ಪಠ್ಯಪುಸ್ತಕದ ಕತೆಗಳ ಆಧರಿಸಿ ನಾಟಕ ಪ್ರದರ್ಶನದಿಂದ ಕಲಿಕಾ ಶಕ್ತಿ ಹೆಚ್ಚುತ್ತದೆ
ಮೈಸೂರು

ಪಠ್ಯಪುಸ್ತಕದ ಕತೆಗಳ ಆಧರಿಸಿ ನಾಟಕ ಪ್ರದರ್ಶನದಿಂದ ಕಲಿಕಾ ಶಕ್ತಿ ಹೆಚ್ಚುತ್ತದೆ

December 6, 2019

ಮೈಸೂರು, ಡಿ.5(ಎಂಕೆ)- ಪಠ್ಯಪುಸ್ತಕ ದಲ್ಲಿರುವ ಕತೆಗಳನ್ನು ಆಧರಿಸಿ, ನಾಟಕ ಪ್ರದ ರ್ಶನ ನೀಡುವುದರಿಂದ ವಿದ್ಯಾರ್ಥಿಗಳ ಕಲಿಕೆ ಮತ್ತು ಜ್ಞಾಪನಾ ಶಕ್ತಿ ಹೆಚ್ಚುತ್ತದೆ ಎಂದು ಹಿರಿಯ ರಂಗಕರ್ಮಿ ಡಾ. ಹೆಚ್.ಕೆ.ರಾಮನಾಥ್ ಹೇಳಿದರು.

ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಕ್ಷತ್ರ ಫೌಂಡೇಶನ್, ಮೈಸೂರು ಫಿಲ್ಮಿ ಇನ್ಸ್ಟಿಟ್ಯೂಟ್ ಆಯೋ ಜಿಸಿದ್ದ 10ನೇ ತರಗತಿ ಪಠ್ಯದಲ್ಲಿರುವ ಪಂಪ, ರನ್ನ ಮತ್ತು ಕುಮಾರವ್ಯಾಸ ಹಾಗೂ 12ನೇ ಶತಮಾನದ ವಚನಕಾರರ ಆಯ್ದ ಭಾಗ ಗಳ ‘ಕವಿ ಜಂಗಮರು’ ನಾಟಕ ಪ್ರದರ್ಶನ ಹಾಗೂ ‘ಮಿನುಗು ನಕ್ಷತ್ರ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಪಠ್ಯಪುಸ್ತಕದಲ್ಲಿರುವ ಸಾಹಸಭೀಮ ವಿಜಯದಂತಹ ಕತೆಗಳನ್ನು ವಿದ್ಯಾರ್ಥಿ ಗಳಿಗೆ ದೃಶ್ಯ ರೂಪದಲ್ಲಿ ತೋರಿಸಿದಾಗ ಅವರಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗುತ್ತದೆ. ಅಲ್ಲದೆ ದೃಶ್ಯ ರೂಪದಲ್ಲಿ ನೋಡಿದ ಕತೆ ದೀರ್ಘ ಕಾಲದವರೆಗೆ ನೆನಪಿನಲ್ಲಿರುತ್ತದೆ. ಈ ನಿಟ್ಟಿನಲ್ಲಿ ನಕ್ಷತ್ರ ಫೌಂಡೇಶನ್ ಮತ್ತು ಮೈಸೂರು ಫಿಲ್ಮಿ ಇನ್ಸ್ಟಿಟ್ಯೂಟ್ ಮಾಡುತ್ತಿ ರುವ ಕೆಲಸ ಶ್ಲಾಘನೀಯವಾದುದು ಎಂದರು.

ಪೋಷಕರು ತಮ್ಮ ಮಕ್ಕಳನ್ನು ತುಂಬಾ ಚೆನ್ನಾಗಿ ಓದಿಸುವುದರ ಜತೆಗೆ ಯಾವು ದಾದರೂ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಬೇಕು. ಮಕ್ಕಳ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಬೆಳೆಸಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಪಾಂಡುರಂಗ ಮಾತನಾಡಿ, 10ನೇ ತರಗತಿಯಲ್ಲಿರುವ ಪಾಠವನ್ನು ಆಧ ರಿಸಿ, ನಾಟಕ ಪ್ರದರ್ಶನ ನೀಡುವುದು ಉತ್ತಮ ಯೋಚನೆಯಾಗಿದೆ. ಅದರಂತೆ ಎಲ್ಲಾ ಶಾಲೆಗಳಲ್ಲಿಯೂ ಈ ರೀತಿಯ ನಾಟಕ ಪ್ರದ ರ್ಶನ ನೀಡಿದರೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದರು.

ಪಂಪ, ರನ್ನರಂತಹ ಮಹಾಕವಿಗಳು ಹಾಗೂ 12ನೇ ಶತಮಾನದ ವಚನಕಾರರ ಸಂದೇಶಗಳು ವಿಧ್ಯಾರ್ಥಿಗಳು ಮತ್ತು ಸಮಾ ಜಕ್ಕೆ ಅತ್ಯಗತ್ಯವಾಗಿದೆ. ಹಳಗನ್ನಡ ರೂಪದ ಲ್ಲಿರುವ ಕತೆಗಳನ್ನು ಸಂಭಾಷಣೆ ಮೂಲಕ ದೃಶ್ಯ ರೂಪದಲ್ಲಿ ಪ್ರದರ್ಶನ ಮಾಡಿದಾಗ ಮಕ್ಕಳಲ್ಲಿ ಹಳಗನ್ನಡ ಅರಿವು ಮೂಡು ತ್ತದೆ. ಜತೆಗೆ ಹಳಗನ್ನಡ ಕಲಿಯಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಹಿರಿಯ ರಂಗಕರ್ಮಿ ಡಾ. ಹೆಚ್.ಕೆ.ರಾಮನಾಥ್ ಹಾಗೂ ಕಲಾವಿದ ಜೀವನ್ ಕುಮಾರ್ ಹೆಗ್ಗೋಡು ಅವರಿಗೆ ‘ಮಿನುಗು ನಕ್ಷತ್ರ’ ಪ್ರಶಸ್ತಿ ನೀಡಿ ಅಭಿನಂದಿ ಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮ, ಉದ್ಯಮಿ ಡಾ. ದಿಲೀಪ್‍ಕುಮಾರ್, ವಿಶ್ವ ವಚನ ಫೌಂಡೇ ಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಕ್ಷತ್ರ ಫೌಂಡೇಶನ್ ಸ್ಥಾಪಕ ಸತೀಶ್ ಪೊನ್ನಾಚಿ ಮತ್ತಿತರರು ಉಪಸ್ಥಿತರಿದ್ದರು.

Translate »