ಚಾ.ನಗರ ಜಿಪಂ ಸೇರಿ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನ.12ರಂದು ಚುನಾವಣೆ
ಮೈಸೂರು

ಚಾ.ನಗರ ಜಿಪಂ ಸೇರಿ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನ.12ರಂದು ಚುನಾವಣೆ

October 21, 2019

ಬೆಂಗಳೂರು,ಅ.20- ಚಾಮರಾಜನಗರ ಜಿಲ್ಲಾ ಪಂಚಾಯಿತಿ ಸೇರಿದಂತೆ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನ.12ಕ್ಕೆ ಚುನಾವಣಾ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.

ಚುನಾವಣೆ ನಡೆಯಲಿರುವ ಎಲ್ಲಾ ಸ್ಥಳೀಯ ಸಂಸ್ಥೆ ಗಳ ವ್ಯಾಪ್ತಿಯಲ್ಲಿ ಇಂದಿನಿಂದಲೇ (ಭಾನುವಾರ) ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಅ.31ಕ್ಕೆ ನಾಮಪತ್ರ ಹಿಂಪಡೆ ಯಲು ಕೊನೆಯ ದಿನವಾಗಿದ್ದು, ನ.4ಕ್ಕೆ ನಾಮಪತ್ರ ಹಿಂಪಡೆ ಯಲು ಕಡೆ ದಿನವಾಗಿದೆ. ನ.14ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮಂಗಳೂರು ಮತ್ತು ದಾವಣಗೆರೆ ಮಹಾನಗರಪಾಲಿಕೆ, 6 ನಗರಸಭೆ, 3 ಪುರಸಭೆ ಮತ್ತು 3 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ಚಾಮರಾಜನಗರ ಜಿಲ್ಲಾ ಪಂಚಾಯತ್ ಜೊತೆಗೆ ಕೊಳ್ಳೇಗಾಲ ನಗರಸಭೆಯ ವಾರ್ಡ್ ನಂ.19ರ ಉಪಚುನಾ ವಣೆ ನಡೆಯಲಿದೆ. ಕೋಲಾರ ಜಿಲ್ಲೆಯ ಕೋಲಾರ, ಮುಳ ಬಾಗಿಲು, ಕೆಜಿಎಫ್, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು, ಚಿಂತಾಮಣಿ ನಗರಸಭೆಗಳು ರಾಮನಗರ ಜಿಲ್ಲೆಯ ಕನಕಪುರ ನಗರಸಭೆ, ಮಾಗಡಿ ಪುರಸಭೆ, ಶಿವಮೊಗ್ಗ ಜಿಲ್ಲೆಯ ಜೋಗಾ ಕಾರ್ಗಲ್ ಪಟ್ಟಣ ಪಂಚಾ ಯಿತಿ, ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆ, ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ಪಂಚಾಯಿತಿ, ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆ, ಕೂಡ್ಲಗಿ ಪಟ್ಟಣ ಪಂಚಾಯಿತಿಗೆ ಚುನಾವಣೆ ಘೋಷಿಸಲಾಗಿದೆ.

ಉಪ ಚುನಾವಣೆ: ಹೊಳೆ ನರಸೀಪುರ ಪುರಸಭೆಯ 4ನೇ ವಾರ್ಡ್, ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್, ಚಡಚಣ ಪಟ್ಟಣ ಪಂಚಾಯಿತಿಯ 5ನೇ ವಾರ್ಡ್, ಮಹಾ ಲಿಂಗಪುರ ಪುರಸಭೆಯ 17ನೇ ವಾರ್ಡ್ ಮತ್ತು ಚಿತ್ತಾಪುರ ಪುರಸಭೆಯ 10ನೇ ವಾರ್ಡ್‍ಗೆ ಉಪ ಚುನಾವಣೆ ನಡೆಯ ಲಿದೆ. ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ 1388 ಮತಗಟ್ಟೆಗಳಲ್ಲಿ 13,04,614 ಮತದಾರರಿದ್ದಾರೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಚುನಾವಣಾ ಆಯೋಗವು ಖರ್ಚು ಮಿತಿಯನ್ನು ಘೋಷಿಸಿದ್ದು, ಮಹಾನಗರಪಾಲಿಕೆಗೆ 3 ಲಕ್ಷ ರೂ., ನಗರಸಭೆಗೆ 2 ಲಕ್ಷ ರೂ., ಪುರಸಭೆಗೆ 1.30 ಲಕ್ಷ ರೂ. ಹಾಗೂ ಪಟ್ಟಣ ಪಂಚಾಯಿತಿಗೆ 1 ಲಕ್ಷ ರೂ. ಮಾತ್ರ ಅಭ್ಯರ್ಥಿಗಳು ಖರ್ಚು ಮಾಡಬಹುದಾಗಿದೆ.

ಇಂದು ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ  ವಿವಿಧ ರಾಜ್ಯಗಳ 51 ಕ್ಷೇತ್ರಗಳಿಗೆ ಉಪಚುನಾವಣೆ
ನವದೆಹಲಿ,ಅ.20- ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ನಾಳೆ (ಅ.21) ಚುನಾವಣೆ ನಡೆಯಲಿದೆ. ಇದರ ಜೊತೆಗೆ ಎರಡು ಲೋಕಸಭಾ ಕ್ಷೇತ್ರ ಹಾಗೂ ವಿವಿಧ ರಾಜ್ಯಗಳ 51 ವಿಧಾನಸಭಾ ಕ್ಷೇತ್ರ ಗಳ ಉಪಚುನಾವಣೆಗಳು ನಡೆಯಲಿವೆ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಇಂದು ಮನೆ ಮನೆ ಪ್ರಚಾರ ಮುಕ್ತಾಯಗೊಂಡಿತು. ನಾಳೆ ಚುನಾವಣೆಗೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗ ಲಿದ್ದು, ಸಂಜೆ 5 ಕ್ಕೆ ಮುಕ್ತಾಯವಾಗಲಿದೆ. ಗುರುವಾರ ಫಲಿತಾಂಶ ಪ್ರಕಟಗೊಳ್ಳಲಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಫಲಿತಾಂಶವನ್ನು ಇಡೀ ದೇಶವೇ ಕುತೂಹಲದಿಂದ ನಿರೀಕ್ಷಿಸುತ್ತಿದೆ. ಇದರ ಜೊತೆಗೆ ಬಿಹಾರದ ಸಮಷ್ಟೀಪುರ್ ಮತ್ತು ಮಹಾರಾಷ್ಟ್ರದ ಸತಾರ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿದೆ.

17 ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಉಪಚುನಾವಣೆ ನಡೆಯಲಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ತರ ಪ್ರದೇಶದ 11, ಗುಜರಾತ್‍ನ 6, ಕೇರಳ ಮತ್ತು ಬಿಹಾರದ ತಲಾ 5, ಪಂಜಾಬ್ ಮತ್ತು ಅಸ್ಸಾಂನ ತಲಾ 4, ಸಿಕ್ಕಿಂನ 3 ತಮಿಳುನಾಡು, ರಾಜಸ್ಥಾನ ಮತ್ತು ಆಂಧ್ರಪ್ರದೇಶದ ತಲಾ 2 ಹಾಗೂ ಓಡಿಸ್ಸಾ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‍ಘಢ, ಮೇಘಾಲಯ, ಪುದುಚೇರಿ ಮತ್ತು ಅರುಣಾಚಲ ಪ್ರದೇಶದ ತಲಾ 1 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಚುನಾ ವಣೆ ನಡೆಯಲಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ.

Translate »