ಮೈಸೂರು, ಜು. 6(ಆರ್‍ಕೆ)- ಸಿಬ್ಬಂದಿ ಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾ ನಿಲಯದ ಕ್ರಾಫರ್ಡ್ ಭವನದಲ್ಲಿ ಜುಲೈ 15 ರವರೆಗೆ ಶೇ.50ರಷ್ಟು ಸಿಬ್ಬಂದಿ ಮಾತ್ರ ಹಾಜ ರಾಗುವಂತೆ ಆದೇಶ ಹೊರಡಿಸಲಾಗಿದೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್‍ಕುಮಾರ್, ಶನಿವಾರ ಕ್ರಾಫರ್ಡ್ ಹಾಲ್‍ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢ ಪಟ್ಟಿರುವುದರಿಂದ ಇಡೀ ಕ್ರಾಫರ್ಡ್ ಭವನವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿಸಿದ್ದೇವೆ ಎಂದರು….
ಪರಿಶಿಷ್ಟ ಜಾತಿ ಆಯೋಗದ ಆದೇಶ ಯಥಾವತ್ ಪಾಲಿಸಲು ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹ
July 7, 2020ಮೈಸೂರು, ಜು.6(ಆರ್‍ಕೆಬಿ)- ಸ್ಪರ್ಶ ಜಾತಿಗಳಾದ ಬಂಜಾರ, ಲಂಬಾಣಿ, ಬೋವಿ, ಕೊರಚ ಮತ್ತು ಕೊರಮ ಸಮು ದಾಯಗಳ ಕುರಿತು ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋ ಗವು ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ಆದೇಶ ವನ್ನು ಯಥಾವತ್ತಾಗಿ ಪಾಲಿಸಬೇಕು. ಹಾಗೆಯೇ ತೆಗೆದು ಕೊಂಡ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹಿಸಿದರು. ನಗರದ ವಿಶ್ವ ಮೈತ್ರಿ ಬುದ್ಧ ವಿಹಾರದಲ್ಲಿ ಸೋಮವಾರ ಆದಿ ಕರ್ನಾಟಕ ಪರಿಶಿಷ್ಟ ಜಾತಿ ಬಲಗೈ ಮತ್ತು ಎಡಗೈ ಹೋರಾಟ ಸಮಿತಿಯ…
ಜನರ ಸೋಂಕು ಪರೀಕ್ಷೆ ನಡೆಸದ ಕೊಲೆಗಡುಕ ಸರ್ಕಾರ: ಸಿದ್ದರಾಮಯ್ಯ
July 7, 2020ಬೆಂಗಳೂರು: ಸರಿಯಾಗಿ ಸೋಂಕು ಪರೀಕ್ಷೆ ನಡೆಸದೇ ಜನರ ಸಾವಿಗೆ ಕಾರಣ ವಾಗಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಕೊಲೆಗಡುಕ ಸರ್ಕಾರ ಎಂದರೆ ತಪ್ಪಾಗುತ್ತದೆಯೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಸರ್ಕಾರ ಕೊರೊನಾ ಸೋಂಕು ಪರೀಕ್ಷೆ ಹೆಚ್ಚು ನಡೆಸಿದರೆ ಇನ್ನಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ಸೋಂಕಿತರ ಸಂಖ್ಯೆಗನುಗುಣವಾಗಿ ಆ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರ ಸಮರ್ಪಕವಾಗಿ ಸೋಂಕು ಪರೀಕ್ಷೆ ಹೆಚ್ಚು ನಡೆಸದೇ ಜನರ ಸಾವಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ….
ವಿಧಾನಸೌಧದ ಸಿಬ್ಬಂದಿಗೆ ಕೊರೊನಾ: ಮಧ್ಯಾಹ್ನ 12 ಗಂಟೆಗೆ ಕಚೇರಿ ಕಾರ್ಯಾರಂಭ
July 7, 2020ಬೆಂಗಳೂರು: ವಿಧಾನಸೌಧದ ಪಹರೆ ಮತ್ತು ನಿಗಾವಣೆ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಸೋಮವಾರ ಬೆಳಗ್ಗೆಯೇ ಸಚಿವಾಲಯದ ಎಲ್ಲಾ ಶಾಖೆಗಳನ್ನು ಸ್ಯಾನಿಟೈಸ್ ಮಾಡಿಸಲಾಯಿತು. ವಿಧಾನಸೌಧದ ಎಲ್ಲಾ ಸಿಬ್ಬಂದಿ ಇಂದು ಮಧ್ಯಾಹ್ನ 12 ಗಂಟೆಗೆ ಕೆಲಸಕ್ಕೆ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಯಿತು ಎಂದು ರಾಜ್ಯ ನೌಕರರ ಸಂಘದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಧಾನಸೌಧ ಮೊದಲನೇ ಮಹಡಿಯಲ್ಲಿರುವ ಕಾವಲುಗಾರರ ಕೊಠಡಿಯಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಕಚೇರಿಯನ್ನು ಸ್ಯಾನಿಟೈಸ್…
ಡಿ.ಬನುಮಯ್ಯನವರಿಗೆ ಶಾಸಕ ನಾಗೇಂದ್ರ ಅರ್ಥಪೂರ್ಣ ನಮನ
July 7, 2020ಮೈಸೂರು, ಜು.6- ಮೈಸೂರು ಕುಂಚಿಟಿಗರ ಸಂಘದ ವತಿಯಿಂದ ಶಿವರಾಂಪೇಟೆಯಲ್ಲಿರುವ ಆಲಮ್ಮನವರ ಛತ್ರದಲ್ಲಿ ಡಿ.ಬನುಮಯ್ಯ ಅವರ ಭಾವ ಚಿತ್ರಕ್ಕೆ ಶಾಸಕ ಎಲ್.ನಾಗೇಂದ್ರ ಪುಷ್ಪ ನಮನ ಸಲ್ಲಿಸಿದರು. ಅಲ್ಲದೆ ಅವರ ಸ್ಮರ ಣಾರ್ಥ ಸಸಿ ನೆಟ್ಟು ನೀರೆರೆದರು. ನಂತರ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಸೋಮವಾರ ಡಿ. ಬನುಮಯ್ಯ ಅವರ 160ನೇ ಜಯಂ ತ್ಯೋತ್ಸವವನ್ನು ಆಯೋಜಿಸಲಾಗಿತ್ತು. ಬಳಿಕ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಬನುಮಯ್ಯ ಅವರು ಮೈಸೂ ರಲ್ಲಿ ಮೊದಲು ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿದರು. ಆ ಒಂದು…
ಕೊರೊನಾ: ಸರ್ಕಾರದ ನೂತನ ಮಾರ್ಗಸೂಚಿ ಅನುಸರಿಸುವ ಬಗ್ಗೆ ವೈದ್ಯರು, ಸಿಬ್ಬಂದಿಗೆ ತರಬೇತಿ
July 7, 2020ಮೈಸೂರು,ಜು.6(ಆರ್‍ಕೆ)-ಕೋವಿಡ್-19 ಸೋಂಕು ದೃಢಪಟ್ಟ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡುವ ಜೊತೆಗೆ ಮನೆಯಲ್ಲೂ ಪ್ರತ್ಯೇಕ ವಾಗಿರಿಸುವ ಬಗ್ಗೆ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸೋಂಕು ದೃಢಪಟ್ಟಿರುವ ವ್ಯಕ್ತಿಯನ್ನು ಹೋಂ ಕ್ವಾರಂಟೈನ್‍ನಲ್ಲಿಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಲ ನಿಬಂಧನೆಗೊಳಪಟ್ಟು ಅನು ಮತಿ ನೀಡಿದ್ದು, ಆ ಕುರಿತು ಜಿಲ್ಲಾ ಸಾಂಕ್ರಾಮಿಕ ರೋಗಗಳ ಅಧಿಕಾರಿ ಡಾ.ಚಿದಂಬರ ಅವರು ಕೋವಿಡ್-19ರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗೆ ಸೋಮವಾರ ಮೈಸೂ ರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ತರಬೇತಿ…
ಬಸವಣ್ಣನವರ ನಿಜಭಂಟ ಹಡಪದ ಅಪ್ಪಣ್ಣ
July 7, 2020ಮೈಸೂರು, ಜು.6-ಹಡಪದ ಅಪ್ಪಣ್ಣ ಲೌಕಿಕವಾಗಿ ಮಾತ್ರ ವಲ್ಲದೇ ಪಾರಮಾರ್ಥಿಕವಾಗಿ ಹಿರಿಮೆ ಹೊಂದಿ ನಿಜಸುಖಿ ಎನಿಸಿಕೊಂಡರು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರಿನ ಬೋಗಾದಿಯ ಶಾರದಾನಗರ ರೈಲ್ವೆ ಬಡಾ ವಣೆಯ ಶರಣು ವಿಶ್ವವಚನ ಫೌಂಡೇಷನ್ ಕಚೇರಿಯಲ್ಲಿ ಹಡಪದ ಅಪ್ಪಣ್ಣ ನವರ 886ನೇ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರ ಜನನ, ಬೆಳ ವಣಿಗೆ ಹಾಗೂ ಕಲ್ಯಾಣಕ್ಕೆ ಯಾವಾಗ ಬಂದರು ಎಂಬುದರ ಬಗ್ಗೆ ಯಾವುದೇ ಕಾವ್ಯ ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿಲ್ಲ. ಇತ್ತೀಚೆಗೆ ದೇವದುರ್ಗದ…
ಹಿರಿಯ ಸಾಹಿತಿ ಸಿಪಿಕೆ ನಿವಾಸದಲ್ಲಿ ಪ್ರೊ.ದೇಜಗೌ ಜನ್ಮ ದಿನಾಚರಣೆ
July 7, 2020ಮೈಸೂರು, ಜು.6(ಎಸ್‍ಪಿಎನ್)- ಹಲವು ವರ್ಷಗಳ ಹಿಂದೆ ಹಿರಿಯ ಸಾಹಿತಿ ಪ್ರೊ.ದೇಜಗೌ ಬರೆದಿದ್ದ `ಕನ್ನಡಿಗರೇ ಎಚ್ಚರಗೊಳ್ಳಿ’ ಪುಸ್ತಕಕ್ಕೆ ಕುವೆಂಪು ಅವರೇ ಆಕರ್ಷಕ ಮುನ್ನುಡಿ ಬರೆದಿದ್ದರು. ಆ ನುಡಿಗಳನ್ನು ಇಂದಿಗೂ ಬಹುತೇಕ ಕನ್ನಡಿಗರು ನೆನಪಿಸಿಕೊಳ್ಳುತ್ತಾರೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ಡಾ.ಸಿಪಿಕೆ ನಿವಾಸದಲ್ಲಿ ಕರ್ನಾಟಕ ರತ್ನ ಪ್ರೊ.ದೇಜಗೌ ಅವರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿ ಸಿದ್ದ ಸರಳ ಸಮಾರಂಭದಲ್ಲಿ ಮಾತನಾ ಡಿದ ಅವರು, ಕುವೆಂಪು ಬರೆದ ಮುನ್ನುಡಿ ಹೀಗಿದೆ. `ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’….
ಆರೋಗ್ಯ ಇಲಾಖೆ ಸೂಚನೆ ಪಾಲಿಸದ ಮೈಸೂರಿನ 4 ಸೇರಿ ರಾಜ್ಯದಲ್ಲಿ 110 ಮೆಡಿಕಲ್ಸ್ ಶಾಪ್ ಅಮಾನತು
July 7, 2020ಮೈಸೂರು, ಜು.6(ಎಸ್‍ಬಿಡಿ)- ಕೋವಿಡ್ ಸಂಬಂಧ ಆರೋಗ್ಯ ಇಲಾಖೆಯ ಸೂಚನೆ ಪಾಲಿಸದ ಮೈಸೂರಿನ 4 ಮೆಡಿ ಕಲ್ಸ್ ಸೇರಿದಂತೆ ರಾಜ್ಯದಲ್ಲಿ 110 ಔಷಧಿ ಅಂಗಡಿಗಳ ಪರವಾನಗಿಯನ್ನು ನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಲಾಗಿದೆ. ಕೊರೊನಾ ಪ್ರಾಥಮಿಕ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ಇನ್ನಿತರ ಸಮಸ್ಯೆ ಗಳಿಗೆ ಔಷಧಿ ಖರೀದಿಸುವವರ ವಿವರ ವನ್ನು `ಫಾರ್ಮ ಪೋರ್ಟ್’ ವೆಬ್‍ಸೈಟ್ ನಲ್ಲಿ ದಾಖಲಿಸುವಂತೆ ಆರೋಗ್ಯ ಇಲಾಖೆ ಸೂಚಿಸಿತ್ತು. ಇದರಿಂದ ಐಎಲ್‍ಐ ಹಾಗೂ ಸರಿ ಪ್ರಕರಣಗಳ ಪತ್ತೆಗೆ ಸಹಾಯವಾಗು ತ್ತದೆ ಎಂದು ಎಲ್ಲಾ ಔಷಧ ಮಾರಾಟ ಗಾರರೂ…
ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಜು.10ರಿಂದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
July 7, 2020ಮೈಸೂರು, ಜು.6(ಎಸ್‍ಪಿಎನ್)-ಮಾಸಿಕ 12 ಸಾವಿರ ರೂ. ಗೌರವ ಧನ ಖಾತರಿ ಪಡಿಸಬೇಕು. ಕೊರೊನಾ ಪೀಡಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ನೀಡುವಂತೆ ಒತ್ತಾಯಿಸಿ ಜು.10ರಂದು ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಕರ್ತವ್ಯ ಸ್ಥಗಿತಗೊಳಿಸಿ ಆಯಾಯ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುಳಾ ತಿಳಿಸಿದ್ದಾರೆ. ರಾಜ್ಯ ವ್ಯಾಪ್ತಿ ಕಳೆದೊಂದು ವಾರದಿಂದ ಆಶಾ ಕಾರ್ಯಕರ್ತೆಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ…










