಾಮದ ಸರ್ವೆ…
ಜ.15ರಿಂದ ಸಪ್ತಪದಿ ಯೋಜನೆಗೆ ಮರು ಚಾಲನೆ
January 7, 2021ಬೆಂಗಳೂರು,ಜ.6-ಕೊರೊನಾ ಸೋಂಕು ಮತ್ತು ಲಾಕ್‍ಡೌನ್‍ನಿಂದಾಗಿ ಸ್ಥಗಿತ ಗೊಳಿಸಿದ್ದ ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲು ಮುಜರಾಯಿ ಇಲಾಖೆ ತೀರ್ಮಾನಿಸಿದ್ದು, ಇದೇ 15 ಮತ್ತು 20ರಂದು ರಾಜ್ಯಾದ್ಯಂತ ಸಪ್ತಪದಿ ಕಾರ್ಯಕ್ರಮ ನಡೆಯಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಫೆಬ್ರವರಿ 17 ಮತ್ತು 27 ರಂದು ರಾಜ್ಯಮಟ್ಟದಲ್ಲಿ ನಡೆಯಲಿದೆ. ಅಲ್ಲದೆ, ಇನ್ನು ಮುಂದೆ ಪ್ರತಿ ತಿಂಗಳೂ ಸಪ್ತಪದಿ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ…
ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿ ನಿಶ್ಚಿತ
January 7, 2021ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ್ ಸ್ಪಷ್ಟೋಕ್ತಿ ಬೆಂಗಳೂರು,ಜ.6(ಕೆಎಂಶಿ)-ಲವ್ ಜಿಹಾದ್ ನಿಷೇಧ ಕಾಯ್ದೆ ಯನ್ನು ಜಾರಿಗೆ ತರುವುದು ನಿಶ್ಚಿತ. ಈ ವಿಚಾರದಲ್ಲಿ ಯಾವುದೇ ಹಿಂಜರಿಕೆ ಇಲ್ಲ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳ ಸಾಹೇಬ ಪಾಟೀಲ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಇಲಾಖಾ ಅಭಿವೃದ್ಧಿ ಸಂಬಂಧಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಲವ್ ಜಿಹಾದ್ ನಿಷೇಧ ಕಾಯ್ದೆ ಹೆಚ್ಚು ವಿಸ್ತಾರವಾದ ವಿಷಯವಾಗಿದ್ದು ಕಾನೂನು ಇಲಾಖೆ ಪರಿಶೀಲನೆಯಲ್ಲಿದೆ ಎಂದರು. ಕಾಯ್ದೆ ಅಧ್ಯಯನ ಬಳಿಕ ಸಮಾಜದ…
ಫೋರಂ ಮಾಲ್‍ನಲ್ಲಿ ನಾಳೆಯಿಂದ ಶೇ.50 ರಿಯಾಯಿತಿ ಮಾರಾಟ
January 7, 2021ಮೈಸೂರು,ಜ.6-ವಾರಾಂತ್ಯ ಶಾಪಿಂಗ್ ಮಾಡುವವರಿಗೆ ಶುಭ ಸುದ್ದಿ. ಮೈಸೂರಿನ ನಜರ್ ಬಾದ್‍ನಲ್ಲಿರುವ ಫೋರಂ ಮಾಲ್‍ನಲ್ಲಿ ನಾಳೆಯಿಂದ ಭಾನುವಾರದವರೆಗೆ ಶೇ.50ರ ರಿಯಾಯಿತಿ ಮಾರಾಟವಿದೆ. 3ನೇ ವಾರ್ಷಿ ಕೋತ್ಸವ ಪ್ರಯುಕ್ತ ಈ ರಿಯಾಯಿತಿ ಕೊಡುಗೆ ನೀಡಲಾಗಿದೆ. ನವನವೀನ ಬ್ರಾಂಡೆಡ್ ಉಡುಪು ಗಳು, ಪ್ರಸಾದನ ಸಾಮಗ್ರಿ, ಆಹಾರ, ಪುಸ್ತಕ, ಲೇಖನ ಸಾಮಗ್ರಿ ಮೊದ ಲಾದವು ಶೇ.50ರ ರಿಯಾಯಿತಿ ದರದಲ್ಲಿ ಲಭ್ಯವಿದೆ. ಜತೆಗೆ ಕುಟುಂಬ ಸಮೇತ ಶಾಪಿಂಗ್ ಮಾಡುವವರಿಗೆ ಭರಪೂರ ಮನರಂಜನೆಯೂ ಇದೆ. ಇದು ಹೊಸ ವರ್ಷಾರಂಭದ ಸಂಭ್ರಮವೂ ಆಗಿದೆ. ಹೆಚ್ ಅಂಡ್ ಎಂ,…
ಮೈಸೂರು ಜಿಲ್ಲೆಯಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿಲ್ಲ ಆತಂಕ ಬೇಡ: ಡಿಸಿ ರೋಹಿಣಿ ಸಿಂಧೂರಿ ಅಭಯ
January 7, 2021ಮೈಸೂರು, ಜ.6(ಎಂಟಿವೈ)- ಮೈಸೂರಿಗೆ ಬ್ರಿಟನ್‍ನಿಂದ ವಾಪಸ್ ಬಂದ ಯಾರೊ ಬ್ಬರಲ್ಲೂ `ರೂಪಾಂತರಿ ಕೊರೊನಾ’ ಪತ್ತೆಯಾಗಿಲ್ಲ. ಜಿಲ್ಲೆಯ ಜನತೆ ಆತಂಕ ಪಡಬೇಕಿಲ್ಲ ಎಂದು ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟಪಡಿಸಿದ್ದಾರೆ. ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯೂರೋಪ್ ದೇಶಗಳಿಂದ ಮೈಸೂರಿಗೆ ಇತ್ತೀಚೆಗೆ ವಾಪಸಾದ 137 ಮಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಿದಾಗ ಒಬ್ಬರಲ್ಲಿ ಪಾಸಿಟಿವ್ ವರದಿ ಬಂದಿತ್ತು. ಬೆಂಗಳೂರಿನ ಪ್ರಯೋಗಾಲಯಕ್ಕೆ ಅವರ ಸ್ವ್ಯಾಬ್ ಸ್ಯಾಂಪಲ್ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯನ್ನು ಸರ್ಕಾರ ಇಂದು ಬೆಳಗ್ಗೆ ಪ್ರಕಟಿಸಿದ್ದು, ಮೈಸೂರಿನ ವ್ಯಕ್ತಿಯಲ್ಲಿ ರೂಪಾಂತರ ಕೊರೊನಾ ಪತ್ತೆಯಾಗಿಲ್ಲ…









