ಮೈಸೂರು, ಅ.21- ಮೈಸೂರು ಸರಸ್ವತಿ ಪುರಂನ ಜ್ಞಾನೋದಯ ಪದವಿ ಪೂರ್ವ ಕಾಲೇಜಲ್ಲಿ ನಡೆದ ‘ವಿಜ್ಞಾನ ಮೇಳ-2019’ ಕಾರ್ಯಕ್ರಮವನ್ನು ಇಸ್ರೋ ಮಾಜಿ ಅಧ್ಯಕ್ಷರೂ ಆದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಎ.ಎಸ್.ಕಿರಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾ ಟಿಸಿದರು. ಬಳಿಕ ಮಾತನಾಡಿ, ಅಂತಾ ರಾಷ್ಟ್ರೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರ ತೀಯ ಬಾಹ್ಯಾಕಾಶ ಸಂಶೋಧನೆಯ ಸಾಧನೆಯನ್ನು ತಿಳಿಸಿದರು. ಇಸ್ರೋದ ಮಹ ತ್ತರ ಸಾಧನೆಯಲ್ಲಿ ವಿಕ್ರಮ್ ಸಾರಾ ಬಾಯಿ ಯವರ ಪಾತ್ರವನ್ನು ಸ್ಮರಿಸಿದರು. ಉಪ ಗ್ರಹ ಉಡಾವಣೆಯು ಕೃಷಿ, ಹವಾಮಾನ, ಮೀನುಗಾರಿಕೆ, ಪ್ರಾಕೃತಿಕ ವಿಕೋಪ ಮುಂತಾದ ವಿಷಯಗಳ ಬಗ್ಗೆ ಹೇಗೆ ಬೆಳಕು ಚೆಲ್ಲಿದೆ ಎಂಬುದನ್ನು ಉದಾಹರಣೆ ಸಹಿತ ಮನ ಮುಟ್ಟುವಂತೆ ತಿಳಿಸಿದರು. ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಮಾದರಿಗಳನ್ನು ವೀಕ್ಷಿಸಿ ಭವಿಷ್ಯದಲ್ಲಿ ನೀವೂ ವಿಜ್ಞಾನಿಗಳಾಗಬಹು ದೆಂಬುದನ್ನು ತಿಳಿಸಿ, ಉತ್ಸಾಹ ತುಂಬಿದರು.
ವಿಜ್ಞಾನ ಮೇಳದ ಅಂಗವಾಗಿ ವಿಜ್ಞಾನ ಭಾಷಣ, ರಸಪ್ರಶ್ನೆ, ಮಾದರಿ ವಸ್ತು ಪ್ರದರ್ಶನ ಸ್ಪರ್ಧೆಗಳನ್ನು ಆಯೋಜಿಸಲಾ ಗಿದ್ದು, ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನದ ಜೊತೆಗೆ ಪಾರಿತೋಷಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನೋದಯ ಪದವಿ ಪೂರ್ವ ಕಾಲೇ ಜಿನ ಖಜಾಂಚಿಗಳಾದ ಹೆಚ್.ರಾಮ ಚಂದ್ರ, ಕಾರ್ಯದರ್ಶಿ ಭಾಸ್ಕರ್, ಜಂಟಿ ಕಾರ್ಯದರ್ಶಿ ಎಸ್.ಸತ್ಯನಾರಾಯಣ್, ಪ್ರಾಂಶುಪಾಲ ಟಿ.ಎಸ್.ಶ್ರೀಕಂಠಶರ್ಮಾ, ಉಪಪ್ರಾಂಶುಪಾಲೆ ಪದ್ಮಾ ರವಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.