ಮೈಸೂರು, ಅ.21(ಪಿಎಂ)- ಭಾರತ ಕೃಷಿ ಪ್ರಧಾನ ದೇಶವಾದರೂ ನಿರೀಕ್ಷಿತ ಮಟ್ಟದಲ್ಲಿ ಕೃಷಿಗೆ ಉತ್ತೇಜನ ದೊರೆತಿಲ್ಲ. ದೇಶದಲ್ಲಿ ಕೃಷಿ ಸಂಶೋ ಧಕರ ಸಂಖ್ಯೆ ಆಶಾದಾಯಕವಾಗಿಲ್ಲ ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಮಾಜಿ ಮಹಾ ನಿರ್ದೇ ಶಕರೂ ಆದ ಭಾರತ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ (ಡಿಎಆರ್‍ಇ) ಕಾರ್ಯ ದರ್ಶಿ ಪ್ರೊ.ಎಸ್.ಅಯ್ಯಪ್ಪನ್ ವಿಷಾದಿಸಿದರು. ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋ ಧನಾ ಸಂಸ್ಥೆಯ (ಸಿಎಸ್‍ಐಆರ್-ಸಿಎಫ್‍ಟಿಆರ್‍ಐ) ಐಎಫ್‍ಟಿಟಿಸಿ ಸಭಾಂಗಣದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ…
ಸಮಾಜಕ್ಕೆ ಮಾರಕವಾದ ಸಾಮಾಜಿಕ ಪಿಡುಗು ತೊಡೆದು ಹಾಕುವ ಸ್ಥೈರ್ಯವನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು
October 22, 2019ಮೈಸೂರು,ಅ.21(ಎಂಟಿವೈ)-ಸಮಾಜದ ಏಳಿಗೆಗೆ ಮಾರಕವಾಗಿ ರುವ ಸಾಮಾಜಿಕ ಪಿಡುಗನ್ನು ತೊಡೆದು ಹಾಕುವ ಆಲೋಚನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಶಿಕ್ಷಕರು ಪ್ರಯತ್ನಿಸಬೇಕು. ಇಂತಹ ಬದಲಾವಣೆಗೆ ವಿಶ್ವವಿದ್ಯಾಲಯಗಳು ಹೊಂದಿಕೊಳ್ಳಲು ತನ್ನ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವಂತೆ ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಡಾ.ಕೆ.ದಿನೇಶ್ ಸಲಹೆ ನೀಡಿದ್ದಾರೆ. ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ರಾಷ್ಟ್ರೀಯ ಉಚ್ಚಾತಾರ್ ಶಿಕ್ಷಣ ಅಭಿಯಾನ (ರುಸಾ), ಎಂಹೆಚ್ ಆರ್‍ಡಿ ಮತ್ತು ಮೈಸೂರು ವಿಶ್ವವಿದ್ಯಾಲಯದ ಸಂಯುಕ್ತಾಶ್ರಯ ದಲ್ಲಿ ನಡೆದ `ವಿಶ್ವವಿದ್ಯಾಲಯದ ಬದಲಾವಣೆಗೆ…
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ರಾಮದಾಸ್ ಚಾಲನೆ
October 22, 2019ಮೈಸೂರು,ಅ.21-ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ಅಗ್ರಹಾರ ವಾರ್ಡ್ ನಂ.51 ರಲ್ಲಿರುವ ಉತ್ತರಾದಿ ಮಠ ರಸ್ತೆ, ವಿದ್ಯಾ ಭಾರತಿ ಕಲ್ಯಾಣ ಮಂಟಪದ ಎದುರು ನೂತನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದಲೂ ಶುದ್ಧ ಕುಡಿಯುವ ನೀರನ್ನು ನಲ್ಲಿಗಳ ಮೂಲಕ ಸರಬರಾಜು ಮಾಡುವ ಕೆಲಸ ಮಾಡಿ ದ್ದರು. ಕಾಲಕ್ರಮೇಣ ವಾಯುಮಾಲಿನ್ಯ ದಂತೆ, ಜಲ ಮಾಲಿನ್ಯವು ಸಹ ಉಂಟಾಗಿ ಭೂ ಗರ್ಭದಲ್ಲಿರುವ ನೀರು ಸಹ ಕಲುಷಿತ ಗೊಂಡಿದೆ,…
ಜ್ಞಾನೋದಯ ಪಿಯು ಕಾಲೇಜಲ್ಲಿ ವಿಜ್ಞಾನ ಮೇಳ
October 22, 2019ಮೈಸೂರು, ಅ.21- ಮೈಸೂರು ಸರಸ್ವತಿ ಪುರಂನ ಜ್ಞಾನೋದಯ ಪದವಿ ಪೂರ್ವ ಕಾಲೇಜಲ್ಲಿ ನಡೆದ ‘ವಿಜ್ಞಾನ ಮೇಳ-2019’ ಕಾರ್ಯಕ್ರಮವನ್ನು ಇಸ್ರೋ ಮಾಜಿ ಅಧ್ಯಕ್ಷರೂ ಆದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಎ.ಎಸ್.ಕಿರಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾ ಟಿಸಿದರು. ಬಳಿಕ ಮಾತನಾಡಿ, ಅಂತಾ ರಾಷ್ಟ್ರೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರ ತೀಯ ಬಾಹ್ಯಾಕಾಶ ಸಂಶೋಧನೆಯ ಸಾಧನೆಯನ್ನು ತಿಳಿಸಿದರು. ಇಸ್ರೋದ ಮಹ ತ್ತರ ಸಾಧನೆಯಲ್ಲಿ ವಿಕ್ರಮ್ ಸಾರಾ ಬಾಯಿ ಯವರ ಪಾತ್ರವನ್ನು ಸ್ಮರಿಸಿದರು. ಉಪ ಗ್ರಹ ಉಡಾವಣೆಯು ಕೃಷಿ, ಹವಾಮಾನ, ಮೀನುಗಾರಿಕೆ,…
ಚಾ.ನಗರ ಜಿಪಂ ಸೇರಿ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನ.12ರಂದು ಚುನಾವಣೆ
October 21, 2019ಬೆಂಗಳೂರು,ಅ.20- ಚಾಮರಾಜನಗರ ಜಿಲ್ಲಾ ಪಂಚಾಯಿತಿ ಸೇರಿದಂತೆ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನ.12ಕ್ಕೆ ಚುನಾವಣಾ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಚುನಾವಣೆ ನಡೆಯಲಿರುವ ಎಲ್ಲಾ ಸ್ಥಳೀಯ ಸಂಸ್ಥೆ ಗಳ ವ್ಯಾಪ್ತಿಯಲ್ಲಿ ಇಂದಿನಿಂದಲೇ (ಭಾನುವಾರ) ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಅ.31ಕ್ಕೆ ನಾಮಪತ್ರ ಹಿಂಪಡೆ ಯಲು ಕೊನೆಯ ದಿನವಾಗಿದ್ದು, ನ.4ಕ್ಕೆ ನಾಮಪತ್ರ ಹಿಂಪಡೆ ಯಲು ಕಡೆ ದಿನವಾಗಿದೆ. ನ.14ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮಂಗಳೂರು ಮತ್ತು ದಾವಣಗೆರೆ ಮಹಾನಗರಪಾಲಿಕೆ, 6 ನಗರಸಭೆ, 3 ಪುರಸಭೆ ಮತ್ತು 3…
ಮುಂದಿನ 5 ವರ್ಷದಲ್ಲಿ ಭಾರತ ಮೂಲಭೂತ ಸೌಕರ್ಯಕ್ಕೆ 99 ಲಕ್ಷ ಕೋಟಿ ರೂ. ಖರ್ಚು
October 21, 2019ವಾಷಿಂಗ್ಟನ್, ಅ.20- 2024ಕ್ಕೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್‍ಗೆ ಏರಿಕೆಯಾಗಬೇಕೆಂದು ಗುರಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಗುರಿ ಸಾಧಿ ಸಲು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ ಭಾರತ 1.4 ಟ್ರಿಲಿಯನ್ ಡಾಲರ್ (99 ಲಕ್ಷ ಕೋಟಿ ರೂ.) ನಷ್ಟು ಖರ್ಚು ಮಾಡಲು ಯೋಜನೆ ಹಾಕಿಕೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಿನ್ನೆ ವಾಷಿಂಗ್ಟನ್‍ನಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತ ನಾಡಿದ ಅವರು, ಹಣಕಾಸು ಸಚಿವಾಲಯದಲ್ಲಿ ಕಾರ್ಯಪಡೆ…
ಗಾಂಧಿ ಹತ್ಯೆಯಲ್ಲಿ ಆರ್‍ಎಸ್‍ಎಸ್, ಸಾವರ್ಕರ್ ಕೈವಾಡವಿದೆ ಎಂದು ಹೇಳುವುದು ಸರಿಯಲ್ಲ
October 21, 2019ಬಾಗಲಕೋಟೆ, ಅ.20- ಮಹಾತ್ಮ ಗಾಂಧಿ ಹತ್ಯೆ ಯಲ್ಲಿ ಆರ್‍ಎಸ್‍ಎಸ್ ಹಾಗೂ ಸಾವ ರ್ಕರ್ ಅವರ ಕೈವಾಡ ಇತ್ತು ಎಂದು ಹೇಳುವುದು ಸರಿಯಲ್ಲ. ಸಾವರ್ಕರ್ ಅಪ್ರತಿಮ ದೇಶಭಕ್ತ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜಕಾರಣದ ದೃಷ್ಟಿಯಿಂದ ಹೀಗೆ ವಿವಾದಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಪೇಜಾವರ ಶ್ರೀ ಆರೋಪಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಮಾತ ನಾಡಿದ್ದ ಬಿಜೆಪಿ ನಾಯಕರು ಸಾವರ್ಕರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡುವುದಾಗಿ ಆಶ್ವಾಸನೆ ನೀಡಿ ದ್ದರು. ಆದರೆ, ಬಿಜೆಪಿ ನಾಯಕರ…
ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ
October 21, 2019ಮನಿಲಾ, ಅ.20- ಫಿಲಿಫೈನ್ಸ್‍ನ ಮಿರಿಯಮ್ ಕಾಲೇಜಿನ ಶಾಂತಿ ಶಿಕ್ಷಣ ಕೇಂದ್ರದಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ಅನಾವರಣಗೊಳಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೋವಿಂದ್, “ಮಹಾತ್ಮ ಗಾಂಧಿಯವರ ಈ ಪ್ರತಿಮೆ ಭಾರತದ ಜನರು ನಿಮಗೆ ನೀಡಿದ ಉಡುಗೊರೆ. ಎಲ್ಲಾ ಜನರು, ಎಲ್ಲಾ ಸಂಸ್ಕೃತಿ ಮತ್ತು ಎಲ್ಲಾ ಸಮಾಜ ಗಳಿಗೆ ಸೇರಿದವರಾದ ಮಹಾತ್ಮ ಗಾಂಧಿ ಶಾಂತಿ, ಅಹಿಂಸೆ ಮತ್ತು ಸಾಮರಸ್ಯವನ್ನು ನಂಬಿದ್ದರು. ನಮ್ಮ ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಅವರು ನಮಗೆ…
ಐಷಾರಾಮಿ ವಾಹನಗಳ ಲೋಗೋ ಕದಿಯುತ್ತಿರುವ ಖದೀಮರು
October 21, 2019ಮೈಸೂರು, ಅ.20(ಎಂಟಿವೈ)- ಐಷಾರಾಮಿ ಕಾರುಗಳ ಲೋಗೋ ಕದಿಯುವ ತಂಡ ಮೈಸೂರಿನಲ್ಲಿ ಕೈಚಳಕ ಪ್ರದರ್ಶಿ ಸುತ್ತಿದ್ದು, ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಲೋಗೋವನ್ನು ರಾತ್ರೋರಾತ್ರಿ ಕಳವು ಮಾಡುತ್ತಿದೆ. ಕಳೆದ ರಾತ್ರಿ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದ ಇಬ್ಬರು ಮೈಸೂರಿನ ಶ್ರೀರಾಂಪುರದ ನಿವಾಸಿ ಕಾಂಗ್ರೆಸ್ ಮುಖಂಡ ಮಂಜೇಗೌಡ ಅವರಿಗೆ ಸೇರಿದ ಬಿಎಂಡಬ್ಲ್ಯೂ ಕಾರಿನ ಲೋಗೋ ಎಗರಿಸಿ ಪರಾರಿಯಾಗಿದ್ದು, ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎಂಡಬ್ಲೂ, ಆಡಿ, ವೋಕ್ಸ್ ವ್ಯಾಗನ್, ಸ್ಕೋಡಾ, ಮರ್ಸಿ ಡಿಸ್ ಬೆಂಜ್óó ಇನ್ನಿತರ ಕಂಪನಿಗಳ ಕಾರುಗಳ…
ತಿಹಾರ್ ಜೈಲಿನಲ್ಲಿ ಇಂದು ಡಿಕೆಶಿ ಭೇಟಿ ಮಾಡಲಿರುವ ಸೋನಿಯಾ
October 21, 2019ನವದೆಹಲಿ, ಅ.20- ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಾಳೆ ಭೇಟಿ ಆಗಲಿದ್ದಾರೆ. ಈ ಹಿಂದೆ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಸೋನಿಯಾ ಗಾಂಧಿ ಭೇಟಿಯಾಗಿದ್ದರು. ಈಗ ಡಿ.ಕೆ.ಶಿವಕುಮಾರ್ ಅವರ ಭೇಟಿಗಾಗಿ ಜೈಲು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ನಾಳೆ ಬೆಳಿಗ್ಗೆ ಅನುಮತಿ ನೀಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಗುರುವಾರ ಸುಮಾರು 3 ಗಂಟೆಗೂ ಅಧಿಕ…










