ಮೈಸೂರು, ಏ.8(ಎಂಕೆ)-ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ಮೈಸೂರು-ನಂಜನಗೂಡು ರಸ್ತೆಯಲ್ಲಿ ರುವ ಎಪಿಎಂಸಿ ಮಾರುಕಟ್ಟೆಯ ಪ್ರತ್ಯೇಕ 3 ಸ್ಥಳಗಳಲ್ಲಿ ನಿರ್ಮಿಸಿರುವ `ಡಿಸ್‍ಇನ್ಫೆಕ್ಷನ್ ಟನಲ್’ (ವೈರಾಣು ನಾಶಕ ಸುರಂಗ) ಗಳಿಗೆ ಬುಧವಾರ ಚಾಲನೆ ನೀಡಲಾಯಿತು. ಮೈಸೂರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಹೊಸಹುಂಡಿ ಗ್ರಾಮ ಪಂಚಾಯಿತಿ ಮತ್ತು ಎಪಿಎಂಸಿ ಸಹಯೋಗದಲ್ಲಿ ಮಾರುಕಟ್ಟೆಗೆ ಬರುವ ಮಳಿಗೆದಾರರು, ಕೂಲಿ ಕಾರ್ಮಿ ಕರು, ರೈತರ, ಗ್ರಾಹಕರ ಆರೋಗ್ಯ ರಕ್ಷಣೆಗಾಗಿ `ಡಿಸ್ ಇನ್ಫೆಕ್ಷನ್ ಟನಲ್’ಗಳನ್ನು ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಲಾಗಿದೆ. ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ…
ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಉಚಿತ ಡಿಜಿಟಲ್ ಗ್ರಂಥಾಲಯ ಸೇವೆ
April 9, 2020ಡಿಜಿಟಲ್ ಸ್ಪರ್ಶದಿಂದ ಅಂಗೈ, ಮನೆಯಂಗಳದಲ್ಲೇ ಗ್ರಂಥಾಲಯ ಮೈಸೂರು, ಏ.8- ಅಂಗೈ ಇಲ್ಲವೇ ಮನೆ ಯಂಗಳದಲ್ಲೇ ಗ್ರಂಥಾಲಯ ತೆರೆದುಕೊಳ್ಳಲಿದೆ! ಅದಕ್ಕೆ ಬೇಕಿರುವುದು ಅಂತರ್ಜಾಲ ಸಂಪರ್ಕಿತ ಮೊಬೈಲ್ ಇಲ್ಲವೇ ಕಂಪ್ಯೂಟರ್, ಲ್ಯಾಪ್‍ಟಾಪ್, ಮೊಬೈಲ್ ಒಂದಿದ್ದರೆ ಕುಳಿತಲ್ಲೇ ವಾಚನದಲ್ಲಿ ತಲ್ಲೀನವಾಗಬಹುದು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮನೆಯಿಂದ ಹೊರಬರಲಾಗದ್ದರಿಂದ ಜ್ಞಾನಾರ್ಜನೆಗೆ ಸಾಕಷ್ಟು ಸಮಯ ವಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಡಿಜಿಟಲ್ ಗ್ರಂಥಾಲಯ ಮತ್ತು ಡಿಜಿ ಟಲ್ ಗ್ರಂಥಾಲಯ ಆ್ಯಪ್ ಸೇವೆಯನ್ನು ಉಚಿತ ವಾಗಿ ನೀಡಲು ಮುಂದಾಗಿದೆ. ಕಲೆ, ಸಾಹಿತ್ಯ ಸೇರಿದಂತೆ…
ಎಟಿಐನಿಂದ ಆನ್‍ಲೈನ್‍ನಲ್ಲಿ ಪಂಚಾಯ್ತಿ ಅಧಿಕಾರಿಗಳಿಗೆ ಕೊರೊನಾ ಪಾಠ
April 9, 2020ಇಂದಿನಿಂದ ಪಾಠ ಆರಂಭ ರಾಜ್ಯದ 16 ಜಿಲ್ಲೆಗಳಿಂದ 102ಕ್ಕೂ ಅಧಿಕ ಪಂಚಾಯಿತಿಗಳ ಅಧಿಕಾರಿಗಳು ಭಾಗಿ ಮೈಸೂರು,ಏ.8(ಎಂಟಿವೈ)- ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮೈಸೂರಿನ ಆಡಳಿತ ಮತ್ತು ತರಬೇತಿ ಸಂಸ್ಥೆಯು (ಎಟಿಐ) ತಾಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಆನ್‍ಲೈನ್ ಮೂಲಕ ಕೊರೊನಾ ವೈರಾಣು ಕುರಿತಂತೆ ಪಾಠ ಮಾಡಲಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ತಾಪಂ ಹಾಗೂ ಗ್ರಾಪಂ ಅಧಿಕಾರಿ ಗಳಿಗೆ ತರಬೇತಿ ನೀಡಲು ಆನ್‍ಲೈನ್ ಮೊರೆ ಹೋಗಿರುವ ಎಟಿಐ, ಕೊರೊನಾ ಹರಡದಂತೆ…
ಕೊರೊನಾದಿಂದ ರಾಜ್ಯದಲ್ಲಿ ಆತಂಕದ ಸನ್ನಿವೇಶ ಇಲ್ಲ
April 8, 2020ಬಿಬಿಎಂಪಿ ವಾರ್ ರೂಮಿನಲ್ಲಿ ಕೊರೊನಾ ಡ್ಯಾಷ್‍ಬೋರ್ಡ್: ಡಾ.ಕೆ.ಸುಧಾಕರ್ ಬೆಂಗಳೂರು, ಏ.7- ಬಿಬಿಎಂಪಿ ವಾರ್ ರೂಂನಲ್ಲಿ ಕೊರೊನಾ ಡ್ಯಾಷ್ ಬೋರ್ಡ್‍ನ್ನು ಇಂದಿನಿಂದ ರಾಜ್ಯಾದ್ಯಂತ ಆರಂಭಿಸಿದ್ದು, ಯಾವುದೇ ಮೂಲೆಯಲ್ಲಿನ ಸೋಂಕಿತರ ಸಂಖ್ಯೆ ಬಗ್ಗೆ ಫೋನ್, ಡೆಸ್ಕ್‍ಟಾಪ್‍ನಲ್ಲಿ ನೋಡಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸೋಂಕಿತರು, ಕ್ವಾರಂಟೈನ್ ನಲ್ಲಿರುವವರ ಅಂಕಿ-ಅಂಶಗಳ ಬಗ್ಗೆ ಮಾಹಿತಿ ಡ್ಯಾಷ್ ಬೋರ್ಡ್‍ನಿಂದ ಸಿಗಲಿದೆ. ಕೊರೊನಾ ಸೋಂಕಿತರ ಚಿಕಿತ್ಸೆ ವಿಧಾನ, ಆಸ್ಪತ್ರೆಗಳ ವಿವರ ಈ ಡ್ಯಾಷ್ ಬೋರ್ಡ್…
ವಿಶ್ವ ಆರೋಗ್ಯ ದಿನ: ಮೈಸೂರಲ್ಲಿ ಐವರು ವೈದ್ಯರು, ದಾದಿಯರಿಗೆ ಗೌರವ ಸಮರ್ಪಣೆ
April 8, 2020ಮೈಸೂರು,ಏ.7(ಎಂಟಿವೈ)-ವಿಶ್ವ ಆರೋಗ್ಯ ದಿನದ ಅಂಗವಾಗಿ ಮೈಸೂರಿನ ಕೃಷ್ಣಮೂರ್ತಿಪುರಂನ ಮೋಹನದಾಸ ತುಳಸಿದಾಸ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಸರಳ ಸಮಾ ರಂಭದಲ್ಲಿ ಐವರು ವೈದ್ಯರು, ಐವರು ಹಿರಿಯ ಶುಶ್ರೂಷಕಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಆರ್. ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ. ಬಿ.ಎಸ್. ಮಂಜುನಾಥ್, ಡಾ. ಇಂಬುನಾಥ್, ಡಾ.ಇಂದು ಶೇಖರ್, ಡಾ.ಕುಮುದ, ಡಾ. ಸೋಮಶೇಖರ್ ಹಾಗೂ ಶುಶ್ರೂಷಕಿಯರಾದ ಟಿ.ಎಂ. ಮೀನಾಕ್ಷಿ, ಜೆ.ಅನ್ನಮ್ಮ, ಗಾಯಿತ್ರಿ, ಪಿ.ಆರ್.ಆಶಾ, ಎಸ್. ವನಜಾಕ್ಷಿ ಅವರನ್ನು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಸನ್ಮಾನಿಸಿದರು. ಬಳಿಕ…
ಪಡಿತರ ಚೀಟಿ ಇಲ್ಲದ ಕುಟುಂಬಕ್ಕೆ ದಿನಸಿ ಕಿಟ್ ನೀಡುವ ಕಾರ್ಯಕ್ರಮಕ್ಕೆ ಶಾಸಕ ಜಿಟಿಡಿ ಚಾಲನೆ
April 8, 2020ಚಾಮುಂಡೇಶ್ವರಿ ಕ್ಷೇತ್ರದ 3500, ವರುಣಾ ಕ್ಷೇತ್ರದ 700 ಕುಟುಂಬಗಳಿಗೆ ಸೌಲಭ್ಯ ದಾನಿಗಳಿಂದ ಸಂಗ್ರಹಿಸಿದ ವಸ್ತುಗಳ ಹಂಚಿಕೆ ತಾಲೂಕು ಆಡಳಿತದಿಂದ ಕ್ರಮ ಮೈಸೂರು,ಏ.7(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಕಷ್ಟಕ್ಕೆ ಸಿಲುಕಿರುವ ಪಡಿ ತರ ಚೀಟಿ ಹೊಂದಿರದ ಕುಟುಂಬಗಳಿಗೆ ದಿನಸಿ ಪದಾರ್ಥ ನೀಡಲು ತಾಲೂಕು ಆಡಳಿತ ಕಾರ್ಯಕ್ರಮ ರೂಪಿಸಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಫಲಾನುಭವಿ ಗಳಿಗೆ ದಿನಸಿ ಕಿಟ್ ನೀಡುವ ಕಾರ್ಯ ಕ್ರಮಕ್ಕೆ ಶಾಸಕ ಜಿ.ಟಿ.ದೇವೇಗೌಡ ಮಂಗಳವಾರ ಚಾಲನೆ ನೀಡಿದರು. ಮೈಸೂರಿನ ಅಶೋಕ ರಸ್ತೆಯಲ್ಲಿರುವ ಎಂಸಿಡಿಸಿಸಿ ಬ್ಯಾಂಕ್ ಕಟ್ಟಡದ ಗೋದಾಮಿನಲ್ಲಿ ಮಂಗಳವಾರ ಬೆಳಿಗ್ಗೆ…
ನಂಜರಾಜ ಬಹದ್ದೂರ್ ಛತ್ರದಲ್ಲಿ ಜನದಟ್ಟಣೆ; 2 ಹೊಸ ಕೇಂದ್ರಗಳಿಗೆ 120 ಮಂದಿ ಸ್ಥಳಾಂತರ
April 8, 2020ಮೈಸೂರು,ಏ.7(ಎಂಟಿವೈ)- ಮೈಸೂ ರಿನ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿನ ಪುನರ್ವಸತಿ ಕೇಂದ್ರ 235ಕ್ಕೂ ಹೆಚ್ಚು ಜನರು ಆಶ್ರಯ ಪಡೆ ದಿದ್ದ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿ ಯಿಂದ ಮಂಗಳವಾರ 120 ಮಂದಿ ಯನ್ನು 2 ಹೊಸ ಪುನರ್ವಸತಿ ಕೇಂದ್ರ ಗಳಿಗೆ ಸ್ಥಳಾಂತರಿಸಲಾಯಿತು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿ ದಂತೆ ವಿವಿಧೆಡೆ ನಿರಾಶ್ರಿತರಾಗಿದ್ದ 200ಕ್ಕೂ ಹೆಚ್ಚು ಮಂದಿಯನ್ನು ನಂಜರಾಜ ಬಹ ದ್ದೂರು ಕಲ್ಯಾಣ ಮಂಟಪದಲ್ಲಿ ಇರಿಸಿ ಊಟದ ವ್ಯವಸ್ಥೆಯನ್ನೂ ಮಾಡಲಾ ಗಿತ್ತು. ಹಾಗಿದ್ದೂ, ಕೆ.ಆರ್.ಆಸ್ಪತ್ರೆ…
ಸಂಕಷ್ಟದಲ್ಲಿರುವವರಿಗೆ ಸಮರ್ಪಕ ಮೂಲ ಸೌಕರ್ಯಕ್ಕೆ `ನೆರವು ಕೇಂದ್ರ’ ಅನಿವಾರ್ಯ
April 7, 2020ಮೈಸೂರು,ಏ.6(ಎಸ್‍ಬಿಡಿ)-ಲಾಕ್‍ಡೌನ್ ಪರಿಣಾಮ ಸಂಕಷ್ಟದಲ್ಲಿರುವ ಬಡವರಿಗೆ ಸಮರ್ಪಕ ರೀತಿ ಮೂಲ ಸೌಕರ್ಯ ಕಲ್ಪಿ ಸುವ ನಿಟ್ಟಿನಲ್ಲಿ ನೆರವು ಸಂಗ್ರಹ ಕೇಂದ್ರ ತೆರಯಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕಳೆದ ವರ್ಷ ಕೊಡಗು ಹಾಗೂ ನೆರೆ ರಾಜ್ಯ ಕೇರಳದಲ್ಲಿ ನೆರೆ ಸಂಭವಿಸಿದಾಗ ಅಲ್ಲಿನ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಸುವ ಉದ್ದೇಶದಿಂದ ಮೈಸೂರು ಜಿಲ್ಲಾಡಳಿತ ನೆರವು ಸಂಗ್ರಹ ಕೇಂದ್ರ ತೆರೆದಿತ್ತು. ದಾನಿಗಳು ವೈಯಕ್ತಿಕವಾಗಿ ಸಂತ್ರಸ್ತರಿಗೆ ವಸ್ತುಗಳ ನೀಡು ವಾಗ ಗೋಜಲು ಉಂಟಾಗುತ್ತಿದ್ದ ಕಾರಣಕ್ಕೆ ಈ ಕ್ರಮ ವಹಿಸಲಾಗಿತ್ತು. ಪುರಭವನದಲ್ಲಿ ತೆರೆಯಲಾಗಿದ್ದ ಕೇಂದ್ರಕ್ಕೆ ಜನ ಅಗತ್ಯ…
ಹೋಂ ಕ್ವಾರಂಟೈನ್ ಸ್ಟಿಕ್ಕರ್ ಕಿತ್ತು ಹಾಕಿದರೆ ಕ್ರಿಮಿನಲ್ ಕೇಸ್
April 7, 2020ಜಿಲ್ಲಾಧಿಕಾರಿ ಎಚ್ಚರಿಕೆ ಗುಂಪು ಸೇರಿದರೆ ಕ್ರಮ: ಎಸ್ಪಿ ಮೈಸೂರು, ಏ.6(ಎಸ್‍ಬಿಡಿ)-ಹೋಂ ಕ್ವಾರಂಟೈನ್ ಸ್ಟಿಕ್ಕರ್ ಕಿತ್ತು ಹಾಕುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಎಚ್ಚರಿಸಿದ್ದಾರೆ. ಹೋಂ ಕ್ವಾರಂಟೈನ್‍ನಲ್ಲಿರುವವರ ಮನೆಯ ಮುಂಭಾಗ ಸ್ಟಿಕ್ಕರ್ ಅಂಟಿಸ ಲಾಗುತ್ತದೆ. ನಂಜನಗೂಡಿನಲ್ಲಿ ಕೆಲವರು 2 ಬಾರಿ ಸ್ಟಿಕ್ಕರ್ ಕಿತ್ತು ಹಾಕಿದ್ದಾರೆ. ಹೋಂ ಕ್ವಾರಂಟೈನ್ ಅವಧಿ ಮುಗಿದಿದ್ದರೂ ಸ್ಟಿಕ್ಕರ್ ಕೀಳುವಂತಿಲ್ಲ. ನಿಮ್ಮ ಹಾಗೂ ನಿಮ್ಮ ಪ್ರಾಂತ್ಯ ದವರ ಸುರಕ್ಷತೆ ದೃಷ್ಟಿಯಿಂದ ಸ್ಟಿಕ್ಕರ್ ಅಂಟಿಸುವುದು. ಆರೋಗ್ಯ ಇಲಾಖೆ ಅಧಿಕಾರಿಗಳ ಹೊರತು ಬೇರೆ ಯಾರಿಗೂ…
ಕೊರೊನಾ ಮಹಾಮಾರಿ ಉಲ್ಬಣಕ್ಕೆ ಗ್ರಹಗತಿಗಳ ಮೇಲಾಟ ಕಾರಣವೇ?
April 7, 2020ಮೈಸೂರು, ಏ.6- ಮನುಕುಲವು ಎದುರಿಸುತ್ತಿರುವ ಕೊರೊನಾ ಸಂಕಟಕ್ಕೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಛಾಯಾ ಗ್ರಹಗಳಾದ (ಮೂಲತಃ ಚಂದ್ರ ಮತ್ತು ಭೂಮಿಯ ಅಕ್ಷದ ಛೇದಕ ಬಿಂದುಗಳು) ರಾಹು ಮತ್ತು ಕೇತುಗಳೇ ಕಾರಣವೆಂದು ಮೈಸೂರು ಜ್ಯೋತಿಷ್ಯಾಲಯದ ಜ್ಯೋತಿಷಿ ಶಿವಪ್ರಕಾಶ್ ತಿಳಿಸಿದ್ದು, ಯಾರೂ ಊಹಿಸಲಾಗದಷ್ಟು ಸಂಕಷ್ಟಕ್ಕೆ ಎಲ್ಲರನ್ನೂ ತುತ್ತಾಗಿಸಬಲ್ಲ ಶಕ್ತಿ ಈ ಎರಡು ಗ್ರಹಗಳಿಗೆ ಇದೆ ಎಂದಿದ್ದಾರೆ. ರವಿ ಈ ಪಿಡುಗನ್ನು (ವೈರಸ್ ಮತ್ತು ಬ್ಯಾಕ್ಟೀರಿಯಾ) ಎದುರಿಸುವ ಸಾಮರ್ಥ್ಯ ಹೊಂದಿದ್ದು, ನಾವು ಈ ಸಂಕಷ್ಟ ಸಮಯವನ್ನು ಎದುರಿಸಲು ರವಿ, ರಾಹು, ಕೇತು…










