ಬೆಂಗಳೂರು: ಇತ್ತೀಚೆಗೆ ರಾಜ್ಯಸಭೆ ಸದಸ್ಯ ಸ್ಥಾನದೊಂದಿಗೆ ಕಾಂಗ್ರೆಸ್ ತೊರೆದಿದ್ದ ಕೆ.ಸಿ.ರಾಮಮೂರ್ತಿ ಈಗ ಬಿಜೆಪಿಯಿಂದ ರಾಜ್ಯ ಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಇದರೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಿದೆ. ಡಿ.12ರಂದು ರಾಜ್ಯಸಭೆ ಉಪ ಚುನಾವಣೆ ನಡೆಯ ಬೇಕಿತ್ತು. ಆದರೆ ರಾಮಮೂರ್ತಿ ಹೊರತು ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷ್ಮಿ ಘೋಷಿಸಿದರು. ರಾಮಮೂರ್ತಿ ಅವರನ್ನು ಯಡಿಯೂರಪ್ಪ ಅಭಿನಂದಿಸಿದ್ದಾರೆ.
ಇನ್ನು ಸಂಸದರಿಗಿಲ್ಲ ಕ್ಯಾಂಟೀನ್ ಸಬ್ಸಿಡಿ: ಖಜಾನೆಗೆ 17 ಕೋಟಿ ಉಳಿತಾಯ
December 6, 2019ನವದೆಹಲಿ,ಡಿ.5-ಸಂಸತ್ತಿನ ಕ್ಯಾಂಟೀನ್‍ನಲ್ಲಿ ಊಟ ಮತ್ತು ಉಪಾಹಾರದ ಸಬ್ಸಿಡಿ ಪಡೆಯದಿರಲು ಸಂಸದರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಸಲಹೆ ನಂತರ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಲೋಕಸಭೆಯ ಸಂಸದೀಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಸಬ್ಸಿಡಿ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ವರ್ಷಕ್ಕೆ 17 ಕೋಟಿ ಉಳಿತಾಯ ಆಗಲಿದೆ. ಇನ್ನು ಮುಂದೆ ಸಂಸತ್ ಕ್ಯಾಂಟೀನ್‍ನಲ್ಲಿ ಊಟ ಮತ್ತು ಉಪಾಹಾರವು ವಾಸ್ತವ ದರದಲ್ಲಿಯೇ…
ಡಿ.8ರಂದು ಧರ್ಮಸ್ಥಳಕ್ಕೆ ಸಿಎಂ ಬಿಎಸ್‍ವೈ
December 6, 2019ಬೆಂಗಳೂರು,ಡಿ.5-ಉಪ ಚುನಾವಣೆ ನಡೆಯುತ್ತಿರುವ 15 ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದ್ದು, ಡಿ.9 ರಂದು ಫಲಿತಾಂಶ ಹೊರಬೀಳಲಿದೆ. ಬಿಜೆಪಿ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಲು ಹಠಕ್ಕೆ ಬಿದ್ದಿರುವ ಸಿಎಂ ಯಡಿಯೂರಪ್ಪ ಡಿ.8ರಂದು ಧರ್ಮಸ್ಥಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಉಪ ಚುನಾವಣೆಯ ಫಲಿತಾಂಶಕ್ಕೂ ಮೊದಲೇ ಸಿಎಂ ಧರ್ಮಸ್ಥಳದ ಮಂಜುನಾಥನ ಮೊರೆ ಹೋಗಲಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಉಪಚುನಾವಣೆ ಪೈಕಿ ಬಿಜೆಪಿ 5 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದು, ಉಳಿದಂತೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ದೊರಕಿ…
ಮತಗಟ್ಟೆಗೆ ಎಣ್ಣೆ ಹೊಡೆದು ಬಂದ ಮತಗಟ್ಟೆ ಅಧಿಕಾರಿ ಅಮಾನತು!
December 6, 2019ಗೋಕಾಕ್, ಡಿ.5- ರಾಜ್ಯದ 15 ಕ್ಷೇತ್ರಗಳ ವಿಧಾನಸಭಾ ಉಪಚುನಾ ವಣೆಗೆ ಗುರುವಾರ ಮತದಾನ ನಡೆ ಯುತ್ತಿದ್ದು, ಮದ್ಯ ಸೇವಿಸಿ ಬಂದಿದ್ದ ಮತಗಟ್ಟೆ ಅಧಿಕಾರಿಯೊಬ್ಬನನ್ನು ಅಮಾ ನತು ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೂ ಮುನ್ನ ಬುಧವಾರ ಈ ಘಟನೆ ನಡೆದಿದೆ. ಗೋಕಾಕ್ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 231ಕ್ಕೆ ಮತಗಟ್ಟೆ ಅಧಿಕಾರಿಯಾಗಿ ನೇಮಕ ವಾಗಿದ್ದ ಶಿಕ್ಷಕ ಪ್ರಕಾಶ ನಾಸಿಪುಡಿ ಅಮಾ ನತಾಗಿದ್ದಾರೆ. ಮದ್ಯ ಸೇವಿಸಿ ಬಂದ ಶಿಕ್ಷಕನನ್ನು ವೈದ್ಯರು ತಪಾಸಣೆಗೆ ಕರೆ…
ಮೈಸೂರು ಜಿಲ್ಲೆಯಲ್ಲಿ ಡಿ.2ರಿಂದ 10ರವರೆಗೆ ಇಂದ್ರಧನುಷ್ ಅಭಿಯಾನ: 3 ದಿನಗಳಲ್ಲಿ 1,366 ಮಕ್ಕಳು, 392 ಗರ್ಭಿಣಿಯರಿಗೆ ರಕ್ಷಣಾ ಲಸಿಕೆ
December 6, 2019ಮೈಸೂರು, ಡಿ.5(ಪಿಎಂ)- ಮೈಸೂರು ಜಿಲ್ಲೆಯಲ್ಲಿ ಆರಂಭಗೊಂಡಿರುವ ಇಂದ್ರ ಧನುಷ್ ಅಭಿಯಾನದಡಿ ಮೂರು ದಿನಗಳಲ್ಲಿ 1,366 ಮಕ್ಕಳು ಹಾಗೂ 392 ಗರ್ಭಿಣಿಯರಿಗೆ ರಕ್ಷಣಾ ಚುಚ್ಚುಮದ್ದು ನೀಡಲಾಗಿದೆ. ರಕ್ಷಣಾ ಲಸಿಕೆಗಳಿಂದ ವಂಚಿತರಾಗುವ ಗರ್ಭಿಣಿ ಯರು ಹಾಗೂ ಮಕ್ಕಳನ್ನು ಗುರುತಿಸಿ ಲಸಿಕೆ ನೀಡುವ ಅಭಿಯಾನ ಇದಾಗಿದೆ. ಕೇಂದ್ರ ಸರ್ಕಾರದ ಮಿಷನ್ ಇಂದ್ರಧನುಷ್ ಅಭಿಯಾನ ಮೈಸೂರು ಜಿಲ್ಲೆಯಲ್ಲಿ ಇದೇ ಡಿಸೆಂಬರ್‍ನಿಂದ 2020ರ ಮಾರ್ಚ್‍ವರೆಗೆ ಪ್ರತಿ ತಿಂಗಳು 7 ದಿನಗಳು ನಡೆಯಲಿದೆ. ಈ ಪೈಕಿ ಡಿಸೆಂಬರ್‍ನ ಮೊದಲ ಸುತ್ತಿಗೆ ಡಿ.2ರಂದು ಚಾಲನೆ ನೀಡಲಾಗಿದೆ. ಮೊದಲ…
ಪಠ್ಯಪುಸ್ತಕದ ಕತೆಗಳ ಆಧರಿಸಿ ನಾಟಕ ಪ್ರದರ್ಶನದಿಂದ ಕಲಿಕಾ ಶಕ್ತಿ ಹೆಚ್ಚುತ್ತದೆ
December 6, 2019ಮೈಸೂರು, ಡಿ.5(ಎಂಕೆ)- ಪಠ್ಯಪುಸ್ತಕ ದಲ್ಲಿರುವ ಕತೆಗಳನ್ನು ಆಧರಿಸಿ, ನಾಟಕ ಪ್ರದ ರ್ಶನ ನೀಡುವುದರಿಂದ ವಿದ್ಯಾರ್ಥಿಗಳ ಕಲಿಕೆ ಮತ್ತು ಜ್ಞಾಪನಾ ಶಕ್ತಿ ಹೆಚ್ಚುತ್ತದೆ ಎಂದು ಹಿರಿಯ ರಂಗಕರ್ಮಿ ಡಾ. ಹೆಚ್.ಕೆ.ರಾಮನಾಥ್ ಹೇಳಿದರು. ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಕ್ಷತ್ರ ಫೌಂಡೇಶನ್, ಮೈಸೂರು ಫಿಲ್ಮಿ ಇನ್ಸ್ಟಿಟ್ಯೂಟ್ ಆಯೋ ಜಿಸಿದ್ದ 10ನೇ ತರಗತಿ ಪಠ್ಯದಲ್ಲಿರುವ ಪಂಪ, ರನ್ನ ಮತ್ತು ಕುಮಾರವ್ಯಾಸ ಹಾಗೂ 12ನೇ ಶತಮಾನದ ವಚನಕಾರರ ಆಯ್ದ ಭಾಗ ಗಳ ‘ಕವಿ ಜಂಗಮರು’ ನಾಟಕ ಪ್ರದರ್ಶನ ಹಾಗೂ ‘ಮಿನುಗು ನಕ್ಷತ್ರ’ ಪ್ರಶಸ್ತಿ…
ಬೈ ಎಲೆಕ್ಷನ್ ಮುಗಿದ ಮೇಲೆ ಸಿದ್ದರಾಮಯ್ಯ ಬಿಜೆಪಿಗೆ
December 6, 2019ಗೋಕಾಕ್, ಡಿ.5- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಗೋಕಾಕ್ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಮತದಾನದ ಮಾಡಿದ ಬಳಿಕ ಸುದ್ದಿಗಾರರೊಂ ದಿಗೆ ಮಾತನಾಡಿದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ, ಉಪ ಚುನಾವಣೆ ಮುಗಿದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಪೆÇಲೀಸರಿಗೆ ಭರ್ಜರಿ ಸಿಹಿ ಸುದ್ದಿ: 15 ಸಾಂದರ್ಭಿಕ ರಜೆಗೆ ಸಿಎಂ ಒಪ್ಪಿಗೆ
December 6, 2019ಬೆಂಗಳೂರು, ಡಿ.5-ರಾಜ್ಯ ಸರ್ಕಾರವು ಪೆÇಲೀಸರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 15ರಿಂದ 10 ದಿನಕ್ಕೆ ಕಡಿತಗೊಳಿಸಿದ್ದ ಸಾಂದರ್ಭಿಕ ರಜೆಗಳನ್ನು ಶಿಕ್ಷಣ, ಆರೋಗ್ಯ ಮತ್ತು ಪೆÇಲೀಸ್ ಇಲಾಖೆ ಸಿಬ್ಬಂದಿಗೆ ಮಾತ್ರ ಅನ್ವಯಿಸುವಂತೆ ಮತ್ತೆ 15 ದಿನಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಸ್ತಾವನೆ ಮೇರೆಗೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ನೌಕರರಿಗೆ ಮಾತ್ರ 15 ದಿನ ಸಾಂದರ್ಭಿಕ ಮತ್ತು 2 ದಿನ ಪರಿಮಿತ ರಜೆಯನ್ನು ಹೆಚ್ಚಿಸಲು ನವೆಂಬರ್ 30 ರಂದು ಸಿಎಂ…
ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ರೇಜರ್ನಿಂದ ಹಲ್ಲೆ: ಯುವಕನ ಬಂಧನ
December 6, 2019ಮೈಸೂರು,ಡಿ.5(ವೈಡಿಎಸ್)-ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ರೇಜರ್ನಿಂದ ಹಲ್ಲೆ ನಡೆಸಿದ ಯುವಕನನ್ನು ವಿ.ವಿ.ಪುರಂ ಪೆÇಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನ ಕೊಪ್ಪಲಿನ ನಿವಾಸಿಯೂ ಆದ ಖಾಸಗಿ ಕಂಪನಿ ಉದ್ಯೋಗಿ ಅಮೃತ್‍ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತ ಹೆಬ್ಬಾಳ್ ನಿವಾಸಿ ಯುವತಿಯನ್ನು ಪ್ರೀತಿಸುವಂತೆ ಪದೇ ಪದೆ ಪೀಡಿಸುತ್ತಿದ್ದು, ಆಕೆ ನಿರಾಕರಿಸಿದ್ದಾಳೆ. ಡಿ.4ರಂದು ಬೆಳಿಗ್ಗೆ 9.30ರ ವೇಳೆಗೆ ಕೆಲಸಕ್ಕೆ ಹೋಗಲು ಒಂಟಿಕೊಪ್ಪ ಲಿನ ಚಂದ್ರೋದಯ ಆಸ್ಪತ್ರೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಯುವಕರು, ರೇಜóರ್‍ನಿಂದ ಆಕೆಯ ಮುಖ ಕೊಯ್ದು…
ಇಂದಿನಿಂದ ರಂಗವಲ್ಲಿ `ರಂಗಸಂಭ್ರಮ’: ಮೂರು ದಿನಗಳ ನಾಟಕೋತ್ಸವ
December 6, 2019ಮೈಸೂರು,ಡಿ.5(ಆರ್‍ಕೆಬಿ)-ಮೈಸೂರಿನ ರಂಗವಲ್ಲಿ ತಂಡ ಡಿ.6ರಿಂದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಮೂರು ದಿನಗಳ `ರಂಗವಲ್ಲಿ ರಂಗ ಸಂಭ್ರಮ’ ನಾಟಕೋತ್ಸವ ಆಯೋಜಿಸಿದೆ ಎಂದು ತಂಡದ ಪದಾಧಿಕಾರಿ ಮಂಜುನಾಥ ಶಾಸ್ತ್ರಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ನಾಟಕೋತ್ಸವದ ವಿವರಗಳನ್ನು ನೀಡಿ, ಪ್ರತಿದಿನ ಸಂಜೆ 7 ಗಂಟೆಗೆ ನಾಟಕಗಳು ನಡೆಯಲಿದ್ದು, ನಾಟಕಗಳಿಗೂ ಮುನ್ನ ವಿವಿಧ ಪ್ರಕಾರದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸ ಲಾಗುವುದು ಎಂದರು. ಡಿ.6ರಂದು ಸಂಜೆ 4 ಗಂಟೆಗೆ ಕಲಾಮಂದಿರ ಮನೆಯಂಗಳದಲ್ಲಿ ರಂಗಸಂಭ್ರಮಕ್ಕೆ ರಂಗಭೂಮಿ ಮತ್ತು ಚಲನಚಿತ್ರ ಹಿರಿಯ ನಟ ಶರತ್…










