ರಾಜ್ಯ ಸರ್ಕಾರದಿಂದ ಪೆÇಲೀಸರಿಗೆ ಭರ್ಜರಿ ಸಿಹಿ ಸುದ್ದಿ: 15 ಸಾಂದರ್ಭಿಕ ರಜೆಗೆ ಸಿಎಂ ಒಪ್ಪಿಗೆ
ಮೈಸೂರು

ರಾಜ್ಯ ಸರ್ಕಾರದಿಂದ ಪೆÇಲೀಸರಿಗೆ ಭರ್ಜರಿ ಸಿಹಿ ಸುದ್ದಿ: 15 ಸಾಂದರ್ಭಿಕ ರಜೆಗೆ ಸಿಎಂ ಒಪ್ಪಿಗೆ

December 6, 2019

ಬೆಂಗಳೂರು, ಡಿ.5-ರಾಜ್ಯ ಸರ್ಕಾರವು ಪೆÇಲೀಸರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 15ರಿಂದ 10 ದಿನಕ್ಕೆ ಕಡಿತಗೊಳಿಸಿದ್ದ ಸಾಂದರ್ಭಿಕ ರಜೆಗಳನ್ನು ಶಿಕ್ಷಣ, ಆರೋಗ್ಯ ಮತ್ತು ಪೆÇಲೀಸ್ ಇಲಾಖೆ ಸಿಬ್ಬಂದಿಗೆ ಮಾತ್ರ ಅನ್ವಯಿಸುವಂತೆ ಮತ್ತೆ 15 ದಿನಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಸ್ತಾವನೆ ಮೇರೆಗೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ನೌಕರರಿಗೆ ಮಾತ್ರ 15 ದಿನ ಸಾಂದರ್ಭಿಕ ಮತ್ತು 2 ದಿನ ಪರಿಮಿತ ರಜೆಯನ್ನು ಹೆಚ್ಚಿಸಲು ನವೆಂಬರ್ 30 ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದರು. ಆದರೆ ಪೆÇಲೀಸರಿಗೆ ರಜೆ ದಿನಗಳನ್ನು ಹೆಚ್ಚಿಸದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೆÇಲೀಸರಿಗೂ 15 ಸಾಂದರ್ಭಿಕ, 2 ಪರಿಮಿತ ರಜೆ ಮುಂದುವರೆಸುವಂತೆ ಸಿಎಂಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ರಜೆ ಹೆಚ್ಚಿಸಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ.

Translate »