ಸಮಾಜಕ್ಕೆ ಮಾರಕವಾದ ಸಾಮಾಜಿಕ ಪಿಡುಗು ತೊಡೆದು ಹಾಕುವ ಸ್ಥೈರ್ಯವನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು
ಮೈಸೂರು

ಸಮಾಜಕ್ಕೆ ಮಾರಕವಾದ ಸಾಮಾಜಿಕ ಪಿಡುಗು ತೊಡೆದು ಹಾಕುವ ಸ್ಥೈರ್ಯವನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು

October 22, 2019

ಮೈಸೂರು,ಅ.21(ಎಂಟಿವೈ)-ಸಮಾಜದ ಏಳಿಗೆಗೆ ಮಾರಕವಾಗಿ ರುವ ಸಾಮಾಜಿಕ ಪಿಡುಗನ್ನು ತೊಡೆದು ಹಾಕುವ ಆಲೋಚನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಶಿಕ್ಷಕರು ಪ್ರಯತ್ನಿಸಬೇಕು. ಇಂತಹ ಬದಲಾವಣೆಗೆ ವಿಶ್ವವಿದ್ಯಾಲಯಗಳು ಹೊಂದಿಕೊಳ್ಳಲು ತನ್ನ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವಂತೆ ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಡಾ.ಕೆ.ದಿನೇಶ್ ಸಲಹೆ ನೀಡಿದ್ದಾರೆ.

ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ರಾಷ್ಟ್ರೀಯ ಉಚ್ಚಾತಾರ್ ಶಿಕ್ಷಣ ಅಭಿಯಾನ (ರುಸಾ), ಎಂಹೆಚ್ ಆರ್‍ಡಿ ಮತ್ತು ಮೈಸೂರು ವಿಶ್ವವಿದ್ಯಾಲಯದ ಸಂಯುಕ್ತಾಶ್ರಯ ದಲ್ಲಿ ನಡೆದ `ವಿಶ್ವವಿದ್ಯಾಲಯದ ಬದಲಾವಣೆಗೆ ವೇಗವರ್ಧಕ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾಹಸ ಪ್ರವೃತ್ತಿ, ಸ್ವ-ನಂಬಿಕೆ, ಸೃಜನಶೀಲತೆ, ಉತ್ತಮ ಗುರಿ, ಕನಸು ಕಾಣು ವುದು, ಯೋಜನೆ ಅನುಷ್ಠಾನ, ಸಾಮಾಜಿಕ ಕಳಕಳಿ, ಆವಿಷ್ಕಾರ ಎಂಬ ಸಪ್ತ ಸೂತ್ರಗಳನ್ನು ಅನುಸರಿಸಿದಾಗ ಮಾತ್ರ ಏಳಿಗೆ ಸಾಧಿಸ ಬಹುದು. ಪ್ರಸ್ತುತ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆದು ನಿಂತಿದೆ. ಇದರಿಂದ ಯುವ ಜನರಿಗೆ ಬೇಕಾದ ಮಾಹಿತಿ ಸುಲಭವಾಗಿ ಲಭಿಸುತ್ತಿದೆ. ಆದರೆ, ಪರಿಶ್ರಮ ಇಲ್ಲದಿ ದ್ದರೆ, ಸುಲಭದ ಕೆಲಸವೂ ಕಠಿಣವಾಗುತ್ತದೆ ಎಂದರು

ಉನ್ನತ ಶಿಕ್ಷಣ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎ.ಕೋರಿ ಮಾತನಾಡಿ, `ಸಮಾಜದ ಬೆಳವಣಿಗೆಯಲ್ಲಿ ವಿಶ್ವವಿದ್ಯಾ ಲಯಗಳ ಪಾತ್ರ ಬಹಳ ಪ್ರಮುಖ. ಆದರೆ, ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚು ಹೊತ್ತು ಇರುವುದಿಲ್ಲ. ವಿದ್ಯಾರ್ಥಿಗಳು ಹೆಚ್ಚು ಸ್ವಾತಂತ್ರ್ಯ ಪಡೆಯುತ್ತಾ ಹೋದರೆ ಹಾದಿ ತಪ್ಪಲು ಪ್ರೇರಣೆಯಾಗುತ್ತದೆ. ಸೋತವರ ಬಗ್ಗೆ ಹೆಚ್ಚು ಟೀಕೆಗಳು ಹೊರಬರುತ್ತವೆ. ಇದಕ್ಕೆ ಚಂದ್ರಯಾನ-2 ಉದಾ ಹರಣೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮ ದಲ್ಲಿ ಮೈವಿವಿ ಕುಲಪತಿ ಪೆÇ್ರ.ಜಿ.ಹೇಮಂತಕುಮಾರ್, ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್.ರಂಗಪ್ಪ, ಅಕ್ಕಮಹಾದೇವಿ ವಿವಿ ಕುಲಪತಿ ಸಬೀಹಾ, ವೈ.ಎಸ್.ಸಿದ್ದೇಗೌಡ, ಸಿ.ಸಿ.ರಮೇಶ್, ಪರಿಮಳಾ ಅಂಬೇಕರ್, ಎಸ್.ಆರ್.ನಿರಂಜನ್, ಎನ್.ಕೆ.ಲೋಕನಾಥ್ ಉಪಸ್ಥಿತರಿದ್ದರು.

Translate »