ಹೈದರಾಬಾದ್: 150 ರೂ. ಗಡಿ ಮುಟ್ಟಿದ ಈರುಳ್ಳಿ ದರ
ಮೈಸೂರು

ಹೈದರಾಬಾದ್: 150 ರೂ. ಗಡಿ ಮುಟ್ಟಿದ ಈರುಳ್ಳಿ ದರ

December 6, 2019

ನವದೆಹಲಿ,ಡಿ.5- ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಹೈದರಾಬಾದ್ ಸೇರಿದಂತೆ ದೇಶದ ಹಲವೆಡೆ ಈರುಳ್ಳಿ ಬೆಲೆ ಕೆಜಿಗೆ 150 ರೂ.ಗೆ ಏರಿರುವುದನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದರು.

ಸಂಸದರೊಬ್ಬರು ಈರುಳ್ಳಿ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಉದ್ದೇ ಶಿಸಿ, `ನೀವು ಈರುಳ್ಳಿ ತಿನ್ನುತ್ತೀರಾ? ಬೆಲೆ ಭಾರೀ ಏರಿಕೆಯಾಗಿದೆ ಯಲ್ಲ, ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದರು.

ಅದಕ್ಕೆ ನಿರ್ಮಲಾ ಸೀತಾರಾಮನ್, `ನಮ್ಮ ಮನೆಯಲ್ಲಿ ಅಡುಗೆಗೆ ಹೆಚ್ಚು ಈರುಳ್ಳಿ ಬಳಸುವುದಿಲ್ಲ. ನಾನೂ ಸಹ ಈರುಳ್ಳಿ, ಬೆಳ್ಳುಳ್ಳಿ ಜಾಸ್ತಿ ತಿನ್ನುವುದಿಲ್ಲ. ಹಾಗಾಗಿ ನನಗೇನೂ ಆತಂಕವಿಲ್ಲ’ ಎಂದು ಉತ್ತರಿಸಿದರು. ಈರುಳ್ಳಿ ಶೇಖರಣೆಗೆ ಸಂಬಂಧಪಟ್ಟಂತೆ ಹಲವು ರಚನಾತ್ಮಕ ಸಮಸ್ಯೆಗಳಿದ್ದು ಅವುಗಳನ್ನೆಲ್ಲ ಬಗೆಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಅಲ್ಲದೆ ಏರುತ್ತಿರುವ ಬೆಲೆಯ ಬಗ್ಗೆ ಪರಿಶೀಲನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ರಫ್ತು ನಿಷೇಧ, ಸಂಗ್ರಹಣೆ ಮಟ್ಟದ ಮೇಲೆ ನಿಯಂತ್ರಣ, ಈರುಳ್ಳಿ ಕೊರತೆ ಇರುವ ಜಾಗಕ್ಕೆ ಹೆಚ್ಚುವರಿ ಸಾಗಣೆ ಮಾಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವೆ ಸದನಕ್ಕೆ ವಿವರಿಸಿದರು.

 

Translate »