ಮೈಸೂರು,ಏ.4(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಕೊಳಗೇರಿ ನಿವಾಸಿಗಳಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ರಾಜ್ಯ ಸರ್ಕಾರದಿಂದ ಉಚಿತವಾಗಿ ನೀಡುವ ಹಾಲನ್ನು ಶನಿವಾರ ವಿತರಿಸಿದರು. ಮೈಸೂರು ಮಹಾನಗರಪಾಲಿಕೆಯ 21ನೇ ವಾರ್ಡ್‍ನ ಕುದುರೆಮಾಳ ಮತ್ತು ರಾಜರಾಜೇಶ್ವರಿ ನಗರದಲ್ಲಿ ಉಚಿತ ಹಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತ ನಾಡಿದ ಶಾಸಕ ಎಲ್.ನಾಗೇಂದ್ರ, ಮೈಮುಲ್ ಸಹಯೋಗದಲ್ಲಿ ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತ ರಿಸಲಾಗುತ್ತಿದೆ. ಚಾಮರಾಜ ಕ್ಷೇತ್ರದಲ್ಲಿ ಒಟ್ಟು 25 ಕೊಳಗೇರಿಗಳಿದ್ದು, 6149 ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೆ…
ವಿಜಯೇಂದ್ರ ಬಳಗದಿಂದ ಬಡವರಿಗೆ ಔಷಧ ವಿತರಣೆ
April 5, 2020ಮೈಸೂರು, ಏ.4(ಪಿಎಂ)- ಮೈಸೂರಿನ ಜಯನಗರ, ಬೋಗಾದಿ, ಹೆಚ್‍ಡಿ ಕೋಟೆ, ನಂಜನಗೂಡು ಹಾಗೂ ವರುಣಾ ಮತ್ತಿತರೆಡೆ ಬಡವರು, ಕೂಲಿ ಕಾರ್ಮಿಕರು, ಮನೆಗೆಲಸದವರಿಗೆ ಬಿ.ವೈ. ವಿಜಯೇಂದ್ರ ಬಳಗದಿಂದ ಶನಿವಾರ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಮಾತನಾಡಿದ ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಮೈಸೂರು ನಗರ ಹಾಗೂ ತಾಲೂಕು ಮಟ್ಟದಲ್ಲಿ ಔಷಧಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ. ಏ.14ರವರೆಗೂ ಈ ಸೇವೆ ಮುಂದುವರೆಯಲಿದೆ ಎಂದರು. ಮುಖಂಡರಾದ ಮಹದೇವಸ್ವಾಮಿ, ಲಕ್ಷ್ಮೀದೇವಿ, ಆನಂದ್, ನಿಖಿಲ್, ಜೆಸ್ವಿನ್, ನಂದೀಶ್, ಅಪ್ಪು ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಾನೂನು ಸೇವೆಗಳ ಪ್ರಾಧಿಕಾರದಿಂದ ಕೊರೊನಾ ವೈರಸ್ ಜಾಗೃತಿ
April 5, 2020ಮೈಸೂರು, ಏ.4 (ಆರ್‍ಕೆ)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಯುತ್ತಿದೆ. ಮಾರ್ಚ್ 31ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಒಂಟಿಗೋಡಿ ಅವರು ಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಕೋವಿಡ್-19 ಸೋಂಕು ಹರಡದಂತೆ ನಿಯಂತ್ರಿಸುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಟೋರಿಕ್ಷಾದಲ್ಲಿ ಧ್ವನಿವರ್ಧಕದ ಮೂಲಕ ಅರಿವು ಮೂಡಿಸಲಾಗುತ್ತಿದೆ. ತಾಲೂಕು ಕಾನೂನು ಸೇವಾ ಸಮಿತಿಗಳ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಯಂ…
‘ಮೈಸೂರು ಮಿತ್ರ’ ವರದಿಗೆ ಸ್ಪಂದನೆ: ಪ್ರಾಣಿಗಳ ಹಸಿವಿಗೆ ಮಿಡಿಯಿತು ಮಾನವ ಹೃದಯ
April 5, 2020ಬೀದಿನಾಯಿಗಳಿಗೆ ಆಹಾರ ನೀಡಲು ಮುಂದಾದ ಮೈಸೂರಿನ ವಿವಿಧ ಸಂಘ-ಸಂಸ್ಥೆಗಳು ಮೈಸೂರು, ಏ. 4(ಆರ್‍ಕೆ)- ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್‍ಡೌನ್ ಮಾಡಿರುವುದರಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಿದ್ದ ಬೀದಿನಾಯಿಗಳಿಗೆ ಆಹಾರ ಒದಗಿಸಲು ಮೈಸೂರಿನ ಸಂಘ-ಸಂಸ್ಥೆಗಳು ಮುಂದಾಗಿವೆ. ಶನಿವಾರದ ‘ಮೈಸೂರು ಮಿತ್ರ’ ಸಂಚಿಕೆಯಲ್ಲಿ ‘ಆಹಾರವಿಲ್ಲದೆ ಬಳಲುತ್ತಿವೆ ಬೀದಿನಾಯಿಗಳು’ ವರದಿ ಪ್ರಕಟವಾಗುತ್ತಿದ್ದಂತೆಯೇ ಕೆಲ ಸ್ವಯಂ ಸೇವಾ ಸಂಘ ಸಂಸ್ಥೆಗಳು ಹಾಗೂ ಪ್ರಾಣಿ-ಪಕ್ಷಿ ಪ್ರಿಯರು, ಬೀದಿನಾಯಿಗಳಿಗೆ ಬಿಸ್ಕತ್, ಬನ್ ಹಾಗೂ ಅನ್ನಾಹಾರ ಪೂರೈಸಲು ಆರಂಭಿಸಿದ್ದಾರೆ. ನಮ್ಮ ಮೈಸೂರು ಫೌಂಡೇಷನ್ನಿನ ದಶರಥ ಹಾಗೂ ಇತರ ಪದಾಧಿಕಾರಿಗಳು…
ಜುಬಿಲಂಟ್ ಕಾರ್ಖಾನೆ ಆಮದು ಮಾಡಿಕೊಂಡ ಚೀನಾ ಕಂಟೈನರ್‍ನಿಂದ ಕೊರೊನಾ ಸೋಂಕು ಶಂಕೆ
April 4, 2020ಮೈಸೂರು, ಏ.3(ಎಸ್‍ಪಿಎನ್)- ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯಲ್ಲಿ ಚೀನಾದಿಂದ ಆಮದು ಮಾಡಿಕೊಂಡಿರುವ ಕಂಟೈನರ್ ಮೂಲಕ ಕೊರೊನಾ ಸೊಂಕು ಹರಡಿರಬಹುದು ಎಂದು ಜಿಲ್ಲಾಧಿಕಾರಿಗಳ ತಮ್ಮ ಬಳಿ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನಲ್ಲಿ ನೋವಿಲ್ ಕೋವಿಡ್-19 ತೀವ್ರ ವಾಗಿ ಹರುಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಹಾಗೂ ಇತರೆ ಅಧಿಕಾರಿಗಳಿಂದ ಸೋಂಕು ತಡೆಗಟ್ಟುವ ಬಗ್ಗೆ ಮಾಹಿತಿ ಪಡೆದು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಜುಬಿಲಂಟ್ ಕಾರ್ಖಾನೆಯವರು…
ನಿಜಾಮುದ್ದೀನ್ ಮರ್ಕಜ್ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ 13 ಮಂದಿಗೆ ಕೊರೊನಾ ವೈರಸ್ ಸೋಂಕು
April 4, 2020ಬೆಂಗಳೂರು,ಏ.3-ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಮೂಲದವರ ಪೈಕಿ 13 ಮಂದಿಗೆ ಕೋವಿಡ್ 19 ವೈರಸ್ ಸೋಂಕು ತಗುಲಿರು ವುದು ಪತ್ತೆಯಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ವೈರಸ್ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಜವಾಬ್ದಾರಿ ಹೊತ್ತ ಬಳಿಕ ಮೊದಲ ಸುದ್ದಿಗೋಷ್ಟಿ ಯನ್ನುದ್ದೇಶಿಸಿ ಮಾತನಾಡಿದ ಸುರೇಶ್‍ಕುಮಾರ್, ರಾಜ್ಯದಿಂದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಗೆ ಪಾಲ್ಗೊಳ್ಳಲು ತೆರಳಿದ್ದವರ ಪೈಕಿ 13 ಮಂದಿಗೆ ಕೊರೋನಾ ವೈರಸ್ ತಗುಲಿದೆ. ಈ…
`ದಾಸೋಹ ಕಂಟ್ರೋಲ್ ರೂಂ’ ಕಾರ್ಮಿಕರಿಗೆ ಆಹಾರ ಒದಗಿಸುವ ಪಾರದರ್ಶಕ ವ್ಯವಸ್ಥೆ: ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ
April 4, 2020ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಡ ಕಾರ್ಮಿಕರಿಗೆ ಆಹಾರ ಒದಗಿಸುವ ‘ದಾಸೋಹ’ ಕಾರ್ಯಕ್ರಮ ತಂತ್ರಜ್ಞಾನದ ಉತ್ತಮ ಬಳಕೆಗೆ ಉದಾಹರಣೆ. ಇಂಥ ಪಾರದರ್ಶಕ ವ್ಯವಸ್ಥೆ ಎಲ್ಲ ಇಲಾಖೆ ಗಳಿಗೂ ಮಾದರಿ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಇಂದಿಲ್ಲಿ ತಿಳಿಸಿದ್ದಾರೆ. ವಾರ್ತಾ ಭವನದ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರ ದಲ್ಲಿ ನೂತನವಾಗಿ ರೂಪಿಸಲಾಗಿರುವ `ದಾಸೋಹ ಕಂಟ್ರೋಲ್ ರೂಂ’ಗೆ ಶುಕ್ರವಾರ ಚಾಲನೆ ನೀಡಿದ ನಂತರ ಡಾ. ಅಶ್ವತ್ಥ ನಾರಾಯಣ ಮಾಧ್ಯಮಗಳ ಜತೆ ಮಾತನಾಡಿದರು. ಕೊರೊನಾ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲಿ ಕಾರ್ಮಿಕ ಸಚಿವ ಶಿವರಾಮ್…
ಶಾರದಾದೇವಿನಗರದಲ್ಲಿ ಬಿಜೆಪಿಯಿಂದ ದಿನಸಿ ವಿತರಣೆ
April 4, 2020ಮೈಸೂರು,ಏ.3(ವೈಡಿಎಸ್)-ಲಾಕ್‍ಡೌನ್ ಪರಿಣಾಮ ಬಹಳ ಸಂಕಷ್ಟಕ್ಕೆ ಸಿಲುಕಿ ರುವ ಚಾಮುಂಡೇಶ್ವರಿ ಕ್ಷೇತ್ರದ ಬಡಜನರನ್ನು ಗುರುತಿಸಿ, ಬಿಜೆಪಿ ಚಾಮುಂಡೇಶ್ವರಿ (ನಗರ) ಮಂಡಲ ವತಿಯಿಂದ ದಿನಸಿ, ತರಕಾರಿಗಳನ್ನು ಶುಕ್ರವಾರ ವಿತರಿಸಲಾಯಿತು. ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಶಾರದಾದೇವಿ ನಗರ ಮತ್ತು ಸುತ್ತಮುತ್ತಲಿನ 100 ಜನರಿಗೆ 5 ಕೆಜಿ ಅಕ್ಕಿ, 1 ಕೆಜಿ ಬೇಳೆ, ಎಣ್ಣೆ, ಉಪ್ಪು, ಸಕ್ಕರೆ, ಟೀಪುಡಿ, ರವೆ, ಸೋಪು, ಈರುಳ್ಳಿ, ಆಲೂಗೆಡ್ಡೆ, ಟೊಮೆಟೊ ಮೊದಲಾದ ದಿನಸಿ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಯಿತು. ಜತೆಗೆ 300 ಮಂದಿಗೆ ತರಕಾರಿ ನೀಡಲಾಯಿತು. ಈ…
ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಶಾಸಕ ಜಿಟಿಡಿ ಸೂಚನೆ
April 4, 2020ಮೈಸೂರು, ಏ. 3- ಕೊರೊನಾ ಹರಡದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು. ಶುಕ್ರವಾರ ಅವರು ಶ್ರೀರಾಂಪುರ ಗ್ರಾಮ ಪಂಚಾ ಯಿತಿ ಪರಸಯ್ಯನಹುಂಡಿ ಗ್ರಾಮದಲ್ಲಿ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮುಡಾ ವತಿಯಿಂದ ಅಗ್ನಿಶಾಮಕ ದಳದವರ ಸಹಯೋಗದೊಂದಿಗೆ ರಸಾ ಯನಿಕ ಸಿಂಪಡಿಸಲು ಚಾಲನೆ ನೀಡಿ ಮಾತನಾಡಿದರು. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಎಲ್ಲಾ ಹಳ್ಳಿಗಳಿಗೆ ಔಷಧಿಯನ್ನು ಸಿಂಪಡಿಸಲು ಕ್ರಮ ಕೈಗೊಳ್ಳಲಾಗಿದೆ, ಅದೇ…
ಆಹಾರವಿಲ್ಲದೆ ಬಳಲುತ್ತಿವೆ ಬೀದಿ ನಾಯಿಗಳು
April 4, 2020ಮೈಸೂರು, ಏ.3(ಆರ್‍ಕೆ)- ಕೋವಿಡ್-19 ಮಹಾಮಾರಿ ಸೋಂಕು ನಿಯಂ ತ್ರಿಸಲು ದೇಶವನ್ನೇ ಲಾಕ್‍ಡೌನ್ ಮಾಡಿ ರುವುದರಿಂದ ಜನ ಜೀವನವಷ್ಟೇ ಅಲ್ಲದೆ, ಬೀದಿ ನಾಯಿಗಳೂ ಆಹಾರವಿಲ್ಲದೇ ಬಳ ಲುತ್ತಿವೆ. ಬಡವರು, ನಿರ್ಗತಿಕರು, ನಿರಾ ಶ್ರಿತರಿಗೆ ಜಿಲ್ಲಾಡಳಿತ, ಸಂಘ-ಸಂಸ್ಥೆಗಳು, ಸ್ವಯಂ ಸೇವಕರು ಆಹಾರ, ನೀರು, ದಿನಸಿ ಪದಾರ್ಥಗಳನ್ನು ಪೂರೈಸುತ್ತಿರುವುದ ರಿಂದ ಜನರು ಹೇಗೋ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಅನ್ನ-ನೀರು ಸಿಗದವರು ಅಲ್ಲಿ-ಇಲ್ಲಿ ಬೇಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಾರೆ. ಆದರೆ ಮೂಕ ಪ್ರಾಣಿಗಳು ಏನು ಮಾಡಬೇಕು. ಅದರಲ್ಲೂ ಬೀದಿ ನಾಯಿಗಳ ಪಾಡಂತೂ…










