ಮೈಸೂರಿನ `ಅಶೋಕಪುರಂ’ ಹಿರಿಮೆ ಅನಾವರಣಗೊಳಿಸುವ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಇಂದು ಬಿಡುಗಡೆ
ಮೈಸೂರು

ಮೈಸೂರಿನ `ಅಶೋಕಪುರಂ’ ಹಿರಿಮೆ ಅನಾವರಣಗೊಳಿಸುವ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಇಂದು ಬಿಡುಗಡೆ

December 6, 2019

ಮೈಸೂರು, ಡಿ.5(ಪಿಎಂ)- ಮೈಸೂರಿನ ಅಶೋಕ ಪುರಂನ ಹುಟ್ಟು, ಬೆಳವಣಿಗೆ, ಹಿರಿಮೆಯೊಂದಿಗೆ ಅಲ್ಲಿನ ಜನಜೀವನ ಕುರಿತ ಮಹತ್ವದ ಸಂಗತಿಗಳನ್ನು ಅನಾ ವರಣಗೊಳಿಸುವ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಡಿ.6ರಂದು ಬಿಡುಗಡೆಗೊಳ್ಳಲಿದೆ.

ಅಶೋಕಪುರಂ ನಿವಾಸಿ ಹಾಗೂ ಮಂಡ್ಯ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಿದ್ದಸ್ವಾಮಿ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಕರ್ತೃ. ಅಂದು ಸಂಜೆ 4ಕ್ಕೆ ಮೈಸೂರಿನ ವಿದ್ಯಾರಣ್ಯಪುರಂ ಸ್ಮಶಾನ ದಲ್ಲಿ ಕೃತಿ ಬಿಡುಗಡೆ ಆಗಲಿರುವುದು ವಿಶೇಷ. `ವಿದ್ಯಾ ರಣ್ಯಪುರಂ ಸ್ಮಶಾನದಲ್ಲಿ ನಮ್ಮ ಪೂರ್ವಿಕರ ಅಂತ್ಯ ಸಂಸ್ಕಾರ ಆಗಿರುವ ಹಿನ್ನೆಲೆಯಲ್ಲಿ ನಮಗೆ ಇದು ಪವಿತ್ರ ಸ್ಥಳ ಎಂಬ ನಂಬಿಕೆ ಇದ್ದು, ಈ ಹಿನ್ನೆಲೆಯಲ್ಲಿ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನುತ್ತಾರೆ’ ಲೇಖಕ ಸಿದ್ದಸ್ವಾಮಿ.

ಮೈಸೂರಿನ ಗೌತಮ್ ಪ್ರಕಾಶನ ಪ್ರಕಟಿಸಿದ್ದು, `ಅಶೋಕಪುರಂ’ ಬಡಾವಣೆ ಹೇಗಾಯಿತು ಎಂಬು ದನ್ನು ಲೇಖಕರು ವಿವರಿಸಿದ್ದಾರೆ. ಇಂದಿನ `ಅಶೋಕ ಪುರಂ’ 1901ರಲ್ಲಿ `ಆದಿ ಕರ್ನಾಟಕಪುರ’ ಎಂಬ ಹೆಸರಿನಲ್ಲಿ ಹೊಸ ಕೇರಿಯಾಗಿ ನಿರ್ಮಾಣಗೊಳ್ಳು ತ್ತದೆ. ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ `ಆದಿ ಕರ್ನಾಟಕಪುರ’ ಹೆಸರು ನಾಮಕಾರಣ ಮಾಡುತ್ತಾರೆ ಎಂಬಿತ್ಯಾದಿ ಅಂಶಗಳನ್ನು ಉಲ್ಲೇಖಿಸಿ `ಅಶೋಕ ಪುರಂ’ ಹೆಸರು ಬಂದಿದ್ದರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

1924ರಲ್ಲಿ ಅಶೋಕಪುರಂ ನಲ್ಲಿ ಮೈಸೂರು ಸಂಸ್ಥಾನ ದಿಂದ ನಿರ್ಮಿಸಿದ್ದ ಹಾಲಿನ ಕೇಂದ್ರ ಉದ್ಘಾಟಿಸಲು ಮಹಾತ್ಮ ಗಾಂಧಿ ಬಂದಿದ್ದರು. ಈ ವೇಳೆ ಗಾಗಲೇ `ಆದಿ ಕರ್ನಾಟಕಪುರ’ ಹೆಸರು ಮರೆಯಾಗಿ ಸಮು ದಾಯದ ಹೆಸರಿನಲ್ಲಿ ಕರೆಯುವುದು ರೂಢಿಗೆ ಬಂದಿತ್ತು. ಸಮುದಾಯದ ಹೆಸರಿನಲ್ಲಿ ಕೇರಿಯನ್ನು ಉಲ್ಲೇಖಿಸುತ್ತಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಾತ್ಮ ಗಾಂಧಿ, `ಅಶೋಕಪುರಂ’ ಎಂದು ನಾಮಕರಣ ಮಾಡುತ್ತಾರೆ. ಇದಕ್ಕೆ ಮಹಾರಾಜ ನಾಲ್ವಡಿಯವರು ಗೌರವದಿಂದ ಸಮ್ಮತಿಸುತ್ತಾರೆ ಎಂಬ ಮಹತ್ವದ ಸಂಗತಿಗಳನ್ನು ಲೇಖಕರು ಅನಾವರಣಗೊಳಿಸಿದ್ದಾರೆ.

ಕೃತಿಯಲ್ಲಿ ಪ್ರಸ್ತಾಪಿಸಿರುವ ಹಲವು ಅಂಶಗಳನ್ನು `ಮೈಸೂರು ಮಿತ್ರ’ನಿಗೆ ತಿಳಿಸಿದ ಲೇಖಕ ಸಿದ್ದಸ್ವಾಮಿ, 1924ರಲ್ಲಿ ಗಾಂಧಿಯವರಿಂದ ಉದ್ಘಾಟನೆಗೊಂಡ ಹಾಲಿನ ಕೇಂದ್ರದ ಅವಶೇಷಗಳನ್ನು ಈಗಲೂ ಸಿದ್ಧಾರ್ಥ ಪ್ರೌಢಶಾಲೆ ಸಮೀಪ ಕಾಣಬಹುದು. ಅಶೋಕಪುರಂ ನಲ್ಲಿ ಅಂದಿನಿಂದಲೂ 32 ದೇವಸ್ಥಾನಗಳಿವೆ. ಈ ಎಲ್ಲಾ ದೇವಸ್ಥಾನಗಳಲ್ಲಿ ಹಂತ ಹಂತವಾಗಿ ಬುದ್ಧ ಹಾಗೂ ಡಾ.ಅಂಬೇಡ್ಕರ್ ಫೋಟೋಗಳನ್ನು ಕಾಣುವಂತಾ ಗಿದೆ. ಈ ಮಹನೀಯರ ಫೋಟೋಗಳು ಗರ್ಭ ಗುಡಿ ಪ್ರವೇಶಿಸಿದರೆ ಇನ್ನು ಮಹತ್ವದ ಉನ್ನತ ಬದ ಲಾವಣೆ ಸಾಧ್ಯವಾಗಲಿದೆ. ಹಿಂದಿನಿಂದಲೂ ಅಶೋಕಪುರಂನ ಸಿದ್ದಪ್ಪಾಜಿ ದೇವಸ್ಥಾನವೇ ಮುಖ್ಯ ಪಂಚಾಯಿತಿ ಕಟ್ಟೆಯಾಗಿದೆ ಎಂದರು.

ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಸ್ಥಾನದ ಮೂಲ ವಿಗ್ರಹವನ್ನು ಪ್ರತಿ ವರ್ಷ ಪಲ್ಲಕ್ಕಿ ಉತ್ಸವ ನಡೆಸುವ ಒಕ್ಕಲು ಮೈಸೂರಿನ ಅಶೋಕ ಪುರಂ ನಲ್ಲಿದೆ. ಈ ರೀತಿಯ ಉತ್ಸವವನ್ನು ದಲಿತ ಸಮುದಾಯ ದವರು ನಡೆಸಲು ರಾಮಾನುಜಚಾರ್ಯರರು ಅವ ಕಾಶ ನೀಡಿದರು. ಇದರ ಹಿನ್ನೆಲೆಯನ್ನೂ ಕೃತಿಯಲ್ಲಿ ವಿವರಿ ಸಿರುವುದಾಗಿ ಲೇಖಕ ಸಿದ್ದಸ್ವಾಮಿ ಹೇಳುತ್ತಾರೆ. ಕೃತಿ ಬಿಡುಗಡೆ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ, ಗತಿಸಿದ ಹಿರಿಯರ ಸಮಾಧಿಗೆ ಪುಷ್ಪಾರ್ಚನೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

Translate »