ಇಂದು, ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ಇಂದು, ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

December 6, 2019

ಮೈಸೂರು, ಡಿ.5- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಡಿ.6ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ 66/11 ಕೆವಿ ವ್ಯಾಪ್ತಿಯ ಆರ್.ಟಿ.ನಗರ, ಗಂಗೋತ್ರಿ ಬಡಾವಣೆ, ರತ್ನ ಗಾರ್ಡೇನಿಯಾ, ದ್ವಾರಕ ಬಡಾವಣೆ, ನಗರತಳ್ಳಿ, ದೇವಗಳ್ಳಿ, ಬಲ್ಲಹಳ್ಳಿ, ಅನಗಳ್ಳಿ, ಆಟೋಮೋಟಿವ್ ಆಕ್ಸಿಲ್ ಸುತ್ತಮುತ್ತ, ರಾಣಿ ಮದ್ರಾಸ್ ಪಕ್ಕದ ರಸ್ತೆ, ಹೆಚ್.ಟಿ. ರೆಕೆಟ್ ಬೆನ್‍ಸರ್, ಹೂಟಗಳ್ಳಿ ಕೈಗಾರಿಕಾ ಪ್ರದೇಶ, ಹಳೇ ಲೂನಾರ್ಸ್, ತಿಯೋರೆಮ್ಸ್, ಸ್ಪೆಕ್ಟಾ ಪೈಪ್ಸ್, ವರ್ಷ ಕೇಬಲ್, ಎಲ್&ಟಿ, ವಿಪ್ರೋ ಲೈಟ್ಸ್, ಶ್ರೀರಾಮ್ ಇಂಜಿನಿಯರ್ಸ್, ರಜತ್ ಬ್ಯಾಟರಿ, ಆರ್.ಪಿ.ಜಿ. ಕೇಬಲ್, ಜಿಮ್‍ಕೋ, ಸ್ಪೈ, ಎಂಪ್ರೋಕಾಂಕ್ರಿಟ್, ಡ್ಯಾಮ್ ಡನ್ ಅಪಾರ್ಟ್‍ಮೆಂಟ್, ಹಿನಕಲ್ ಆಶ್ರಯ ಯೋಜನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಡಿ.7ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ 66/11 ಕೆವಿ ವ್ಯಾಪ್ತಿಯ ಕೂರ್ಗಳ್ಳಿ ಕೈಗಾರಿಕಾ ಪ್ರದೇಶ, ಎಕ್ಸೆಲ್ ಪಬ್ಲಿಕ್ ಶಾಲೆ, ವಿನ್ಯಾಸ್, ಕೂರ್ಗಳ್ಳಿ ಕೆರೆ ಸುತ್ತಮುತ್ತ, ಗೋಪಾಲನ್ ಕಾಂಪೌಂಡ್, ವಿಪ್ರೋ, ಮೆರಿಟಾರ್, ಪಟ್ಟಾಬಿ ಎಂಟರ್ ಪ್ರೈಸಸ್, ಮಿಲೆನಿಯಮ್, ಎಲ್&ಟಿ, ಮಾರ್ಕ್ ಬ್ಯಾಟರಿಸ್ ರಸ್ತೆ, ಚಾಮುಂಡಿ ಸಿಲ್ಕ್ಸ್, ಮೇಟಗಳ್ಳಿ ಕೈಗಾರಿಕಾ ಪ್ರದೇಶ, ಹೆಬ್ಬಾಳ್ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Translate »