ಮೈಸೂರು,ಏ.6(ಎಂಟಿವೈ)-ಲಾಕ್‍ಡೌನ್‍ನಿಂದಾಗಿ ದಿನದ ಸಂಪಾದನೆಯಿಲ್ಲದೆ ಕಂಗೆಟ್ಟಿರುವ ಅಧಿಕೃತ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳಿರುವ ದಿನಸಿ ಕಿಟ್ ಅನ್ನು ವಿತರಿಸಲಾಯಿತು. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸೂಚನೆ ಮೇರೆಗೆ ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಅಧಿಕೃತ ಪ್ರವಾಸಿ ಗೈಡ್(ಮಾರ್ಗದರ್ಶಿ)ಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಮೈಸೂರಲ್ಲಿ 45 ಮಂದಿ ನೋಂದಾಯಿತ ಗೈಡ್‍ಗಳಿದ್ದು, ಅವರಿಗೆ 10 ಕೆಜಿ ಅಕ್ಕಿ, ತೊಗರಿಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ರವೆ, ಅವಲಕ್ಕಿ, ಉಪ್ಪು,…
ಬೇಕರಿ, ಬಿಸ್ಕೆಟ್, ಕಾಂಡಿಮೆಂಟ್ಸ್ ಚಿಲ್ಲರೆ ಮಾರಾಟಕ್ಕೆ ಅವಕಾಶ ನೀಡಿ ಸರ್ಕಾರದ ಆದೇಶ
April 7, 2020ಕೊರೊನಾ ಸೋಂಕಿತರ ಹೆಚ್ಚಳ ಹಿನ್ನೆಲೆಯಲ್ಲಿ ಮೈಸೂರಿಗೆ ಅನ್ವಯಿಸುವುದು ಅನುಮಾನ ಮೈಸೂರು, ಏ.6(ಪಿಎಂ)-ಬೇಕರಿ, ಬಿಸ್ಕೆಟ್, ಕಾಂಡಿಮೆಂಟ್ಸ್ ತಯಾರಿಕೆ, ಸಾಗಣೆ ಮತ್ತು ಚಿಲ್ಲರೆ ಮಾರಾಟಕ್ಕೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಅಗತ್ಯ ವಸ್ತುಗಳ ಪೂರೈಕೆ ಮತ್ತು ಸಾಗಣೆ ಜಾಲದ ನೋಡಲ್ ಅಧಿಕಾರಿ ರಾಜೇಂದ್ರ ಕಟಾರಿಯಾ, ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾ ಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಬೇಕರಿ ಉತ್ಪನ್ನಗಳು ಮತ್ತು ಸಂಬಂಧಿತ ತಿನಿಸುಗಳನ್ನು ರೋಗಿಗಳು, ವಯೋ ವೃದ್ಧರು ಹಾಗೂ ಮಕ್ಕಳು ಸೇವನೆ ಮಾಡುತ್ತಾರೆ….
ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಮುನೇಶ್ವರ ನಗರದಲ್ಲಿ ಆಹಾರ ವಿತರಣೆ
April 7, 2020ಮೈಸೂರು,ಏ.6(ಎಂಟಿವೈ)- ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾದವರಿಗೆ ಬಿ.ವೈ. ವಿಜಯೇಂದ್ರ ಅಭಿಮಾನಿಗಳು ಆಹಾರ ವಿತರಿಸುವ ಕಾರ್ಯಕ್ರಮ ಮುಂದುವರೆ ಸಿದ್ದು, ಮೈಸೂರಿನ ಮುನೇಶ್ವರನಗರ ಹಾಗೂ ಮಹದೇವಪುರ ಸುತ್ತಮುತ್ತ ಮಧ್ಯಾಹ್ನದ ಆಹಾರ ವಿತರಿಸಿದರು. ತಾ.ಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹಾದೇವಸ್ವಾಮಿ ನೇತೃತ್ವ ದಲ್ಲಿ ಮುನೇಶ್ವರ ನಗರ ಹಾಗೂ ಮಹದೇವಪುರ ಸುತ್ತಮುತ್ತ ನಿರಾಶ್ರಿತರು, ಕಟ್ಟಡ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಆಹಾರ ವಿತರಿಸಿದರು. ಅಲ್ಲದೆ ವಿವಿಧೆಡೆ ಕರ್ತವ್ಯ ನಿರತÀ ಪೊಲೀಸರು ಹಾಗೂ ವಿವಿಧ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿರುವವರಿಗೆ ಆಹಾರದ ಪೊಟ್ಟಣ, ಮಜ್ಜಿಗೆ ವಿತರಿಸಿದರು. ಈ ಸಂದರ್ಭದಲ್ಲಿ ವಿಜಯೇಂದ್ರ ಅಭಿಮಾನಿ…
ಕೊರೊನಾ ಶಂಕಿತ ಕುಟುಂಬದವರಿಗೆ ಅಗತ್ಯ ವಸ್ತು ನೀಡಲು ಅಡ್ಡಿಪಡಿಸಬೇಡಿ
April 7, 2020ಬನ್ನೂರಿನಲ್ಲಿ ಸಾರ್ವಜನಿಕರಿಗೆ ಎಸ್ಪಿ ರಿಷ್ಯಂತ್ ತಾಕೀತು ಮೈಸೂರು, ಏ.6(ಆರ್‍ಕೆ)- ಕೊರೊನಾ ಶಂಕಿತರು ಹಾಗೂ ಸೋಂಕಿತರ ಕುಟುಂಬ ದವರಿಗೆ ಅಗತ್ಯ ಪಡಿತರ, ದಿನಸಿ ಪೂರೈಸಲು ಅಡ್ಡಿಪಡಿಸಬೇಡಿ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಬನ್ನೂರಿನಲ್ಲಿ ಸಾರ್ವಜನಿಕರಿಗೆ ತಾಕೀತು ಮಾಡಿದ್ದಾರೆ. ಸೋಮವಾರ ಬನ್ನೂರಿನಲ್ಲಿ ಧ್ವನಿವರ್ಧಕದ ಮೂಲಕ ಈ ಸೂಚನೆ ನೀಡಿದ ಅವರು, ಸರ್ಕಾರದಿಂದ ಕೊರೊನಾ ಸೋಂಕಿತ ಕುಟುಂಬ ದವರಿಗೆ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ಹಾಗೂ ದಿನಸಿ ವಿತರಿಸಲು ಕೆಲವರು ಅಡ್ಡಿಪಡಿಸುತ್ತಿರುವುದಲ್ಲದೇ, ಹಾಲು, ಹಣ್ಣು, ತರಕಾರಿ, ಔಷಧಿ ಖರೀದಿಸಲು ಅವಕಾಶ ನೀಡುತ್ತಿಲ್ಲ ಎಂಬ…
ಕೆನರಾ ಬ್ಯಾಂಕ್‍ನ ಸಂಚಾರಿ ಲಘು ಎಟಿಎಂಗೆ ಚಾಲನೆ
April 7, 2020ಮೈಸೂರು,ಏ.6-ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ, ಮೈಸೂರು ಹಾಗೂ ಚಾಮ ರಾಜನಗರ ಜಿಲ್ಲೆಯ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಬ್ಯಾಂಕ್ ಮಿತ್ರರ ಸಹಯೋಗದೊಂದಿಗೆ ಸಂಚಾರಿ ಲಘು ಎಟಿಎಂ ವ್ಯವಸ್ಥೆ ಕಲ್ಪಿಸಿದ್ದು, ಇದಕ್ಕೆ ಮೈಸೂರಿನ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮುಖ್ಯಸ್ಥೆ ಶ್ರೀಮತಿ ಕೆ.ಬಿ.ಗೀತಾ ಚಾಲನೆ ನೀಡಿದರು. ಈ ಸಂಚಾರಿ ಲಘು ಎಟಿಎಂಗಳು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಹಳ್ಳಿಗಳು ಹಾಗೂ ನಗರ ಪ್ರದೇಶದ ವಾರ್ಡ್ ಗಳಲ್ಲಿ ಸಂಚರಿಸಲಿದ್ದು, ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಮಹಿಳಾ ಹಾಗೂ…
ಮೈಸೂರಿನ ಕೋವಿಡ್ ಆಸ್ಪತ್ರೆ ವೈದ್ಯರಿಗೆ ನಿತ್ಯ ಶುಚಿ-ರುಚಿಯಾದ ಆಹಾರ ವ್ಯವಸ್ಥೆ
April 7, 2020ಮೈಸೂರು, ಏ.6 (ಪಿಎಂ)- `ಕೊರೊನಾ’ ವೈರಾಣು ಸಾಂಕ್ರಾಮಿಕ ಕಾಯಿಲೆಗಳ ಪೈಕಿ ಅತ್ಯಂತ ಭಯಾನಕ. ಪ್ರಸ್ತುತ ಇಡೀ ಜಗತ್ತೇ ಇದರಿಂದ ತತ್ತರಿಸಿದ್ದು, ಮೈಸೂ ರಿನಲ್ಲೂ ಈ ವೈರಾಣು ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆ (ಕೋವಿಡ್ ಆಸ್ಪತ್ರೆ) ವ್ಯವಸ್ಥೆ ಮಾಡಲಾಗಿದೆ. ಮೈಸೂರು ಜಿಲ್ಲಾಸ್ಪತ್ರೆ ಕಟ್ಟಡವನ್ನೇ ಇದೀಗ ಕೋವಿಡ್ ಆಸ್ಪತ್ರೆಯಾಗಿ ಪರಿ ವರ್ತಿಸಿದ್ದು, ಇಲ್ಲಿ ಪ್ರಸ್ತುತ ಸುಮಾರು 50 ಮಂದಿ ವೈದ್ಯರು ಕೊರೊನಾ ವಿರುದ್ಧ ಸೆಣ ಸಾಡುತ್ತಿದ್ದಾರೆ. ಇಲ್ಲಿ ಚಿಕಿತ್ಸೆ ನೀಡುವುದು ವೈದ್ಯರಿಗೆ ದೊಡ್ಡ ಸವಾಲೇ ಎದುರಾಗಿದೆ. ವೈದ್ಯರು ಎಚ್ಚರ ತಪ್ಪಿದರೆ ಅವರೂ…
ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ‘ಆಹಾರ ಕಿಟ್’ ವಿತರಣೆ
April 7, 2020ಮೈಸೂರು,ಏ.6-ಅರ್ಚಕರು, ಪುರೋ ಹಿತರು ಸೇರಿದಂತೆ 300ಕ್ಕೂ ಹೆಚ್ಚು ಆರ್ಥಿಕ ವಾಗಿ ಹಿಂದುಳಿದ ಬ್ರಾಹ್ಮಣರ ಕುಟುಂಬ ಗಳಿಗೆ ದಿನನಿತ್ಯದ ಅಡುಗೆ ಪದಾರ್ಥಗಳ ಒಳಗೊಂಡ ‘ಆಹಾರ ಕಿಟ್’ಗಳನ್ನು ಕರ್ನಾ ಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ನಿಗ ಮದ ಅಧ್ಯಕ್ಷ ಹೆಚ್.ಎಸ್ ಸಚ್ಚಿದಾನಂದ ಮೂರ್ತಿ ಸೋಮವಾರ ವಿತರಿಸಿದರು. ಕೊರೊನಾ ಸೋಂಕು ತಡೆಗಟ್ಟಲು ಇಡೀ ದೇಶವೇ ಲಾಕ್‍ಡೌನ್ ಆಗಿರುವುದರಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಮೈಸೂರು ನಗರ ಬ್ರಾಹ್ಮಣ ಸಂಘದ ವತಿಯಿಂದ ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದಲ್ಲಿ ಅರ್ಚಕರು, ಪುರೋಹಿತರು ಸೇರಿದಂತೆ 300ಕ್ಕೂ…
ಸಂಕಷ್ಟ ಎದುರಾದಾಗ ನಕಾರಾತ್ಮಕ ಚಿಂತನೆಗೆ ಒಳಗಾಗಬಾರದು
April 7, 2020ಮೈಸೂರು,ಏ.6(ಪಿಎಂ)-ಸಂಕಷ್ಟ ಹಾಗೂ ಸಮಸ್ಯೆ ಗಳು ಎದುರಾದಾಗ ನಕಾರಾತ್ಮಕ ಚಿಂತನೆಗಳಿಗೆ ಒಳ ಗಾಗುವ ಹತಾಶೆ ಮನೋಭಾವನೆ ಬೆಳೆಸಿಕೊಳ್ಳಬಾರದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮ ನ್ವಯ ಅಧಿಕಾರಿ ಎಸ್.ಸಿದ್ದರಾಮಪ್ಪ ಸಲಹೆ ನೀಡಿದರು. ಮೈಸೂರು ಜಿಲ್ಲಾಡಳಿತದ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್‍ನಲ್ಲಿ ಆಯೋಜಿಸಿರುವ ವಾಗ್ಮಿಗಳು ಹಾಗೂ ಪರಿಣತರ ಭಾಷಣದ ನೇರ ಪ್ರಸಾರದ ಮೊದಲ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು. ಸಂಕಷ್ಟ ಬಂದಾಗ ಬಹುತೇಕರು ನಕಾರಾತ್ಮಕ ಚಿಂತ ನೆಗೆ ಒಳಗಾಗುತ್ತಾರೆ. ಆದರೆ…
ಪಡಿತರ ಧಾನ್ಯ ಪಡೆಯಲು ಓಟಿಪಿ ಅಗತ್ಯವಿಲ್ಲ; ಸರ್ಕಾರದ ಆದೇಶ
April 7, 2020ಮೈಸೂರು,ಏ.6(ಪಿಎಂ)-ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ವೈದ್ಯಕೀಯ ವಿಪತ್ತು ಘೋಷಣೆ ಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ತೊಂದರೆ ತಪ್ಪಿಸಲು ಪ್ರಸಕ್ತ ಸಾಲಿನ ಏಪ್ರಿಲ್ ಮಾಸದ ಆಹಾರ ಧಾನ್ಯಗಳನ್ನು ಪಡಿತರ ಅಂಗಡಿಗಳಲ್ಲಿ ಓಟಿಪಿ ಇಲ್ಲ ದೆಯೇ ಕೇವಲ ಗ್ರಾಹಕರ ಸಹಿ ಪಡೆದು ಹಂಚಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಜಿಲ್ಲಾಡಳಿತಗಳು ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕೆಂದೂ ನಿರ್ದೇ ಶನ ನೀಡಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ…
ಆಕಸ್ಮಿಕ ಬೆಂಕಿ ತಗುಲಿ 250ಕ್ಕೂ ಹೆಚ್ಚು ಮಾವಿನ ಮರ ಭಸ್ಮ
April 7, 2020ಕೆ.ಆರ್.ಪೇಟೆ, ಏ.6- ಆಕಸ್ಮಿಕ ಬೆಂಕಿ ಬಿದ್ದು 250ಕ್ಕೂ ಹೆಚ್ಚು ಮಾವಿನಮರಗಳು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಡಿ.ಆರ್. ವೆಂಕಟೇಶ್ ಎಂಬುವವರಿಗೆ ಸೇರಿದ ಮಾವಿನ ತೋಟಕ್ಕೆ ಬೆಂಕಿಬಿದಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ. ದೊಡ್ಡಕ್ಯಾತನಹಳ್ಳಿ ಗ್ರಾಮದ ವ್ಯಾಪ್ತಿಗೆ ಸೇರಿದ ಸರ್ವೆ ನಂ. 31(ಬಿ)ರ ಜಮೀನಿನಲ್ಲಿ ರೈತ ವೆಂಕಟೇಶ್ ಅವರು ಸುಮಾರು 12ವರ್ಷಗಳ ಹಿಂದೆ ಮಹಾರಾಷ್ಟ್ರದ ರತ್ನಗಿರಿಯಿಂದ ಉತ್ತಮ ಮಾವಿನ ತಳಿಯನ್ನು ತಂದು ನಾಟಿ ಮಾಡಿದ್ದರು. ಅಲ್ಲದೆ ಕಳೆದ 6…










