ಮೈಸೂರು

ಅಗತ್ಯ ವಸ್ತು ಪಟ್ಟಿಯಿಂದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಕೈಬಿಟ್ಟ ಕೇಂದ್ರ ಸರ್ಕಾರ
ಮೈಸೂರು

ಅಗತ್ಯ ವಸ್ತು ಪಟ್ಟಿಯಿಂದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಕೈಬಿಟ್ಟ ಕೇಂದ್ರ ಸರ್ಕಾರ

July 8, 2020

ನವದೆಹಲಿ, ಜು.7- ಮಾಸ್ಕ್‍ಗಳು, ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಪಟ್ಟಿಯಿಂದ ಕೈಬಿಟ್ಟಿದೆ. ಮಾರಕ ಕೊರೊನಾ ವೈರಸ್ ಭಾರತ ಪ್ರವೇಶ ಮಾಡುತ್ತಿ ದ್ದಂತೆಯೇ ಮಾಸ್ಕ್‍ಗಳು, ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿ ರಫ್ತಿನ ಮೇಲೆ ನಿಯಂತ್ರಣ ಹೇರಿದ್ದ ಕೇಂದ್ರ ಸರ್ಕಾರ ಇದೀಗ ಈ ಪಟ್ಟಿಯಿಂದ ಮಾಸ್ಕ್‍ಗಳು, ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಕೈ ಬಿಟ್ಟಿದೆ. ದೇಶದಲ್ಲಿ ಪ್ರಸ್ತುತ ಮಾಸ್ಕ್‍ಗಳು ಮುಖ್ಯವಾಗಿ ಎನ್95 ಮಾಸ್ಕ್‍ಗಳು ಮತ್ತು ಸ್ಯಾನಿಟೈಸರ್ ಸಾಕಷ್ಟು ದಾಸ್ತಾನಿದ್ದು, ಇದೇ ಕಾರಣಕ್ಕೆ ಅಗತ್ಯ ವಸ್ತುಗಳ ಪಟ್ಟಿಯಿಂದ…

ಮೈಮುಲ್ ಸಹಕಾರ ಕೋರಿದ ಹೋಟೆಲ್ ಮಾಲೀಕರ ಸಂಘ
ಮೈಸೂರು

ಮೈಮುಲ್ ಸಹಕಾರ ಕೋರಿದ ಹೋಟೆಲ್ ಮಾಲೀಕರ ಸಂಘ

July 8, 2020

ಮೈಸೂರು, ಜು.7(ಆರ್‍ಕೆಬಿ)- ಮೈಸೂರಿನಲ್ಲಿ 1500 ಹೋಟೆಲ್, ರೆಸ್ಟೋರೆಂಟ್, ಬೇಕರಿ, ಮತ್ತು ಸ್ವೀಟ್ ಸ್ಟಾಲ್‍ಗಳಿದ್ದು, ಪ್ರವಾಸೋದ್ಯಮವನ್ನೇ ಅವಲಂಬಿಸಿದ್ದೇವೆ. ಇತ್ತೀಚಿನ ಕೊರೊನಾ ಹಾವಳಿ ಹಾಗೂ ಲಾಕ್‍ಡೌನ್‍ನಿಂದಾಗಿ ಎಲ್ಲಾ ವ್ಯಾಪಾರವೂ ನೆಲಕಚ್ಚಿದೆ. ಈ ವೇಳೆಯಲ್ಲೂ ಹೋಟೆಲ್‍ಗಳು, ಬೇಕರಿಗಳು, ರೆಸ್ಟೋರೆಂಟ್ ಮತ್ತು ಸ್ವೀಟ್‍ಸ್ಟಾಲ್‍ಗಳು ನಂದಿನಿ ಹಾಲನ್ನು ಉಪಯೋಗಿಸುತ್ತಾ ಬಂದಿದ್ದು, ಹಾಲಿನ ಡೈರಿಗೆ ಹಾಗೂ ಹೈನುಗಾರಿಕೆ ಮಾಡುವವರಿಗೆ ಬಹಳ ಸಹಾಯವಾಗುತ್ತಿತ್ತು. ವ್ಯಾಪಾರ ನೆಲಕಚ್ಚಿ ಹೋಟೆಲ್‍ನವರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬೆಂಗ ಳೂರು ಹಾಲು ಒಕ್ಕೂಟದ ಮಾರುಕಟ್ಟೆ ಪ್ರಕಾರ ಹೋಟೆಲ್‍ನವರಿಗೆ 1 ಕ್ರೇಟ್ ಹಾಲಿಗೆ 1 ಲೀ….

ಶಿವರಾತ್ರೀಶ್ವರನಗರದಲ್ಲಿ ಒಳಚರಂಡಿ ಸಮಸ್ಯೆ ನಿತ್ಯನರಕ
ಮೈಸೂರು

ಶಿವರಾತ್ರೀಶ್ವರನಗರದಲ್ಲಿ ಒಳಚರಂಡಿ ಸಮಸ್ಯೆ ನಿತ್ಯನರಕ

July 8, 2020

ಮೈಸೂರು, ಜು.7(ಎಂಕೆ)- ಇಲ್ಲಿ ಯುಜಿಡಿಯದ್ದೇ ನಿತ್ಯ ಸಮಸ್ಯೆ… 4 ವರ್ಷಗಳಲ್ಲಿ 300ಕ್ಕೂ ಹೆಚ್ಚು ಬಾರಿ ಮ್ಯಾನ್‍ಹೋಲ್ ತುಂಬಿ ಹರಿದಿದೆ…! ಮೈಸೂರಿನ 8ನೇ ವಾರ್ಡ್ ವ್ಯಾಪ್ತಿಯ ಶಿವರಾಶ್ರೀಶ್ವರ ನಗರದ 4ನೇ ಕ್ರಾಸ್‍ನಲ್ಲಿ ಪದೇ ಪದೆ ಒಳಚರಂಡಿ (ಯುಜಿಡಿ) ಸಮಸ್ಯೆ ಉಂಟಾ ಗುತ್ತಿದೆ. ವರ್ಷದಲ್ಲಿ 70-80 ದಿನಗಳು ಇಲ್ಲಿನ ಮ್ಯಾನ್‍ಹೋಲ್ ಬಾಯಿ ತೆರೆದು ಒಳಚರಂಡಿ ನೀರನ್ನು ಹೊರಹಾಕುತ್ತದೆ. ರಸ್ತೆಯಲ್ಲಿ ಹರಿಯುವ ಕೊಳಚೆ ನೀರಿನ ಮೇಲೇ ವಾಹನಗಳು ಸಂಚ ರಿಸುತ್ತವೆ. ದುರ್ವಾಸನೆ ಬೀರುವ ಮಾರ್ಗದಲ್ಲಿ ಪಾದಚಾರಿಗಳು ಮೂಗು ಮುಚ್ಚಿ ತಿರುಗಾಡುವ ಸ್ಥಿತಿ…

ಉತ್ಪಾದಕರಿಂದ ಹಾಲು ಖರೀದಿ ದರ 1.50 ರೂ. ಇಳಿಕೆ
ಮೈಸೂರು

ಉತ್ಪಾದಕರಿಂದ ಹಾಲು ಖರೀದಿ ದರ 1.50 ರೂ. ಇಳಿಕೆ

July 8, 2020

ಮೈಸೂರು, ಜು.7(ಎಸ್‍ಬಿಡಿ)- ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ ಗಳ ಒಕ್ಕೂಟ(ಮೈಮುಲ್) ಹಾಲು ಖರೀದಿ ದರವನ್ನು ಇಳಿಕೆ ಮಾಡಿದ್ದು, ನೂತನ ದರ ಬುಧವಾರ(ಜು.8)ದಿಂದಲೇ ಅನ್ವಯ ವಾಗಲಿದೆ. ಜು.3ರಂದು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ, ತಾತ್ಕಾಲಿಕ ಪರಿಷ್ಕರ ಣೆಗೆ ನಿರ್ಧರಿಸಲಾಯಿತು. ಅದರಂತೆ ಉತ್ಪಾ ದಕರಿಂದ ಖರೀದಿ ಮಾಡುವ ಹಾಲಿನ ದರವನ್ನು ಲೀಟರ್‍ಗೆ 1.50 ರೂ. ಇಳಿಕೆ ಮಾಡಲಾಗುತ್ತಿದ್ದು, ಇನ್ನು ಮುಂದೆ ಲೀಟರ್‍ಗೆ 25 ರೂ. ನೀಡಲಾಗುವುದು. ಕೊರೊನಾ ಸಂಕಷ್ಟದಲ್ಲೂ ಹಾಲು ಉತ್ಪಾದಕರಿಗೆ ತೊಂದರೆಯಾಗದಂತೆ ಹಣ ಬಟವಾಡೆ ಮಾಡುವ…

ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಹಿಂಜರಿದರೆ ನಿರ್ದಾಕ್ಷಿಣ್ಯ ಕ್ರಮ
ಮೈಸೂರು

ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಹಿಂಜರಿದರೆ ನಿರ್ದಾಕ್ಷಿಣ್ಯ ಕ್ರಮ

July 8, 2020

ಧಾರವಾಡ, ಜು. 7-ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ನಿಯಂ ತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳು ಕೂಡಾ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಖಾಸಗಿ ವೈದ್ಯರಿಗೆ ಸಹಕಾರ ನೀಡಲು ಕೋರಿಕೊಳ್ಳಲಾಗುವುದು. ಸಕಾರಾತ್ಮಕವಾಗಿ ಸ್ಪಂದಿಸ ದಿದ್ದರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ಜಿಲ್ಲಾಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯನ್ನು ದ್ದೇಶಿಸಿ ಮಾತನಾಡಿದ ಸಚಿವರು, ಖಾಸಗಿ ಆಸ್ಪತ್ರೆಗಳು ಈ…

ಮೈಸೂರು ರೈಲು ನಿಲ್ದಾಣದಲ್ಲಿ ಪಿಟ್‍ಲೈನ್ ದುರಸ್ತಿ ಕಾಮಗಾರಿ ಆರಂಭ
ಮೈಸೂರು

ಮೈಸೂರು ರೈಲು ನಿಲ್ದಾಣದಲ್ಲಿ ಪಿಟ್‍ಲೈನ್ ದುರಸ್ತಿ ಕಾಮಗಾರಿ ಆರಂಭ

July 8, 2020

ಮೈಸೂರು,ಜು.7(ಆರ್‍ಕೆ)- ಕೊರೊನಾ ವೈರಸ್ ಭೀತಿಯಿಂದಾಗಿ ರೈಲು ಸಂಚಾರ ಬಹುತೇಕ ಸ್ಥಗಿತಗೊಂಡಿರುವುದರಿಂದ ಮೈಸೂರು ನಿಲ್ದಾಣದ ಪಿಟ್‍ಲೈನ್‍ಗಳ ರಿಪೇರಿ ಕೆಲಸವನ್ನು ರೈಲ್ವೇ ಇಲಾಖೆ ಕೈಗೆತ್ತಿಕೊಂಡಿದೆ. 1993-94ನೇ ಸಾಲಿನಲ್ಲಿ ನಿರ್ಮಿಸಿದ್ದ ಮೈಸೂರು ರೈಲು ನಿಲ್ದಾಣ ಯಾರ್ಡ್‍ನ 1 ಮತ್ತು 3ನೇ ಸಂಖ್ಯೆಯ ಪಿಟ್‍ಲೈನ್‍ಗಳ ಬಹುತೇಕ ಬೇರಿಂಗ್ ಪ್ಲೇಟ್ ಗಳು ಜಖಂಗೊಂಡಿದ್ದವು. ಆರಂಭದಲ್ಲಿ ಜಾಕ್ ಹ್ಯಾಮರ್ ಬಳಸಿ ಮೇಲಿನ 30 ಸೆಂಟಿಮೀಟರ್ ಲೇಯರ್ ಕಾಂಕ್ರಿಟ್ ಅನ್ನು ತೆಗೆದು ಹಾಕಲು ಯೋಜಿಸಲಾಗಿತ್ತಾದರೂ, ಹೆಚ್ಚಿನ ವೈಬ್ರೇ ಷನ್‍ನಿಂದ ಹಳೇ ಕಾಂಕ್ರಿಟ್‍ಗೆ ಹಾನಿ ಯಾಗುವ ಸಾಧ್ಯತೆ ಇರುವ…

60 ಗ್ರಾಂ ಮಾಂಗಲ್ಯ ಸರ ಕಿತ್ತೊಯ್ದ ಸರಗಳ್ಳರು
ಮೈಸೂರು

60 ಗ್ರಾಂ ಮಾಂಗಲ್ಯ ಸರ ಕಿತ್ತೊಯ್ದ ಸರಗಳ್ಳರು

July 8, 2020

ಮೈಸೂರು, ಜು.7(ವೈಡಿಎಸ್)- ಮೈಸೂರಿನಲ್ಲಿ ಮಧುವನ ಬಡಾವಣೆ ಬಳಿ ಮಂಗಳವಾರ ಸಂಜೆ ಸ್ಕೂಟರ್‍ನಲ್ಲಿ ಬಂದ ಸರಗಳ್ಳರಿ ಬ್ಬರು ನಡೆದುಕೊಂಡು ಹೋಗು ತ್ತಿದ್ದ ಮಹಿಳೆ ಯಿಂದ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಶ್ರೀರಾಂಪುರ 2ನೇ ಹಂತದ ಮಧುವನ ಬಡಾವಣೆ ನಿವಾಸಿ ಗಾಯಿತ್ರಿ ದೇವಿ ಮಾಂಗಲ್ಯ ಸರ ಕಳೆದುಕೊಂಡವರು. ಅವರು ಮಂಗಳವಾರ ಸಂಜೆ ಮಧುವನ ಬಡಾವಣೆ ಕ್ರಾಸ್ ಸಮೀಪ ನಡೆದುಕೊಂಡು ಮನೆಗೆ ವಾಪಸಾಗುತ್ತಿದ್ದಾಗ ಹಿಂಬದಿಯಿಂದ ಸ್ಕೂಟರ್‍ನಲ್ಲಿ ಬಂದ ಖದೀಮರು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದರು. ಈ ಬಗ್ಗೆ…

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದಿನಿಂದ ಕೆಆರ್, ಚೆಲುವಾಂಬ ಆಸ್ಪತ್ರೆ ಸ್ಟಾಫ್  ನರ್ಸ್‍ಗಳಿಂದ ಕಪ್ಪು ಪಟ್ಟಿ ಧರಿಸಿ, ಕರ್ತವ್ಯ ನಿರ್ವಹಣೆ
ಮೈಸೂರು

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದಿನಿಂದ ಕೆಆರ್, ಚೆಲುವಾಂಬ ಆಸ್ಪತ್ರೆ ಸ್ಟಾಫ್  ನರ್ಸ್‍ಗಳಿಂದ ಕಪ್ಪು ಪಟ್ಟಿ ಧರಿಸಿ, ಕರ್ತವ್ಯ ನಿರ್ವಹಣೆ

July 8, 2020

ಮೈಸೂರು, ಜು.7(ಆರ್‍ಕೆ)-ವೇತನ ಹೆಚ್ಚಳ, ಸೇವಾ ಭದ್ರತೆ ಹಾಗೂ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಮೈಸೂರಿನ ಕೆ.ಆರ್. ಮತ್ತು ಚೆಲುವಾಂಬ ಆಸ್ಪತ್ರೆಗಳ ಗುತ್ತಿಗೆ ಸ್ಟಾಫ್ ನರ್ಸ್‍ಗಳು ನಾಳೆ (ಜು.8)ಯಿಂದ ಜುಲೈ 10ರವರೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸ್ಟಾಫ್ ನರ್ಸ್‍ಗಳನ್ನು ಕೆ.ಆರ್. ಮತ್ತು ಚೆಲುವಾಂಬ ಆಸ್ಪತ್ರೆಗಳಿಗೆ ನಿಯೋಜಿಸಿದ್ದು, ಮಾಸಿಕ 10,000 ರೂ. ವೇತನ ನೀಡಲಾಗುತ್ತಿದೆ. ಸುಮಾರು 8ರಿಂದ 10 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ…

ಮೈಸೂರಲ್ಲಿ ಹಡಪದ ಅಪ್ಪಣ್ಣ ಜಯಂತಿ ಸರಳ ಆಚರಣೆ
ಮೈಸೂರು

ಮೈಸೂರಲ್ಲಿ ಹಡಪದ ಅಪ್ಪಣ್ಣ ಜಯಂತಿ ಸರಳ ಆಚರಣೆ

July 8, 2020

ಮೈಸೂರು, ಜು.7(ಆರ್‍ಕೆ)- ಮೈಸೂ ರಿನ ಕಲಾಮಂದಿರದ ಮನೆಯಂಗಳ ದಲ್ಲಿ ಮಂಗಳವಾರ ಶ್ರೀ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಅವರು ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ನಾಗೇಂದ್ರ ಅವರು, ಸಮಾಜದಲ್ಲಿ ಬದಲಾವಣೆ ತರಲು ಜೀವನವನ್ನೇ ಸವೆಸಿದ ಹಡಪದ ಅಪ್ಪಣ್ಣ ಅವರು ಸಾಮಾಜಿಕ ಕ್ರಾಂತಿ ಮೂಲಕ ಬಸವಣ್ಣ…

ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸುತ್ತಿದ್ದ ಕಟ್ಟಡ ನೆಲಸಮ
ಮೈಸೂರು

ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸುತ್ತಿದ್ದ ಕಟ್ಟಡ ನೆಲಸಮ

July 8, 2020

ಮೈಸೂರು, ಜು. 7 (ಆರ್‍ಕೆ)- ಸರ್ಕಾರಿ ರಾಜಕಾಲುವೆ ಒತ್ತುವರಿ ಮಾಡಿ ಅದರ ಮೇಲೆ ನಿರ್ಮಿಸುತ್ತಿದ್ದ ಕಟ್ಟಡವನ್ನು ತಹಸೀಲ್ದಾರ್ ನೇತೃತ್ವದಲ್ಲಿ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಇಂದು ಬೆಳಿಗ್ಗೆ ನೆಲಸಮಗೊಳಿಸಲಾಗಿದೆ. ಮೇಟಗಳ್ಳಿ ಸರ್ವೆ ನಂಬರ್ 143ರಲ್ಲಿ ಬರುವ ಕುಂಬಾರಕೊಪ್ಪಲಿನ ಶ್ರೀ ಆದಿಶಕ್ತಿ ದೇವಸ್ಥಾನದ ಹಿಂಭಾಗದಲ್ಲಿರುವ ರಾಜಕಾಲುವೆ ಒತ್ತುವರಿ ಮಾಡಿ ಅಲ್ಲಿ ಮನೆ ನಿರ್ಮಿಸಲಾಗುತ್ತಿದ್ದು, ಆ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದ ಹಿಂದೆಯೇ ರೆವಿನ್ಯೂ ಇನ್ಸ್‍ಪೆಕ್ಟರ್‍ಗಳ ಮೂಲಕ ಮೌಖಿಕವಾಗಿ ಎಚ್ಚರಿಸಲಾಗಿತ್ತಾದರೂ, ತೆರವು ಗೊಳಿಸದ ಕಾರಣ, ಮೈಸೂರು…

1 496 497 498 499 500 1,611
Translate »