ಮೈಸೂರು, ಅ.23(ಆರ್‍ಕೆಬಿ)- ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ನಾಲ್ಕು ದಿನ ಅ.24ರಿಂದ 27ರವರೆಗೆ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಡ್ಯ ಜಿಲ್ಲೆಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ.
ಮೈಸೂರು ಜಿಲ್ಲೆ: ಮೈಸೂರು ಜಿಲ್ಲೆಯಲ್ಲಿ ಅ.24ರಂದು 120 ಮಿ.ಮೀ., 25ರಂದು 60 ಮಿ.ಮೀ., 26ರಂದು 50 ಮಿ.ಮೀ., 27ರಂದು 17 ಮಿ.ಮೀ. ಮಳೆ ಬೀಳುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗರಿಷ್ಠ ತಾಪಮಾನ 28-29 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಜಿಲ್ಲೆ: ಕೊಡಗು ಜಿಲ್ಲೆಯಲ್ಲಿ ಅ.24ರಂದು 125 ಮಿ.ಮೀ., 25ರಂದು 96 ಮಿ.ಮೀ., 26ರಂದು 70 ಮಿ.ಮೀ., 27ರಂದು 40 ಮಿ.ಮೀ. ಮಳೆ ಬೀಳಲಿದೆ. ಗರಿಷ್ಠ ತಾಪಮಾನ 24-25 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಚಾಮರಾಜನಗರ ಜಿಲ್ಲೆ: ಚಾಮರಾಜನಗರ ಜಿಲ್ಲೆಯಲ್ಲಿ ಅ.24ರಂದು 90 ಮಿ.ಮೀ., 25ರಂದು 55 ಮಿ.ಮೀ., 26ರಂದು 45 ಮಿ.ಮೀ. ಹಾಗೂ 27ರಂದು 25 ಮಿ.ಮೀ. ಮಳೆ ಸುರಿಯಬಹುದು ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಗರಿಷ್ಠ 30-31 ಡಿಗ್ರಿ ಸೆಲ್ಸಿಯಸ್, ಕನಿಷ್ಟ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.
ಮಂಡ್ಯ ಜಿಲ್ಲೆ: ಮಂಡ್ಯ ಜಿಲ್ಲೆಯಲ್ಲಿ ಅ.24ರಂದು 38 ಮಿ.ಮೀ., 25ರಂದು 50 ಮಿ.ಮೀ., 26ರಂದು 20 ಮಿ.ಮೀ. ಹಾಗೂ 27ರಂದು 11 ಮಿ.ಮೀ. ಮಳೆ ಬೀಳುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗರಿಷ್ಠ 29-30, ಕನಿಷ್ಠ 19ರಿಂದ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.