ಶಬರಿಮಲೆ ವಿವಾದದಲ್ಲಿ ಸುಪ್ರೀಂ ನೀಡಿದ ತೀರ್ಪು ಅಂತಿಮವಲ್ಲ: ನ್ಯಾಯಮೂರ್ತಿ ಬೊಬ್ಡೆ
ಮೈಸೂರು

ಶಬರಿಮಲೆ ವಿವಾದದಲ್ಲಿ ಸುಪ್ರೀಂ ನೀಡಿದ ತೀರ್ಪು ಅಂತಿಮವಲ್ಲ: ನ್ಯಾಯಮೂರ್ತಿ ಬೊಬ್ಡೆ

December 6, 2019

ಹೊಸದಿಲ್ಲಿ, ಡಿ.5- ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ಸಂಬಂಧ ಕಳೆದ ವರ್ಷ ನೀಡಿದ್ದ ತೀರ್ಪು ಅಂತಿಮವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಬೊಬ್ಡೆ ಹೇಳಿದ್ದಾರೆ.

ಬಿಂದು ಅಮ್ಮಿನಿ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುವ ವೇಳೆ ಸಿಜೆಐ ಈ ಅಭಿಪ್ರಾಯ ವ್ಯಕ್ತಪಡಿಸಿದರು. ದೇವಾಲಯ ಪ್ರವೇಶಕ್ಕೆ ರಕ್ಷಣೆ ಒದಗಿಸುವಂತೆ ಕೋರಿ ಅಮ್ಮಿನಿ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳು ಮಂದಿರಕ್ಕೆ ಭೇಟಿ ನೀಡುವ ಪ್ರಯತ್ನ ಮಾಡಿದಾಗ ಅಮ್ಮಿನಿ ಮೇಲೆ ಪೆಪ್ಪರ್ ಸ್ಪ್ರೇ ದಾಳಿ ನಡೆದಿತ್ತು. ಅಮ್ಮಿನಿ ಪರವಾಗಿ ವಾದ ಮಂಡಿಸುವ ವೇಳೆ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕಳೆದ ತಿಂಗಳು ಕಕ್ಷಿದಾರರ ಮೇಲೆ ನಡೆದ ಪೆಪ್ಪರ್ ಸ್ಪ್ರೇ ದಾಳಿಯನ್ನು ವಿವರಿಸಿದರು. ಅಮ್ಮಿನಿಯವರ ಮಂದಿರ ಭೇಟಿಗೆ ಕೇರಳ ಸರಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅವರ ವಕೀಲ ಪದ್ಮನಾಭನ್ ಆಗ್ರಹಿಸಿದರು. ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಕೂಡಾ, ಎಲ್ಲ ವಯಸ್ಸಿನ ಮಹಿಳೆಯರ ಭೇಟಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

Translate »