ಅವನ್ಯಾವ ಸ್ಪೀಕರ್, ವಿಪಕ್ಷ ನಾಯಕರಿಗೆ ಜಾಸ್ತಿ ಮಾತನಾಡಬೇಡ ಅಂತಾನೆ
ಮೈಸೂರು

ಅವನ್ಯಾವ ಸ್ಪೀಕರ್, ವಿಪಕ್ಷ ನಾಯಕರಿಗೆ ಜಾಸ್ತಿ ಮಾತನಾಡಬೇಡ ಅಂತಾನೆ

October 24, 2019

ಬಾಗಲಕೋಟೆ,ಅ.22- ಅವನ್ಯಾವನೋ ಪುಣ್ಯಾತ್ಮ ನನ್ನು ಸ್ಪೀಕರ್ ಮಾಡಿಬಿಟ್ಟಿದ್ದಾರೆ. ಅವನು ಹೊಸಬ, ಏನು ಗೊತ್ತಿಲ್ಲ. ವಿರೋಧ ಪಕ್ಷದ ನಾಯಕರಿಗೆ ಜಾಸ್ತಿ ಮಾತನಾಡಬೇಡ ಅನ್ನುತ್ತಾನೆ…

ಹೀಗೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕ ವಚನದಲ್ಲಿಯೇ ಅಬ್ಬರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡಿದರು.

ಅವನ್ಯಾವನೋ ಒಬ್ಬನ ಪುಣ್ಯಾತ್ಮನ ಸ್ಪೀಕರ್ ಮಾಡಿ ಬಿಟ್ಟಿದ್ದಾರೆ. ಅವನು ಹೊಸಬ, ಏನು ಗೊತ್ತಿಲ್ಲ. ವಿರೋಧ ಪಕ್ಷದ ನಾಯಕ ಜಾಸ್ತಿ ಮಾತನಾಡುವಂಗಿಲ್ಲ ಕುಳ್ತು ಕೊಳ್ಳೀ ಅಂತಾನೆ. ಏಯ್ ಕುಳಿತುಕೊಳ್ಳೋ ನೀನ್ಯಾ ವನು ಅಂದೇ ಎಂದರು. ಕರ್ನಾಟಕ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಗೆ ಇಷ್ಟೇ ಮಾತನಾಡಿ ಅಂತ ಇದುವರೆಗೂ ಯಾರೂ ಹೇಳಿಲ್ಲ. ಇವನ್ಯಾ ವನೋ ಹೇಳ್ತಾನೆ. ನಾನು ಹೇಳಿದೆ, ನಾನು ಮಾತನಾಡು ವವನೇ. ಕೇಳಿದ್ರೇ ಕೇಳು ಇಲ್ಲಂದ್ರೆ ಬಿಡು. ವಿಧಾನಸಭೆಯಲ್ಲಿ ಪ್ರವಾಹ ಸಂಬಂಧ ಚರ್ಚೆ ವಿಚಾರವಾಗಿ ಕಡಿಮೆ ಅವಧಿ ನಿಗದಿ ಮಾಡಿ ದ್ದಕ್ಕಾಗಿ ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸಿದರು. 2009ರಿಂದ 2013 ವರೆಗೆ ನನ್ನನ್ನು ಹೈಕಮಾಂಡ್ ನಾಯಕರು ವಿಪಕ್ಷ ನಾಯಕರ ನ್ನಾಗಿ ಮಾಡಿದ್ರು. ನನ್ನ 5 ವರ್ಷ ಸಿಎಂ ಮಾಡಿದ್ರು. ಈಗ ಮತ್ತೇ ನನ್ನನ್ನೇ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದಾರೆ. ಬಾದಾಮಿ ಕ್ಷೇತ್ರದ ಜನರ ಆಶೀರ್ವಾದ ದಿಂದ ವಿರೋಧ ಪಕ್ಷದ ನಾಯಕನಾದೆ. ನೀವು ನನ್ನನ್ನು ಎಂಎಲ್‍ಎ ಮಾಡದಿದ್ರೆ. ನಾನೆಲ್ಲಿ ವಿರೋಧ ಪಕ್ಷದ ನಾಯಕನಾಗ್ತಿದ್ದೆ. ಮೈಸೂರಿನಲ್ಲಿ ಸೋಲಿಸಿ ದಂತೆ ನೀವೂ ಬಾದಾಮಿಯಲ್ಲಿ ಸೋಲಿಸಿದ್ರೆ ಮನೆ ಯಲ್ಲಿರಬೇಕಾಗ್ತಿತ್ತು ಎಂದರು. ವಿರೋಧ ಪಕ್ಷದ ನಾಯಕ ಸ್ಥಾನ ಸಿಕ್ಕಿದ ಕ್ರೆಡಿಟ್ ನಿಮಗೆ ಸೇರ ಬೇಕು. ಸಿಎಂ ಬಿಎಸ್ವೈ ನನ್ನ ಕ್ಷೇತ್ರದ 35 ಕೋಟಿ, ಕಾಂಗ್ರೆಸ್ ಎಂಎಲ್‍ಎ ಕ್ಷೇತ್ರಕ್ಕೆ ಮಂಜೂರಾದ ಕಾಮಗಾರಿ ಹಿಡಿದಿಟ್ಟುಕೊಂಡು ಬಿಟ್ಟಿದ್ದಾರೆ. ನಾನು ಅಸೆಂಬ್ಲಿ ಯಲ್ಲಿ ‘ಏಯ್ ಪುಣ್ಯಾತ್ಮ ಏನು ಮಾಡ್ತಿದ್ದಿಯಾ ಎಂದೆ. ದ್ವೇಷದ ರಾಜಕಾರಣ ಮಾಡೋಕೆ ಹೋಗ್ಬೇಡಾ. ಬಿಜೆಪಿಯವ್ರಿಗೆ ಅನುದಾನ ಕೊಟ್ಟು, ಕಾಂಗ್ರೆಸ್‍ನವ್ರಿಗೆ ಕೊಡದಿದ್ದರೆ. ಬಿಎಸ್ವೈಗೆ ಹುಷಾರ್ ಅಧಿವೇಶನ ನಡೆಸೋಕೆ ಬಿಡೋಲ್ಲವೆಂದೆ. ನಾನು ಹೇಳಿದ್ಮೆಲೆ ವಾಪಸ್ ಅನುದಾನ ಕೊಟ್ಟಿದ್ದಾರೆ’ ಎಂದು ಸಿದ್ದರಾಮಯ್ಯ ತಮ್ಮ ಎಂದಿನ ಧಾಟಿಯಲ್ಲೇ ಹೇಳಿದರು. ಸಿದ್ದರಾಮಯ್ಯ ವಿಪಕ್ಷ ನಾಯಕರಾದ ಮೇಲೆ ತಮ್ಮ ಖದರ್ ಬದಲಾ ಯಿಸಿಕೊಂಡಿದ್ದಾರೆ. ದೋಸ್ತಿ ಸರಕಾರದಲ್ಲಿ ಸುಮ್ಮನಿದ್ದ ಸಿದ್ದರಾಮಯ್ಯ ಈಗ ಗುಟುರು ಹಾಕುತ್ತಿದ್ದಾರೆ

Translate »