ಮತಗಟ್ಟೆಗೆ ಎಣ್ಣೆ ಹೊಡೆದು ಬಂದ ಮತಗಟ್ಟೆ ಅಧಿಕಾರಿ ಅಮಾನತು!
ಮೈಸೂರು

ಮತಗಟ್ಟೆಗೆ ಎಣ್ಣೆ ಹೊಡೆದು ಬಂದ ಮತಗಟ್ಟೆ ಅಧಿಕಾರಿ ಅಮಾನತು!

December 6, 2019

ಗೋಕಾಕ್, ಡಿ.5- ರಾಜ್ಯದ 15 ಕ್ಷೇತ್ರಗಳ ವಿಧಾನಸಭಾ ಉಪಚುನಾ ವಣೆಗೆ ಗುರುವಾರ ಮತದಾನ ನಡೆ ಯುತ್ತಿದ್ದು, ಮದ್ಯ ಸೇವಿಸಿ ಬಂದಿದ್ದ ಮತಗಟ್ಟೆ ಅಧಿಕಾರಿಯೊಬ್ಬನನ್ನು ಅಮಾ ನತು ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೂ ಮುನ್ನ ಬುಧವಾರ ಈ ಘಟನೆ ನಡೆದಿದೆ. ಗೋಕಾಕ್ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 231ಕ್ಕೆ ಮತಗಟ್ಟೆ ಅಧಿಕಾರಿಯಾಗಿ ನೇಮಕ ವಾಗಿದ್ದ ಶಿಕ್ಷಕ ಪ್ರಕಾಶ ನಾಸಿಪುಡಿ ಅಮಾ ನತಾಗಿದ್ದಾರೆ. ಮದ್ಯ ಸೇವಿಸಿ ಬಂದ ಶಿಕ್ಷಕನನ್ನು ವೈದ್ಯರು ತಪಾಸಣೆಗೆ ಕರೆ ದೊಯ್ಯುವಾಗ ಅಲ್ಲಿಂದಲೇ ಪರಾರಿ ಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕ ನನ್ನು ಅಮಾನತು ಮಾಡಿ ಚುನಾವಣಾ ಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.

Translate »