ಮೈಸೂರು, ಜು.7(ಆರ್‍ಕೆಬಿ)- ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಟಿ. ಕಾಟೂರ್‍ನಲ್ಲಿರುವ ಫಾರ್ಮ್‍ಹೌಸ್‍ನಲ್ಲಿ ವಾಸ್ತವ್ಯ ಹೂಡಿ, ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹೋಂ ಕ್ವಾರಂಟೈನ್‍ನಲ್ಲಿಲ್ಲ, ಆರೋಗ್ಯವಾಗಿದ್ದಾರೆ. ಈ ಸಂದಿಗ್ದ ಪರಿಸ್ಥಿತಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಅಷ್ಟೆ. ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸ್ವಯಂ ಕ್ವಾರಂಟೈನ್‍ನಲ್ಲಿದ್ದು, ಅವರ ಕೋವಿಡ್ ಪರೀಕ್ಷೆ ವರದಿಯೂ ನೆಗೆಟಿವ್ ಬಂದಿದೆ ಎಂದು ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಕೆಲದಿನ ಸಾರ್ವ ಜನಿಕ…
ಗ್ರಾಮಾಂತರ ಪ್ರದೇಶದಲ್ಲಿ ಹೋಂ ಕ್ವಾರಂಟೈನ್ ಅಸಾಧ್ಯ
July 8, 2020ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಅಭಿಮತ ಮೈಸೂರು, ಜು. 7 (ಆರ್‍ಕೆ)- ಕೋವಿಡ್-19 ಸೋಂಕು ದೃಢಪಟ್ಟವರಿಗೆ ಮನೆ ಯಲ್ಲೇ ಪ್ರತ್ಯೇಕವಾಗಿರಿಸಿ, ಶುಶ್ರೂಷೆ ನಡೆಸುವ ಸಂಬಂಧ ಸರ್ಕಾರ ಆದೇಶಿಸಲಾಗಿದ್ದರೂ, ಗ್ರಾಮಾಂತರ ಪ್ರದೇಶದಲ್ಲಿ ಅದು ಸಾಧ್ಯವಿಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ವೆಂಕಟೇಶ್ ತಿಳಿಸಿದ್ದಾರೆ. ಗ್ರಾಮಗಳಲ್ಲಿ ಒಂದು ಮನೆಯಲ್ಲಿ ಹೆಚ್ಚು ಮಂದಿ ಕುಟುಂಬ ಸದಸ್ಯರು ವಾಸವಾಗಿರುತ್ತಾರೆ. ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು, ವಯಸ್ಸಾದವರೂ ಇರುವ ಕಾರಣ, ಒಬ್ಬರು ಸೋಂಕಿತರಿದ್ದರೆ ಇತರರಿಗೂ ವೈರಸ್ ಹರಡುವ ಸಾಧ್ಯತೆ ಇರುತ್ತದೆ ಎಂದು ಅವರು…
ಇಂದಿನಿಂದ ಐದು ದಿನ ಕೊಡಗಿನಲ್ಲಿ ಸಾಧಾರಣ ಮಳೆ
July 8, 2020ಮೈಸೂರು, ಚಾ.ನಗರ, ಮಂಡ್ಯದಲ್ಲಿ ತುಂತುರು ಮಳೆ ಮೈಸೂರು, ಜು.7(ಆರ್‍ಕೆಬಿ)- ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜು.8ರಿಂದ 12ರವರೆಗೂ ಹಳೆ ಮೈಸೂರು ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಹಾಗೂ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆ ಗಳಲ್ಲಿ ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಮೈಸೂರು ಜಿಲ್ಲೆಯಲ್ಲಿ ಗರಿಷ್ಠ 28-29 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21ರಿಂದ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖ ಲಾಗಲಿದೆ. ಕೊಡಗು ಜಿಲ್ಲೆಯಲ್ಲಿ ಗರಿಷ್ಠ 22-23, ಕನಿಷ್ಠ 18-19, ಮಂಡ್ಯ ಜಿಲ್ಲೆಯಲ್ಲಿ…
ಮುಸುಕಿನ ಜೋಳ ಬೆಳೆದ ರೈತರ ಖಾತೆಗೆ ಪರಿಹಾರ ಧನ
July 8, 2020ಮೈಸೂರು, ಜು.7- ಕೋವಿಡ್-19 ಲಾಕ್‍ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಮುಸುಕಿನ ಜೋಳ ಬೆಳೆದಿ ರುವ 10,116 ರೈತರಿಗೆ ರೂ 5,000/- ಆರ್ಥಿಕ ನೆರವನ್ನು ಈಗಾಗಲೇ ವರ್ಗಾವಣೆ ಮಾಡ ಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. 2019-20ನೇ ಸಾಲಿನಲ್ಲಿ ಇ- ಆಡಳಿತ ವತಿಯಿಂದ ಕೈಗೊಳ್ಳಲಾದ ಬೆಳೆ ತಂತ್ರಾಂಶದಲ್ಲಿ ದಾಖಲಿಸಿರುವ ಮುಸುಕಿನ ಜೋಳ ಬೆಳೆದಿರುವ ರೈತರ ಪಟ್ಟಿಯನ್ನು ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ. ಈಖUIಖಿS ತಂತ್ರಾಂಶದಲ್ಲಿ ನೋಂದಣಿಯಾಗದ ರೈತರು ತಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ಪಹಣಿ(ಖಖಿಅ) ದಾಖಲೆ,…
ವಿಶ್ವದಲ್ಲಿ 3ನೇ ಸ್ಥಾನಕ್ಕೇರಿದ ಭಾರತ ಒಂದೇ ದಿನ 425 ಮಂದಿ ಸಾವು, 24,248 ಹೊಸ ಪ್ರಕರಣ
July 7, 2020ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 24 ಸಾವಿರದ 248 ಹೊಸ ಪ್ರಕರಣಗಳು ವರದಿಯಾಗಿದ್ದು, 425 ಸಾವು ಸಂಭವಿಸಿದೆ. 6,97, 413 ಪಾಸಿಟಿವ್ ಕೇಸುಗಳಿದ್ದು ಅವುಗಳಲ್ಲಿ 2,53,287 ಸಕ್ರಿಯ ಕೇಸು ಗಳಾಗಿವೆ, 4,24,433 ಗುಣಮುಖರಾದ/ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ/ಬೇರೆಡೆಗೆ ಹೋದ ಪ್ರಕರಣಗಳು ಮತ್ತು 19 ಸಾವಿರದ 693 ಸಾವು ಇಲ್ಲಿಯವರೆಗೆ ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾ ಲಯದ ಅಂಕಿ ಅಂಶ ತಿಳಿಸಿದೆ. ಕೋವಿಡ್-19 ಸಾಂಕ್ರಾಮಿಕ ಕೇಸಿನಲ್ಲಿ…
ಹೊರ ರಾಜ್ಯದಿಂದ ಬರುವ ಎಲ್ಲರಿಗೂ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ
July 7, 2020ಬೆಂಗಳೂರು: ರಾಜ್ಯ ಸರ್ಕಾರ ಕ್ವಾರಂಟೈನ್ ನಿಯಮಗಳನ್ನು ಮತ್ತಷ್ಟು ಸಡಿಲಿಸಿದ್ದು, ಹೊರ ರಾಜ್ಯ ಅಥವಾ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಿ, ಸಾಂಸ್ಥಿಕ ಕ್ವಾರಂಟೈನ್ ರದ್ದುಗೊಳಿಸಿದೆ. ಈ ಮುಂಚೆ ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರಿಗೆ ಒಂದು ಸರ್ಕಾರಿ ಅಥವಾ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ವಾಗಿತ್ತು. ಇದೀಗ ಅದನ್ನು ರದ್ದುಗೊಳಿಸಿದ್ದು, ಮನೆಯಲ್ಲೇ 14 ದಿನ ಕ್ವಾರಂಟೈನ್‍ಗೆ ಒಳ ಗಾದರೆ ಸಾಕು ಎಂದು ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿಗಳನ್ನು ಬಿಡು ಗಡೆ ಮಾಡಿದೆ. ಈ…
ಬೆಂಗಳೂರಲ್ಲಿ ತಿರುವನಂತಪುರಂ ಮಾದರಿ ಟ್ರಿಪಲ್ ಲಾಕ್‍ಡೌನ್?
July 7, 2020ಸಮುದಾಯಕ್ಕೆ ಸೋಂಕು ಹರಡುವ ಭೀತಿ ಬೆಂಗಳೂರು,ಜು.6-ಮೂಲವೇ ಇಲ್ಲದೆ ರಾಜ್ಯದಲ್ಲಿ ಪ್ರತಿನಿತ್ಯ ನೂರಾರು ಮಂದಿ ಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸಮುದಾಯಕ್ಕೆ ಸೋಂಕು ಹಬ್ಬುವ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಮಾದರಿಯ ಟ್ರಿಪಲ್ ಲಾಕ್‍ಡೌನ್ ಪದ್ಧತಿಯನ್ನು ಬೆಂಗಳೂರಿನಲ್ಲಿ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಕೇರಳದ ತಿರುವನಂತಪುರಂನಲ್ಲಿ ಮೂಲವೇ ಇಲ್ಲದ ಸೋಂಕಿತರ ಪ್ರಮಾಣ ಹೆಚ್ಚಾಗು ತ್ತಿದ್ದು, ಸಮುದಾಯಕ್ಕೆ ಹರಡುವುದನ್ನು ತಡೆಯಲು ಇಂದಿನಿಂದ 1 ವಾರ ಕಾಲ ಟ್ರಿಪಲ್ ಲಾಕ್‍ಡೌನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಟ್ರಿಪಲ್ ಲಾಕ್‍ಡೌನ್ ಮೂಲಕ…
ಭಾರತದ ಸ್ಟೇಷನರಿ ಪದಾರ್ಥಗಳಿಗೆ ಹೆಚ್ಚಿದ ಬೇಡಿಕೆ
July 7, 2020ಮೈಸೂರು, ಜು.6(ಎಸ್‍ಪಿಎನ್)-ಕಳೆದ ತಿಂಗಳು ಸಂಭವಿಸಿದ ಭಾರತ-ಚೀನಾ ಗಡಿ ಸಂಘರ್ಷದ ಬಿಸಿ ಮೈಸೂ ರಿನಲ್ಲಿ `ಮೇಡ್ ಇನ್ ಚೈನಾ’ ಸ್ಟೇಷನರಿ ಸಾಮಗ್ರಿಗಳ ಮಾರಾಟ ಮಾಡುತ್ತಿರುವ ವರ್ತಕರಿಗೂ ತಟ್ಟಿದೆ. `ಕೀ’ ಚೈನ್, ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳು, ರಬ್ಬರ್, ಆಕರ್ಷಣೀಯ ಪೆನ್, ಪೆನ್ಸಿಲ್ ಸೇರಿದಂತೆ ಇತರೆ ಸಾಮಗ್ರಿ ಗಳ ಖರೀದಿಗೂ ಮುನ್ನ `ಮೇಡ್ ಇನ್ ಚೈನಾ’ ಪ್ರಿಂಟ್ ನೋಡಿ ಗ್ರಾಹಕರು ವ್ಯವ ಹಾರ ನಡೆಸುತ್ತಿರುವುದು ಅಚ್ಚರಿ ಸಂಗತಿ ಎನ್ನುತ್ತಾರೆ ಖಾಸಗಿ ಸ್ಟೇಷನರಿ ಅಂಗಡಿ ಮಾಲೀಕ ಮದನ್‍ಲಾಲ್ ಪಟೇಲ್. ಕಳೆದ 23…
ಪ್ರಧಾನಿ ಮೋದಿ ನೇತೃತ್ವದ ಒಂದು ವರ್ಷದ ಸಾಧನೆ ಸಾರುವ ‘ಕರ್ನಾಟಕ ಜನಸಂವಾದ’ ಸಮಾರೋಪ
July 7, 2020ಮೈಸೂರು, ಜು.6(ಎಂಕೆ)- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2ನೇ ಅವ ಧಿಯ ಮೊದಲ ವರ್ಷ ಪೂರೈಸಿರುವ ಹಿನ್ನೆಲೆ ಕೇಂದ್ರ ಸರ್ಕಾರ ಕೈಗೊಂಡಿರುವ ಜನಪರ ಕಾರ್ಯಕ್ರಮ ಗಳನ್ನು ಮನೆ ಮನೆಗೆ ತಿಳಿಸಲು ಆನ್‍ಲೈನ್ ಮೂಲಕ ಹಮ್ಮಿಕೊಂಡಿರುವ ‘ಕರ್ನಾಟಕ ಜನಸಂವಾದ’ ಅಭಿ ಯಾನ ಸಮಾರೋಪ ಕಾರ್ಯಕ್ರಮವನ್ನು ಮೈಸೂ ರಿನ ಹಲವೆಡೆ ಸ್ಥಳೀಯ ಬಿಜೆಪಿ ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರು ವೀಕ್ಷಣೆ ಮಾಡಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯ ದರ್ಶಿ ಬಿ.ಎಲ್.ಸಂತೋಷ್, ‘ಕರ್ನಾಟಕ ಜನ ಸಂವಾದ’…
ಕಾಂಗ್ರೆಸ್ ಖಂಡನಾ ಸಭೆ; ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ
July 7, 2020ಮೈಸೂರು, ಜು.6(ಆರ್‍ಕೆಬಿ)- ಕೋವಿಡ್-19 ಸೋಂಕು ನಿಯಂತ್ರಿಸಲು ಖರೀದಿಸಲಾಗಿರುವ ಉಪಕರಣಗಳು ಮಾರುಕಟ್ಟೆ ಬೆಲೆಗಿಂತ ಅತೀ ದುಬಾರಿ ಮತ್ತು ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ. ಇದರ ಬಗ್ಗೆ ತನಿಖೆಗೆ ಸೂಚಿಸು ವಂತೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ, ರಾಜ್ಯಪಾಲರಲ್ಲಿ ಮನವಿ ಮಾಡಿದೆ. ಈ ಕುರಿತಂತೆ ರೈಲ್ವೆ ನಿಲ್ದಾಣದ ಬಳಿಯ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಖಂಡನಾ ಸಭೆಯಲ್ಲಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದು, ಪ್ರತ್ಯೇಕವಾಗಿ ಸಿಬಿಐ ತನಿಖೆ ನಡೆಸಬೇಕು. ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರ ರಾಜೀ…










