ಇನ್ನು ಸಂಸದರಿಗಿಲ್ಲ ಕ್ಯಾಂಟೀನ್ ಸಬ್ಸಿಡಿ: ಖಜಾನೆಗೆ 17 ಕೋಟಿ ಉಳಿತಾಯ
ಮೈಸೂರು

ಇನ್ನು ಸಂಸದರಿಗಿಲ್ಲ ಕ್ಯಾಂಟೀನ್ ಸಬ್ಸಿಡಿ: ಖಜಾನೆಗೆ 17 ಕೋಟಿ ಉಳಿತಾಯ

December 6, 2019

ನವದೆಹಲಿ,ಡಿ.5-ಸಂಸತ್ತಿನ ಕ್ಯಾಂಟೀನ್‍ನಲ್ಲಿ ಊಟ ಮತ್ತು ಉಪಾಹಾರದ ಸಬ್ಸಿಡಿ ಪಡೆಯದಿರಲು ಸಂಸದರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಸಲಹೆ ನಂತರ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಲೋಕಸಭೆಯ ಸಂಸದೀಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಸಬ್ಸಿಡಿ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ವರ್ಷಕ್ಕೆ 17 ಕೋಟಿ ಉಳಿತಾಯ ಆಗಲಿದೆ. ಇನ್ನು ಮುಂದೆ ಸಂಸತ್ ಕ್ಯಾಂಟೀನ್‍ನಲ್ಲಿ ಊಟ ಮತ್ತು ಉಪಾಹಾರವು ವಾಸ್ತವ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ.

ಈವರೆಗೆ ಸಬ್ಸಿಡಿ ದರದಲ್ಲಿ ಸಂಸದರಿಗೆ ದೊರೆಯುತ್ತಿದ್ದ ಊಟ, ಉಪಾಹಾರದ ವಿವರ: ಬ್ರೆಡ್ ಮತ್ತು ಬೆಣ್ಣೆ 6, ಚಪಾತಿ-2, ಚಿಕನ್ ಕರಿ-50, ಚಿಕನ್ ಕಟ್‍ಲೆಟ್ (ಪ್ರತಿ ಪ್ಲೇಟ್)-41, ತಂದೂರಿ ಚಿಕನ್-60, ಕಾಫಿ-5, ಪ್ಲೇನ್ ದೋಸೆ-12, ಫಿಶ್ ಕರಿ-40, ಹೈದರಾಬಾದಿ ಚಿಕನ್ ಬಿರಿಯಾನಿ-65, ಮಟನ್ ಕರಿ- 45, ಅನ್ನ-7, ಸೂಪ್-14.

Translate »