ಮೈಸೂರು-ಬೆಂಗಳೂರು ಹೆದ್ದಾರಿ ಅಭಿವೃದ್ಧಿಗೆ ಕೆ.ಆರ್.ಮಿಲ್ ಕಟ್ಟಡ ಭಾಗಶಃ ನೆಲಸಮ
ಮೈಸೂರು

ಮೈಸೂರು-ಬೆಂಗಳೂರು ಹೆದ್ದಾರಿ ಅಭಿವೃದ್ಧಿಗೆ ಕೆ.ಆರ್.ಮಿಲ್ ಕಟ್ಟಡ ಭಾಗಶಃ ನೆಲಸಮ

October 24, 2019

ಮೈಸೂರು,ಆ.23(ವೈಡಿಎಸ್)- ಮಹಾತ್ಮ ಗಾಂಧಿ ಅವರಿಂದ ಉದ್ಘಾಟನೆಗೊಂಡಿದ್ದ ಮೈಸೂರಿನ ಕೆ.ಆರ್.ಮಿಲ್ ಕಾರ್ಖಾನೆ ಇನ್ನು ನೆನಪು ಮಾತ್ರ. ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯನ್ನು ರಾಜ್ಯ ಸರ್ಕಾರ ಅಭಿ ವೃದ್ಧಿಪಡಿಸುತ್ತಿದ್ದು. ಅದಕ್ಕಾಗಿ ಈಗಾಗಲೇ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿ ರುವ ಹಿನ್ನಲೆ ಕೆ.ಆರ್.ಮಿಲ್ ಕಾರ್ಖಾನೆ ಕಟ್ಟಡವನ್ನು ಭಾಗಶಃ ನೆಲಸಮಗೊಳಿಸಲಾಗಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಸ್ಥಾಪಿತಗೊಂಡ ಕೆ.ಆರ್. ಮಿಲ್, ಮೈಸೂರು ಜಿಲ್ಲೆಯ ಸಾವಿರಾರು ಕಾರ್ಮಿಕರ ಕುಟುಂಬಕ್ಕೆ ಜೀವನಾಧಾರವಾಗಿತ್ತು. ಆದರೆ, ಹಲವು ಕಾರಣಗಳಿಂದ ಕಾರ್ಖಾನೆಗೆ ಬೀಗಮುದ್ರೆ ಹಾಕಲಾಗಿತ್ತು. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಇಂದು ರಸ್ತೆ ಅಗಲೀಕರಣಕ್ಕಾಗಿ ಕೆ.ಆರ್.ಮಿಲ್ ಕಾರ್ಖಾನೆ ಕಟ್ಟಡವನ್ನು ಭಾಗಶಃ ನೆಲಸಮಗೊಳಿಸಲಾಗಿದೆ.

ಗಾಂಧೀಜಿ ಉದ್ಘಾಟನೆ: ಗಾಂಧೀಜಿ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದಾಗ, ಆಗ ತಾನೇ ಸ್ಥಾಪನೆಗೊಂಡಿದ್ದ ಕೃಷ್ಣರಾಜೇಂದ್ರ ಬಟ್ಟೆ ಗಿರಣಿ (ಕೆ.ಆರ್.ಮಿಲ್) ಉದ್ಘಾಟಿಸಿದ್ದರು.

Translate »