ಜನಾಕರ್ಷಣೆಯ ಮಿನಿ ವಾಟರ್ ಫಾಲ್ಸ್
ಮೈಸೂರು

ಜನಾಕರ್ಷಣೆಯ ಮಿನಿ ವಾಟರ್ ಫಾಲ್ಸ್

October 24, 2019

ಮೈಸೂರು, ಅ. 23(ಆರ್‍ಕೆ)- ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿ ರುವ ಧಾರಾಕಾರ ಮಳೆಯಿಂದಾಗಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಿನಿ ವಾಟರ್ ಫಾಲ್ಸ್ ಗಳು ಪ್ರತ್ಯಕ್ಷವಾಗಿವೆ. ಎತ್ತರದ ಪ್ರದೇಶದಿಂದ ಅಲ್ಲಲ್ಲಿ ನೀರು ಹರಿದು ಬರುತ್ತಿರುವುದರಿಂದ ಜುಳು ಜುಳು ಶಬ್ಧ ಆಹ್ಲಾದಕರವಾಗಿದ್ದು, ಈ ನೈಸರ್ಗಿಕ ಸೌಂದರ್ಯ ನೋಡುಗರನ್ನು ಆಕರ್ಷಿಸುತ್ತಿದೆ. ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಕಂಡುಬರುವಂತೆ ಚಾಮುಂಡಿಬೆಟ್ಟದಲ್ಲಿ ಹಲವು ಮಿನಿ ವಾಟರ್‍ಫಾಲ್ಸ್‍ಗಳು ಈಗ ಉಂಟಾಗಿವೆ.

ಬೆಟ್ಟದಲ್ಲಿ ವಾಟರ್‍ಫಾಲ್ಸ್‍ಗಳ ರಮಣೀಯ ದೃಶ್ಯ ಹಾಗೂ ನೀರಿನ ಜುಳು ಜುಳು ಶಬ್ಧವನ್ನು ಮೊಬೈಲ್‍ಗಳಿಂದ ಸೆರೆಹಿಡಿದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದರಿಂದ ಜನರು ಆನಂದಿಸುತ್ತಿದ್ದಾರೆ.

Translate »