ಮೈಸೂರು

ರಂಗಭೂಮಿಯೇ ನನ್ನ ಅಜೆಂಡಾ: ಅಡ್ಡಂಡ ಕಾರ್ಯಪ್ಪ
ಮೈಸೂರು

ರಂಗಭೂಮಿಯೇ ನನ್ನ ಅಜೆಂಡಾ: ಅಡ್ಡಂಡ ಕಾರ್ಯಪ್ಪ

February 20, 2020

ಮೈಸೂರು,ಫೆ.19(ವೈಡಿಎಸ್)-ರಂಗಾಯಣದಲ್ಲಿ ಬಿಜೆಪಿ ಅಥವಾ ಇನ್ಯಾವುದೋ ಸಂಘದ ಬಾವುಟ ಹಾರಿಸಲು ಸರ್ಕಾರ ನನ್ನನ್ನು ಕಳಿಸಿಲ್ಲ. ರಂಗಭೂಮಿ ಕಟ್ಟಲು ಬಂದಿದ್ದೇನೆ. ರಂಗಭೂಮಿಯೇ ನನ್ನ ಅಜೆಂಡಾ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು. 40 ವರ್ಷ ರಂಗಭೂಮಿ ಕ್ಷೇತ್ರದಲ್ಲಿನ ನನ್ನ ಅನುಭವ ಅರಿತು ಸರ್ಕಾರ ಈ ಹುದ್ದೆಗೆ ಆಯ್ಕೆ ಮಾಡಿದೆ ಎಂದರು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಕಡೆಯ ದಿನವಾದ ಬುಧವಾರ ಸಂಜೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೈಸೂರಿನ ಜನರ ಹೃದಯ ಗೆಲ್ಲುವ ವಿಶ್ವಾಸದಿಂದ ಬಂದಿದ್ದೇನೆ. ಬಂದಿರುವುದೇ ರಂಗಭೂಮಿ ಕಟ್ಟಲು. ಜನರಿಗೆ…

`ಪೊಲೀಸ್ ಕರ್ತವ್ಯಕೂಟ’ ವೃತ್ತಿ ನೈಪುಣ್ಯ ಗಳಿಸಲು ಸಹಕಾರಿ: ಡಾ.ಚಂದ್ರಗುಪ್ತ
ಮೈಸೂರು

`ಪೊಲೀಸ್ ಕರ್ತವ್ಯಕೂಟ’ ವೃತ್ತಿ ನೈಪುಣ್ಯ ಗಳಿಸಲು ಸಹಕಾರಿ: ಡಾ.ಚಂದ್ರಗುಪ್ತ

February 20, 2020

ಮೈಸೂರು, ಫೆ.19 (ಎಂಟಿವೈ)-ವೃತ್ತಿ ನೈಪುಣ್ಯ ದೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿಕೊಳ್ಳಲು ಸಹಕಾರಿಯಾಗುವ ಕೌಶಲ ವನ್ನು ಪಡೆದುಕೊಳ್ಳುವ ಸಲುವಾಗಿ ಪೊಲೀಸ್ ಸಿಬ್ಬಂದಿಗಳು `ಪೊಲೀಸ್ ಕರ್ತವ್ಯ ಕೂಟ’ದಲ್ಲಿ ತಪ್ಪದೇ ಪಾಲ್ಗೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಉತ್ತೇಜಿಸಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ 2 ದಿನ ಗಳ `ದಕ್ಷಿಣ ವಲಯ ಪೊಲೀಸ್ ಕರ್ತವ್ಯ ಕೂಟ-2019’ ಉದ್ಘಾಟಿಸಿ ಮಾತನಾಡಿದ ಅವರು, ಬಹುಮಾನ ಪಡೆಯ ಲಷ್ಟೇ ಕರ್ತವ್ಯಕೂಟದಲ್ಲಿ ಪಾಲ್ಗೊಳ್ಳುವ ಮನಸ್ಥಿತಿಯಿಂದ ಹೊರಬನ್ನಿ. ನಿಮ್ಮಲ್ಲಿರುವ ಪ್ರತಿಭೆ, ವೃತ್ತಿನೈಪುಣ್ಯ, ತನಿಖೆ ವೈಖರಿ, ಅಪರಾಧ…

ಮೈಸೂರು-ಮಡಿಕೇರಿ ಹೊಸ ಹೆದ್ದಾರಿ ಯೋಜನೆ ಕೈಬಿಟ್ಟು ಮೊದಲು ರೈತರ ಬೇಡಿಕೆ ಈಡೇರಿಸಿ: ರೈತ ಸಂಘ ಆಗ್ರಹ
ಮೈಸೂರು

ಮೈಸೂರು-ಮಡಿಕೇರಿ ಹೊಸ ಹೆದ್ದಾರಿ ಯೋಜನೆ ಕೈಬಿಟ್ಟು ಮೊದಲು ರೈತರ ಬೇಡಿಕೆ ಈಡೇರಿಸಿ: ರೈತ ಸಂಘ ಆಗ್ರಹ

February 20, 2020

ಮೈಸೂರು,ಫೆ.19(ಎಂಟಿವೈ)- ಮೈಸೂರು-ಮಡಿಕೇರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275 ಅನ್ನು ಹೊಸದಾಗಿ ನಿರ್ಮಾಣ ಮಾಡುವ ಪ್ರಸ್ತಾಪ ಕೈಬಿಟ್ಟು, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಬಳಿ ಬುಧÀವಾರ ಪ್ರತಿಭಟನೆ ನಡೆಸಿದರು. ಮೈಸೂರು-ಬಂಟ್ವಾಳ ಮಾರ್ಗದ ಹೆದ್ದಾರಿ ಸುಸ್ಥಿತಿ ಯಲ್ಲಿದ್ದರೂ ರಾಷ್ಟ್ರೀಯ ಹೆದ್ದಾರಿ 275ರ ಹೆಸರಿನಲ್ಲಿ ಹೊಸರಸ್ತೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಸರ್ವೆ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಪಾರದರ್ಶಕವಾಗಿ ಮಾಡದೆ…

ಶ್ರೀರಾಮ ಮಂದಿರ ನಿರ್ಮಾಣ ಆರಂಭ ದಿನಾಂಕ ಎರಡು ವಾರದಲ್ಲಿ ಘೋಷಣೆ
ಮೈಸೂರು

ಶ್ರೀರಾಮ ಮಂದಿರ ನಿರ್ಮಾಣ ಆರಂಭ ದಿನಾಂಕ ಎರಡು ವಾರದಲ್ಲಿ ಘೋಷಣೆ

February 20, 2020

ನವದೆಹಲಿ,ಫೆ.19- ದೆಹಲಿಯ ಗ್ರೇಟರ್ ಕೈಲಾಶ್‍ನಲ್ಲಿ ಶ್ರೀರಾಮ ಮಂದಿರ ಟ್ರಸ್ಟ್‍ನ ಮೊದಲ ಸಭೆ ಬುಧವಾರ 2 ಗಂಟೆ ಕಾಲ ನಡೆದಿದ್ದು, ಮಂದಿರ ನಿರ್ಮಾಣ ಆರಂ ಭದ ದಿನಾಂಕವನ್ನು ಮಂದಿನ 15 ದಿನ ಗಳಲ್ಲಿ ಘೋಷಿಸುವುದಕ್ಕೆ ಸಭೆ ಸಮ್ಮತಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರದಿಂದ ಟ್ರಸ್ಟ್‍ನ ಮುಖ್ಯಸ್ಥ ರಾಗಿ ನೇಮಕಗೊಂಡ ಹಿರಿಯ ವಕೀಲ ಕೆ.ಪರಾಷÀರನ್ ಅವರ ನೇತೃತ್ವದಲ್ಲಿ, ಅವ ರದೇ ನಿವಾಸದಲ್ಲಿ ಸಭೆ ನಡೆದಿದೆ. ಟ್ರಸ್ಟ್ ಅಧ್ಯಕ್ಷರಾಗಿ ಮಹಂತ್ ನೃತ್ಯ ಗೋಪಾಲ್ ದಾಸ್, ಮಹಾ ಕಾರ್ಯದರ್ಶಿಯಾಗಿ ಛಂಪತ್…

ಪೇಂಟಿಂಗ್ ಮಾಡಿಸಲು   ನಿಲ್ಲಿಸಿದ್ದ ಮಿನಿಬಸ್‍ಗೆ ಬೆಂಕಿ
ಮೈಸೂರು

ಪೇಂಟಿಂಗ್ ಮಾಡಿಸಲು  ನಿಲ್ಲಿಸಿದ್ದ ಮಿನಿಬಸ್‍ಗೆ ಬೆಂಕಿ

February 20, 2020

ಮೈಸೂರು,ಫೆ.19(ಎಸ್‍ಪಿಎನ್)-ಪೇಂಟಿಂಗ್‍ಗೆ ನಿಲ್ಲಿಸಿದ್ದ ಮಿನಿಬಸ್‍ಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿಯಾಗಿರುವ ಘಟನೆ ಮೈಸೂರಿನ ನಾಚೇನಹಳ್ಳಿ ಪಾಳ್ಯದಲ್ಲಿ ಮಂಗಳವಾರ ತಡರಾತ್ರಿ ಸಂಭ ವಿಸಿದೆ. ಮೈಸೂರು ನಾಚೇನಹಳ್ಳಿ ಪಾಳ್ಯದ ಜೆ.ಪಿ.ನಗರ-ಗೊರೂರು ರಸ್ತೆ ಮಾರ್ಗದಲ್ಲಿ ಹುಸೇನ್ ಎಂಬುವರು ಮಿನಿಬಸ್‍ಗೆ ಪೇಂಟಿಂಗ್ ಮಾಡಲು ಬೇರೊಬ್ಬ ರಿಂದ ಸಬ್‍ಲೀಸ್ ಪಡೆದು ಪೇಂಟಿಂಗ್ ಮಾಡಲು ರಸ್ತೆ ಬದಿ ನಿಲ್ಲಿಸಿದ್ದರು. ಅರೆಬರೆ ಪೇಂಟಿಂಗ್ ಮಾಡಿದ್ದ ಬಸ್‍ಗೆ ಅಕಸ್ಮಾತ್ ಬೆಂಕಿ ತಗುಲಿದ ಬಗ್ಗೆ ಸರಸ್ವತಿಪುರಂ ಅಗ್ನಿಶಾಮಕ ದಳದ ಕಂಟ್ರೋಲ್ ರೂಂಗೆ ಸಾರ್ವಜನಿಕರೊಬ್ಬರು ತಡರಾತ್ರಿ 1.15ಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು….

ಮಿನಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಮೈಸೂರು

ಮಿನಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

February 20, 2020

ಮೈಸೂರು,ಫೆ.19(ಎಂಟಿವೈ)- ಮೈಸೂರು ಆಕಾಶವಾಣಿ ವೃತ್ತದ ಬಳಿ ಬುಧವಾರ ಬೆಳಿಗ್ಗೆ ಮೋಟಾರ್ ಬೈಕ್ ಹಾಗೂ ಮಿನಿಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂ ಕಿನ ಸೀತಾಪುರ ಗ್ರಾಮದ ನಾರಾಯಣಪ್ಪ (50) ಮೃತರು. ಹೆಲ್ಮೆಟ್ ಧರಿಸಿದ್ದರೂ, ನೆಲಕ್ಕೆ ಬಿದ್ದ ರಭಸಕ್ಕೆ ಹೆಲ್ಮೆಟ್ ಹಾರಿ ಹೋಗಿದೆ. ಇದರಿಂದ ಹಿಂಬದಿ ಚಕ್ರ ಹರಿದು ಸಾವಿಗೀಡಾಗಿದ್ದಾರೆ. ನಂಜನಗೂಡು ರಸ್ತೆಯ ಶಕ್ತಿಧಾಮದಲ್ಲಿ ಗಾರೆ ಕೆಲಸಕ್ಕೆಂದು ಬೈಕ್‍ನಲ್ಲಿ ತೆರಳುವಾಗ ಈ ದುರ್ಘಟನೆ ನಡೆದಿದೆ. ಮೇಸ್ತ್ರ್ರಿಯೊಬ್ಬರ ಬಳಿ ಸೀತಾಪುರದ…

ಮೈಸೂರಿನ ಪ್ರವಾಸಿ ತಾಣಗಳಿಗೆ ಆನ್‍ಲೈನ್ ಟಿಕೆಟ್ ಜಾರಿಗೆ ಚಿಂತನೆ
ಮೈಸೂರು

ಮೈಸೂರಿನ ಪ್ರವಾಸಿ ತಾಣಗಳಿಗೆ ಆನ್‍ಲೈನ್ ಟಿಕೆಟ್ ಜಾರಿಗೆ ಚಿಂತನೆ

February 20, 2020

ಮೈಸೂರು, ಫೆ.19- ಮೈಸೂರು ನಗರವು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ನಗರದ ವಿವಿಧ ಪ್ರವಾಸಿ ತಾಣಗಳಿಗೆ ದೇಶ, ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯು ಬುಕ್ ಮೈ ಶೋ ಆಪ್ ಸಹಯೋಗದಲ್ಲಿ ಸಿಟಿ ಪಾಸ್ ಹಾಗೂ ಸಿಂಗಲ್ ಟಿಕೆಟಿಂಗ್ ಸಿಸ್ಟಮ್ ಜಾರಿ ಮಾಡಲು ಉದ್ದೇಶಿಸಿ ಕರ್ನಾಟಕ ರಾಜ್ಯ ಪ್ರವಾ ಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಲಾಯಿತು. ನಗರದ ಹೋಟೆಲ್ ಮಯೂರದಲ್ಲಿ ನಡೆದ ಸಭೆಯಲ್ಲಿ ವ್ಯವ ಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್…

ಕಲೆಯಿಂದ ಮನುಷ್ಯನ ಬದುಕು ಅರ್ಥಪೂರ್ಣ
ಮೈಸೂರು

ಕಲೆಯಿಂದ ಮನುಷ್ಯನ ಬದುಕು ಅರ್ಥಪೂರ್ಣ

February 20, 2020

ಮೈಸೂರು,ಫೆ.19-ನಗರದ ವಿ.ವಿ.ಮೊಹಲ್ಲಾದಲ್ಲಿರುವ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಸುರಭಿ ಗಾನಕಲಾ ಮಂದಿರ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀಪುರಂದರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ-2020 ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಾಪೋಷಕ, ಕೈಗಾ ರಿಕೋದ್ಯಮಿ ಕೆ.ವಿ.ಮೂರ್ತಿಯವರು ‘ಕಲಾ ಸೇವಾರತ್ನ’ ಪ್ರಶಸ್ತಿ ಸ್ವೀಕರಿಸಿ, ಮಾತ ನಾಡುತ್ತಾ, ಕಲೆಯಿಂದ ನಮ್ಮ ಬದುಕು ಅರ್ಥಪೂರ್ಣ. ಸಾಹಿತ್ಯ, ಸಂಗೀತ, ನೃತ್ಯ, ಯಕ್ಷಗಾನ ಮನುಷ್ಯನಿಗೆ ವಿಶೇಷ ಆನಂದ ಮತ್ತು ತೃಪ್ತಿಯನ್ನು ತರುವುದಲ್ಲದೇ, ಮನಸ್ಸನ್ನೂ ಸಂತೋಷದಿಂದಿರಿಸಲು ಸಹಾಯಕವಾಗುತ್ತದೆಂದು ಹೇಳಿದರಲ್ಲದೇ, ಪುರಾಣ ಕಾಲದಲ್ಲಿ ಸಂಗೀತವು…

ಸಿಎಎ ವಿರುದ್ಧದ ಹೋರಾಟ ದಮನ: ಪೊಲೀಸ್ ವಿರುದ್ಧ ಮಾನವಹಕ್ಕು ಆಯೋಗಕ್ಕೆ ಸಿಎಫ್‍ಐ ದೂರು
ಮೈಸೂರು

ಸಿಎಎ ವಿರುದ್ಧದ ಹೋರಾಟ ದಮನ: ಪೊಲೀಸ್ ವಿರುದ್ಧ ಮಾನವಹಕ್ಕು ಆಯೋಗಕ್ಕೆ ಸಿಎಫ್‍ಐ ದೂರು

February 20, 2020

ಮೈಸೂರು, ಫೆ.19(ಆರ್‍ಕೆಬಿ)-ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹೋರಾಟ ದಮನಿಸಲು ರಾಜ್ಯದ ಪೊಲೀಸರು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗ ಗಂಭೀರ ಗಮನ ಹರಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‍ಐ) ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಪೊಲೀಸ್ ಇಲಾಖೆ ಆರ್‍ಎಸ್‍ಎಸ್ ನಿರ್ದೇಶನದಂತೆ ನಡೆಯು ತ್ತಿರುವ ಶಂಕೆ ಇದೆ. ಮೈಸೂರಲ್ಲಿ `ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ ವಿದ್ಯಾರ್ಥಿನಿಗೆ 10 ಗಂಟೆ ವಿಚಾರಣೆ ನೆಪದಲ್ಲಿ ಮಾನಸಿಕ ಹಿಂಸೆ ನೀಡಲಾಗಿದೆ. ರಾಯಚೂರಲ್ಲಿ ಸಿಎಎ…

ಆಯುರ್ ಮಟಂ ಸಂಸ್ಥೆಯಿಂದ ಆಯುರ್ವೇದ ಸಹಾಯಕ ಚಿಕಿತ್ಸಕರ ತರಬೇತಿ
ಮೈಸೂರು

ಆಯುರ್ ಮಟಂ ಸಂಸ್ಥೆಯಿಂದ ಆಯುರ್ವೇದ ಸಹಾಯಕ ಚಿಕಿತ್ಸಕರ ತರಬೇತಿ

February 20, 2020

ಪಂಚಕರ್ಮ, ಯೋಗ ವಿಜ್ಞಾನ, ಮರ್ಮ  ಚಿಕಿತ್ಸಾ ಪದ್ಧತಿಯ ಸರ್ಟಿಫಿಕೇಟ್ ಕೋರ್ಸ್ ಮೈಸೂರು,ಫೆ.19(ಆರ್‍ಕೆಬಿ)-ಮೈಸೂರಿನಲ್ಲಿ ನೆಲೆಗೊಂಡಿರುವ `ಆಯುರ್ ಮಟಂ ಅಕಾಡೆಮಿಕ್ ಇನ್ಸ್‍ಟಿಟ್ಯೂಟ್ ಆಫ್ ಆಯುರ್ವೇದ ಅಂಡ್ ಯೋಗಿಕ್ ಸೈನ್ಸ್’ ಸಂಸ್ಥೆಯು ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದು ಹೊಸದಾಗಿ ಶೈಕ್ಷಣಿಕ ಕೋರ್ಸ್ ಗಳನ್ನು ಆರಂಭಿಸುತ್ತಿದೆ ಎಂದು ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಡಾ.ಮನು ಬಿ.ಮೆನನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ, ಆಯುರ್ವೇದ ವೈದ್ಯಕೀಯ ಮಾದರಿ ಚಿಕಿತ್ಸಾ ತರಬೇತಿ ನೀಡುವ ಸಂಸ್ಥೆ…

1 669 670 671 672 673 1,611
Translate »