ಮೈಸೂರು

ತಿಹಾರ್ ಜೈಲಿನಿಂದ ಹೊರಬಂದ ಡಿಕೆಶಿ
ಮೈಸೂರು

ತಿಹಾರ್ ಜೈಲಿನಿಂದ ಹೊರಬಂದ ಡಿಕೆಶಿ

October 24, 2019

ನವದೆಹಲಿ, ಅ.23-ಅಕ್ರಮ ಹಣ ವರ್ಗಾವಣೆ (ಹವಾಲ) ಪ್ರಕರಣದಲ್ಲಿ ತಿಹಾರ್ ಕಾರಾಗೃಹ ಸೇರಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಇಂದು ಷರತ್ತುಬದ್ಧ ಜಾಮೀನು ನೀಡಿದೆ. ರಾತ್ರಿ 9 ಗಂಟೆ ವೇಳೆಗೆ ತಿಹಾರ್ ಜೈಲಿನಿಂದ ಡಿಕೆಶಿ ಬಿಡುಗಡೆಯಾದರು. ಜಾಮೀನು ದೊರೆತ ಕ್ಷಣದಿಂದಲೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ರಾತ್ರಿ ಡಿಕೆಶಿ ತಿಹಾರ್ ಜೈಲಿನಿಂದ ಹೊರಬರುತ್ತಿದ್ದಂತೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಡಿಕೆಶಿ ಸಹೋದರ, ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ…

ಕಾಂಕ್ರಿಟ್ ತಡೆಗೋಡೆ ನಿರ್ಮಾಣಕ್ಕೆ ಕಾಮಗಾರಿ ಆರಂಭ
ಮೈಸೂರು

ಕಾಂಕ್ರಿಟ್ ತಡೆಗೋಡೆ ನಿರ್ಮಾಣಕ್ಕೆ ಕಾಮಗಾರಿ ಆರಂಭ

October 24, 2019

ಮೈಸೂರು, ಅ.23(ಆರ್‍ಕೆ)-ಮಳೆಯಿಂದಾಗಿ ಮಂಗಳವಾರ ಭೂ ಕುಸಿತವಾಗಿದ್ದ ಚಾಮುಂಡಿಬೆಟ್ಟದ ನಂದಿ ಪ್ರತಿಮೆ ರಸ್ತೆಯ ಸ್ಥಳದಲ್ಲಿ ಕಾಂಕ್ರಿಟ್ ತಡೆಗೋಡೆ ನಿರ್ಮಾಣ ಕಾಮಗಾರಿ ಇಂದು ಆರಂಭವಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಮಂಗಳವಾರ ಸಂಜೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು, ಇಂದು ಬೆಳಿಗ್ಗೆಯೇ ತಡೆಗೋಡೆ ನಿರ್ಮಿಸಲು ಕಾಮಗಾರಿ ಆರಂಭಿಸಿದರು. ಮುಂಜಾಗ್ರತಾ ಕ್ರಮವಾಗಿ ವ್ಯೂ ಪಾಯಿಂಟ್ ಮತ್ತು ನಂದಿ ಬಳಿ ಬ್ಯಾರಿ ಕೇಡ್ ಹಾಕಿ, ಆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡ ಲಾಗಿದೆ. ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿನಯ್‍ಕುಮಾರ್,…

34.25 ಕೋಟಿ ರೂ.ಗಳ ಚಾಮುಂಡಿಬೆಟ್ಟ ರಸ್ತೆ ಅಭಿವೃದ್ಧಿ ಯೋಜನೆ ನೆನೆಗುದಿಗೆ
ಮೈಸೂರು

34.25 ಕೋಟಿ ರೂ.ಗಳ ಚಾಮುಂಡಿಬೆಟ್ಟ ರಸ್ತೆ ಅಭಿವೃದ್ಧಿ ಯೋಜನೆ ನೆನೆಗುದಿಗೆ

October 24, 2019

ಮೈಸೂರು, ಅ. 23(ಆರ್‍ಕೆ)- 2015ರಲ್ಲೇ ಯೋಜಿಸಿದ್ದ 34.25 ಕೋಟಿ ರೂ. ಅಂದಾಜು ವೆಚ್ಚದ ಚಾಮುಂಡಿಬೆಟ್ಟ ರಸ್ತೆ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯು ಪರಿಸರವಾದಿಗಳು ಆಕ್ಷೇಪದಿಂದ ನೆನೆಗುದಿಗೆ ಬಿದ್ದಿದೆ. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮೈಸೂರು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಿಂದ 2015ರ ಜುಲೈ 21ರಂದೇ ಚಾಮುಂಡಿಬೆಟ್ಟದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು 34.25 ಕೋಟಿ ರೂ.ಗಳಿಗೆ ಅಂದಾಜುಪಟ್ಟಿ ತಯಾರಿಸಿ ಅಧೀಕ್ಷಕ ಇಂಜಿನಿ ಯರ್ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಚಾಮುಂಡಿಬೆಟ್ಟದ ನಂದಿ ಪ್ರತಿಮೆ ವೃತ್ತ ದಿಂದ ಮಹಿಷಾಸುರ ಪ್ರತಿಮೆ…

ಅವನ್ಯಾವ ಸ್ಪೀಕರ್, ವಿಪಕ್ಷ ನಾಯಕರಿಗೆ ಜಾಸ್ತಿ ಮಾತನಾಡಬೇಡ ಅಂತಾನೆ
ಮೈಸೂರು

ಅವನ್ಯಾವ ಸ್ಪೀಕರ್, ವಿಪಕ್ಷ ನಾಯಕರಿಗೆ ಜಾಸ್ತಿ ಮಾತನಾಡಬೇಡ ಅಂತಾನೆ

October 24, 2019

ಬಾಗಲಕೋಟೆ,ಅ.22- ಅವನ್ಯಾವನೋ ಪುಣ್ಯಾತ್ಮ ನನ್ನು ಸ್ಪೀಕರ್ ಮಾಡಿಬಿಟ್ಟಿದ್ದಾರೆ. ಅವನು ಹೊಸಬ, ಏನು ಗೊತ್ತಿಲ್ಲ. ವಿರೋಧ ಪಕ್ಷದ ನಾಯಕರಿಗೆ ಜಾಸ್ತಿ ಮಾತನಾಡಬೇಡ ಅನ್ನುತ್ತಾನೆ… ಹೀಗೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕ ವಚನದಲ್ಲಿಯೇ ಅಬ್ಬರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಅವನ್ಯಾವನೋ ಒಬ್ಬನ ಪುಣ್ಯಾತ್ಮನ ಸ್ಪೀಕರ್ ಮಾಡಿ ಬಿಟ್ಟಿದ್ದಾರೆ. ಅವನು ಹೊಸಬ, ಏನು ಗೊತ್ತಿಲ್ಲ. ವಿರೋಧ ಪಕ್ಷದ ನಾಯಕ ಜಾಸ್ತಿ ಮಾತನಾಡುವಂಗಿಲ್ಲ ಕುಳ್ತು ಕೊಳ್ಳೀ ಅಂತಾನೆ. ಏಯ್…

ಜನಾಕರ್ಷಣೆಯ ಮಿನಿ ವಾಟರ್ ಫಾಲ್ಸ್
ಮೈಸೂರು

ಜನಾಕರ್ಷಣೆಯ ಮಿನಿ ವಾಟರ್ ಫಾಲ್ಸ್

October 24, 2019

ಮೈಸೂರು, ಅ. 23(ಆರ್‍ಕೆ)- ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿ ರುವ ಧಾರಾಕಾರ ಮಳೆಯಿಂದಾಗಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಿನಿ ವಾಟರ್ ಫಾಲ್ಸ್ ಗಳು ಪ್ರತ್ಯಕ್ಷವಾಗಿವೆ. ಎತ್ತರದ ಪ್ರದೇಶದಿಂದ ಅಲ್ಲಲ್ಲಿ ನೀರು ಹರಿದು ಬರುತ್ತಿರುವುದರಿಂದ ಜುಳು ಜುಳು ಶಬ್ಧ ಆಹ್ಲಾದಕರವಾಗಿದ್ದು, ಈ ನೈಸರ್ಗಿಕ ಸೌಂದರ್ಯ ನೋಡುಗರನ್ನು ಆಕರ್ಷಿಸುತ್ತಿದೆ. ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಕಂಡುಬರುವಂತೆ ಚಾಮುಂಡಿಬೆಟ್ಟದಲ್ಲಿ ಹಲವು ಮಿನಿ ವಾಟರ್‍ಫಾಲ್ಸ್‍ಗಳು ಈಗ ಉಂಟಾಗಿವೆ. ಬೆಟ್ಟದಲ್ಲಿ ವಾಟರ್‍ಫಾಲ್ಸ್‍ಗಳ ರಮಣೀಯ ದೃಶ್ಯ ಹಾಗೂ ನೀರಿನ ಜುಳು ಜುಳು ಶಬ್ಧವನ್ನು ಮೊಬೈಲ್‍ಗಳಿಂದ ಸೆರೆಹಿಡಿದಿರುವುದು ಸಾಮಾಜಿಕ…

‘ಕೈ’ ಬಿಟ್ಟು ಸಿಹೆಚ್‍ವಿ ಮರಳಿ ತವರಿಗೆ: ಇಂದು ಮೈಸೂರು ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಭೇಟಿ ಮಾಡಲಿರುವ ವಿಜಯಶಂಕರ್
ಮೈಸೂರು

‘ಕೈ’ ಬಿಟ್ಟು ಸಿಹೆಚ್‍ವಿ ಮರಳಿ ತವರಿಗೆ: ಇಂದು ಮೈಸೂರು ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಭೇಟಿ ಮಾಡಲಿರುವ ವಿಜಯಶಂಕರ್

October 24, 2019

ಮೈಸೂರು, ಅ.23- ವರ್ಷದ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದ ಮಾಜಿ ಸಚಿವರೂ ಆದ ಸಿ.ಹೆಚ್.ವಿಜಯಶಂಕರ್ ಮತ್ತೆ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದಾರೆ. ಇವರನ್ನು ಬಿಜೆಪಿಗೆ ಮತ್ತೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖಂಡರಾದ ಅರವಿಂದ ಲಿಂಬಾವಳಿ, ರವಿಕುಮಾರ್ ಇತರರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮೈಸೂರಿಗೆ ಭೇಟಿ ನೀಡುತ್ತಿರುವ ಕಟೀಲ್ ಅವರನ್ನು ಸಿ.ಹೆಚ್.ವಿಜಯ ಶಂಕರ್ ಪಕ್ಷದ ಕಚೇರಿಯಲ್ಲಿ ಭೇಟಿ ಮಾಡುತ್ತಿದ್ದಾರೆ. ಹುಣಸೂರು ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ…

ಮೈಸೂರು-ಬೆಂಗಳೂರು ಹೆದ್ದಾರಿ ಅಭಿವೃದ್ಧಿಗೆ ಕೆ.ಆರ್.ಮಿಲ್ ಕಟ್ಟಡ ಭಾಗಶಃ ನೆಲಸಮ
ಮೈಸೂರು

ಮೈಸೂರು-ಬೆಂಗಳೂರು ಹೆದ್ದಾರಿ ಅಭಿವೃದ್ಧಿಗೆ ಕೆ.ಆರ್.ಮಿಲ್ ಕಟ್ಟಡ ಭಾಗಶಃ ನೆಲಸಮ

October 24, 2019

ಮೈಸೂರು,ಆ.23(ವೈಡಿಎಸ್)- ಮಹಾತ್ಮ ಗಾಂಧಿ ಅವರಿಂದ ಉದ್ಘಾಟನೆಗೊಂಡಿದ್ದ ಮೈಸೂರಿನ ಕೆ.ಆರ್.ಮಿಲ್ ಕಾರ್ಖಾನೆ ಇನ್ನು ನೆನಪು ಮಾತ್ರ. ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯನ್ನು ರಾಜ್ಯ ಸರ್ಕಾರ ಅಭಿ ವೃದ್ಧಿಪಡಿಸುತ್ತಿದ್ದು. ಅದಕ್ಕಾಗಿ ಈಗಾಗಲೇ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿ ರುವ ಹಿನ್ನಲೆ ಕೆ.ಆರ್.ಮಿಲ್ ಕಾರ್ಖಾನೆ ಕಟ್ಟಡವನ್ನು ಭಾಗಶಃ ನೆಲಸಮಗೊಳಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಸ್ಥಾಪಿತಗೊಂಡ ಕೆ.ಆರ್. ಮಿಲ್, ಮೈಸೂರು ಜಿಲ್ಲೆಯ ಸಾವಿರಾರು ಕಾರ್ಮಿಕರ ಕುಟುಂಬಕ್ಕೆ ಜೀವನಾಧಾರವಾಗಿತ್ತು. ಆದರೆ, ಹಲವು ಕಾರಣಗಳಿಂದ ಕಾರ್ಖಾನೆಗೆ ಬೀಗಮುದ್ರೆ ಹಾಕಲಾಗಿತ್ತು. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ…

`ಮೊದಲು ನಿನ್ನನ್ನು ನೀನು ನಂಬು’ ಎಂದವರು ಸ್ವಾಮಿ ವಿವೇಕಾನಂದ
ಮೈಸೂರು

`ಮೊದಲು ನಿನ್ನನ್ನು ನೀನು ನಂಬು’ ಎಂದವರು ಸ್ವಾಮಿ ವಿವೇಕಾನಂದ

October 24, 2019

ಮೈಸೂರು, ಅ.23(ಆರ್‍ಕೆಬಿ)- ಮೊದಲು ನಿನ್ನನ್ನು ನೀನು ನಂಬಬೇಕು… ಯಾವ ಮನುಷ್ಯನಲ್ಲಿ ಪಾವಿತ್ರ್ಯತೆ, ಚಿತ್ತ ಶುದ್ಧತೆ, ಔದಾರ್ಯತೆ ಇರುತ್ತದೆಯೋ, ಆತನಲ್ಲಿ ಧರ್ಮ ಇರುತ್ತದೆ. ಕೇವಲ ದೇವಸ್ಥಾನಕ್ಕೆ ಹೋಗಿ ಬಂದರಷ್ಟೇ ಅಲ್ಲ ಎಂದು ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿಜಯಾನಂದ ಸರಸ್ವತಿ ಮಹಾರಾಜ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಮಾನಸಗಂಗೋತ್ರಿ ಶೈಕ್ಷ ಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ (ಇಎಂಎಂಆರ್‍ಸಿ) ಸಭಾಂಗಣದಲ್ಲಿ ಮೈಸೂರು ವಿವಿ ತತ್ವಶಾಸ್ತ್ರ ಅಧ್ಯಯನ ವಿಭಾಗ, ಸ್ವಾಮಿ ವಿವೇಕಾನಂದ ಪೀಠ ಆಯೋ ಜಿಸಿದ್ದ `ಸ್ವಾಮಿ ವಿವೇಕಾನಂದರ ಚಿಂತನೆ…

ಇನ್ನೂ 4 ದಿನ ಕೊಡಗು, ಚಾ.ನಗರ ಜಿಲ್ಲೆಯಲ್ಲಿ ಅಧಿಕ ಮಳೆ ಸಾಧ್ಯತೆ
ಮೈಸೂರು

ಇನ್ನೂ 4 ದಿನ ಕೊಡಗು, ಚಾ.ನಗರ ಜಿಲ್ಲೆಯಲ್ಲಿ ಅಧಿಕ ಮಳೆ ಸಾಧ್ಯತೆ

October 24, 2019

ಮೈಸೂರು, ಅ.23(ಆರ್‍ಕೆಬಿ)- ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ನಾಲ್ಕು ದಿನ ಅ.24ರಿಂದ 27ರವರೆಗೆ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಡ್ಯ ಜಿಲ್ಲೆಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ. ಮೈಸೂರು ಜಿಲ್ಲೆ: ಮೈಸೂರು ಜಿಲ್ಲೆಯಲ್ಲಿ ಅ.24ರಂದು 120 ಮಿ.ಮೀ., 25ರಂದು 60 ಮಿ.ಮೀ., 26ರಂದು 50 ಮಿ.ಮೀ., 27ರಂದು 17 ಮಿ.ಮೀ. ಮಳೆ ಬೀಳುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗರಿಷ್ಠ ತಾಪಮಾನ 28-29 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ…

ಅನರ್ಹ ಶಾಸಕರ ಪ್ರಕರಣ: ಇಂದು ಮತ್ತೆ ವಿಚಾರಣೆ
ಮೈಸೂರು

ಅನರ್ಹ ಶಾಸಕರ ಪ್ರಕರಣ: ಇಂದು ಮತ್ತೆ ವಿಚಾರಣೆ

October 24, 2019

ಬೆಂಗಳೂರು, ಅ.23- ಸುಪ್ರೀಂಕೋರ್ಟ್‍ನಲ್ಲಿ ಅನರ್ಹ ಶಾಸಕರ ಪ್ರಕರಣ ಇವತ್ತೂ ಇತ್ಯರ್ಥವಾಗಲಿಲ್ಲ. ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ -ಜೆಡಿಎಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಪತನ ವಾಗಲು ಕಾರಣರಾಗಿದ್ದ 17 ಅನರ್ಹ ಶಾಸಕರ ಪ್ರಕರಣದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆ (ಗುರುವಾರ)ಕ್ಕೆ ಮುಂದೂಡಿದೆ. ನಿನ್ನೆ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಆರಂಭವಾದಾಗ ಕಾಂಗ್ರೆಸ್ ಪರ ವಕೀಲ ಕಪಿಲ್ ಚುನಾವಣೆ ನೀತಿ ಸಂಹಿತೆಯ ಕುರಿತು ಹೈಕೋರ್ಟ್‍ನಲ್ಲಿ ವಿಚಾರಣೆ ಬಾಕಿಯಿದೆ. ಹೀಗಾಗಿ, ವಿಚಾರಣೆ ಮುಂದೂಡಬೇಕೆಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸಿಬಲ್…

1 792 793 794 795 796 1,611
Translate »