ಮೈಸೂರು, ಅ.8(ಆರ್‍ಕೆ)- ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೃಷಿ ಸುಧಾ ರಣಾ ಮಸೂದೆಗಳನ್ನು ಜಾರಿಗೆ ತರುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ಮೈಸೂರಿನ ಎಂ.ಜಿ.ರಸ್ತೆಯಲ್ಲಿರುವ ಖಾಸಗಿ ಹೋಟೆಲಿ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿ ವರು, ಕೃಷಿ ವಲಯದ ಆಮೂಲಾಗ್ರ ಬೆಳವಣಿಗೆ ಹಾಗೂ ರೈತರಿಗೆ ಅನುಕೂಲವಾಗುವಂತೆ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ರೈತರ ಬೆಂಬಲ ಬೆಲೆ ಭರವಸೆ ಮತ್ತು ಕೃಷಿ…
ಮಾಜಿ ಮುಖ್ಯಮಂತ್ರಿಗಳಿಬ್ಬರ ಜಟಾಪಟಿ
October 8, 2020`ಅವನಂತಹ ಪೆದ್ದ ಯಾರೂ ಇಲ್ಲ’ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ತುಮಕೂರು, ಅ.7- ಡಾ. ಸಿ.ಎಂ.ರಾಜೇಶ್‍ಗೌಡ ಬಿಜೆಪಿ ಸೇರಲು ನಾನು ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅವನಂತಹ ಪೆದ್ದ ಯಾರೂ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಬುಧವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, `ರಾಜೇಶ್, ನನ್ನ ಮಗನ ಸ್ನೇಹಿತ. ನನ್ನ ಸ್ನೇಹಿತ ಅಲ್ಲ. ನನ್ನ ವಯಸ್ಸು ಎಷ್ಟು ಆತನ ವಯಸ್ಸು ಎಷ್ಟು? ರಾಜೇಶ್ ತಂದೆ ಸಿ.ಪಿ….
ಶಾಲಾ-ಕಾಲೇಜು ಆರಂಭಿಸಲು ಸರ್ಕಾರ ಆತುರಪಡುತ್ತಿಲ್ಲ: ಶ್ರೀರಾಮುಲು ಸ್ಪಷ್ಟನೆ
October 8, 2020ಮೈಸೂರು, ಅ. 7(ಆರ್‍ಕೆ)- ಕೋವಿಡ್-19 ಪರಿಸ್ಥಿತಿ ತೀವ್ರ ಗೊಳ್ಳುತ್ತಿರುವುದರಿಂದ ಶಾಲಾ- ಕಾಲೇಜು ಆರಂಭಿ üಸಲು ಸರ್ಕಾರ ಆತುರಪಡು ತ್ತಿಲ್ಲ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿ ಕಾರಿ ಕಚೇರಿ ಬಳಿ ಸುದ್ದಿ ಗಾರರಿಗೆ ಪ್ರತಿಕ್ರಿಯಿಸಿದ ಅವರು, ಶಾಲಾ-ಕಾಲೇಜು ಆರಂಭಿ ಸುವ ವಿಚಾರದಲ್ಲಿ ನಮಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತ ಮುಖ್ಯ. ಈ ಸಂಬಂಧ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಆರೋಗ್ಯ,…
ವನ್ಯಜೀವಿ ಸಂರಕ್ಷಣೆ ಸಂದೇಶ ಸಾರಲು 120 ಕಿ.ಮೀ. ಸೈಕ್ಲೊಥಾನ್
October 8, 202066ನೇ ವನ್ಯಜೀವಿ ಸಪ್ತಾಹ 15 ಮಹಿಳೆಯರು, 65 ಪುರುಷರು ಭಾಗಿ ಅರಣ್ಯ ಇಲಾಖೆ, ನೆಹರು ಯುವ ಕೇಂದ್ರ, ವಿವಿಧ ಸಂಘಟನೆಗಳ ಆಯೋಜನೆ ಮೈಸೂರು, ಅ.7(ಪಿಎಂ)- ವನ್ಯಜೀವಿ ಸಂರಕ್ಷಣೆ ಸಂದೇಶ ಸಾರಲು 120 ಕಿ.ಮೀ. ಸೈಕ್ಲೊಥಾನ್ ನಡೆಸಲಾಗಿದೆ.ಮೈಸೂರಿನ ಅರಣ್ಯ ಭವನದಿಂದ ಕಾಕನ ಕೋಟೆ ಸಫಾರಿ ಕೇಂದ್ರದವರೆಗಿನ ಸೈಕಲ್ ರ್ಯಾಲಿಯಲ್ಲಿ 15 ಮಹಿಳೆಯರು, 65 ಪುರು ಷರು ಬುಧವಾರ ಸೈಕಲ್ ಸವಾರಿ ನಡೆಸಿ ದರು. `66ನೇ ವನ್ಯಜೀವಿ ಸಪ್ತಾಹ-2020’ರ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ಅರಣ್ಯ ಇಲಾಖೆ,…
ನಿವೇಶನದ ನಕಲಿ ದಾಖಲಾತಿ ನೀಡಿ ಬ್ಯಾಂಕ್‍ನಿಂದ 96 ಲಕ್ಷ ಸಾಲ ಪಡೆದು ವಂಚನೆ
October 8, 2020ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲು, ಪೊಲೀಸರಿಂದ ಆರೋಪಿ ವಿಚಾರಣೆ ಮೈಸೂರು, ಅ. 7(ಆರ್‍ಕೆ)- ನಿವೇಶನದ ನಕಲಿ ದಾಖಲಾತಿ ನೀಡಿ ಬ್ಯಾಂಕಿನಿಂದ 96 ಲಕ್ಷÀ ರೂ. ಸಾಲ ಪಡೆದು ಮೈಸೂ ರಿನ ಕೆ.ಆರ್. ಸರ್ಕಲ್‍ನಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಸದಸ್ಯರೊ ಬ್ಬರು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬ್ಯಾಂಕಿನ ಸದಸ್ಯರಾದ ಕುವೆಂಪುನಗರದ ನೃಪತುಂಗ ರಸ್ತೆ, 1ನೇ ಕ್ರಾಸ್ ನಿವಾಸಿ ವೆಂಕಟಪ್ಪ ಅವರ ಮಗ ಜಿ.ವಿ. ಬಾಲು, ನಿವೇಶನದ ನಕಲಿ ದಾಖಲೆಗಳನ್ನು ಒತ್ತೆ ಇಟ್ಟು 96…
4 ಕಾರ್ಮಿಕ ಸಂಹಿತೆ ಹಿಂಪಡೆಯಲು ಒತ್ತಾಯಿಸಿ ಎಐಯುಟಿಯುಸಿ ಪ್ರತಿಭಟನೆ
October 8, 2020ಮೈಸೂರು, ಅ.7(ಪಿಎಂ)- ಕಾರ್ಮಿಕ ಪರ ಕಾಯ್ದೆಗಳನ್ನು ರದ್ದು ಗೊಳಿಸಿರುವ ಕೇಂದ್ರ ಸರ್ಕಾರ, ಮಾರಕವಾಗುವಂತಹ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ. ಕೂಡಲೇ ಅವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಯುನೈ ಟೆಡ್ ಟ್ರೇಡ್ ಯೂನಿಯನ್ ಸೆಂಟರ್‍ನ (ಎಐಯುಟಿಯುಸಿ) ಜಿಲ್ಲಾ ಸಮಿತಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರದ ಕ್ರಮ ಗುಲಾಮಗಿರಿಗೆ ನಾಂದಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೈಗಾರಿಕಾ ವಿವಾದ ಕಾಯ್ದೆ-1947ರ ಪ್ರಕಾರ 100ಕ್ಕಿಂತ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆಯು ಕಾರ್ಮಿಕರನ್ನು ಕೆಲಸದಿಂದ ತೆಗೆಯುವ…
ಇಂದು ಶಾರದಾವಿಲಾಸ ಕಾಲೇಜಿನ ಅಮೃತ ಮಹೋತ್ಸವ; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಂದ ಉದ್ಘಾಟನೆ
October 8, 2020ಕೌಶಲಾಧಾರಿತ 4 ಹೊಸ ಕೋರ್ಸ್‍ಗಳ ಆರಂಭ 4 ವರ್ಷಗಳ ಬಿ.ಎಸ್‍ಸಿ ಆನರ್ಸ್ ರಾಜ್ಯದಲ್ಲೇ ಪ್ರಥಮ ಮೈಸೂರು, ಅ.7(ಆರ್‍ಕೆಬಿ)- ಶಾರದಾ ವಿಲಾಸ ಕಾಲೇಜಿನ ಅಮೃತ ಮಹೋತ್ಸವ ದಲ್ಲಿ ಕೌಶಲಾಧಾರಿತ ಶೈಕ್ಷಣಿಕ ಕೋರ್ಸ್ ಗಳ ಉದ್ಘಾಟನೆಯನ್ನು ಕೇಂದ್ರ ರಾಸಾಯ ನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಗುರುವಾರ ಮಧ್ಯಾಹ್ನ 3 ಗಂಟೆಗೆ ನೆರವೇರಿಸಲಿದ್ದಾರೆ ಎಂದು ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ಇಂದಿಲ್ಲಿ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು, ಯುವಜನರ ಕೌಶಲಾಭಿವೃದ್ಧಿಗಾಗಿ…
ಡಿಕೆಶಿಗೆ ಸಮನ್ಸ್
October 7, 2020ಬೆಂಗಳೂರು, ಅ.6(ಕೆಎಂಶಿ)- ಆದಾಯಕ್ಕೂ ಮೀರಿದ ಆಸ್ತಿ ಪತ್ತೆಯಾಗಿ ರುವ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಇನ್ನೆರಡು ದಿನದೊಳಗಾಗಿ ಬಳ್ಳಾರಿ ರಸ್ತೆಯಲ್ಲಿರುವ ನಮ್ಮ ಕಚೇರಿಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ. ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಹಾಗೂ ಅವರ ಸ್ನೇಹಿತರ ಮನೆ ಮತ್ತು ಕಚೇರಿಗಳ ಮೇಲೆ ನಿನ್ನೆ ಏಕಕಾಲದಲ್ಲಿ ದಾಳಿ ನಡೆಸಿ, ಕೆಲವು ದಾಖಲೆಗಳನ್ನು ವಶಪಡಿಸಿಕೊಂಡರು. ಪ್ರಾಥಮಿಕ ತನಿಖೆ ಪ್ರಕಾರ ತಮ್ಮ ಆದಾಯಕ್ಕಿಂತ 70 ಕೋಟಿ ರೂಗೂ. ಹೆಚ್ಚು ಆಸ್ತಿಪಾಸ್ತಿ…
ಬಿಜೆಪಿ ನಾಯಕರೆಲ್ಲಾ ಸತ್ಯ ಹರಿಶ್ಚಂದ್ರರಾ…?
October 7, 2020ಮೈಸೂರು,ಅ.6(ಎಸ್‍ಬಿಡಿ)- ಬಿಜೆಪಿ ನಾಯಕರ ಮೇಲೆ ಸಿಬಿಐ ದಾಳಿ ಏಕೆ ನಡೆದಿಲ್ಲ? ಅವರೇನು ಸತ್ಯ ಹರಿಶ್ಚಂದ್ರರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ರಾಮಕೃಷ್ಣನಗರ ನಿವಾ ಸದ ಬಳಿ ಮಂಗಳವಾರ ಮಾಧ್ಯಮ ಗಳೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಮತ್ತೆ ಸಿಬಿಐ ದಾಳಿ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದರು. ಬರೀ ಕಾಂಗ್ರೆಸ್‍ನವರ ಮೇಲೆ ಏಕೆ ಸಿಬಿಐ ದಾಳಿ ನಡೆಯುತ್ತಿದೆ? ಬಿಜೆಪಿಯವರ ಮೇಲೆ ಏಕೆ ನಡೆದಿಲ್ಲ. ಅವರೇನು ಸತ್ಯ ಹರಿಶ್ಚಂದ್ರರಾ. ವೈದ್ಯ ಕೀಯ…
ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ
October 7, 2020ಚೆನ್ನೈ,ಅ.6-ಸಂಸತ್ತಿನಲ್ಲಿ ಜಾರಿಯಾದ 3 ಕೃಷಿ ಮಸೂದೆ ಗಳು ಕೃಷಿ ವಲಯದಲ್ಲಿ ಸುಧಾರಣೆ ತರಲಿದೆ ಎಂದಿರುವ ಕೇಂದ್ರ ಹಣಕಾಸು ಮತ್ತು ಕಾಪೆರ್Çರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಮಸೂದೆಗಳು ಬಹುಕಾಲದಿಂದ ಬಾಕಿ ಉಳಿದಿದ್ದವು. ಇವು ರೈತರಿಗೆ ಅವರ ಬೆಳೆಗಳನ್ನು ಯಾರಿಗೆ ಮತ್ತು ಯಾವ ಬೆಲೆಗೆ ಮಾರಾಟ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತವೆ ಎಂದರು. ಈ ಹೊಸ ಸುಧಾರಣೆ…










