ಮೈಸೂರು

ಉದ್ಘಾಟನೆಗೆ ಮುನ್ನವೇ ಮೈಸೂರಿನ `ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್’ಗೆ ಭಾರೀ ಡಿಮ್ಯಾಂಡ್
ಮೈಸೂರು

ಉದ್ಘಾಟನೆಗೆ ಮುನ್ನವೇ ಮೈಸೂರಿನ `ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್’ಗೆ ಭಾರೀ ಡಿಮ್ಯಾಂಡ್

July 17, 2022

ಮೈಸೂರು, ಜು.೧೬-ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ‘ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್’ಗೆ ಭಾರೀ ಬೇಡಿಕೆ ಬಂದಿದ್ದು, ಈಗಾ ಗಲೇ ಇಲ್ಲಿ ಕಾರ್ಯಾರಂಭ ಮಾಡಲು ಸುಮಾರು ೧೫ ಕಂಪನಿಗಳು ಮುಂದೆ ಬಂದಿವೆ ಎಂದು ಹೇಳಲಾಗಿದೆ. ಈವರೆಗೆ ಮಂದಗತಿಯಿAದ ಸಾಗುತ್ತಿದ್ದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಕಟ್ಟಡ ಕಾಮಗಾರಿ ಇದೀಗ ಚುರುಕು ಗೊಂಡಿದ್ದು, ದಸರಾ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಎಸ್‌ಟಿಪಿಐ (ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ) ಪ್ರಾದೇಶಿಕ ಅಧಿಕಾರಿ ತಿಳಿಸಿದ್ದಾರೆ. ಮೈಸೂರಿ ನಲ್ಲಿ ೨೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ…

ಕೊಡಗಲ್ಲಿ ಮಹಾಮಳೆಗೆ ಮೊದಲ ಬಲಿ ಗೋಡೆ ಕುಸಿದು ಗಾಯಗೊಂಡಿದ್ದ ವೃದ್ಧೆ ಸಾವು
ಮೈಸೂರು

ಕೊಡಗಲ್ಲಿ ಮಹಾಮಳೆಗೆ ಮೊದಲ ಬಲಿ ಗೋಡೆ ಕುಸಿದು ಗಾಯಗೊಂಡಿದ್ದ ವೃದ್ಧೆ ಸಾವು

July 17, 2022

ಮಳೆ ತಗ್ಗಿದರೂ ಜನರ ದುಗುಡ ತಪ್ಪಿಲ್ಲ ೧೦ ಅಡಿ ಆಳಕ್ಕೆ ಕುಸಿದ ಕಾಫಿ ತೋಟ ಅಪಾಯ ಸ್ಥಿತಿಯಲ್ಲಿ ಮನೆ ಕೊಚ್ಚಿ ಹೋದ ಸೇತುವೆ ಮಣ್ಣು  ದ್ವೀಪದಂತಾದ ಗ್ರಾಮ ಮಡಿಕೇರಿ,ಜು.೧೬-ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗಿ ದ್ದರೂ, ಇದರಿಂದ ಭಾರೀ ಹಾನಿಯಾಗಿದೆ. ಜೊತೆಗೆ ಒಂದು ಜೀವ ಬಲಿಯಾಗಿದೆ. ಸ್ನಾನದ ಮನೆ ಗೋಡೆ ಕುಸಿದು ಬಿದ್ದು ಗಾಯಗೊಂಡಿದ್ದ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ವ್ಯಾಪ್ತಿಯ ಸುಳುಗಳಲೆ ಗ್ರಾಮದ ವೃದ್ಧೆ ವಸಂತಮ್ಮ (೭೦) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನ ಪ್ಪಿದ್ದಾರೆ. ಶಾಂತಳ್ಳಿ…

ಸಿದ್ದರಾಮಯ್ಯ ತವರಲ್ಲೇ ಮೊಳಗಿತು ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ
ಮೈಸೂರು

ಸಿದ್ದರಾಮಯ್ಯ ತವರಲ್ಲೇ ಮೊಳಗಿತು ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ

July 16, 2022

ಮೈಸೂರು, ಜು.15(ಎಂಟಿವೈ)- ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತವರಿನಲ್ಲೇ `ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ ಘೋಷಣೆ ಮೊಳಗಿದೆ. ಮೂರನೇ ಆಷಾಢ ಶುಕ್ರವಾರವಾದ ಇಂದು ಚಾಮುಂಡೇಶ್ವರಿ ದರ್ಶನಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸುತ್ತಿದ್ದಂತೆ ಅವರ ಬೆಂಬಲಿಗರು `ಮುಂದಿನ ಮುಖ್ಯಮಂತ್ರಿ’ ಘೋಷಣೆ ಕೂಗಿದರಾದರೂ ಡಿಕೆಶಿ ಅದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ದೇವಸ್ಥಾನ ಪ್ರವೇಶಿಸಿದರು. ಬೆಂಗಳೂರಿನಿಂದ ಪತ್ನಿ ಉಷಾ ಅವರೊಂದಿಗೆ ಇಂದು ಬೆಳಗ್ಗೆ ಮೈಸೂರಿಗೆ ಆಗಮಿ ಸಿದ ಡಿ.ಕೆ.ಶಿವಕುಮಾರ್, ಲಲಿತ ಮಹಲ್ ಪ್ಯಾಲೇಸ್ ಹೆಲಿಪ್ಯಾಡ್ ಬಳಿಯಿಂದ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಉಚಿತ…

ಮೈಸೂರಿನ ಪಾಸ್‍ಪೋರ್ಟ್ ಸೇವಾ ಕೇಂದ್ರಕ್ಕೆ ಐದು ವರ್ಷ ಲಕ್ಷಕ್ಕೂ ಅಧಿಕ ಮಂದಿಗೆ  ಪಾಸ್‍ಪೋರ್ಟ್ ಭಾಗ್ಯ
ಮೈಸೂರು

ಮೈಸೂರಿನ ಪಾಸ್‍ಪೋರ್ಟ್ ಸೇವಾ ಕೇಂದ್ರಕ್ಕೆ ಐದು ವರ್ಷ ಲಕ್ಷಕ್ಕೂ ಅಧಿಕ ಮಂದಿಗೆ ಪಾಸ್‍ಪೋರ್ಟ್ ಭಾಗ್ಯ

July 15, 2022

ಮೈಸೂರು, ಜು.14(ಜಿಎ)- ಮೈಸೂ ರಿನಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಆರಂಭವಾಗಿ ಐದು ವರ್ಷವಾಯಿತು. ಇದು ವರೆಗೂ ಲಕ್ಷಕ್ಕೂ ಅಧಿಕ ಮಂದಿ ಕೇಂದ್ರದಿಂದ ಪಾಸ್‍ಪೋರ್ಟ್ ಸೇವೆ ಪಡೆದಿದ್ದಾರೆ. 2017ರಲ್ಲಿ ಮೈಸೂರಿನ ಮೇಟಗಳ್ಳಿಯ ಅಂಚೆ ಕಚೇರಿ ಆವರಣದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಮಹತ್ವಾಕಾಂಕ್ಷೆಯಂತೆ, ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರ ಸಹಕಾರದಿಂದ ಆರಂಭವಾದ ಈ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು, ರಾಜ್ಯದವರೇ ಆದ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಉದ್ಘಾಟಿ ಸಿದ್ದರು. ಅಂದಿನಿಂದ ಇಂದಿನವರೆಗೂ ಮೈಸೂರು ಸೇರಿದಂತೆ ನೆರೆ…

ಸಂಸದ ಪ್ರತಾಪ್‍ಸಿಂಹರಿಂದ ವಿಶೇಷಚೇತನ ಮಕ್ಕಳಿಗೆ ಸಮವಸ್ತ್ರ ವಿತರಣೆ
ಮೈಸೂರು

ಸಂಸದ ಪ್ರತಾಪ್‍ಸಿಂಹರಿಂದ ವಿಶೇಷಚೇತನ ಮಕ್ಕಳಿಗೆ ಸಮವಸ್ತ್ರ ವಿತರಣೆ

July 15, 2022

ಮೈಸೂರು, ಜು.14(ಆರ್‍ಕೆಬಿ)- ಮೈಸೂರಿನ ಚಾಮುಂಡಿಪುರಂ ಅರುಣೋ ದಯ ವಿಶೇಷ ಮಕ್ಕಳ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಗುರುವಾರ ಸಮವಸ್ತ್ರಗಳನ್ನು ವಿತರಿಸಿದರು. ಮೈಸೂರು ಮಹಾನಗರಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್ ನಡೆಸುತ್ತಿರುವ ಈ ವಿಶೇಷ ಮಕ್ಕಳ ಶಾಲೆಗೆ ಬೆಂಗಳೂ ರಿನ ವೈದ್ಯ ದಂಪತಿ ಡಾ.ಪ್ರದೀಪ್ ಮತ್ತು ಡಾ.ಪೂಜಾ ಪ್ರದೀಪ್, ತಮ್ಮ ಪುತ್ರಿ ಆರಾಧ್ಯಳ ಮೊದಲ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಮವಸ್ತ್ರಗಳ ಕೊಡುಗೆ ನೀಡಿದ್ದರು. ಅದನ್ನು ಸಂಸದ ಪ್ರತಾಪ್‍ಸಿಂಹ ಮಕ್ಕಳಿಗೆ ವಿತರಿಸಿದರು. ಬಳಿಕ ಮಾತನಾಡಿದ ಅವರು, ಅಂಗ…

ಎದುರಾಳಿಯ ಬಲವಾದ ಪಂಚ್: ಮೈಸೂರಿನ  ಕಿಕ್ ಬಾಕ್ಸರ್ ಕುಸಿದು ಬಿದ್ದು ಸಾವು
ಮೈಸೂರು

ಎದುರಾಳಿಯ ಬಲವಾದ ಪಂಚ್: ಮೈಸೂರಿನ ಕಿಕ್ ಬಾಕ್ಸರ್ ಕುಸಿದು ಬಿದ್ದು ಸಾವು

July 15, 2022

ಮೈಸೂರು, ಜು.14(ಆರ್‍ಕೆ)-ಎದು ರಾಳಿಯ ಬಲವಾದ ಪಂಚ್‍ನಿಂದ ಕುಸಿದು ಬಿದ್ದು ಮೈಸೂರಿನ ಕಿಕ್ ಬಾಕ್ಸರ್ ಸಾವನ್ನ ಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೈಸೂರಿನ ಸುಣ್ಣದಕೇರಿಯ ಹುಲ್ಲಿನ ಬೀದಿ ನಿವಾಸಿ ಕಿಕ್ ಬಾಕ್ಸಿಂಗ್ ತರಬೇತು ದಾರ ಸುರೇಶ್ ಅವರ ಮಗ ನಿಖಿಲ್ (24) ಸಾವನ್ನಪ್ಪಿದ ಯುವ ಕಿಕ್ ಬಾಕ್ಸರ್. ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ಶನಿವಾರ ಸಂಜೆ ಮೈಸೂರಿನಿಂದ ತೆರಳಿದ್ದ ನಿಖಿಲ್, ಸ್ಪರ್ಧೆ ಅಂಕಣದಲ್ಲಿ ಎದುರಾಳಿಯು ಬಲವಾಗಿ ಮುಖಕ್ಕೆ ಪಂಚ್ ಮಾಡಿದಾಗ ಕುಸಿದು…

ಸೋಲಿನ ಭೀತಿ: ತಾಪಂ, ಜಿಪಂ ಚುನಾವಣೆಗೆ ಹಿಂದೇಟು
ಮೈಸೂರು

ಸೋಲಿನ ಭೀತಿ: ತಾಪಂ, ಜಿಪಂ ಚುನಾವಣೆಗೆ ಹಿಂದೇಟು

July 15, 2022

ಮೈಸೂರು, ಜು.14(ಎಂಟಿವೈ)- ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಜನರು ಆಕ್ರೋಶಗೊಂಡಿರುವುದರಿಂದ ಸೋಲಿನ ಭೀತಿಯಿಂ ದಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾ ವಣೆ ನಡೆಸಲು ಮುಂದಾಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾ ಧ್ಯP್ಷÀ ಆರ್.ಧ್ರುವನಾರಾಯಣ ಆರೋಪಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಪಂಚಾಯತ್ ರಾಜ್ ಸಮ್ಮೇಳನ ಹಾಗೂ ವಿವಿಧ ವಿಧಾನಸಭಾ ಕ್ಷೇತ್ರಗಳ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ…

ಮೈಸೂರು ಜಿಲ್ಲೆಯಲ್ಲಿ 148.46 ಹೆಕ್ಟೇರ್ ಬೆಳೆ ಹಾನಿ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 148.46 ಹೆಕ್ಟೇರ್ ಬೆಳೆ ಹಾನಿ

July 14, 2022

ಮೈಸೂರು, ಜು.13(ಎಂಕೆ)- ಜಿಲ್ಲೆಯಾ ದ್ಯಂತ ಕಳೆದೊಂದು ತಿಂಗಳಿನಲ್ಲಿ ಸುರಿದ ಮಳೆಗೆ 148.46 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ನಂಜನಗೂಡು, ಪಿರಿಯಾಪಟ್ಟಣ, ಮೈಸೂರು ಹಾಗೂ ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ಮುಂಗಾರು ಹಂಗಾಮಿನಲ್ಲಿಯೇ ಅತಿವೃಷ್ಟಿ ಯಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ. ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ 11.78 ಹೆಕ್ಟೇರ್ ಪ್ರದೇಶದಲ್ಲಿ(ಭತ್ತ-0.32, ರಾಗಿ-1.19, ಮುಸುಕಿನ ಜೋಳ-0.69, ಉದ್ದು-3.73, ಅಲಸಂದೆ-5.76 ಹಾಗೂ ಹತ್ತಿ-0.9) ಬೆಳೆ ಹಾನಿಯಾ ಗಿದ್ದರೆ, ಮೈಸೂರು ತಾಲೂಕಿ ನಲ್ಲಿ 27.40 ಹೆಕ್ಟೇರ್ ಪ್ರದೇಶದಲ್ಲಿ…

ಮೈಸೂರು ಹಸಿರು,ಸ್ವಚ್ಛ ರಾಜಧಾನಿ ಆಗಲಿ
ಮೈಸೂರು

ಮೈಸೂರು ಹಸಿರು,ಸ್ವಚ್ಛ ರಾಜಧಾನಿ ಆಗಲಿ

July 14, 2022

ಮೈಸೂರು,ಜು.13(ಪಿಎಂ)-ವೃಕ್ಷಗಳ ರಕ್ಷಣೆ-ಪೋಷಣೆ ಮೂಲಕ ಮೈಸೂರು ಹಸಿರು ಮಾತ್ರ ವಲ್ಲದೆ, ಸ್ವಚ್ಛ ರಾಜಧಾನಿಯಾಗಿ ಹೊರಹೊಮ್ಮಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಯವರೂ ಆದ ನೂತನ ರಾಜ್ಯಸಭಾ ಸದಸ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶಿಸಿದರು. ಮೈಸೂರಿನ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ), ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮತ್ತು ರಾಜೀವ್ ಸ್ನೇಹ ಬಳಗದ ಸಂಯುಕ್ತಾಶ್ರಯದಲ್ಲಿ ಮೈಸೂ ರಲ್ಲಿ 25 ಸಾವಿರ ಸಸಿ ನೆಡುವ `ವನಸಿರಿ’ ಶೀರ್ಷಿಕೆಯ…

ನೀರಿನ ಬಾಕಿ ಪಾವತಿಸುವವರಿಗೆ ಆರು ತಿಂಗಳು `ಬಡ್ಡಿ ನಿಶ್ಚಲತೆ’
ಮೈಸೂರು

ನೀರಿನ ಬಾಕಿ ಪಾವತಿಸುವವರಿಗೆ ಆರು ತಿಂಗಳು `ಬಡ್ಡಿ ನಿಶ್ಚಲತೆ’

July 13, 2022

ಮೈಸೂರು,ಜು.12(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 74 ಕೋಟಿ ಬಡ್ಡಿಯೂ ಸೇರಿದಂತೆ 220 ಕೋಟಿ ರೂ. ನೀರಿನ ಶುಲ್ಕ ಬಾಕಿ ಯಿದ್ದು, ಸದ್ಯಕ್ಕೆ ಪಾಲಿಕೆ ಆದಾಯ ವೃದ್ಧಿಸು ವುದು ಹಾಗೂ ಗ್ರಾಹಕರಿಗೆ ನೆರವಾಗುವ ನಿಟ್ಟಿನಲ್ಲಿ ಜು.15ರಿಂದ 6 ತಿಂಗಳು `ಬಡ್ಡಿ ನಿಶ್ಚಲತೆ ಯೋಜನೆ’ (ಹಾಲಿ ಬಡ್ಡಿ ಕಾಯ್ದುಕೊಳ್ಳುವುದು) ಸದವಕಾಶ ಕಲ್ಪಿಸಲಾಗುತ್ತಿದೆ ಎಂದು ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ತಿಳಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್(ಹಳೆ ಕೌನ್ಸಿಲ್) ಸಭಾಂಗ ಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ…

1 42 43 44 45 46 1,611
Translate »