ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 9 ಉಗ್ರರನ್ನು ಹೊಡೆದುರುಳಿಸಿದೆ. ಕೊರೊನಾ ವೈರಸ್ ಸೋಂಕು ಪ್ರಸ ರಣೆಯಿಂದಾಗಿ ಲಾಕ್‍ಡೌನ್‍ನಿಂದಾಗಿ ಇಡೀ ದೇಶವೇ ಆತಂಕದಲ್ಲಿದ್ದು, ಇದೇ ವೇಳೆ ಜಮ್ಮು-ಕಾಶ್ಮೀರದಲ್ಲಿ ಬಾಲ ಬಿಚ್ಚಲು ಯತ್ನಿಸಿದ 9 ಉಗ್ರರನ್ನು ಭಾರ ತೀಯ ಸೇನೆ ಹೊಡೆದುರುಳಿಸಿದೆ. ದಕ್ಷಿಣ ಕಾಶ್ಮೀರದ ಬಾಟ್ಪುರ್‍ದಲ್ಲಿ ನಿನ್ನೆ 4 ಮಂದಿ ಉಗ್ರರನ್ನು ಹೊಡೆದು ರುಳಿಸಲಾಗಿತ್ತು. ಇದರ ಬೆನ್ನಲ್ಲೇ ಇಂದು ಎಲ್‍ಒಸಿಯ ಕೆರಾನ್ ಸೆಕ್ಟರ್‍ನಲ್ಲಿ ಮತ್ತೆ…
ಸಾಂಸ್ಕೃತಿಕ ನಗರಿಯಲ್ಲಿ ಇಲ್ಲ ‘ಲಾಕ್‍ಡೌನ್’ ವಾತಾವರಣ
April 5, 2020ಮೈಸೂರು, ಏ.4(ಎಂಕೆ)- ಮೈಸೂರಿನಲ್ಲಿ ‘ಲಾಕ್‍ಡೌನ್’ನ ವಾತಾವರಣವೇ ಇಲ್ಲದೇ ಎಂದಿನಂತೆ ಜನರ ತಿರುಗಾಟವಿರುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ. ವಿಶ್ವದೆಲ್ಲೆಡೆ ತಲ್ಲಣ ಸೃಷ್ಟಿಸಿರುವ ಕಿಲ್ಲರ್ ಕೊರೊನೊ ಸೋಂಕನ್ನು ನಿಯಂತ್ರಿಸಲು ದೇಶದಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ನಗರದ ಹಲವು ಬಡಾವಣೆಗಳಲ್ಲಿ ಹಬ್ಬದ ಆಚರಣೆ ವಾತಾವರಣವಿದೆ. ಜನರು ಪ್ರವಾ ಸಕ್ಕೆ ಬಂದವರಂತೆ ಲಾಕ್‍ಡೌನ್ ನಿಯಮ ಗಳನ್ನು ಗಾಳಿಗೆ ತೂರಿ ವರ್ತಿಸುತ್ತಿದ್ದಾರೆ. ಹಾಲು, ಮಾಂಸ, ಹಣ್ಣು-ತರಕಾರಿ ಸೇರಿ ದಂತೆ ಅಗತ್ಯ ವಸ್ತುಗಳ ಖರೀದಿಗೆ ಅನಿಯಮಿತ ಸಮಯಾವಕಾಶ…
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ದಿನಸಿ ವಿತರಣೆ
April 5, 2020ಮೈಸೂರು,ಏ.4-ಲಾಕ್‍ಡೌನ್ ಪರಿ ಣಾಮ ಸಂಕಷ್ಟಕ್ಕೆ ಸಿಲುಕಿರುವ ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿನ ಬಡ ಜನರನ್ನು ಗುರುತಿಸಿ ಬಿಜೆಪಿ ಕ್ಷೇತ್ರ ಸಮಿತಿ ಯಿಂದ ದಿನಸಿ ಪದಾರ್ಥಗಳ ಕಿಟ್ ಗಳನ್ನು ಶನಿವಾರ ವಿತರಿಸಲಾಯಿತು. ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ ಕಷ್ಟದಲ್ಲಿದ್ದ ಕೂಲಿ ಕಾರ್ಮಿಕರು, ಮನೆ ಗೆಲಸದವರು, ದಿನಗೂಲಿ ಕಾರ್ಮಿಕರನ್ನು ಗುರುತಿಸಿ ನಿತ್ಯ ಬಳಕೆಯ ದಿನಸಿ ಪದಾರ್ಥಗಳ ಕಿಟ್ ವಿತರಿಸಲಾಯಿತು. ಬಿಜೆಪಿ ಕ್ಷೇತ್ರ ಅಧ್ಯಕ್ಷ ಬಿ.ಎಂ.ರಘು, ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ರಾಜ ಮಣಿ, ಉಪಾಧ್ಯಕ್ಷ ಹೆಚ್.ಎಸ್.ಸಿದ್ದೇಶ್, ಅಲ್ಪಸಂಖ್ಯಾತರ ಮೋರ್ಚಾ ಕ್ಷೇತ್ರಾಧ್ಯಕ್ಷ ಸ್ಟೀಫನ್ ಸುಜಿತ್, ಕಾರ್ಯದರ್ಶಿ ಬಿ.ಸಿ….
ಮನೆಗೆಲಸದವರು, ಸಹಾಯಕರು, ವಾಹನ ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬೇಡಿ
April 5, 2020ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಬೆಂಗಳೂರು, ಏ. 4- ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲಸಕ್ಕೆ ಬಾರಲು ಸಾಧ್ಯವಾಗದ ಕಾರ್ಮಿಕರ ವೇತನ ವನ್ನು ಅವರ ಮಾಲೀಕರು ಸದ್ಯದ ಪರಿಸ್ಥಿತಿಯಲ್ಲಿ ಕಡಿತ ಮಾಡ ಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಮನೆಗೆಲಸದವರು, ಸಹಾಯಕರು ಮತ್ತು ವಾಹನ ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬೇಡಿ. ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ಕಾರ್ಮಿಕರಿಗೆ, ಕೂಲಿ ಕೆಲಸದವರು, ಬಡವರಿಗೆ…
ಲಾಕ್‍ಡೌನ್ ಎಫೆಕ್ಟ್: ನಿಮ್ಹಾನ್ಸ್ ಸಹಾಯವಾಣಿಗೆ ಭಯ, ಆತಂಕ, ಒತ್ತಡದ 4 ಸಾವಿರಕ್ಕೂ ಹೆಚ್ಚು ಕರೆ
April 5, 2020ಬೆಂಗಳೂರು,ಏ.4- ಕೊರೊನಾ ವೈರಸ್ ಸೋಂಕು ಹಬ್ಬುವು ದನ್ನು ತಡೆಗಟ್ಟಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ 21 ದಿನಗಳ ಭಾರತ ಲಾಕ್‍ಡೌನ್ ಘೋಷಿಸಿದೆ. ಯಾರೂ ಕೂಡ ಅಗತ್ಯ ತುರ್ತು ಕೆಲಸಗಳನ್ನು ಹೊರತು ಪಡಿಸಿ ಬೇರೆಯದ್ದಕ್ಕೆ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ಮನೆಯೊಳಗೆ ಒಂದು ದಿನ, ಎರಡು ದಿನ, ಮೂರು ದಿನ, 4 ದಿನ ಕೂರಬಹುದು, ಅದಕ್ಕಿಂತ ಹೆಚ್ಚು ದಿನ ಕೂರಬೇಕೆಂದರೆ ಶಿಕ್ಷೆ, ಬಂಧನದ ತರಹ ಕಾಡುತ್ತದೆ, ಬಹುತೇಕರಿಗೆ ಮಾನಸಿಕ ತೊಳಲಾಟ ಉಂಟಾಗಬಹುದು, ಈ ಆತಂಕದ ಪರಿಸ್ಥಿತಿಯಲ್ಲಿ ಉದ್ವೇಗ, ಮಾನಸಿಕ…
ಆಯುಷ್ಮಾನ್ ಫಲಾನುಭವಿಗಳಿಗೆ ಕೋವಿಡ್-19 ಪರೀಕ್ಷೆ, ಚಿಕಿತ್ಸೆ ಉಚಿತ
April 5, 2020ನವದೆಹಲಿ,ಏ.4-ಆಯುಷ್ಮಾನ್ ಫಲಾನುಭವಿಗಳಿಗೆ ಕೋವಿಡ್-19 ಪರೀಕ್ಷೆ, ಚಿಕಿತ್ಸೆ ಉಚಿತವಾಗಿ ದೊರೆಯಲಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಘೋಷಿ ಸಿದೆ. ಏ.4ರಂದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಧಿಕಾರ, ಖಾಸಗಿ ಪ್ರಯೋಗಾಲಯ, ಪಟ್ಟಿ ಮಾಡಿರುವ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಫಲಾನುಭವಿಗಳಿಗೆ ಉಚಿತವಾಗಿ ಕೋವಿಡ್ -19 ಸೋಂಕು ಪರೀಕ್ಷೆ, ಚಿಕಿತ್ಸೆ ದೊರೆಯಲಿದೆ ಎಂದು ಹೇಳಿದೆ. ರಾಷ್ಟ್ರೀಯ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸುವ ಎನ್‍ಹೆಚ್‍ಎ, ಆಯುಷ್ಮಾನ್ ಯೋಜನೆಯಡಿ ಬರುವ 50 ಕೋಟಿ ಜನರಿಗೆ ಕೋವಿಡ್-19ಗಾಗಿ ಉಚಿತ ಪರೀಕ್ಷೆ, ಚಿಕಿತ್ಸೆ ದೊರೆಯಲಿದೆ, ಆಯುಷ್ಮಾನ್ ಯೋಜನೆಯ ವ್ಯಾಪ್ತಿಯಲ್ಲಿ…
ಮೈಸೂರಲ್ಲಿ ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಬಡವರಿಗೆ ಊಟ ಪೂರೈಕೆ
April 5, 2020ಮೈಸೂರು, ಏ.1(ಎಂಕೆ)- ಕೊರೊನಾ ವೈರಸ್ ನಿಂದ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆ ಮೈಸೂರಿನಲ್ಲಿ ಹೋಟೆಲ್‍ಗಳ ಬಂದ್ ಆಗಿದ್ದು, ಸುಲಭ ದಲ್ಲಿ ಊಟ ದೊರೆಯದೇ ಇರುವುದರಿಂದ ಕೆ.ಆರ್. ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಭದ್ರತಾ ಸಿಬ್ಬಂದಿ, ನಿರಾಶ್ರಿತರು ಮತ್ತು ಬಡವರ ಮನೆಗಳಿಗೆ ತೆರಳಿ ನಗರದ ನಿಯತಿ ಈವೆಂಟ್ಸ್, ಶ್ರೀ ಕ್ಯಾಟರಿಂಗ್ ಮತ್ತು ಡಿಎನ್ ಆರ್ ಅಸೋಸಿಯೇಟ್ಸ್‍ನವರು ಕಳೆದ 9 ದಿನಗಳಿಂದ ಊಟ, ನೀರಿನ ಬಾಟಲ್, ಬಿಸ್ಕತ್ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ನಗರದ ವಿವಿಧ ಬಡಾವಣೆಗಳು, ಕೆ.ಆರ್.ಆಸ್ಪತ್ರೆ…
ಮಹಾರಾಷ್ಟ್ರದಲ್ಲಿ ಮತ್ತೆ 47 ಜನರಿಗೆ ಕೊರೊನಾ ಸೋಂಕು: ಸೋಂಕಿತರ ಸಂಖ್ಯೆ 537ಕ್ಕೆ ಏರಿಕೆ
April 5, 2020ಮಹಾರಾಷ್ಟ್ರ, ಏ.4-ಈಗಾಗಲೇ ದೇಶ ದಲ್ಲೇ ಅತ್ಯಂತ ಅಧಿಕ ಕೊರೊನಾ ಸೋಂಕಿತರ ರಾಜ್ಯವಾಗಿ ಮೊದಲ ಸಾಲಿ ನಲ್ಲಿರುವ ಮಹಾರಾಷ್ಟ್ರದಲ್ಲಿ ಇಂದು ಮತ್ತೆ 47 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಕುರಿತಂತೆ ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ಬಿಡು ಗಡೆ ಮಾಡಿದ್ದು, ಇಂದು 47 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ರಾಜ್ಯ ದಲ್ಲಿ ಸೋಂಕಿತ ಸಂಖ್ಯೆ 537ಕ್ಕೆ ಏರಿಕೆ ಯಾಗಿರುವುದಾಗಿ ತಿಳಿಸಿದೆ.
ಕೊರೊನಾ ಪರಿಸ್ಥಿತಿ ಎದುರಿಸಲು ಬಿಜೆಪಿಯಿಂದ 5,000 ಕೋಟಿ ನಿಧಿ ಸಂಗ್ರಹ ಗುರಿ!
April 5, 2020ನವದೆಹಲಿ, ಏ. 4- ಕೊರೊನಾ, ಲಾಕ್‍ಡೌನ್‍ನಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕಾಗಿ ಬಿಜೆಪಿ ತನ್ನ ಸಂಘಟನೆಯ ಶಕ್ತಿಯನ್ನು ಬಳಸಿಕೊಳ್ಳಲು ಮುಂದಾಗಿದೆ. 5000 ಕೋಟಿ ನಿಧಿ ಸಂಗ್ರಹಿಸುವುದಕ್ಕಾಗಿ ಬಿಜೆಪಿ ಗುರಿ ಇಟ್ಟುಕೊಂಡಿದ್ದು, ಕಾರ್ಯಕರ್ತರ ಪಡೆಯನ್ನು ಇದಕ್ಕಾಗಿ ಸಜ್ಜುಗೊಳಿಸುತ್ತಿದೆ. ಬಿಜೆಪಿಯ ಎಲ್ಲಾ ಜಿಲ್ಲಾಧ್ಯಕ್ಷರಿಗೂ ಈ ನಿಟ್ಟಿನಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ರಾಜ್ಯಗಳಿಂದ ಪಿಎಂ-ಕೇರ್ಸ್‍ಗೆ ಬರುತ್ತಿರುವ ದೇಣಿಗೆಯ ಬಗ್ಗೆ ಗಮನ ಹರಿಸುತ್ತಿದ್ದಾರೆ. ದೇಣಿಗೆ, ನಿಧಿ ಸಂಗ್ರಹದ ಕೆಲಸ ಸಮರೋಪಾದಿಯಲ್ಲಿ ನಡೆದಿದ್ದು, ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸ್ವತಃ…
ಲಾಕ್‍ಡೌನ್ ಎಫೆಕ್ಟ್: ಏ.30ರವರೆಗೂ ಬುಕ್ಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ
April 5, 2020ನವದೆಹಲಿ, ಏ.4- ಕೊರೊನಾ ನಿಗ್ರಹಕ್ಕೆ ಘೋಷಿಸಲಾಗಿದ್ದ ಏ.14ರವರೆಗಿನ ಎಲ್ಲಾ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಇತ್ತೀಚೆಗೆ ನಿರ್ಬಂಧಿಸಲಾಗಿತ್ತು. ಆದರೆ, ಮಹತ್ವದ ಬೆಳವಣಿಗೆಯೊಂ ದರಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತರ ರಾಷ್ಟ್ರೀಯ ಹಾರಾಟಗಳಿಗೆ ಟಿಕೆಟ್ ಬುಕ್ಕಿಂಗ್ ನಿಷೇಧವನ್ನು ಏ.30ರವರೆಗೂ ವಿಸ್ತರಿಸಿದೆ. ಇದು ಲಾಕ್‍ಡೌನ್ ಅವಧಿಯ ಬಳಿಕವೂ ಮತ್ತೆ ಒಂದು ವಾರದ ಅವಧಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತಷ್ಟು ದಿನಗಳ ಕಾಲ ಎಲ್ಲಾ ರೀತಿಯ ವಿಮಾನಯಾನ ಸೇವೆಗಳನ್ನು ನಿಷೇಧಿಸಬಹುದು ಎಂಬ ವದಂತಿಗಳು ಹರಡಲು…










