ಬೆಂಗಳೂರು: ಇತ್ತೀಚೆಗೆ ರಾಜ್ಯಸಭೆ ಸದಸ್ಯ ಸ್ಥಾನದೊಂದಿಗೆ ಕಾಂಗ್ರೆಸ್ ತೊರೆದಿದ್ದ ಕೆ.ಸಿ.ರಾಮಮೂರ್ತಿ ಈಗ ಬಿಜೆಪಿಯಿಂದ ರಾಜ್ಯ ಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಇದರೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಿದೆ. ಡಿ.12ರಂದು ರಾಜ್ಯಸಭೆ ಉಪ ಚುನಾವಣೆ ನಡೆಯ ಬೇಕಿತ್ತು. ಆದರೆ ರಾಮಮೂರ್ತಿ ಹೊರತು ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷ್ಮಿ ಘೋಷಿಸಿದರು. ರಾಮಮೂರ್ತಿ ಅವರನ್ನು ಯಡಿಯೂರಪ್ಪ ಅಭಿನಂದಿಸಿದ್ದಾರೆ.