`ಮೊದಲು ನಿನ್ನನ್ನು ನೀನು ನಂಬು’ ಎಂದವರು ಸ್ವಾಮಿ ವಿವೇಕಾನಂದ
ಮೈಸೂರು

`ಮೊದಲು ನಿನ್ನನ್ನು ನೀನು ನಂಬು’ ಎಂದವರು ಸ್ವಾಮಿ ವಿವೇಕಾನಂದ

October 24, 2019

ಮೈಸೂರು, ಅ.23(ಆರ್‍ಕೆಬಿ)- ಮೊದಲು ನಿನ್ನನ್ನು ನೀನು ನಂಬಬೇಕು… ಯಾವ ಮನುಷ್ಯನಲ್ಲಿ ಪಾವಿತ್ರ್ಯತೆ, ಚಿತ್ತ ಶುದ್ಧತೆ, ಔದಾರ್ಯತೆ ಇರುತ್ತದೆಯೋ, ಆತನಲ್ಲಿ ಧರ್ಮ ಇರುತ್ತದೆ. ಕೇವಲ ದೇವಸ್ಥಾನಕ್ಕೆ ಹೋಗಿ ಬಂದರಷ್ಟೇ ಅಲ್ಲ ಎಂದು ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿಜಯಾನಂದ ಸರಸ್ವತಿ ಮಹಾರಾಜ್ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಮಾನಸಗಂಗೋತ್ರಿ ಶೈಕ್ಷ ಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ (ಇಎಂಎಂಆರ್‍ಸಿ) ಸಭಾಂಗಣದಲ್ಲಿ ಮೈಸೂರು ವಿವಿ ತತ್ವಶಾಸ್ತ್ರ ಅಧ್ಯಯನ ವಿಭಾಗ, ಸ್ವಾಮಿ ವಿವೇಕಾನಂದ ಪೀಠ ಆಯೋ ಜಿಸಿದ್ದ `ಸ್ವಾಮಿ ವಿವೇಕಾನಂದರ ಚಿಂತನೆ ಯಲ್ಲಿ ಧರ್ಮ, ಸಂಸ್ಕøತಿ ಮತ್ತು ದೇಶಭಕ್ತಿಯ ಆಧ್ಯಾತ್ಮಿಕ ಧಾರೆ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಧರ್ಮ ಎಂದರೆ ತ್ಯಾಗ ಮತ್ತು ಸೇವೆಯ ಗುಣ, ಇದು ಮನುಷ್ಯರಲ್ಲಿ ಬರಬೇಕು. ಮನುಷ್ಯ ವೈಜ್ಞಾನಿಕವಾಗಿ ಎಷ್ಟೇ ಬೆಳೆ ದರೂ ಕೂಡ ತನ್ನ ಆತ್ಮದ ಅರಿವು ತಾನು ಮಾಡಿಕೊಳ್ಳದ ಹೊರತು ಧರ್ಮದ ಸಾಕ್ಷಾತ್ಕಾರವಾಗುವುದಿಲ್ಲ. ನಿನ್ನನ್ನು ನೀನು ಕಂಡುಕೊಳ್ಳಬೇಕು. ಮೊದಲು ನಿನ್ನನ್ನು ನೀನು ನಂಬಬೇಕು. ಇದೇ ಆಧ್ಯಾತ್ಮ, ಬೇರೆ ಯವರ ನಂಬಿಕೆಗಳಿಗೆ ನೀನು ಸಹಾಯ ಮಾಡು ಎಂದಿದ್ದಾರೆ. ಧರ್ಮದ ಹಿಂದೆ ತ್ಯಾಗ, ಸೇವೆ ಇರಬೇಕು ಎಂದು ವಿವೇಕಾ ನಂದರು ನೀಡಿರುವ ಸಂದೇಶ ಮತ್ತು ಅವರ ಚಿಂತನೆಗಳು ಮನೆ ಮನೆಯನ್ನು ತಲುಪಬೇಕಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರದ ದೀನಬಂಧು ಸಂಸ್ಥೆಯ ಗೌರವ ಕಾರ್ಯ ದರ್ಶಿ ಪ್ರೊ.ಜಿ.ಎಸ್.ಜಯದೇವ ಮಾತ ನಾಡಿ, ಮನುಷ್ಯರಲ್ಲಿ ದೇವರನ್ನು ಕಾಣು ವುದೇ ಧರ್ಮ ಎಂಬುದು ಸ್ವಾಮಿ ವಿವೇಕಾ ನಂದರ ವಾಣಿ. ಹಸಿದ ಹೊಟ್ಟೆಗೆ ವೇದಾಂತ ಅಲ್ಲ.. ಅನ್ನ ಕೊಡುವುದೇ ಧರ್ಮ ಎಂದವರು ವಿವೇಕಾನಂದರು. ನಮ್ಮ ದೇಶದ ಅಭಿವೃದ್ಧಿ ನಮ್ಮ ಸಂಸ್ಕøತಿಗೆ ಅನು ಗುಣವಾಗಿ ಆಗಬೇಕು. ಪರದೇಶಿಯರನ್ನು ಅನುಕರಣೆ ಮಾಡುತ್ತಿದ್ದೇವೆ. ಅನುಕರಣೆ ಸಂಸ್ಕøತಿಯಲ್ಲ ಎಂದು ವಿವೇಕಾನಂದರು ಹೇಳಿದ್ದಾರೆ. ಅವರು ಹೇಳಿದ್ದನ್ನು ಗಾಂಧೀಜಿ ಮಾಡಿ ತೋರಿಸಿದ್ದಾರೆ. ಧರ್ಮ, ಸಂಸ್ಕøತಿಯ ಆಧ್ಯಾತ್ಮಿಕತೆಯು ಒಂದ ಕ್ಕೊಂದು ಹೆಣೆದುಕೊಂಡಿದೆ. ಇಂತಹ ವಿಚಾರ ಸಂಕಿರಣಗಳು ಶಾಲೆಗಳಲ್ಲಿಯೂ ಹೆಚ್ಚಾಗಿ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮೈಸೂರು ಪ್ರಾದೇ ಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ. ವೈ.ಶ್ರೀಕಾಂತ್, ಸ್ವಾಮಿ ವಿವೇಕಾನಂದ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ವಿ.ಎನ್.ಶೇಷಗಿರಿರಾವ್, ವಿಚಾರ ಸಂಕಿ ರಣದ ನಿರ್ದೇಶಕ ಡಾ.ಎಸ್.ವೆಂಕಟೇಶ್, ಸಹಾಯಕ ಪ್ರಾಧ್ಯಾಪಕ ಡಾ.ಎಂ.ಡ್ಯಾನಿ ಯಲ್ ಮತ್ತಿತರರು ಉಪಸ್ಥಿತರಿದ್ದರು.

Translate »