ಮೈಸೂರು,ಅ.21-ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ಅಗ್ರಹಾರ ವಾರ್ಡ್ ನಂ.51 ರಲ್ಲಿರುವ ಉತ್ತರಾದಿ ಮಠ ರಸ್ತೆ, ವಿದ್ಯಾ ಭಾರತಿ ಕಲ್ಯಾಣ ಮಂಟಪದ ಎದುರು ನೂತನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದಲೂ ಶುದ್ಧ ಕುಡಿಯುವ ನೀರನ್ನು ನಲ್ಲಿಗಳ ಮೂಲಕ ಸರಬರಾಜು ಮಾಡುವ ಕೆಲಸ ಮಾಡಿ ದ್ದರು. ಕಾಲಕ್ರಮೇಣ ವಾಯುಮಾಲಿನ್ಯ ದಂತೆ, ಜಲ ಮಾಲಿನ್ಯವು ಸಹ ಉಂಟಾಗಿ ಭೂ ಗರ್ಭದಲ್ಲಿರುವ ನೀರು ಸಹ ಕಲುಷಿತ ಗೊಂಡಿದೆ, ಹಾಗಾಗಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಈ ಕಾರಣದಿಂ ದಾಗಿ ವಾರ್ಡ್ ನಂ.51ರಲ್ಲಿ ಶುದ್ಧ ಕುಡಿ ಯುವ ನೀರಿನ ಘಟಕಕ್ಕೆ ಚಾಲನೆ ನೀಡ ಲಾಗಿದೆ ಎಂದು ತಿಳಿಸಿದರು.
ಪಾಲಿಕೆಯ ವಿರೋಧ ಪಕ್ಷದ ನಾಯಕ ಹಾಗೂ ಇದೇ ವಾರ್ಡ್ ಕಾರ್ಪೊ ರೇಟರ್ ಬಿ.ವಿ.ಮಂಜುನಾಥ್ ಮಾತನಾಡಿ, ನಮ್ಮ ವಾರ್ಡ್‍ನ ಅಭಿವೃದ್ಧಿ ದೃಷ್ಟಿಯಿಂದ ಭೌಗೋಳಿಕವಾಗಿ 3 ಭಾಗಗಳಾಗಿ ವಿಂಗ ಡಿಸಿ, ಒಂದು ನೂರಡಿ ರಸ್ತೆಯಿಂದ ಕೆ.ಆರ್. ವೃತ್ತವರೆಗೆ, ಎರಡು ನೂರಡಿ ರಸ್ತೆಯಿಂದ ಎಂ.ಜಿ.ರಸ್ತೆವರೆಗೆ, ಮತ್ತೊಂದು ಭಾಗ ಎಂ.ಜಿ. ರಸ್ತೆಯಿಂದ ಸೇಂಟ್ ಮೇರಿಸ್ ವೃತದವ ರೆಗೆ ಈ 3 ಭಾಗಗಳ ಜನತೆಯ ಹಿತದೃಷ್ಟಿ ಯಿಂದ, ಈ 3 ಭಾಗದಲ್ಲಿ ಶುದ್ಧ ಕುಡಿ ಯುವ ನೀರಿನ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಅಭಿಯಂ ತರ ಭಾಸ್ಕರ್, ನಾಗರಾಜ ಮೂರ್ತಿ, ವಾಣಿ ವಿಲಾಸ ವಾಟರ್ ವಕ್ರ್ಸ್ ಇಂಜಿನಿಯರ್ ವಿನಯ್‍ಕುಮಾರ್, ಕೃತಿಕಾ, ವಾರ್ಡ್ ಬಿಜೆಪಿ ಅಧ್ಯಕ್ಷ ಗುರುರಾಜ್ ಶೆಣೈ, ಬಾಲ ಕೃಷ್ಣ, ಸಂತೋಷ್ (ಶಂಭು), ಹೇಮಂತ ಕುಮಾರ್, ಕಾವೇರಿ, ಶಿವಕುಮಾರಿ, ವೆಂಕ ಟೇಶ್, ಬಲ್ಲಾಳ್, ಮಮತ, ನಾರಾಯಣ್, ಸುಭಾಷ್, ಹೆಚ್.ಎಸ್.ಭಾಸ್ಕರ್ ಗುತ್ತಿಗೆ ದಾರರಾದ ಜಯರಾಂ ಹಾಜರಿದ್ದರು.