ಮೈಸೂರು

ಇಂದು, ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ಇಂದು, ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

December 6, 2019

ಮೈಸೂರು, ಡಿ.5- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಡಿ.6ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ 66/11 ಕೆವಿ ವ್ಯಾಪ್ತಿಯ ಆರ್.ಟಿ.ನಗರ, ಗಂಗೋತ್ರಿ ಬಡಾವಣೆ, ರತ್ನ ಗಾರ್ಡೇನಿಯಾ, ದ್ವಾರಕ ಬಡಾವಣೆ, ನಗರತಳ್ಳಿ, ದೇವಗಳ್ಳಿ, ಬಲ್ಲಹಳ್ಳಿ, ಅನಗಳ್ಳಿ, ಆಟೋಮೋಟಿವ್ ಆಕ್ಸಿಲ್ ಸುತ್ತಮುತ್ತ, ರಾಣಿ ಮದ್ರಾಸ್ ಪಕ್ಕದ ರಸ್ತೆ, ಹೆಚ್.ಟಿ. ರೆಕೆಟ್ ಬೆನ್‍ಸರ್, ಹೂಟಗಳ್ಳಿ ಕೈಗಾರಿಕಾ ಪ್ರದೇಶ, ಹಳೇ ಲೂನಾರ್ಸ್, ತಿಯೋರೆಮ್ಸ್, ಸ್ಪೆಕ್ಟಾ ಪೈಪ್ಸ್, ವರ್ಷ ಕೇಬಲ್, ಎಲ್&ಟಿ, ವಿಪ್ರೋ ಲೈಟ್ಸ್,…

ಬಿಪಿಎಲ್, ಎಪಿಎಲ್ ಪಡಿತರ ಚೀಟಿಯ ಗರ್ಭಿಣಿ-ಬಾಣಂತಿಯರು ಮಾತೃವಂದನಾ ಸೌಲಭ್ಯಕ್ಕೆ ಅರ್ಹರು
ಮೈಸೂರು

ಬಿಪಿಎಲ್, ಎಪಿಎಲ್ ಪಡಿತರ ಚೀಟಿಯ ಗರ್ಭಿಣಿ-ಬಾಣಂತಿಯರು ಮಾತೃವಂದನಾ ಸೌಲಭ್ಯಕ್ಕೆ ಅರ್ಹರು

December 5, 2019

ಮೈಸೂರು: ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಯಲ್ಲಿರುವ ಮಹಿಳೆಯರ ಹೊರತಾಗಿ ಎಲ್ಲಾ ವರ್ಗದ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರೂ `ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ’ಯ ಸೌಲಭ್ಯ ಪಡೆಯಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮ ತಿಳಿಸಿದರು. ಮೈಸೂರಿನ ಕುವೆಂಪುನಗರದ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಜಿಲ್ಲಾ ಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾ ಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಧಾನ…

ಬಾಕಿ ವೇತನಕ್ಕೆ ಆಗ್ರಹಿಸಿ ವಸತಿ ನಿಲಯ ನೌಕರರ ಪ್ರತಿಭಟನೆ
ಮೈಸೂರು

ಬಾಕಿ ವೇತನಕ್ಕೆ ಆಗ್ರಹಿಸಿ ವಸತಿ ನಿಲಯ ನೌಕರರ ಪ್ರತಿಭಟನೆ

December 5, 2019

ಮೈಸೂರು: ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೈಸೂರಿನಲ್ಲಿ ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯದ ನೌಕರರು ಪ್ರತಿಭಟನೆ ನಡೆಸಿದರು. ಮೈಸೂರಿನ ಪಡುವಾರ ಹಳ್ಳಿ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಎಐಯುಟಿಯುಸಿ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯದ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಲಯಗಳ ನೌಕರರು ಸರ್ಕಾ ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಸಂಯುಕ್ತ ವಿದ್ಯಾರ್ಥಿನಿಲಯ ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಕಳೆದ 6…

ವಿಜ್ಞಾನ ಹಬ್ಬದಲ್ಲಿ ಮಕ್ಕಳ ಕ್ರಿಯಾತ್ಮಕ ಚಿಂತನೆ ಅನಾವರಣ
ಮೈಸೂರು

ವಿಜ್ಞಾನ ಹಬ್ಬದಲ್ಲಿ ಮಕ್ಕಳ ಕ್ರಿಯಾತ್ಮಕ ಚಿಂತನೆ ಅನಾವರಣ

December 5, 2019

ಮೈಸೂರು: ಮೈಸೂರಿನ ಕನಕ ಗಿರಿಯ ಸರ್ಕಾರಿ ಶಾರದಾವಿಲಾಸ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಬುಧವಾರ ನಡೆದ ಕನಕಗಿರಿ ಕ್ಲಸ್ಟರ್ ಮಕ್ಕಳ ವಿಜ್ಞಾನ ಹಬ್ಬದಲ್ಲಿ 9 ಶಾಲೆ ಗಳ ನೂರಾರು ವಿದ್ಯಾರ್ಥಿಗಳು ವಿಜ್ಞಾನದ ವಿವಿಧ ಚಟು ವಟಿಕೆಗಳಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡರು. ದಕ್ಷಿಣ ವಲಯದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕನಕಗಿರಿ ಕ್ಲಸ್ಟರ್, ಸರ್ಕಾರಿ ಶಾರದಾ ವಿಲಾಸ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ದಿನವಿಡೀ ನಡೆದ ಕನಕಗಿರಿ ಕ್ಲಸ್ಟರ್ ಮಕ್ಕಳ ವಿಜ್ಞಾನ…

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ: ಡಿಕೆಶಿ
ಮೈಸೂರು

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ: ಡಿಕೆಶಿ

December 5, 2019

ನವದೆಹಲಿ : ಮಾಜಿ ಸಚಿವ `ಟ್ರಬಲ್ ಶೂಟರ್’ ಡಿಕೆ ಶಿವಕುಮಾರ್ ಬುಧವಾರ ದೆಹಲಿಯಲ್ಲಿ ದಿಢೀರ್ ಸುದ್ದಿಗೋಷ್ಟಿ ನಡೆಸಿ, ಕೆಂಪೇಗೌಡ ಅಧ್ಯಯನ ಪೀಠ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಬೆಂಗಳೂರು ವಿವಿ ಅಧ್ಯಯನ ಪೀಠ ಕಾಮಗಾರಿ ಕೈ ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ದ ವಾಗ್ಧಾಳಿ ನಡೆಸಿದ ಡಿಕೆ ಶಿವಕುಮಾರ್, ರಾಜ್ಯ ಸರ್ಕಾರ ಬೆಂಗಳೂರು ವಿವಿ ಅಧ್ಯಯನ ಪೀಠ ಕಾಮಗಾರಿಯನ್ನು ರದ್ದು ಮಾಡಿರುವುದು ಖಂಡನಾರ್ಹ, ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದರು….

ಶ್ರೀ ಸೇವಾಲಾಲ್ ದೇವಾಲಯ ಧ್ವಂಸ ಖಂಡಿಸಿ ಮೈಸೂರಲ್ಲಿ ಬಂಜಾರ ಸಮುದಾಯ ಪ್ರತಿಭಟನೆ
ಮೈಸೂರು

ಶ್ರೀ ಸೇವಾಲಾಲ್ ದೇವಾಲಯ ಧ್ವಂಸ ಖಂಡಿಸಿ ಮೈಸೂರಲ್ಲಿ ಬಂಜಾರ ಸಮುದಾಯ ಪ್ರತಿಭಟನೆ

December 5, 2019

ಮೈಸೂರು: ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆ ಯಲ್ಲಿ ಮಾದಿಹಾಳ್ ತಾಂಡಾದಲ್ಲಿನ ಸಂತ ಶ್ರೀ ಸೇವಾಲಾಲ್ ದೇವಾಲಯ ಧ್ವಂಸ ಮಾಡಿರುವುದನ್ನು ಪುನರ್ ನಿರ್ಮಿಸುವಂತೆ ಬಂಜಾರ ಸೇವಾ ಸಂಘದ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ಡಿಸಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದ ಬಂಜಾರ ಸೇವಾ ಸಂಘದ ಕಾರ್ಯಕರ್ತರು, ಕಲಬುರ್ಗಿಯ ವಿಮಾನ ನಿಲ್ದಾಣ ಉದ್ಘಾಟನೆಯ ನೆಪದಲ್ಲಿ ಮಾದಿಹಾಳ್ ತಾಂಡಾದಲ್ಲಿನ ಸಂತ ಶ್ರೀ ಸೇವಾಲಾಲ್ ಮತ್ತು ಶ್ರೀ ಮರಿಯಮ್ಮ ದೇವಿ ದೇವಸ್ಥಾನ ಧ್ವಂಸಗೊಳಿಸಿರುವುದು ಖಂಡನೀಯ. ಈ ಮೂಲಕ ಶಾಂತಿ…

ಡಿ.12, ಶ್ರೀ ದಕ್ಷಿಣಾಮೂರ್ತಿ ಪೀಠಂನಲ್ಲಿ ದತ್ತ ಜಯಂತಿ ಆಚರಣೆ
ಮೈಸೂರು

ಡಿ.12, ಶ್ರೀ ದಕ್ಷಿಣಾಮೂರ್ತಿ ಪೀಠಂನಲ್ಲಿ ದತ್ತ ಜಯಂತಿ ಆಚರಣೆ

December 5, 2019

ಮೈಸೂರು: ಮೈಸೂರು ಜಯನಗರದಲ್ಲಿರುವ ಶ್ರೀ ದಕ್ಷಿಣಾಮೂರ್ತಿ ಪೀಠಂನಲ್ಲಿ ಡಿ.12ರಂದು ದತ್ತ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೀಠಾಧ್ಯಕ್ಷರಾದ ಶ್ರೀ ಚಿನ್ಮಯಾನಂದ ಸರಸ್ವತಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಡಿ.11ರಂದು ಪ್ರಾತಃಕಾಲ ಕಾಕಡಾರತಿ, ಅಭಿಷೇಕ, ಪೂಜೆ ನಡೆಯಲಿದ್ದು, ಸಂಜೆ ಸಾಗರ್ ಚಕ್ರವರ್ತಿ ಅವರಿಂದ ಸಂಗೀತ ಕಾರ್ಯಕ್ರಮವಿದೆ. ಡಿ.12ರಂದು ಪ್ರಾತಃಕಾಲ 3.30ಕ್ಕೆ ಕಾಕಡಾರತಿ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಷೋಡಶೋ ಪಚಾರ ಪೂಜೆ ಮತ್ತು ದತ್ತ ಪಾದುಕೆಗೆ ಕೇಸರಿ ಲೇಪನ, ದತ್ತ ನಾಮಸ್ಮರಣೆ ನಡೆಯಲಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ವಿನಿಯೋಗವಿದ್ದು,…

ಅಮಿತ್ ಶಾ ಅವಧಿ ಡಿ.31ಕ್ಕೆ ಅಂತ್ಯ: ಜೆ.ಪಿ.ನಡ್ಡಾ ಬಿಜೆಪಿ ಅಧ್ಯಕ್ಷ?
ಮೈಸೂರು

ಅಮಿತ್ ಶಾ ಅವಧಿ ಡಿ.31ಕ್ಕೆ ಅಂತ್ಯ: ಜೆ.ಪಿ.ನಡ್ಡಾ ಬಿಜೆಪಿ ಅಧ್ಯಕ್ಷ?

December 5, 2019

ಹೊಸದಿಲ್ಲಿ: ಡಿಸೆಂಬರ್ 3ಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಅವಧಿ ಅಂತ್ಯ ಹಿನ್ನೆಲೆ ಕೇಂದ್ರ ಬಿಜೆಪಿಗೆ ಜನವರಿ 2020ಕ್ಕೆ ನೂತನ ಸಾರಥಿ ನೇಮಕ ನಡೆಯಲಿದೆ. ಕೇಂದ್ರ ಬಿಜೆಪಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಜೆ.ಪಿ.ನಡ್ಡಾ ಅವರೇ ನೂತನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಜೆ.ಪಿ. ನಡ್ಡಾರಿಂದ ತೆರವಾಗುವ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಭೂಪೇಂದ್ರಯಾದವ್ ಅವರನ್ನು ನೇಮಿಸುವ ಸಾಧ್ಯತೆ ಇದೆ. ಡಿ.20ರ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಗ್ಗೆ ನಿಖರ ಮಾಹಿತಿ ಸಿಗಲಿದೆ.

ಪರಿಸರ ಕಳಕಳಿಯುಳ್ಳವರಿಂದ ಲಿಂಗಾಂಬುದಿ ಕೆರೆ ಸ್ವಚ್ಛತಾ ಕಾರ್ಯ
ಮೈಸೂರು

ಪರಿಸರ ಕಳಕಳಿಯುಳ್ಳವರಿಂದ ಲಿಂಗಾಂಬುದಿ ಕೆರೆ ಸ್ವಚ್ಛತಾ ಕಾರ್ಯ

December 3, 2019

ಮೈಸೂರು,ಡಿ.2(ಎಂಟಿವೈ)- ಕೊಳಚೆ ನೀರು ಹಾಗೂ ಪ್ಲಾಸ್ಟಿಕ್ ವಸ್ತುಗಳಿಂದ ಮಲೀನಗೊಳ್ಳುತ್ತಿದ್ದ ಲಿಂಗಾಂಬುದಿ ಕೆರೆ ರಕ್ಷಣೆಗೆ ಸ್ಥಳೀಯರೇ ಮುಂದೆ ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಕೆರೆ ಆವರಣದಲ್ಲಿ ರಾಶಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ವಿಲೇವಾರಿ ಮಾಡಲಾಯಿತು. ಲಿಂಗಾಂಬುದಿ ಕೆರೆಗೆ ಸಂಪರ್ಕ ಹೊಂದಿ ರುವ ಎರಡು ರಾಜಕಾಲುವೆಗಳಿದ್ದು, ಅವು ಗಳ ಮೂಲಕ ಪರಿಸರ ಮಾರಕ ವಸ್ತು ಗಳು ಕೆರೆ ಒಡಲು ಸೇರುತ್ತಿವೆ. ಇದರಿಂದ ಕೆರೆ ನೀರು ಮಲಿನಗೊಂಡು ದುರ್ವಾಸನೆ ಬೀರುತ್ತಿದೆ. ಕೆರೆ ವಾತಾವರಣ ಕಲು…

ದೇಶದ ಉನ್ನತಿಗಾಗಿ ಸರ್ಕಾರದ ವಿರುದ್ಧ ಹೋರಾಡುವುದು ನಿಜವಾದ ದೇಶಭಕ್ತಿ
ಮೈಸೂರು

ದೇಶದ ಉನ್ನತಿಗಾಗಿ ಸರ್ಕಾರದ ವಿರುದ್ಧ ಹೋರಾಡುವುದು ನಿಜವಾದ ದೇಶಭಕ್ತಿ

December 3, 2019

ಮೈಸೂರು, ಡಿ.2(ಪಿಎಂ)- ದೇಶದ ಉನ್ನತಿಗಾಗಿ ಸರ್ಕಾರದ ವಿರುದ್ಧ ಹೋರಾಡುವುದು ನಿಜವಾದ ದೇಶಭಕ್ತಿಯೇ ಹೊರತು, ಸರ್ಕಾರದ ಮೂರ್ಖತನದ ನಡೆಗಳ ಪರ ಮಾತನಾಡುವುದಲ್ಲ ಎಂದು ಸ್ವಯಂ ನಿವೃತ್ತ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಮಾರ್ಮಿಕವಾಗಿ ನುಡಿದರು. ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಕನ್ಸನ್ರ್ಡ್ ಸಿಟಿಜ್ಹನ್ಸ್ ಆಫ್ ಇಂಡಿಯಾ (ಸಿಸಿಐ) ವತಿಯಿಂದ `ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮುಂದಿರುವ ಸವಾಲುಗಳು’ ಕುರಿತಂತೆ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ-ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಏನು ಮಾಡಿದರೂ ಅದು ದೇಶದ ಒಳಿತಿಗಾಗಿ ಎಂದು ಬಿಂಬಿಸಲಾಗುತ್ತಿದೆ….

1 765 766 767 768 769 1,611
Translate »