ಮೈಸೂರು, ಅ.5(ಆರ್‍ಕೆ)- ಆ್ಯಂಟಿಜೆನ್ ಟೆಸ್ಟ್ ಕಿಟ್‍ಗಳ ಮೂಲಕ ಹೆಚ್ಚು ಹೆಚ್ಚು ಪರೀಕ್ಷೆ ನಡೆಸಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ನಿಯಂತ್ರಿಸಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ|| ಕೆ. ಸುಧಾಕರ್ ಅವರು ಇಂದಿಲ್ಲಿ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮೈಸೂರು ನಗರ ಮತ್ತು ಜಿಲ್ಲೆಯ ಕೋವಿಡ್-19 ಪರಿ ಸ್ಥಿತಿ, ನಿರ್ವಹಣೆ ಕುರಿತಂತೆ ಪ್ರಗತಿ ಪರಿ ಶೀಲನೆ ನಡೆಸಿದ…
ನೀವು ಜಂಬೂ ಸವಾರಿ ಮಾಡಿಸುತ್ತಿದ್ದೀರೋ… ಬೊಂಬೂ ಸವಾರಿ ಮಾಡಲು ಹೊರಟಿದ್ದೀರೋ….?
October 6, 2020ಮೈಸೂರು,ಅ.5(ಆರ್‍ಕೆ)-`ನೀವೇನೂ ಜಂಬೂ ಸವಾರಿ ಮಾಡಿಸುತ್ತಿದ್ದೀರೋ ಅಥವಾ ಬೊಂಬೂ ಸವಾರಿ ಮಾಡಲು ಹೊರಟಿದ್ದೀರೋ’ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಜಿಲ್ಲಾಡಳಿತವನ್ನು ಪ್ರಶ್ನಿಸಿದರು. ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾ ಕರ್ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ನಿರ್ವ ಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ದಸರಾ ಜಂಬೂಸವಾರಿಯಲ್ಲಿ 2000 ಮಂದಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲು ನಿರ್ಧರಿಸಿ ರುವ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿದರು. ಎರಡು ಸಾವಿರ ಮಂದಿಗೆ ಅವಕಾಶ ಕಲ್ಪಿಸಿದರೆ…
ಸರಳವಾಗಿ ದಸರಾ ಆಚರಿಸೋಣ
October 6, 2020ಮೈಸೂರು, ಅ.5(ಆರ್‍ಕೆ)-ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮೈಸೂರು ದಸರಾ ಉತ್ಸವವನ್ನು ಅತ್ಯಂತ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿ ಸುವ ಅವಶ್ಯಕತೆ ಇದೆ ಎಂದು ವೈದ್ಯ ಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಹಾಮಾರಿ ಸೋಂಕು ಹರಡಿ ಸಾವು ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅದನ್ನು ನಿರ್ವಹಿಸಲು ಇಡೀ ರಾಜ್ಯವೇ ಹೋರಾಡುತ್ತಿದೆ. ಹೀಗಿರುವಾಗ ದಸರಾ ಜಂಬೂ ಸವಾರಿಯನ್ನು ಅತ್ಯಂತ ಸರಳವಾಗಿ ಆಚರಿ ಸುವುದೇ ಸೂಕ್ತ ಎಂಬ…
ಗಮನ ಸೆಳೆಯುತ್ತಿರುವ `ಗಾಂಧಿ-150+ನಡಿಗೆ’ ವ್ಯಂಗ್ಯಚಿತ್ರ ಪ್ರದರ್ಶನ
October 6, 2020ಮೈಸೂರು, ಅ.5(ಆರ್‍ಕೆಬಿ)- ಅಂದು ಕೋಲು ಹಿಡಿದಿದ್ದ ಗಾಂಧಿ ಇಂದು ಪೊರಕೆ ಹಿಡಿದು ಸ್ವಚ್ಛತೆಯ ಸಂದೇಶ ನೀಡುತ್ತಿದ್ದಾರೆ. ಬಲಗೈಯಲ್ಲಿ ಕೋಲು ಹಿಡಿದಿರುವ ಗಾಂಧಿಯವರ ಎಡಗೈನಲ್ಲಿ `ಸಾಮಾಜಿಕ ಅಂತರ ಕಾಪಾಡಿ’ ಎಂಬ ಫಲಕ, ಎಲ್ಲೋ `ಗಾಂಧಿ’ ಚಿತ್ರ 150 ದಿನ ಓಡಿರಬೇಕು ಎಂದು ಗೋಡೆಯ ಮೇಲಿದ್ದ ಗಾಂಧಿ-150 ಭಿತ್ತಿಪತ್ರ ನೋಡಿ ರಾಜಕಾರಣಿಯೊಬ್ಬ ಮತ್ತೊಬ್ಬನಿಗೆ ಹೇಳುತ್ತಿರು ವುದು, ಈಗಿನ ಪರಿಸ್ಥಿತಿ ನೋಡಿ ಗಾಂಧಿ ತಾತಾ ಅವತ್ತೇ ಕಣ್ಣು ಮುಚ್ಚಿ ಧ್ಯಾನ ಮಾಡಿ ಕುಳಿತುಬಿಟ್ಟರು. ಮೈಸೂರಿನ ಮೈಸೂರುಮಿತ್ರ’ ವ್ಯಂಗ್ಯಚಿತ್ರಕಾರ, ಫುಲ್ ಬ್ರೈಟರ್ ಎಂ.ವಿ.ನಾಗೇಂದ್ರಬಾಬು…
ಪ್ರಸ್ತುತ ಡಿಜಿಟಲ್ ವ್ಯವಹಾರದ ವೇಳೆ ಸೈಬರ್ ಸುರಕ್ಷತೆ ಸರ್ಕಾರದ ಶೀಘ್ರ ಕಾರ್ಯನೀತಿ ಜಾರಿ
October 6, 2020ಬೆಂಗಳೂರು, ಅ. 5(ಕೆಎಂಶಿ)- ಪ್ರಸ್ತುತ ಸನ್ನಿವೇಶದಲ್ಲಿ ಡಿಜಿಟಲ್ ವ್ಯವಹಾರಗಳು ಹೆಚ್ಚಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಸೈಬರ್ ಸುರಕ್ಷತೆ ಕೂಡ ಪ್ರಾಮುಖ್ಯ ಪಡೆದು ಕೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸೈಬರ್ ಸುರಕ್ಷತಾ ಕಾರ್ಯ ನೀತಿಯನ್ನು ರೂಪಿಸಲು ಸರ್ಕಾರ ಚಾಲನೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ಟೋ ಬರ್ ತಿಂಗಳನ್ನು ಸೈಬರ್ ಸುರಕ್ಷತಾ ಮಾಸ ವನ್ನಾಗಿ ಆಚರಿಸಲಾಗುತ್ತಿದ್ದು,…
ಶಿಕ್ಷಣ ಸಚಿವ ಸುರೇಶ್‍ಕುಮಾರ್‍ಗೆ ಕೊರೊನಾ ಸೋಂಕು; ಮನೆಯಲ್ಲೇ ಕ್ವಾರಂಟೈನ್
October 6, 2020ಬೆಂಗಳೂರು, ಅ.5- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್‍ಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು, ಸದ್ಯ ಹೋಂ ಕ್ವಾರಂಟೈನ್‍ಗೆ ಒಳಗಾಗಿ ದ್ದಾರೆ. ಇಂದು ತಮ್ಮ ಫೇಸ್‍ಬುಕ್ ಮತ್ತು ಟ್ವಿಟರ್ ಅಕೌಂಟ್‍ನಲ್ಲಿ ಈ ವಿಚಾರ ವನ್ನು ಸುರೇಶ್‍ಕುಮಾರ್ ತಿಳಿಸಿದ್ದಾರೆ. ನನಗೆ ರೋಗದ ಯಾವುದೇ ಲಕ್ಷಣ ಗಳಿಲ್ಲ. ಆದರೂ ಕೊವಿಡ್-19 ಸೋಂಕು ಇರುವುದರಿಂದ ವೈದ್ಯರ ಸಲಹೆಯ ಮೇರೆಗೆ ಹೋಂ ಕ್ವಾರಂಟೈನ್ ಆಗು ತ್ತಿದ್ದೇನೆ. ಯಾವುದೇ ಆತಂಕವಿಲ್ಲ ಎಂದಿದ್ದಾರೆ. ಸಚಿವ ಸುರೇಶ್‍ಕುಮಾರ್ ಅವರು ಇತ್ತೀಚೆಗೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಕಾರ್ಯನಿಮಿತ್ತ…
ಕಲ್ಯಾಣ ಮಂಟಪಗಳ ಪ್ರಸಕ್ತ ವರ್ಷದ ಕಂದಾಯ ಮನ್ನಾಕ್ಕೆ ಮನವಿ
October 6, 2020ಮೈಸೂರು, ಅ.5(ಎಸ್‍ಬಿಡಿ)- ಕಲ್ಯಾಣ ಮಂಟಪಗಳ ಪ್ರಸಕ್ತ ವರ್ಷದ ಕಂದಾಯ ರದ್ದುಪಡಿಸುವಂತೆ ಕೋರಿ ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ವತಿಯಿಂದ ಮೇಯರ್ ತಸ್ನೀಂ ಹಾಗೂ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಕೊರೊನಾ ಪರಿಣಾಮದಿಂದಾಗಿ ಕಲ್ಯಾಣ ಮಂಟಪಗಳ ನಿರ್ವಹಣೆ ಕಷ್ಟವಾಗಿದೆ. ಮಾರ್ಚ್‍ನಿಂದ ಕಾಯ್ದಿರಿಸಿದ್ದ ಎಲ್ಲಾ ಸಮಾ ರಂಭಗಳೂ ರದ್ದಾಗಿರುವುದರಿಂದ ಮಾಲೀ ಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರ್ಯಕ್ರಮಗಳಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಜನ ಸೇರಲು ಅವಕಾಶವಿರುವುದರಿಂದ 2021ರ ಮಾರ್ಚ್‍ವರೆಗೂ ಕಲ್ಯಾಣ ಮಂಟಪಗಳಲ್ಲಿ ಕಾರ್ಯಕ್ರಮ ಮಾಡಲು ಯಾರೂ…
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ: ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ
October 6, 2020ಮೈಸೂರು, ಅ.5(ಆರ್‍ಕೆ)- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವುದು ರಾಜಕೀಯ ಪ್ರೇರಿತವಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಉಪ ಚುನಾವಣೆಗೂ ಸಿಬಿಐ ದಾಳಿಗೂ ಯಾವುದೇ ಸಂಬಂಧವಿಲ್ಲ. ಎಲ್ಲದಕ್ಕೂ ರಾಜಕೀಯ ಬೆರೆಸುವುದು ಕಾಂಗ್ರೆಸ್‍ನವರ ಹುಟ್ಟುಗುಣ. ಸಿಬಿಐ ದಾಳಿ ರಾಜಕೀಯ ಪ್ರೇರಿತವೆಂಬ ಅವರ ಆರೋಪದಲ್ಲಿ ಹುರುಳಿಲ್ಲ. ಒಂದು ವೇಳೆ ನಾವು ಎರಡೂ ಕ್ಷೇತ್ರಗಳಲ್ಲಿ ಸೋಲನ್ನ ನುಭವಿಸುತ್ತೇವೆ ಎಂದೇ…
ತನಿಖೆ ಎಂಬುದು ನಿರಂತರ ಪ್ರಕ್ರಿಯೆ
October 6, 2020ಮೈಸೂರು, ಅ.5(ಆರ್‍ಕೆ)-ಆರ್ಥಿಕ ಅಪರಾಧಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಗಳು ಕಾಲ ಕಾಲಕ್ಕೆ ತನಿಖೆ ನಡೆಸುವುದು ನಿರಂತರ ಪ್ರಕ್ರಿಯೆ ಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದು ಹೊಸತೇನಲ್ಲ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಮಾರ್ಮಿಕವಾಗಿ ನುಡಿದಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ದಾಳಿಯ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಅದರ ಬಗ್ಗೆ ನನಗೇನು ಗೊತ್ತೂ ಇಲ್ಲ. ಈ ತನಿಖೆಯನ್ನು ಎದುರಿಸುವ ಶಕ್ತಿ ಡಿ.ಕೆ.ಶಿವಕುಮಾರ್‍ಗೆ…
ಉಪ ಚುನಾವಣೆಗೆ ಅಭ್ಯರ್ಥಿಗಳ ಗತಿಯಿಲ್ಲದೆ ಜೆಡಿಎಸ್ ಅಭ್ಯರ್ಥಿ ಸೆಳೆಯಲಾಗುತ್ತಿದೆ
October 6, 2020ಬೆಂಗಳೂರು, ಅ. 5(ಕೆಎಂಶಿ)- ಉಪ ಚುನಾವಣೆಗೆ ಅಭ್ಯರ್ಥಿಗಳ ಗತಿಯಿಲ್ಲದೆ ಜೆಡಿಎಸ್‍ನವರನ್ನು ಸೆಳೆಯುವ ಕಾಂಗ್ರೆಸ್ ರಾಜಕೀಯ ಪಕ್ಷವೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಕಿಡಿಕಾರಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ ಎಂದು ನಿನ್ನೆ ಹೇಳಿಕೆ ನೀಡಿದ ಬೆನ್ನಲೆ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದರು. ಜೆಡಿಎಸ್‍ನಿಂದ ಉಪಮುಖ್ಯ ಮಂತ್ರಿಯಾಗಿ ಎಲ್ಲಾ ಅಧಿಕಾರ ಉಂಡ ಸಿದ್ದರಾಮಯ್ಯ ಇದೀಗ ಶಿವಕುಮಾರ್ ಮತ್ತು ಕಾಂಗ್ರೆಸ್‍ನ್ನು ಮುಗಿಸಲು ಆ ಪಕ್ಷಕ್ಕೆ ವಲಸೆ ಹೋಗಿದ್ದಾರೆ ಎಂದು ದೂರಿದರು. ಕಾಂಗ್ರೆಸ್…








