ಮೈಸೂರು, ಏ.3 (ಆರ್‍ಕೆ)- ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಕೋಳಿಮಾಂಸ ಮಾರಾಟ ಮೈಸೂರಿನಲ್ಲಿ ಇಂದಿನಿಂದ ಪುನರಾರಂಭವಾಯಿತು. ಮೈಸೂರು ಮಹಾನಗರಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ವಾರದಲ್ಲಿ 3 ದಿನ ಕೋಳಿಮಾಂಸದ ಅಂಗಡಿ ಗಳನ್ನು ತೆರೆದು ಮಾರಾಟ ಮಾಡಲು ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಬಹುತೇಕ ಕೋಳಿ ಅಂಗಡಿಗಳನ್ನು ತೆರೆಯಲಾಗಿದೆ. ಮಂಗಳವಾರ, ಶುಕ್ರವಾರ ಮತ್ತು ಭಾನು ವಾರ ಗಳಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಕೋಳಿ ಮಾಂಸ ವನ್ನು ಮಾರಾಟ ಮಾಡಬಹುದು ಎಂದು…
ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಉಚಿತ ಔಷಧ ವಿತರಣೆ
April 4, 2020ಮೈಸೂರು,ಏ.3(ಎಂಟಿವೈ)-ಬಿ.ವೈ. ವಿಜಯೇಂದ್ರ ಅಭಿಮಾನಿಗಳು ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹ ದೇವ ಸ್ವಾಮಿ ನೇತೃತ್ವದಲ್ಲಿ ಮೈಸೂರಿನ ಕುವೆಂಪು ನಗರದ ಹುಡ್ಕೋ ಬಡಾವಣೆ, ಶಾರದಾ ದೇವಿನಗರ ಸೇರಿದಂತೆ ವಿವಿಧೆಡೆ ಅನಾ ರೋಗ್ಯಪೀಡಿತರಿಗೆ ಉಚಿತವಾಗಿ ಔಷಧಿ ವಿತರಣೆ ಮಾಡಿದರು. ನೊವೆಲ್ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಔಷಧಿ ಪಡೆಯಲಾಗದೆ ಸಂಕಷ್ಟಕ್ಕೀಡಾಗಿರುವ ರೋಗಿಗಳಿಗೆ ಔಷಧಿ ವಿತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮೈಸೂರಲ್ಲಿ ಬಿ.ವೈ.ವಿಜಯೇಂದ್ರ ಅಭಿ ಮಾನಿಗಳು ಕಾರ್ಯಪ್ರವೃತ್ತರಾಗಿ ವಿವಿ ಧೆಡೆ ರೋಗಿಗಳಿಗೆ ಅಗತ್ಯವಿರುವ ಔಷಧಿ ಸರಬರಾಜು ಮಾಡಿದರು….
ಪಾಲಿಕೆಯಿಂದ 7 ಸಾವಿರ ನಿರಾಶ್ರಿತರಿಗೆ ನಿತ್ಯ ಆಹಾರ
April 4, 2020ಮೈಸೂರು, ಏ.3 (ಆರ್‍ಕೆಬಿ)- ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು, ಪ್ರವಾಸಿಗರು ನಿರಾಶ್ರಿತರಾಗಿದ್ದು, ಮೈಸೂರಿನ ವಿವಿಧೆಡೆ ತೆರೆಯಲಾಗಿರುವ ನಿರಾಶ್ರಿತ ಕೇಂದ್ರಗಳು ಮತ್ತು ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ 7,300 ಮಂದಿಗೆ ಮೈಸೂರು ಮಹಾ ನಗರಪಾಲಿಕೆಯಿಂದ ಕಳೆದ 4 ದಿನಗಳಿಂದ ಆಹಾರ ವಿತರಣೆ ಮಾಡಲಾಗುತ್ತಿದೆ. ನಗರದಲ್ಲಿ ಹೋಟೆಲ್‍ಗಳು ಮುಚ್ಚಿರು ವುದರಿಂದ ಅಸಂಘಟಿತ ವಲಯದ ಕಾರ್ಮಿಕ ರಿಗೆ ಆಹಾರದ ಸಮಸ್ಯೆ ಉಂಟಾಗಿದೆ. ಜಿಲ್ಲಾಧಿಕಾರಿ, ಮೇಯರ್, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ವಲಯ ಕಚೇರಿ ವ್ಯಾಪ್ತಿಯಲ್ಲಿ ನಿರ್ದಿಷ್ಟ…
ಸ್ಥಗಿತಗೊಂಡಿರುವ ವಿವಿಧ ಇಲಾಖೆ ವಾಹನಗಳ ಆರೋಗ್ಯ ಇಲಾಖೆಗೆ ನೀಡಲು ಸಲಹೆ
April 4, 2020ಬೆಂಗಳೂರು,ಏ.3(ಕೆಎಂಶಿ)- ಈಗ ದೇಶದಾದ್ಯಂತ ಲಾಕ್‍ಡೌನ್ ಆಗಿರುವುದರಿಂದ ಅನೇಕ ಇಲಾಖೆಗಳಲ್ಲಿ ಪೂರ್ಣಪ್ರಮಾಣದ ಕಚೇರಿ ಕೆಲಸಗಳು ನಡೆ ಯುತ್ತಿಲ್ಲ. ಹೀಗಾಗಿ ಆಯಾ ಇಲಾಖೆ ಗಳಲ್ಲಿರುವ ವಾಹನಗಳು ಖಾಲಿ ಇರುವುದರಿಂದ ಆರೋಗ್ಯ ಇಲಾ ಖೆಗೆ ಅಗತ್ಯವಾದ ವಾಹನ ನೀಡಿ ಸಹಕರಿಸಿ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ. ಆದರೆ ಕೊರೊನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಈಗಲೂ ಸಹ ಸಮರೋಪಾದಿಯಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿರುವುದರಿಂದ ಈ ಇಲಾಖೆ ಗಳಿಗೆ ಹೆಚ್ಚಿನ ವಾಹನಗಳ ಅಗತ್ಯಗಳಿವೆ. ಆದ್ದರಿಂದ…
ಕೋವಿಡ್-19: ಪಿಎಂ ಪರಿಹಾರ ನಿಧಿಗೆ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ 1.08 ಕೋಟಿ ರೂ. ದೇಣಿಗೆ
April 4, 2020ಮೈಸೂರು, ಏ.3(ಆರ್‍ಕೆಬಿ)- ಕೋವಿಡ್-19 ವಿರುದ್ಧ ಹೋರಾಟದಲ್ಲಿ ಭಾರತ ಸರ್ಕಾರವನ್ನು ಬೆಂಬಲಿಸಿ ಮೈಸೂ ರಿನ ಎನ್.ಆರ್. ಗ್ರೂಪ್‍ನ ಸೈಕಲ್ ಪ್ಯೂರ್ ಅಗರಬತ್ತಿ ಕಂಪನಿಯು `ಸಿಟಿಜನ್ ಅಸಿ ಸ್ಟೆನ್ಸ್ ಅಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುವೇಷನ್-ಪಿಎಂ ರಿಲೀಫ್ ಫಂಡ್’ಗೆ 1.08 ಕೋಟಿ ರೂ. ದೇಣಿಗೆ ನೀಡಿದೆ. ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಸಕ್ರಿಯವಾಗಿ ನೌಕರರ ಬೆಂಬಲಕ್ಕೆ ನಿಂತಿರುವ ಎನ್.ಆರ್.ಗ್ರೂಪ್‍ನ ಸೈಕಲ್ ಪ್ಯೂರ್ ಅಗರಬತ್ತಿ ಕಂಪನಿಯು ಇಂದಿನ ಜಾಗತಿಕ ಬಿಕ್ಕಟ್ಟಿನ ಸಂದರ್ಭ ದಲ್ಲಿ ಮೈಸೂರಿನ ಸರ್ಕಾರಿ ಆಸ್ಪತ್ರೆಗೆ 5 ವೆಂಟಿಲೇಟರ್‍ಗಳ ಕೊಡುಗೆ…
ವೈದ್ಯಕೀಯ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಗೃಹ ಇಲಾಖೆ ಸೂಚನೆ
April 4, 2020ಎಲ್ಲಾ ರಾಜ್ಯಗಳ ಡಿಜಿಪಿಗಳಿಗೆ ಪತ್ರ ಬೆಂಗಳೂರು, ಏ.3 (ಕೆಎಂಶಿ)- ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಸೂಚನೆ. ದೇಶದ ಹಲವೆಡೆ ವೈದ್ಯರು ಹಾಗೂ ಇತರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ಗಮನಕ್ಕೆ ಬಂದಿವೆ. ಈ ಬಗ್ಗೆ ಗೃಹ ಕಾರ್ಯದರ್ಶಿ ಎಲ್ಲ ರಾಜ್ಯಗಳ ಡಿಜಿಪಿಗಳಿಗೆ ನಿರ್ದೇಶನ ನೀಡಿದ್ದು ಕಠಿಣ ಕ್ರಮ ಜಾರಿಗೆ ಆದೇಶಿಸಿದೆ. ದೇಶದಲ್ಲಿ ಇದುವರೆಗೆ 2301 ಕೊರೊನಾ…
11ನೇ ದಿನವೂ ಬಡಜನರಿಗೆ ಆಹಾರ ವಿತರಿಸಿದ ಮಾಜಿ ಶಾಸಕ ಎಂಕೆಎಸ್
April 4, 2020ಮೈಸೂರು, ಏ.3(ಆರ್‍ಕೆಬಿ)- ಕೋವಿಡ್ -19 ಹಾವಳಿಯಿಂದಾಗಿ ಇಡೀ ದೇಶ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ನಿರಾಶ್ರಿತರು, ಕೂಲಿ ಕಾರ್ಮಿ ಕರು, ಬಡಜನರಿಗೆ ನೆರವಾಗುವ ದೃಷ್ಟಿ ಯಿಂದ ಸತತವಾಗಿ 11ನೇ ದಿನವಾದ ಶುಕ್ರ ವಾರವೂ ಮಾಜಿ ಶಾಸಕ ಎಂಕೆ. ಸೋಮಶೇಖರ್ ಮೈಸೂರಿನ ಧರ್ಮ ಸಿಂಗ್ ಕಾಲೋನಿ, ದೇವರಾಜ ಅರಸು ಕಾಲೋನಿ, ಹೊಸೂರಿನಲ್ಲಿನ 1500ಕ್ಕೂ ಹೆಚ್ಚು ಜನರಿಗೆ ಮಾಸ್ಕ್, ಕುಡಿಯುವ ನೀರು, ಆಹಾರದ ಪೊಟ್ಟಣಗಳನ್ನು ವಿತ ರಿಸಿದರು. ಈ ಸಂದರ್ಭ ಮುಖಂಡರಾದ ಗಣೇಶ್, ರಾಮು, ಪರಮೇಶ್ ವಸಂತ ಕುಮಾರ್, ಹರೀಶ್, ಬಾಬು,…
ಕೊರೊನಾ ತಡೆ ಕಾರ್ಯಾಚರಣೆಗೆ ಹಣದ ಕೊರತೆ
April 4, 2020ಬೆಂಗಳೂರು,ಏ.3(ಕೆಎಂಶಿ)- ಸರ್ಕಾರಿ ನೌಕರರ ವೇತನ ನೀಡುವುದು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಹಣ ಒದಗಿಸಲು ಸರ್ಕಾರದ ಉನ್ನತಾಧಿಕಾರಿಗಳು ಹಿಂದೇಟು ಹಾಕುತ್ತಿರುವ ಅಂಶ ಬೆಳಕಿಗೆ ಬಂದಿದೆ. ಕೊರೊನಾ ಸಂಕಷ್ಟದಿಂದ ಎದುರಾಗಿರುವ ಆರ್ಥಿಕ ಸಂಕಷ್ಟದ ಕಾರಣಕ್ಕಾಗಿ ಸರ್ಕಾರದ ಬೊಕ್ಕ ಸಕ್ಕೆ ಬರುತ್ತಿರುವ ತೆರಿಗೆಯ ಪ್ರಮಾಣ ಕಡಿಮೆ ಯಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ವಿಕೋ ಪಕ್ಕೆ ಹೋಗಲಿದೆ ಎಂದು ಆತಂಕಗೊಂಡಿರುವ ಉನ್ನತಾಧಿಕಾರಿಗಳ ಪಡೆ ಸದ್ಯದ ಸಂಕಷ್ಟಕ್ಕೆ ನಿರೀಕ್ಷಿತ ಹಣ ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತಿದೆ. ಇದರ ಬದಲು ಕೇಂದ್ರದ ನೆರವು ಮತ್ತು…
ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್‍ನಿಂದ ಮಾಸ್ಕ್, ಗ್ಲೌಸ್ ಕೊಡುಗೆ
April 4, 2020ಮೈಸೂರು,ಏ.3(ಎಂಟಿವೈ)- ಕೋವಿಡ್-19 ವೈರಾಣು ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಸಿಬ್ಬಂದಿ ಹಾಗೂ ಅಗತ್ಯ ವುಳ್ಳವರಿಗಾಗಿ ಟಿವಿಎಸ್ ಮೋಟಾರ್ ಕಂಪನಿಯ ಸಾಮಾಜಿಕ ಸೇವಾ ವಿಭಾಗದ `ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್’ನಿಂದ ಕೊಡುಗೆಯಾಗಿ 10 ಸಾವಿರ ಮಾಸ್ಕ್ ಹಾಗೂ 3 ಸಾವಿರ ಗ್ಲೌಸ್‍ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಮೈಸೂರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್ ಅವರಿಗೆ ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರ ಸಮ್ಮುಖದಲ್ಲಿ ಮಾಸ್ಕ್ ಮತ್ತು ಗ್ಲೌಸ್‍ಗಳನ್ನು…
ಅತಿಥಿ, ಗುತ್ತಿಗೆ ಉಪನ್ಯಾಸಕರಿಗೆ ಶೀಘ್ರವೇ ವೇತನ ಪಾವತಿಸಲು ಮರಿತಿಬ್ಬೇಗೌಡರ ಆಗ್ರಹ
April 4, 2020ಮೈಸೂರು, ಏ.3-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಸರ್ಕಾರಿ ಪಾಲಿ ಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜಿನ ಗುತ್ತಿಗೆ ಉಪನ್ಯಾಸಕ ರಿಗೆ ಕಳೆದ ಹಲವು ತಿಂಗಳಿಂದ ವೇತನ ನೀಡಿಲ್ಲ. ಕೂಡಲೇ ವೇತನ ನೀಡುವಂತೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಸಿ.ಎಸ್.ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿರುವ ಮರಿತಿಬ್ಬೇಗೌಡರು, ರಾಜ್ಯದಲ್ಲಿ ಸುಮಾರು 12 ಸಾವಿರ ಮಂದಿ ಅತಿಥಿ ಉಪನ್ಯಾಸಕರಾಗಿ ಪದವಿ ಪೂರ್ವ ಕಾಲೇಜಿನಲ್ಲಿ…










