ಮೈಸೂರು,ಫೆ.23(ಎಂಕೆ)- ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಅಮೃತ ಮಹೋತ್ಸವ ಸಭಾಂಗಣದಲ್ಲಿ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ ಆಯೋಜಿಸಿದ್ದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಶುಶ್ರೂಷ ಸೇವೆಗೆ ಪಾದಾರ್ಪಣೆ ಮಾಡಿದ 99 ವಿದ್ಯಾರ್ಥಿಗಳು `ಪ್ರತಿಜ್ಞಾವಿಧಿ’ ಸ್ವೀಕರಿಸಿದರು. ಸಮಾರಂಭ ಉದ್ಘಾಟಿಸಿದ ಮೈಸೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಸಿ.ಪಿ.ನಂಜರಾಜ್ ಅವರು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕಿಯರಿಗೆ ಹೆಚ್ಚಿನ ಅವಕಾಶಗಳಿವೆ. ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದ ನಿಮ್ಮೆಲ್ಲರಿಗೂ ಸೇವೆ ಮಾಡುವ ಅವಕಾಶ ದೊರಕಲಿದೆ. ಒತ್ತಡದ ನಡುವೆಯೂ ರೋಗಿಗಳಲ್ಲಿ ವಿಶ್ವಾಸ ಮೂಡಿಸುವ ರೀತಿ ಕೆಲಸ ಮಾಡಬೇಕು. ದೇಶದ…
ಜಠರ ಕರುಳು ಚಿಕಿತ್ಸೆಗೆ ಎಂಡೋಸ್ಕೋಪಿ ಸರಳ ವಿಧಾನ: ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಜಠರ-ಕರುಳಿನ ಶಸ್ತ್ರಚಿಕಿತ್ಸೆ ಕಾರ್ಯಾಗಾರದಲ್ಲಿ ತಜ್ಞರ ಅಭಿಮತ
February 24, 2020ಮೈಸೂರು, ಫೆ.23(ಆರ್‍ಕೆಬಿ)- ದೇಹದ ಅತಿ ಪ್ರಮುಖ ಭಾಗವಾದ ಜಠರ, ಕರುಳು ಸಮಸ್ಯೆಗಳ ಚಿಕಿತ್ಸಾ ಪದ್ಧತಿಯಲ್ಲಿ ಎಂಡೋ ಸ್ಕೋಪಿ ಕ್ರಾಂತಿಕಾರಕ ವಿಧಾನವಾಗಿದ್ದು, ಆ ಕ್ಷೇತ್ರದಲ್ಲಿ ಇತ್ತೀಚೆಗೆ ಆದ ಸುಧಾರಣೆ ಗಳ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಅಪೋಲೊ ಬಿಜಿಎಸ್ ಆಸ್ಪತ್ರೆ ಆಯೋಜಿಸಿದ್ದ 2 ದಿನಗಳ ಕಾರ್ಯಾಗಾರ ಯಶಸ್ವಿಯಾಗಿದೆ ಎಂದು ಏಷ್ಯನ್ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ ಮುಖ್ಯಸ್ಥ ಡಾ.ಡಿ.ನಾಗೇಶ್ವರರೆಡ್ಡಿ ತಿಳಿಸಿದರು. ನಗರದ ಖಾಸಗಿ ಹೊಟೇಲೊಂದರಲ್ಲಿ ಆಯೋಜಿಸಿದ್ದ ಕಾರ್ಯಾಗಾರದ 2ನೇ ದಿನವಾದ ಭಾನುವಾರ ಸುದ್ದಿಗಾರರೊ ಡನೆ ಮಾತನಾಡಿದ ಅವರು, ನಮ್ಮಲ್ಲಿನ ತಜ್ಞರಿಗೆ ಜಠರ ಕರುಳಿನ…
‘ಬಬ್ರುವಾಹನ ಕಾಳಗ’ ಯಕ್ಷಗಾನ-ಕಿಕ್ಕಿರಿದ ಸಭಾಂಗಣ
February 24, 2020ಮೈಸೂರಲ್ಲಿ ಚಂಡೆ-ಮದ್ದಳೆಯ ಸದ್ದು; ದ.ಕ.ವೈದ್ಯರ ಸಾಂಸ್ಕøತಿಕ ಸಂಘದ ಪ್ರಯತ್ನಕ್ಕೆ ಗಣ್ಯರ ಶ್ಲಾಘನೆ ಮೈಸೂರು,ಫೆ.23(ಎಂಕೆ)- ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ದಕ್ಷಿಣ ಕನ್ನಡ ವೈದ್ಯರ ಸಾಂಸ್ಕø ತಿಕ ಸಂಘ ಆಯೋಜಿಸಿದ್ದ ‘ಬಬ್ರುವಾಹನ ಕಾಳಗ’ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು. ಆಕರ್ಷಕ ಅಲಂಕಾರ ದೊಂದಿಗೆ ಕರಾವಳಿ ಯಕ್ಷಗಾನ ಕೇಂದ್ರದ ಕಲಾವಿದರು ಅಮೋಘ ಅಭಿನಯದ ಮೂಲಕ ರಂಜಿಸಿದರು. ಬಬ್ರುವಾಹನ ಪಾತ್ರದಲ್ಲಿ ಸತೀಶ್ ಆಳ್ವ, ದೂತನಾಗಿ ಗಣೇಶ ಪೂಜಾರಿ, ಮಂತ್ರಿ ಮತ್ತು ಹಂಸಧ್ವಜನಾಗಿ ಶ್ರೀನಿವಾಸ ರಾವ್, ಕಟಕಿಯಾಗಿ ಭಾರ್ಗವಿ, ಚಿತ್ರಾಂಗದೆ…
ಸಿದ್ದಲಿಂಗಪುರ: ಪೆಟ್ರೋಲ್ ಮಿಶ್ರಿತ ಬೋರ್‍ವೆಲ್ ನೀರು!
February 24, 2020ಹಳದಿ ಬಣ್ಣಕ್ಕೆ ತಿರುಗಿದ ಸಂಪ್ ನೀರು; ಮನೆ ಬಾಡಿಗೆದಾರರ ದೂರು ಸಮೀಪದ ಪೆಟ್ರೋಲ್ ಬಂಕ್‍ನಿಂದ ಸೋರಿಕೆಯಾಗುತ್ತಿರುವ ಶಂಕೆ? ಮೈಸೂರು,ಫೆ.23(ಎಂಟಿವೈ)- ಮೈಸೂರು ತಾಲೂಕಿನ ಸಿದ್ಧಲಿಂಗಪುರದ ಮನೆ ಯೊಂದರ ಬೋರ್‍ವೆಲ್‍ನಲ್ಲಿ ಪೆಟ್ರೋಲ್ ಮಿಶ್ರಿತ ನೀರು ಸರಬರಾಜಾಗುತ್ತಿದ್ದು, ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ. ಮೈಸೂರು-ಬೆಂಗಳೂರು ಮುಖ್ಯರಸ್ತೆ ಯಲ್ಲಿನ ಪೆಟ್ರೋಲ್ ಬಂಕ್ ಈ ಮನೆಗೆ ಸಮೀಪದಲ್ಲೇ ಇದ್ದು, ಬೋರ್‍ವೆಲ್ ನೀರಿಗೆ ಬಂಕ್‍ನಿಂದ ಸೋರಿಕೆಯಾದ ಪೆಟ್ರೋಲ್, ಡೀಸೆಲ್ ಅಂತರ್ಜಲ ಸೇರಿರ ಬಹುದು ಎಂದು ಶಂಕಿಸಲಾಗಿದೆ. ಬೆಂಗಳೂರು ಮೂಲದ ಪ್ರಕಾಶ್ ಎಂಬು ವರು ಸಿದ್ದಲಿಂಗಪುರದಲ್ಲಿ ನಿವೇಶನ ಖರೀ ದಿಸಿ,…
ಏ.26ರ `ಸಪ್ತಪದಿ’ ಪ್ರಚಾರ ವಾಹನಕ್ಕೆ ಎಡಿಸಿ ಚಾಲನೆ
February 24, 2020ಮೈಸೂರು,ಫೆ.23(ಎಂಟಿವೈ)- ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳ ಹಾಗೂ ಸಾಮೂಹಿಕ ವಿವಾಹಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಮುಜರಾಯಿ ಇಲಾಖೆ ಏ.26ರಂದು ಚಾಮುಂಡಿಬೆಟ್ಟದಲ್ಲಿ `ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಆಯೋಜಿಸಿದ್ದು, ಅದರ ಪ್ರಚಾರ ರಥಕ್ಕೆ ಗುರುವಾರ ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರಸ್ವಾಮಿ ದೇವಾ ಲಯದ ಬಳಿ ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪೂರ್ಣಿಮಾ ಅವರು, ರೈತರು, ಬಡ ಹಾಗೂ ಮಧ್ಯಮ ಕುಟುಂಬದ ಜನರು ಸಾಲ ಮಾಡಿ ತಮ್ಮ ಮಕ್ಕಳ ಮದುವೆಯನ್ನು ವಿಜೃಂಭಣೆಯಿಂದ…
ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೃಷ್ಣ ಮೆನನ್ ಪಾತ್ರ ಬಹುಮುಖ್ಯ: ಸಂಸದ ಜೈರಾಮ್ ರಮೇಶ್ ವ್ಯಾಖ್ಯಾನ
February 23, 2020ಮೈಸೂರು,ಫೆ.22(ಪಿಎಂ)- ದೇಶದ ಮಾಜಿ ರಕ್ಷಣಾ ಸಚಿವ ಕೃಷ್ಣ ಮೆನನ್, ಜವಹರಲಾಲ್ ನೆಹರು ಅವರ ಆತ್ಮೀಯರು ಎಂಬ ಕಾರಣಕ್ಕಷ್ಟೇ ಅಲ್ಲದೇ, ಅವರ ರಾಜ ಕೀಯ ಹಾಗೂ ಸಾಹಿತ್ಯದ ಕೊಡುಗೆಯಿಂದಾಗಿಯೂ ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ವ್ಯಾಖ್ಯಾನಿಸಿದರು. ಮೈಸೂರಿನ ಸರಸ್ವತಿಪುರಂನ ರೋಟರಿ ಪಶ್ಚಿಮ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಲಿಟರರಿ ಅಸೋಸಿ ಯೇಷನ್‍ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜೈರಾಮ್ ರಮೇಶ್ ಅವರ `ಎ ಚೆಕರ್ಡ್ ಬ್ರಿಲಿಯನ್ಸ್: ದಿ ಮೆನಿ ಲೈವ್ಸ್ ಆಫ್ ವಿ.ಕೆ.ಕೃಷ್ಣ ಮೆನನ್’ ಜೀವನ ಚರಿತ್ರೆಯ…
ನಿಗದಿತ ಸಮಯಕ್ಕೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ
February 23, 2020ವಿದ್ಯಾರ್ಥಿಗಳು, ಪೋಷಕರಿಗೆ ಅನುಮಾನ ಬೇಡ: ಸುರೇಶ್‍ಕುಮಾರ್ ಸ್ಪಷ್ಟನೆ ಬೆಂಗಳೂರು, ಫೆ. 22(ಕೆಎಂಶಿ)- ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಬಗ್ಗೆ ಮಕ್ಕಳು ಮತ್ತು ಪೋಷಕರು ಯಾವುದೇ ಗೊಂದಲ ಮತ್ತು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ. ಹಿಂದೆ ನಡೆದುಕೊಂಡು ಬಂದಂತೆಯೇ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಯಶಸ್ವಿಯಾಗಿ ಪರೀಕ್ಷೆಯನ್ನು ನಡೆಸು ತ್ತೇವೆ ಎನ್ನುವ ಭರವಸೆಯನ್ನು ವಿದ್ಯಾರ್ಥಿಗಳು ಮತ್ತು ಪೋಷಕ ರಿಗೆ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಗೊಂದಲಗಳು ಮಾ.27ರಿಂದ ಆರಂಭವಾಗುವ…
ಕುಮಟಳ್ಳಿಗೆ ಅನ್ಯಾಯವಾದರೆ ಸಚಿವ ಸ್ಥಾನ ತೊರೆಯುತ್ತೇನೆ ರಮೇಶ್ ಜಾರಕಿಹೊಳಿ ಹೊಸ ಬಾಂಬ್
February 23, 2020ಬೆಂಗಳೂರು, ಫೆ.22(ಕೆಎಂಶಿ)-ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಅನ್ಯಾಯವಾದರೆ ತಾನು ಕೂಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡುತ್ತ, ಬರುವ ದಿನಗಳಲ್ಲಿ ಕುಮಟಳ್ಳಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ ಎಂಬ ವಿಶ್ವಾಸವಿದೆ. ಮಹೇಶ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡಬೇಕೆಂದು ನಾನು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇನೆ. ಅವರ ವಿಷಯದಲ್ಲಿ ನಾನು ಅನ್ಯಾಯ ಮಾಡಿಲ್ಲ. ಅವರಿಗೆ ಅನ್ಯಾಯವಾದರೆ, ನನಗೂ ಅಧಿಕಾರ ಬೇಡ ಎಂದರು.
ಕುತೂಹಲ ಮೂಡಿಸಿದ ವಿಜಯೇಂದ್ರ, ಸಿದ್ದರಾಮಯ್ಯ ಭೇಟಿ!
February 23, 2020ಬೆಂಗಳೂರು,ಫೆ.22-ಮಂತ್ರಿಸ್ಥಾನ ಸಿಗದ ಅತೃಪ್ತ ಬಿಜೆಪಿ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಎಂಬುದರ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂ ರಪ್ಪ ಪುತ್ರ ವಿಜಯೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದು ಬಿಜೆಪಿ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ….
ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷರಾಗಿ ಬಿ.ಎಂ.ರಘು ಅಧಿಕಾರ ಸ್ವೀಕಾರ
February 23, 2020ಮೈಸೂರು, ಫೆ.22(ಎಂಕೆ)- ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ನಗರ ಮಂಡಲ)ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನಡೆ ಯಿತು. ಮುಂದಿನ 3 ವರ್ಷಗಳ ಅವಧಿಗೆ ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಂ. ರಘು ಅವರಿಗೆ ನಿರ್ಗಮಿತ ಅಧ್ಯಕ್ಷ ರೇವಣ್ಣ ಅಧಿಕಾರ ಹತ್ತಾಂತರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಮಾತ ನಾಡಿ, ಬಿಜೆಪಿಯಂತಹ ವಿಶೇಷ ಪಕ್ಷದಲ್ಲಿ ನಾವಿಂದು ಕೆಲಸ ಮಾಡುತ್ತಿದ್ದೇವೆ. ಸಾಮಾನ್ಯ ಕಾರ್ಯಕರ್ತ ಉನ್ನತ ಸ್ಥಾನಕ್ಕೆ ಬೆಳೆಯಲು ಬಿಜೆಪಿಯಲ್ಲಿ ಮಾತ್ರ…










