ಮೈಸೂರಲ್ಲಿ ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಬಡವರಿಗೆ ಊಟ ಪೂರೈಕೆ
ಮೈಸೂರು

ಮೈಸೂರಲ್ಲಿ ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಬಡವರಿಗೆ ಊಟ ಪೂರೈಕೆ

April 5, 2020

ಮೈಸೂರು, ಏ.1(ಎಂಕೆ)- ಕೊರೊನಾ ವೈರಸ್ ನಿಂದ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆ ಮೈಸೂರಿನಲ್ಲಿ ಹೋಟೆಲ್‍ಗಳ ಬಂದ್ ಆಗಿದ್ದು, ಸುಲಭ ದಲ್ಲಿ ಊಟ ದೊರೆಯದೇ ಇರುವುದರಿಂದ ಕೆ.ಆರ್. ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಭದ್ರತಾ ಸಿಬ್ಬಂದಿ, ನಿರಾಶ್ರಿತರು ಮತ್ತು ಬಡವರ ಮನೆಗಳಿಗೆ ತೆರಳಿ ನಗರದ ನಿಯತಿ ಈವೆಂಟ್ಸ್, ಶ್ರೀ ಕ್ಯಾಟರಿಂಗ್ ಮತ್ತು ಡಿಎನ್ ಆರ್ ಅಸೋಸಿಯೇಟ್ಸ್‍ನವರು ಕಳೆದ 9 ದಿನಗಳಿಂದ ಊಟ, ನೀರಿನ ಬಾಟಲ್, ಬಿಸ್ಕತ್ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ನಗರದ ವಿವಿಧ ಬಡಾವಣೆಗಳು, ಕೆ.ಆರ್.ಆಸ್ಪತ್ರೆ ಆವರಣ, ರೈಲು ಮತ್ತು ಬಸ್ ನಿಲ್ದಾಣ, ರಾಮಕೃಷ್ಣನಗರದ 30 ಬಡ ಕುಟುಂಬಗಳು, ಸೆಕ್ಯೂರಿಟಿ ಗಾರ್ಡ್ ಸೇರಿದಂತೆ 600ಕ್ಕೂ ಹೆಚ್ಚು ಜನರಿಗೆ ದಿನದ ಎರಡು ಹೊತ್ತು ಊಟ ವಿತರಿಸಲಾಗುತ್ತಿದೆ. ಲಾಕ್‍ಡೌನ್ ಮುಗಿಯುವರೆಗೂ ಈ ಸೇವೆ ಮುಂದುವರಿಸಲಾಗುವುದು. ಊಟ ಚೆಲ್ಲದೇ ಸೇವಿಸಿದರೆ ಸಾಕು. ನಮಗೆ ಮತ್ತಷ್ಟು ಸೇವೆ ಮಾಡುವ ಉತ್ಸಾಹ ಹೆಚ್ಚುತ್ತದೆ ಎಂದು ನಿಯತಿ ಈವೆಂಟ್ಸ್‍ನ ರಾಕೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »