ಮಾಜಿ ಕಾರ್ಪೊರೇಟರ್ ಗಿರೀಶ್ ಪ್ರಸಾದ್ ವಿರುದ್ಧದ ಕೊಲೆ ಬೆದರಿಕೆ ಪ್ರಕರಣದ ಬಿ ರಿಪೋರ್ಟ್ ನ್ಯಾಯಾಲಯದಿಂದ ತಿರಸ್ಕøತ
ಮೈಸೂರು

ಮಾಜಿ ಕಾರ್ಪೊರೇಟರ್ ಗಿರೀಶ್ ಪ್ರಸಾದ್ ವಿರುದ್ಧದ ಕೊಲೆ ಬೆದರಿಕೆ ಪ್ರಕರಣದ ಬಿ ರಿಪೋರ್ಟ್ ನ್ಯಾಯಾಲಯದಿಂದ ತಿರಸ್ಕøತ

December 6, 2019

ಮೈಸೂರು,ಡಿ.5-ಮಾಜಿ ಕಾರ್ಪೊರೇಟರ್ ಗಿರೀಶ್ ಪ್ರಸಾದ್ ವಿರುದ್ಧ ದಾಖ ಲಾಗಿದ್ದ ಕೊಲೆ ಬೆದರಿಕೆ ಪ್ರಕರಣಕ್ಕೆ ವಿವಿ ಪುರಂ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಮೈಸೂರಿನ 4ನೇ ಹೆಚ್ಚುವರಿ ಒಂದನೇ ಜೆಎಂಎಫ್‍ಸಿ ನ್ಯಾಯಾಲಯ ತಿರಸ್ಕರಿಸಿದೆ.

ವಿವರ: ಗೋಕುಲಂ 3ನೇ ಹಂತದ ನಿವಾಸಿ ಚಿಕ್ಕನರಸೇಗೌಡ ಅವರು, ತಾವು 2017ರ ಜುಲೈ 27ರಂದು ಸಂಜೆ ಗೋಕುಲಂ 3ನೇ ಹಂತದ ಮೈಸೂರು ಇನ್ ಬಳಿಯಿರುವ ಟೀ ಸ್ಟಾಲ್ ಬಳಿ ಕುಳಿತಿದ್ದಾಗ ಅಂದಿನ 31ನೇ ವಾರ್ಡ್ ಕಾರ್ಪೊ ರೇಟರ್ ಗಿರೀಶ್‍ಪ್ರಸಾದ್ ಮತ್ತು ಅವರ ಜೊತೆಯಲ್ಲಿದ್ದ ಅಶೋಕ, ಜಯಣ್ಣ, ತೇಜಸ್ ಎಂಬುವರು ತಮ್ಮನ್ನು ನಿಂದಿಸಿ ಹತ್ತಾರು ಜನರ ಮುಂದೆ ಮಾನ-ಮರ್ಯಾದೆ ತೆಗೆದು, ಕೊಲೆ ಬೆದರಿಕೆ ಹಾಕಿದರು ಎಂದು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖ ಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ 2017ರ ಅ.20ರಂದು ವಿವಿ ಪುರಂ ಪೊಲೀಸರು ಗಿರೀಶ್ ಪ್ರಸಾದ್ ಮತ್ತಿತರರ ವಿರುದ್ಧ ಭಾರತೀಯ ದಂಡ ಸಂಹಿತೆ 506, 34, 504, 323ರಡಿ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಿದ್ದರು.

ತನಿಖೆ ನಡೆಸಿದ ಪೊಲೀಸರು 2017ರ ಜುಲೈ 27ರ ಘಟನೆಯ ಫಿರ್ಯಾದು ದಾರರು ಮತ್ತು ಆರೋಪಿತರ ನಡುವೆ ನಡೆದ ಮಾತಾಗಿರುತ್ತದೆಯೇ ಹೊರತು ಅಲ್ಲಿ ಜಗಳ ನಡೆದಿರುವುದಿಲ್ಲ. ತನಿಖಾ ಕಾಲದಲ್ಲಿ ಕಂಡು ಬಂದ ಅಂಶಗಳ ಹಿನ್ನೆಲೆಯಲ್ಲಿ ಫಿರ್ಯಾದಿದಾರರ ಆರೋಪವನ್ನು ರುಜುವಾತು ಮಾಡುವ ಯಾವುದೇ ಸಾಕ್ಷಿಗಳ ಹೇಳಿಕೆಗಳು ಅವರ ಆರೋಪಕ್ಕೆ ಪೂರಕವಾಗಿಲ್ಲದ ಕಾರಣ ಇದೊಂದು ಸಾಕ್ಷ್ಯಾಧಾರಗಳ ಕೊರತೆ ಪ್ರಕರಣವೆಂದು ಭಾವಿಸಿ ಬಿ ರಿಪೋರ್ಟ್ ಸಲ್ಲಿಸಿದ್ದರು.
ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯವು ಫಿರ್ಯಾದಿ ಹಾಗೂ ಅವರ ಸಾಕ್ಷಿಗಳ ಪ್ರಮಾಣೀಕೃತ ಹೇಳಿಕೆಗಳನ್ನು ನೀಡಲು ಆದೇಶಿಸಿದೆ.

Translate »