ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ರೇಜರ್ನಿಂದ  ಹಲ್ಲೆ: ಯುವಕನ ಬಂಧನ
ಮೈಸೂರು

ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ರೇಜರ್ನಿಂದ  ಹಲ್ಲೆ: ಯುವಕನ ಬಂಧನ

December 6, 2019

ಮೈಸೂರು,ಡಿ.5(ವೈಡಿಎಸ್)-ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ರೇಜರ್ನಿಂದ ಹಲ್ಲೆ ನಡೆಸಿದ ಯುವಕನನ್ನು ವಿ.ವಿ.ಪುರಂ ಪೆÇಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನ ಕೊಪ್ಪಲಿನ ನಿವಾಸಿಯೂ ಆದ ಖಾಸಗಿ ಕಂಪನಿ ಉದ್ಯೋಗಿ ಅಮೃತ್‍ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತ ಹೆಬ್ಬಾಳ್ ನಿವಾಸಿ ಯುವತಿಯನ್ನು ಪ್ರೀತಿಸುವಂತೆ ಪದೇ ಪದೆ ಪೀಡಿಸುತ್ತಿದ್ದು, ಆಕೆ ನಿರಾಕರಿಸಿದ್ದಾಳೆ. ಡಿ.4ರಂದು ಬೆಳಿಗ್ಗೆ 9.30ರ ವೇಳೆಗೆ ಕೆಲಸಕ್ಕೆ ಹೋಗಲು ಒಂಟಿಕೊಪ್ಪ ಲಿನ ಚಂದ್ರೋದಯ ಆಸ್ಪತ್ರೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಯುವಕರು, ರೇಜóರ್‍ನಿಂದ ಆಕೆಯ ಮುಖ ಕೊಯ್ದು ಪರಾರಿಯಾಗಿದ್ದಾರೆ. ಯುವತಿ, ಪ್ರೀತಿಗೆ ನಿರಾಕರಿಸಿದ್ದರಿಂದ ಅಮೃತ್, ಸ್ನೇಹಿತರನ್ನು ಕಳುಹಿಸಿ ಹಲ್ಲೆ ಮಾಡಿಸಿದ್ದು, ಕ್ರಮ ಕೈಗೊಳ್ಳಬೇಕೆಂದು ವಿವಿಪುರಂ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೆÇಲೀಸರು ಅಮೃತ್‍ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಲ್ಲೆ ನಡೆಸಿದವರ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

Translate »