ಬೆಂಗಳೂರು, ಏ.4- ಲಾಕ್‍ಡೌನ್ ವೇಳೆ ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಹುಳಿಮಾವು ಠಾಣೆ ಪೆÇಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಳಿಮಾವಿನ ರವಿ(24), ರೋಹಿತ್(25) ಮತ್ತು ಪ್ರವೀಣ್(24) ಬಂಧಿತ ಆರೋಪಿ ಗಳು. ಬಂಧಿತರು ಏಪ್ರಿಲ್ 1ರಂದು ಸಂಜೆ 6 ಗಂಟೆ ವೇಳೆಯಲ್ಲಿ ಹುಳಿಮಾವು ಠಾಣೆಯ ಪೇದೆ ಹೇಮಾ ಮೇಲೆ ಇವರು ಹಲ್ಲೆ ನಡೆಸಿದ್ದರು. ಇದರಿಂದ ಹೇಮಾ ಅವರ ಮುಖ ಮತ್ತು ಕಣ್ಣಿಗೆ ಗಾಯಗಳಾಗಿವೆ ಎಂದು ಪೆÇಲೀಸರು ತಿಳಿಸಿದ್ದಾರೆ. ದೊಡ್ಡಕಮ್ಮನಹಳ್ಳಿಯ ಜುಂಜಪ್ಪ ಸರ್ಕಲ್ ಬಳಿ…
ಲಾಕ್‍ಡೌನ್ ವೇಳೆ ಡೋರ್‍ಲಾಕ್ ಮುರಿದು ಕಳವು
April 5, 2020ಮೈಸೂರು, ಏ.4(ಎಂಕೆ)- ಕೊರೊನಾ ಭಯದಿಂದಲೋ, ಲಾಕ್‍ಡೌನ್ ಕಾರಣ ಎಲ್ಲೆಲ್ಲೂ ಪೊಲೀಸ್ ತಪಾಸಣೆ ಹೆಚ್ಚಾಗಿದ್ದರಿಂದಲೋ ಏನೋ ಕಳೆದು ಎರಡು ವಾರಗಳಿಂದ ಕಳವು ಪ್ರಕರಣಗಳು ಇಲ್ಲವಾಗಿದ್ದವು. ಇದೀಗ ಮೈಸೂರಿನಲ್ಲಿ ಮತ್ತೆ ಮನೆಗಳವು ಶುರುವಾಗಿದೆ. ನಗರದ ಮೇಟಗಳ್ಳಿಯ ಮನೆಯೊಂದರ ಡೋರ್‍ಲಾಕ್ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಮೇಟಗಳ್ಳಿ ನಿವಾಸಿ ನಾಗೇಂದ್ರ ಅವರ ಮನೆಯಲ್ಲಿ ಚಿನ್ನಾಭರಣ ಕಳವಾಗಿದೆ. ನಾಗೇಂದ್ರ ಮಾ.25ರಂದು ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಪತ್ನಿ, ಮಕ್ಕಳೊಂದಿಗೆ ಶ್ಯಾದನಹಳ್ಳಿಗೆ ತೆರಳಿದ್ದರು. ಏ.3ರಂದು ಮನೆಗೆ ವಾಪಸ್ ಬಂದು ನೋಡಿದಾಗ…
ವಸ್ತು ಪ್ರದರ್ಶನ ತರಕಾರಿ ಮಾರುಕಟ್ಟೆಯಲ್ಲಿ `ಡಿಸ್ ಇನ್ಫೆಕ್ಷನ್ ಟನಲ್’
April 5, 2020ಮೈಸೂರು,ಏ.4(ಎಂಟಿವೈ)- ದಸರಾ ವಸ್ತು ಪ್ರದರ್ಶನ ಮೈದಾನದ ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ಬರುವ ರೈತರು ಮತ್ತು ಖರೀದಿದಾರರ ಆರೋಗ್ಯ ರಕ್ಷಣೆ ಗಾಗಿ ನಿರ್ಮಿಸಿರುವ `ಡಿಸ್ ಇನ್ಫೆಕ್ಷನ್ ಟನಲ್’(ವೈರಾಣು ನಾಶಕ ಸುರಂಗ) ಸೇವೆಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಶನಿವಾರ ಚಾಲನೆ ನೀಡಿದರು. ವಸ್ತು ಪ್ರದರ್ಶನ ಮೈದಾನದ ಮಾರು ಕಟ್ಟೆಯಲ್ಲಿ ತಾಜಾ ಹಣ್ಣು, ತರಕಾರಿ ಸಿಗು ವುದರಿಂದ ಜನ ಮುಗಿಬೀಳುತ್ತಿದ್ದಾರೆ. ಇಲ್ಲಿಗೆ ಬರುವ ರೈತರು, ಗ್ರಾಹಕರನ್ನು ಸ್ಯಾನಿ ಟೈಸೇಷನ್‍ಗೆ ಒಳಪಡಿಸಲು 2.5 ಮೀ. ಉದ್ದ, 4 ಅಡಿ ಅಗಲ, 7…
150 ಮನೆಗೆ ಹಣತೆ ವಿತರಿಸಿದ ಅಪೂರ್ವ ಸ್ನೇಹ ಬಳಗ
April 5, 2020ಮೈಸೂರು,ಏ.4(ಎಂಟಿವೈ)- ಕೊರೊನಾ ವಿರುದ್ಧದ ಈ ಹೋರಾಟದ ಕಾಲದಲ್ಲಿ `ನಾವೆಲ್ಲಾ ಒಂದು’ ಎಂಬ ಸಂದೇಶ ಸಾರಲು ಏ.5ರ ರಾತ್ರಿ 9ಕ್ಕೆ ಮನೆಯ ಹೊರಗೆ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ನೀಡಿರುವ ಕರೆಗೆ ಸ್ಪಂದಿಸುವಂತೆ ಮನವಿ ಮಾಡಿದ ಅಪೂರ್ವ ಸ್ನೇಹ ಬಳ ಗದ ಸದಸ್ಯರು, ಶನಿವಾರ ಚಾಮುಂಡಿಪುರಂ ಹಾಗೂ ಮೇದರಕೇರಿಯಲ್ಲಿ 150 ಮನೆ ಗಳಿಗೆ ಜೋಡಿ ಮಣ್ಣಿನ ಹಣತೆ ವಿತರಿಸಿ ದರು. ಭಾನುವಾರ ರಾತ್ರಿ 9ಕ್ಕೆ 9 ನಿಮಿಷ ಪ್ರತಿ ಮನೆಯವರೂ ಎಲ್ಲಾ ಲೈಟ್ ಆರಿಸಿ, ಮಣ್ಣಿನ ದೀಪ, ಮೇಣದ…
ರಾಜಸ್ಥಾನದ 170 ಕಾರ್ಮಿಕರಿಗೆ `ನಮ್ಮ ಮೈಸೂರು ಪ್ರತಿಷ್ಠಾನ’ದ ನೆರವು
April 5, 2020ಮೈಸೂರು,ಏ.4(ವೈಡಿಎಸ್)- ಮೈಸೂರು ಸಿದ್ದಾರ್ಥನಗರದ ಸಿಐಟಿಬಿ ಛತ್ರದಲ್ಲಿ ಉಳಿದು ಕೊಂಡಿರುವ ರಾಜಸ್ಥಾನ ಮೂಲದ 170 ಮಂದಿ ನಿರಾಶ್ರಿತರಿಗೆ ನಮ್ಮ ಮೈಸೂರು ಫೌಂಡೇಷನ್‍ನಿಂದ ಶನಿವಾರ ದಿನಸಿ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು. ಲಾಕ್‍ಡೌನ್ ಹಿನ್ನೆಲೆ ಮೈಸೂರು ಸೇರಿದಂತೆ ಸುತ್ತಲಿನ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ 170 ಕಾರ್ಮಿಕರು 3 ದಿನಗಳ ಹಿಂದೆ ವಾಹನದಲ್ಲಿ ರಾಜಸ್ಥಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ವಿಷಯ ತಿಳಿದ ಜಿಲ್ಲಾಡಳಿತ ಅವರನ್ನು ತಡೆದು ಸಿದ್ದಾರ್ಥನಗರದ ಸಿಐಟಿಬಿ ಛತ್ರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಖಾಸಗಿ ಸಂಸ್ಥೆ ಯೊಂದು ಗ್ಯಾಸ್‍ಸ್ಟೌವ್,…
ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಮನವಿ
April 5, 2020ಮೈಸೂರು, ಏ.4(ಎಸ್‍ಬಿಡಿ)- ಕೊರೊನಾ ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸುತ್ತಿರುವ ಮೈಸೂರು ಜಿಲ್ಲಾಡಳಿತಕ್ಕೆ ಪ್ರತಿಯೊಬ್ಬರೂ ಸಹಕರಿಸ ಬೇಕೆಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಕೋವಿಡ್-19 ಸೋಂಕಿ ತರ ಸಂಖ್ಯೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವ ದಲ್ಲಿ ಆರೋಗ್ಯ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮುದಾಯ ರಕ್ಷಣೆಗೆ ಹಗಲಿ ರುಳು ಕೆಲಸ ಮಾಡುತ್ತಿದ್ದಾರೆ. ರೋಗಿಗಳ ಗುಣಪಡಿಸಲು ವೈದ್ಯರು ಅಪಾಯ ಲೆಕ್ಕಿಸದೆ…
ಮನೆ ಬಾಗಿಲಿಗೇ ತಲುಪಿಸುತ್ತೇವೆ ಎಂದರೂ ಪಡಿತರ ಅಂಗಡಿ ಮುಂದೆ ಸಾಲುಗಟ್ಟಿದ ಜನ!
April 5, 2020ಮೈಸೂರು,ಏ.4(ಪಿಎಂ)- ಲಾಕ್ ಡೌನ್‍ನಿಂದಾಗಿ ಜನರು ಮನೆಯಿಂದ ಹೊರಬರಲಾಗದಿರುವ ಹಿನ್ನೆಲೆಯಲ್ಲಿ ಪಡಿತರ ಪದಾರ್ಥಗಳನ್ನು ಮನೆ ಬಾಗಿ ಲಿಗೇ ತಲುಪಿಸುವ ಕಾರ್ಯಕ್ಕೆ ಜಿಲ್ಲಾಡ ಳಿತ ಮುಂದಾಗಿದ್ದರೂ, ನಗರದ ಹಲ ವೆಡೆ ಪಡಿತರ ಅಂಗಡಿಗಳ ಮುಂದೆ ಸಾರ್ವಜನಿಕರು ಸಾಲುಗಟ್ಟಿ ನಿಲ್ಲುವುದನ್ನು ಮುಂದುವರೆಸಿದ್ದಾರೆ! ಶ್ರೀರಾಮಪುರದ ಪಡಿತರ ಅಂಗಡಿ ಯಲ್ಲಿ ಶನಿವಾರ ಜನರು ದೊಡ್ಡ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು. ಮೈಸೂರು ಜಿಲ್ಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ಪದಾರ್ಥಗಳನ್ನು ಮನೆ ಬಾಗಿಲಿಗೇ ತಲುಪಿಸುವ ಕಾರ್ಯಕ್ಕೆ ಶುಕ್ರವಾರವಷ್ಟೇ ಚಾಲನೆ ನೀಡಲಾಗಿದೆ. ಹೀಗಿದ್ದರೂ…
ಪ್ರಧಾನಿ ಕರೆಯಲ್ಲಿ ವೈಜ್ಞಾನಿಕ ಹಿನ್ನೆಲೆ; ದೀಪ ಬೆಳಗಿದರೆ ಕೊರೊನಾ ಅಂತ್ಯ!
April 5, 2020ಮೈಸೂರು, ಏ.4(ಪಿಎಂ)- ದೀಪ ಹಚ್ಚುವುದರ ಹಿಂದೆ ವೈಜ್ಞಾನಿಕ ಕಾರಣ ವಿದ್ದು, ದೀಪ ಹಚ್ಚಿದರೆ ವೈರಸ್‍ಗಳು ಆ ದೀಪದ ಬಳಿ ಬಂದು ಶಾಖ ತಡೆಯಲಾರದೆ ಸಾಯುತ್ತವೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ. ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿ ಕಾರದ ಆವರಣ ಮತ್ತು ಲಲಿತಮಹಲ್ ಮೈದಾನದಲ್ಲಿ ಮೇಣದ ಬತ್ತಿ, ದೀಪ ಮತ್ತು ಮಾಸ್ಕ್‍ಗಳನ್ನು ವಿತರಿಸಿ ಅವರು ಮಾತನಾಡಿದರು. ಏ.5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮೊಂಬತ್ತಿ, ಹಣತೆ ಅಥವಾ ಮೊಬೈಲ್ ಟಾರ್ಚ್ ಬೆಳಗಿಸಿ ಇಡೀ ದೇಶ ಒಗ್ಗಟ್ಟು…
ಪೊಲೀಸರಿಂದಲ್ಲ, ಕೊರೊನಾ ವೈರಸ್‍ನಿಂದ ಬಚಾವಾಗಿ…
April 5, 2020ಮೈಸೂರು, ಏ. 4(ಆರ್‍ಕೆ)- ನೀವು ಪೊಲೀಸ ರಿಂದ ತಪ್ಪಿಸಿಕೊಳ್ಳಬೇಕಿಲ್ಲ. ಆದರೆ ನಿಮ್ಮ ಜೀವನ ವನ್ನೇ ನಾಶ ಮಾಡುವ ಕೊರೊನಾ ವೈರಸ್ ಸೋಂಕಿನಿಂದ ಪಾರಾಗಿ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ನಾಗರಿಕರಿಗೆ ಸಲಹೆ ನೀಡಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಕೋವಿಡ್-19 ಸೋಂಕು ಹರಡ ದಂತೆ ತಡೆಯುವ ಏಕೈಕ ಉದ್ದೇಶದಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿರುವಾಗ ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡಿ ನಿಯಮ ಉಲ್ಲಂಘಿಸುತ್ತಿರುವುದು ಸರಿಯಲ್ಲ ಎಂದರು. ನೀವು ಪೊಲೀಸರಿಗೆ…
ಕರ್ನಾಟಕದಲ್ಲಿ ಜುಬಿಲಂಟ್ ಲೈಫ್ ಸೈನ್ಸಸ್‍ನಿಂದ ಆರೋಗ್ಯ, ಸುರಕ್ಷತಾ ಸಾಮಗ್ರಿಗಳ ವಿತರಣೆ
April 5, 2020ಮೈಸೂರು,ಏ.4-ಕೋವಿಡ್-19 ಬಿಕ್ಕಟ್ಟು ಪರಿಹಾರಕ್ಕೆ ಕರ್ನಾ ಟಕ ಸರ್ಕಾರ ಕೈಗೊಂಡಿರುವ ಆರೋಗ್ಯ ಮತ್ತು ಸುರಕ್ಷತಾ ಸೇವೆಗಳಿಗೆ ಸಂಪೂರ್ಣ ಬೆಂಬಲ ನೀಡು ವುದಾಗಿ ಸಮಗ್ರ ಜಾಗತಿಕ ಫಾರ್ಮಾಸ್ಯೂಟಿಕಲ್ ಮತ್ತು ಜೀವ ವಿಜ್ಞಾನಗಳ ಕಂಪನಿಯಾಗಿರುವ ಜುಬಿಲಂಟ್ ಲೈಫ್ ಸೈನ್ಸಸ್ ಲಿಮಿಟೆಡ್ ಪ್ರಕಟಿಸಿದೆ. ನಮ್ಮ ಸಮುದಾಯ, ನೌಕರರ ಆರೋಗ್ಯ ಮತ್ತು ಸುರಕ್ಷತೆಗೆ ಜುಬಿಲಂಟ್ ಲೈಫ್ ಸೈನ್ಸಸ್ ಹೆಚ್ಚಿನ ಆದ್ಯತೆ ನೀಡುತ್ತಿದೆ. ಎಲ್ಲರೂ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆಯೇ ಎಂಬುದನ್ನು ನಿರಂತರವಾಗಿ ಖಾತರಿಪಡಿಸಿಕೊಳ್ಳುತ್ತಿದೆ. ಇದಲ್ಲದೇ, ಸರ್ಕಾರ ನೀಡಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸು ತ್ತಿದ್ದಾರೆಯೇ ಎಂಬುದನ್ನು…










