ಮೈಸೂರು

ಫೆ.16ಕ್ಕೆ ಉತ್ತನಹಳ್ಳಿ ಅಮ್ಮನ ಜಾತ್ರೆ
ಮೈಸೂರು

ಫೆ.16ಕ್ಕೆ ಉತ್ತನಹಳ್ಳಿ ಅಮ್ಮನ ಜಾತ್ರೆ

February 5, 2020

ಮೈಸೂರು,ಫೆ.4(ಎಂಟಿವೈ)- ಸರ್ಕಾರಿ ಉತ್ತನಹಳ್ಳಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿ ಉಂಟಾಗಿದ್ದ ಗೊಂದಲಕ್ಕೆ ಮಂಗಳವಾರ ತೆರೆಬಿದ್ದಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಕ್ಯಾಲೆಂಡರ್ ನಲ್ಲಿ ನಮೂದಾಗಿರುವಂತೆ ಫೆ.16ರಂದೇ ಜಾತ್ರೆ ನಡೆಸಲು ಒಕ್ಕೊರಲಿನಿಂದ ಸಮ್ಮತಿಸಲಾಯಿತು. 2020ರ ಕ್ಯಾಲೆಂಡರ್‍ನಲ್ಲಿ ಉತ್ತನಹಳ್ಳಿಯ ಈ ಸಾಲಿನ ಜಾತ್ರಾ ಮಹೋತ್ಸವ ಫೆ.16 ರಂದು ಪ್ರಕಟವಾಗಿತ್ತು. ಆದರೆ ಅರಮನೆ ಸಂಪ್ರದಾಯದಂತೆ ಫೆ.9ರಂದು ಜಾತ್ರಾ ಮಹೋತ್ಸವ ನಡೆಯಬೇಕಿತ್ತು. ಈ ಹಿನ್ನೆಲೆ ಯಲ್ಲಿ ಜಾತ್ರಾ ಸಂಬಂಧ ಗೊಂದಲ ಸೃಷ್ಟಿಯಾಗಿತ್ತು. ಸೋಮವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಗ್ರಾಮಸ್ಥರೊಂದಿಗೆ…

ಕೊರೋನಾ ವೈರಸ್ ಆತಂಕ: ಮೆಡಿಕಲ್ ಸ್ಟೋರ್‍ಗಳಲ್ಲಿ ಮಾಸ್ಕ್‍ಗಳ ಖರೀದಿಗೆ ಮುಗಿಬೀಳುತ್ತಿರುವ ಜನ
ಮೈಸೂರು

ಕೊರೋನಾ ವೈರಸ್ ಆತಂಕ: ಮೆಡಿಕಲ್ ಸ್ಟೋರ್‍ಗಳಲ್ಲಿ ಮಾಸ್ಕ್‍ಗಳ ಖರೀದಿಗೆ ಮುಗಿಬೀಳುತ್ತಿರುವ ಜನ

February 5, 2020

ಮೈಸೂರು, ಫೆ. 4(ಆರ್‍ಕೆ)- ಕೊರೋನಾ ವೈರಸ್‍ಗೆ ಬೆಚ್ಚಿರುವ ಸಾರ್ವಜನಿಕರು ಸುರಕ್ಷತೆಗಾಗಿ ಮಾಸ್ಕ್‍ಗಳ ಮೊರೆ ಹೋಗುತ್ತಿದ್ದಾರೆ. ಚೈನಾ ದೇಶದಲ್ಲಿ ಕಂಡು ಬಂದಿರುವ ಮಾರಣಾಂತಿಕ ಕೊರೋನಾ ವೈರಸ್ ಸೋಂಕು ನೆರೆ ಕೇರಳಾದಲ್ಲೂ ಕಾಣಿಸಿ ಕೊಂಡಿರುವುದರಿಂದ ಆತಂಕಗೊಂಡಿರುವ ನಾಗರಿಕರು ಮುನ್ನೆಚ್ಚರಿಕೆಯಾಗಿ ವೈದ್ಯಕೀಯ ಮಾಸ್ಕ್‍ಗಳನ್ನು ಬಳಸಲು ನಿರ್ಧರಿಸಿ, ಅವುಗಳ ಖರೀದಿಸಲು ಮುಂದಾಗಿದ್ದಾರೆ. ಅಪರೂಪಕ್ಕೆ ಮಾರಾಟವಾಗುತ್ತಿದ್ದ ಮಾಸ್ಕ್‍ಗಳು ಕಳೆದ ಒಂದು ವಾರದಿಂದ ಮೆಡಿಕಲ್ ಸ್ಟೋರ್‍ಗಳಲ್ಲಿ ಹೆಚ್ಚಾಗಿ ಮಾರಾಟ ವಾಗುತ್ತಿವೆ. ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪ್ರಸಿದ್ಧ ರಘುಲಾಲ್ ಅಂಡ್ ಕಂಪನಿಯಲ್ಲಿ ಮಾಸ್ಕ್‍ಗಳಿಗೆ ಭಾರೀ ಬೇಡಿಕೆ ಆರಂಭವಾಗಿದೆ….

ಇರ್ವಿನ್ ರಸ್ತೆ ಬಾಕಿ ಅಭಿವೃದ್ಧಿ ಕಾಮಗಾರಿ ಮಾ.1 ರಿಂದ ಆರಂಭ
ಮೈಸೂರು

ಇರ್ವಿನ್ ರಸ್ತೆ ಬಾಕಿ ಅಭಿವೃದ್ಧಿ ಕಾಮಗಾರಿ ಮಾ.1 ರಿಂದ ಆರಂಭ

February 5, 2020

ಮೈಸೂರು, ಫೆ. 4- ಮೈಸೂರಿನ ಹೃದಯ ಭಾಗದ ಪ್ರತಿಷ್ಠಿತ ಐತಿಹಾಸಿಕ ಇರ್ವಿನ್ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಅಂತೂ ಮಾರ್ಚ್ 1 ರಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇರ್ವಿನ್ ರಸ್ತೆಯಲ್ಲಿ 4 ತಿಂಗಳು ವಾಹನ ಸಂಚಾರ ಬಂದ್ ಮಾಡಿ, ಸುರಕ್ಷಿತ ಕಾಮಗಾರಿಗೆ ಅವಕಾಶ ಕಲ್ಪಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು ನಾಳೆ (ಫೆ. 5) ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲು ಉದ್ದೇಶಿಸಿ ದ್ದಾರೆ. ಕೆಎಸ್‍ಆರ್‍ಟಿಸಿ ಗ್ರಾಮಾಂತರ ಬಸ್ ನಿಲ್ದಾಣ…

ಎರಡು ಮರಗಳಿಗೆ ಕತ್ತರಿ!
ಮೈಸೂರು

ಎರಡು ಮರಗಳಿಗೆ ಕತ್ತರಿ!

February 5, 2020

ಮೈಸೂರು, ಫೆ.4(ಎಂಕೆ)- ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ 2 ಬೃಹತ್ ಮರಗಳನ್ನು ಧರೆಗುರುಳಿಸಿದ್ದು, ಇದರ ಬಗ್ಗೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮರಗಳು ಹಚ್ಚ ಹಸಿರಿನಿಂದ ಕೂಡಿದ್ದು, ಬಲಿಷ್ಠವಾಗಿಯೇ ಇದ್ದವು. ಹೇಳಿ ಕೇಳಿ ಈ ರಸ್ತೆಯಲ್ಲಿ ಮರಗಳಿರುವುದೇ ಅಪರೂಪ. ಅಂತಹದರಲ್ಲಿ ಇದ್ದಂತಹ 2 ಬೃಹತ್ ಮರಗಳನ್ನು ಉರುಳಿಸಿರುವುದರಿಂದ ಈ ರಸ್ತೆ ಬೆಂಗಾಡಾಗಿ ಪರಿಣಮಿಸಿದೆ. ಅಷ್ಟಕ್ಕೂ ಈ ಮರಗಳನ್ನು ಕಡಿಯಲು ಕಾರಣವೇನು? ಇವುಗಳಿಂದ ಯಾರಿಗೆ ತೊಂದರೆಯಾಗು ತ್ತಿತ್ತು? ಎಂದು ಪ್ರಶ್ನಿಸಿರುವ ಪರಿಸರ ಪ್ರೇಮಿ ಶರ್ಮಾ ಅವರು, ರಾಜಾರೋಷವಾಗಿ…

ಷೇರು ಮಾರಾಟ ಪ್ರಸ್ತಾಪ ಖಂಡಿಸಿ ಮೈಸೂರಲ್ಲಿ ಎಲ್‍ಐಸಿ ನೌಕರರ ಪ್ರತಿಭಟನೆ
ಮೈಸೂರು

ಷೇರು ಮಾರಾಟ ಪ್ರಸ್ತಾಪ ಖಂಡಿಸಿ ಮೈಸೂರಲ್ಲಿ ಎಲ್‍ಐಸಿ ನೌಕರರ ಪ್ರತಿಭಟನೆ

February 5, 2020

ಮೈಸೂರು, ಫೆ.4(ಪಿಎಂ)- ಭಾರತೀಯ ಜೀವ ವಿಮಾ ನಿಗಮದ(ಎಲ್‍ಐಸಿ) ಷೇರು ಮಾರಾಟಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಮೈಸೂರಿನ ಬನ್ನಿಮಂಟಪದ ಎಲ್‍ಐಸಿ ಕಚೇರಿ ಆವರಣದಲ್ಲಿ ನಿಗಮದ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು. ಆಲ್ ಇಂಡಿಯಾ ಇನ್ಷೂರೆನ್ಸ್ ಎಂಪ್ಲಾ ಯೀಸ್ ಅಸೋಸಿಯೇಷನ್ (ಎಐಐಇಎ) ಕರೆ ಮೇರೆಗೆ ಮಂಗಳವಾರ ರಾಷ್ಟ್ರವ್ಯಾಪಿ ಎಲ್‍ಐಸಿ ಸಿಬ್ಬಂದಿ ಮಧ್ಯಾಹ್ನ ಊಟದ ವಿರಾಮದ ವೇಳೆ ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದ್ದು, ಮೈಸೂರಿನಲ್ಲೂ ಮಧ್ಯಾಹ್ನ 12.30ರಿಂದ ಒಂದು ಗಂಟೆಗೂ ಹೆಚ್ಚು ಕಾಲ ನೌಕರರು ಪ್ರತಿಭಟನೆ ನಡೆಸಿ ದರು….

ಕಲೆ-ಸಾಹಿತ್ಯದಿಂದ ವೃತ್ತಿಜೀವನದಲ್ಲಿ ಪ್ರಗತಿ: ಪ್ರೊ.ಕಾ.ನಾ.
ಮೈಸೂರು

ಕಲೆ-ಸಾಹಿತ್ಯದಿಂದ ವೃತ್ತಿಜೀವನದಲ್ಲಿ ಪ್ರಗತಿ: ಪ್ರೊ.ಕಾ.ನಾ.

February 5, 2020

ಮೈಸೂರು, ಫೆ.4(ಎಸ್‍ಪಿಎನ್)- ಇಂದಿನ ವಿದ್ಯಾರ್ಥಿಗಳು ಕಲೆ-ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರೆ ಮುಂದೆ ವೃತ್ತಿಜೀವನದಲ್ಲಿ ಉತ್ತಮ ಕೌಶಲ ಬೆಳೆಸಿಕೊಳ್ಳಬಹುದು ಎಂದು ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಕಿವಿಮಾತು ಹೇಳಿದರು. ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ದೇಶಿರಂಗ ಸಾಂಸ್ಕøತಿಕ ಸಂಸ್ಥೆ ಆಯೋಜಿಸಿದ್ದ ದೇಶಿರಂಗ-2020 `ರಂಗ ಮತ್ತು ನೃತ್ಯೋತ್ಸವ’ದಲ್ಲಿ ಅವರು ಮಾತನಾಡಿದರು. `ಕೃಷ್ಣ ಜನಮನ’ ಹಲವು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿ, ರಂಗಭೂಮಿ, ಜನಪದದ ವಿವಿಧ ಪ್ರಕಾರಗಳನ್ನು ಕಲಿಸುತ್ತಿದ್ದಾರೆ. ತಾವು ಕಲಿತಿರುವ ವಿದ್ಯೆಯನ್ನು ಬೇರೆಯವರಿಗೆ ಕಲಿಸುವುದರಲ್ಲಿ ಸಂತೃಪ್ತಭಾವ ಹೊಂದಿ ದ್ದಾರೆ…

ಎಸ್‍ಸಿ, ಎಸ್‍ಟಿ, ಟಿಎಸ್‍ಪಿ ಕುರಿತು ಮಾಸಿಕ ಸಭೆ
ಮೈಸೂರು

ಎಸ್‍ಸಿ, ಎಸ್‍ಟಿ, ಟಿಎಸ್‍ಪಿ ಕುರಿತು ಮಾಸಿಕ ಸಭೆ

February 4, 2020

ಮೈಸೂರು, ಫೆ.3- ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಜಾತಿಗಳ ಉಪಯೋಜನೆ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಅಭಿರಾಮ್. ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮೇಲ್ವಿಚಾರಣೆ ಸಮಿತಿ ಮಾಸಿಕ ಸಭೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕರಾದ ಅಶ್ವಿನ್‍ಕುಮಾರ್, ಹೆಚ್.ಪಿ.ಮಂಜುನಾಥ್ ಪಾಲ್ಗೊಂಡು, ವಿವಿಧ ಇಲಾಖೆ ಗಳ ಅಧಿಕಾರಿಗಳೊಂದಿಗೆ ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ ಕುರಿತು ಚರ್ಚಿಸಿದರು. ಸಭೆಯಲ್ಲಿ ಆಯಾ ಇಲಾಖೆ ಅನುಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಜಾತಿ ಉಪಯೋಜನೆ…

ಕೊರೋನಾ ವೈರಸ್ ಭೀತಿ ಹಿನ್ನೆಲೆ: ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ತಪಾಸಣಾ ಕೌಂಟರ್
ಮೈಸೂರು

ಕೊರೋನಾ ವೈರಸ್ ಭೀತಿ ಹಿನ್ನೆಲೆ: ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ತಪಾಸಣಾ ಕೌಂಟರ್

February 4, 2020

ಮೈಸೂರು, ಫೆ.3(ಪಿಎಂ)- ಚೀನಾ ಮೂಲದ ಕೊರೋನಾ ವೈರಸ್ ಭಾರ ತಕ್ಕೂ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ದೇಶ ದಾದ್ಯಂತ ಮುಂಜಾಗ್ರತಾ ಕ್ರಮ ಕೈಗೊಳ್ಳ ಲಾಗುತ್ತಿದೆ. ಅಂತೆಯೇ ಸೋಮವಾರ ದಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ತಪಾಸಣಾ ಕೌಂಟರ್ ಕಾರ್ಯಾರಂಭ ಮಾಡಿತು. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಈಗಾಗಲೇ ನಿಲ್ದಾಣ ಆಡಳಿತ ವರ್ಗ ಹಾಗೂ ಅಪೋಲೋ ಆಸ್ಪತ್ರೆ ಜಂಟಿ ಆಶ್ರಯದಲ್ಲಿ ಕ್ಲಿನಿಕ್ ಕಾರ್ಯಚಟುವಟಿಕೆಯಲ್ಲಿದ್ದು, ಇದೇ ಕ್ಲಿನಿಕ್‍ನಲ್ಲಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿ ಯಿಂದ ತಪಾಸಣಾ ಕೌಂಟರ್ ಆರಂಭಿಸ…

ಮತ್ತೇ ಡಿಸಿಎಂ ಸ್ಥಾನ ಕೇಳಲ್ಲ
ಮೈಸೂರು

ಮತ್ತೇ ಡಿಸಿಎಂ ಸ್ಥಾನ ಕೇಳಲ್ಲ

February 4, 2020

ಮೈಸೂರು, ಫೆ.3(ಎಸ್‍ಬಿಡಿ)- ಡಿಸಿಎಂ ಸ್ಥಾನ ಕೇಳಿ, ಯಾರಿಗೂ ಮುಜುಗರ ಉಂಟು ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಪುನರುಚ್ಛರಿಸಿದ್ದಾರೆ. ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಸೋಮವಾರ ಆಗಮಿಸಿದ್ದ ಅವರು, ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರ ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಉಪಮುಖ್ಯಮಂತ್ರಿ ಸ್ಥಾನ ಕೇಳಿ ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಮುಜುಗರ ತರುವುದಿಲ್ಲ. ಈ ವಿಚಾರವಾಗಿ ನಾನು ಚರ್ಚೆ ಮಾಡುವುದಿಲ್ಲ. ನಾನು ರಾಷ್ಟ್ರೀಯ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಸಚಿವ ಸಂಪುಟ ವಿಸ್ತರಣೆ ಹಾಗೂ ಯಾರೆಲ್ಲಾ…

ಫೆ.10ರಂದು ಮಾತೃಮಂಡಲಿ ಶಿಶುವಿಕಾಸ ಕೇಂದ್ರದ ಬೆಳ್ಳಿಹಬ್ಬ
ಮೈಸೂರು

ಫೆ.10ರಂದು ಮಾತೃಮಂಡಲಿ ಶಿಶುವಿಕಾಸ ಕೇಂದ್ರದ ಬೆಳ್ಳಿಹಬ್ಬ

February 4, 2020

ಮೈಸೂರು, ಫೆ.3(ಪಿಎಂ)- ಮೈಸೂರಿನ ಗೋಕುಲಂನ ಮಾತೃಮಂಡಲಿ ಶಿಶುವಿಕಾಸ ಕೇಂದ್ರದ ಬೆಳ್ಳಿಹಬ್ಬವನ್ನು ಫೆ.10ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾತೃಮಂಡಲಿ ವಿದ್ಯಾಸಂಸ್ಥೆಗಳ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ಮೊಹಲ್ಲಾದ ಮಾತೃಮಂಡಲಿ ಸಂಸ್ಥೆಗೆ 60 ವರ್ಷ ತುಂಬಿದ ವಜ್ರ ಮಹೋತ್ಸವದ ನೆನಪಿಗಾಗಿ ಗೋಕುಲಂನ ಸಂಸ್ಥೆ ನಿವೇಶನದಲ್ಲಿ 1995ರಲ್ಲಿ ಮಾತೃಮಂಡಲಿ ಶಿಶುವಿಕಾಸ ಕೇಂದ್ರ (ವಿಶೇಷ ಮಕ್ಕಳ ಶಾಲೆ) ಆರಂಭವಾಯಿತು ಎಂದರು. ಶಿಶುವಿಕಾಸ ಕೇಂದ್ರದ ಆರಂಭಕ್ಕೆ ಹಿರಿಯ ಗಾಂಧಿವಾದಿಗಳಾದ ಜಿ.ಎಸ್.ಸುಬ್ರಹ್ಮಣ್ಯಂ, ಬಿ.ಆರ್….

1 683 684 685 686 687 1,611
Translate »