ಮೈಸೂರು

ಮಂಡ್ಯ, ಮೈಸೂರು, ಚಾ.ನಗರ, ಹಾಸನದಲ್ಲಿ ಮಳೆ ಆರ್ಭಟ
ಮೈಸೂರು

ಮಂಡ್ಯ, ಮೈಸೂರು, ಚಾ.ನಗರ, ಹಾಸನದಲ್ಲಿ ಮಳೆ ಆರ್ಭಟ

October 23, 2019

ಮೈಸೂರು, ಅ.22- ಮೈಸೂರು, ಮಂಡ್ಯ, ಚಾಮ ರಾಜನಗರ ಹಾಗೂ ಹಾಸನದಲ್ಲಿ ವರುಣನ ಆರ್ಭಟ ಮುಂದುವರೆ ದಿದ್ದು, ಮಂಡ್ಯದ ಕೆ.ಆರ್.ಪೇಟೆ ಯಲ್ಲಿ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅನೇಕ ಮನೆಗಳಿಗೆ ಭಾರೀ ಹಾನಿಯಾಗಿದೆ. ಅಪಾರ ಪ್ರಮಾ ಣದ ಬೆಳೆ ನಷ್ಟವಾಗಿ ರೈತರು ಕಂಗಾ ಲಾಗಿದ್ದಾರೆ. ಕೆರೆಕಟ್ಟೆಗಳು ಕೋಡಿ ಬೀಳುವ ಸ್ಥಿತಿಗೆ ತಲುಪಿವೆ. ಒಟ್ಟಾರೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕೊಡಗಿನಲ್ಲಿ ಸಾಧಾರಣ ಮಳೆಯಾಗುತ್ತಿದೆ. ಮೈಸೂರು: ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಮೈಸೂರಿನ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಸಮೀಪ,…

ಚಾಮುಂಡಿಬೆಟ್ಟದಲ್ಲಿ ಭೂ ಕುಸಿತ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಭೂ ಕುಸಿತ

October 23, 2019

ಮೈಸೂರು, ಅ.22(ಎಂಕೆ)- ಮೈಸೂರಿನಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಭೂ ಕುಸಿತ ಉಂಟಾಗಿದೆ. ಬೆಟ್ಟದಲ್ಲಿನ ವ್ಯೂ ಪಾಯಿಂಟ್ ಸಮೀಪ ನಂದಿ ಕಡೆಗೆ ಸಾಗುವ ಮಾರ್ಗದಲ್ಲಿ ರಸ್ತೆ ತಡೆಗೋಡೆಯೊಂದಿಗೆ ಭೂಮಿ ಕುಸಿದು ಬಿದ್ದಿದ್ದು, ಮುಂಜಾಗ್ರತಾ ಕ್ರಮವಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮಳೆ ಮುಂದುವರೆದಿರುವ ಕಾರಣ ಮತ್ತಷ್ಟು ಭೂ ಕುಸಿತವಾಗುವ ಭೀತಿ ಎದುರಾಗಿದೆ. ದಸರಾ ಸಂದರ್ಭದಲ್ಲಿ ದೀಪಾಲಂಕಾರದಲ್ಲಿ `ಸುಸ್ವಾಗತ’ ಹಾಗೂ `ವೆಲ್‍ಕಮ್’ ಅಕ್ಷರ ವಿನ್ಯಾಸ ಮಾಡಿರುವ ಸ್ಥಳಕ್ಕೆ ಕೇವಲ 100 ಮೀ. ಸಮೀಪ ಈ…

ತಮಿಳುನಾಡು ಸಲಗನ ಪುಂಡಾಟ
ಮೈಸೂರು

ತಮಿಳುನಾಡು ಸಲಗನ ಪುಂಡಾಟ

October 23, 2019

ಗುಂಡ್ಲುಪೇಟೆ, ಅ.22(ಸೋಮ್.ಜಿ)- ನರಹಂತಕ ಹುಲಿಯ ಸೆರೆಯಾದ ಬಳಿಕ ನಿಟ್ಟುಸಿರು ಬಿಟ್ಟಿದ್ದ ಬಂಡೀಪುರ ಕಾಡಂಚಿನ ಜನರಲ್ಲಿ ಈಗ ಕಾಡಾನೆ ಭೀತಿ ಎದುರಾಗಿದೆ. ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೊಳಪಡುವ ಶಿವ ಪುರ ಮತ್ತು ಹಂಗಳ ಗ್ರಾಮದ ಸುತ್ತಮುತ್ತ ಪುಂಡಾನೆ ದಾಳಿಗೆ ಮೂರು ಹಸುಗಳು ಬಲಿಯಾಗಿದ್ದು, ಇಬ್ಬರು ವ್ಯಕ್ತಿಗಳು ತೀವ್ರ ವಾಗಿ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಲಿ ದಾಳಿಗೆ ಇಬ್ಬರು ರೈತರು ಬಲಿ ಯಾಗಿದ್ದನ್ನು ಮರೆಯುವ ಮುನ್ನವೇ ಮಂಗಳ ವಾರ ಬೆಳಗಿನಿಂದ ಸಂಜೆಯವರೆಗೆ ಅರಣ್ಯ ದಂಚಿನ…

ಹಲವು ವರ್ಷವಾದರೂ ಸಾವಿರಕ್ಕೂ ಹೆಚ್ಚು ಹಂಚಿಕೆಯೇ ಆಗಿಲ್ಲ
ಮೈಸೂರು

ಹಲವು ವರ್ಷವಾದರೂ ಸಾವಿರಕ್ಕೂ ಹೆಚ್ಚು ಹಂಚಿಕೆಯೇ ಆಗಿಲ್ಲ

October 23, 2019

ಮೈಸೂರು, ಅ.22(ಪಿಎಂ)-ಕೊಳೆಗೇರಿ ನಿವಾಸಿ ಗಳಿಗಾಗಿ ಮೈಸೂರು ನಗರ ವ್ಯಾಪ್ತಿಯಲ್ಲಿ ನಿರ್ಮಾಣ ಗೊಂಡಿರುವ ಮನೆಗಳ ಪೈಕಿ ಸಾವಿರಕ್ಕೂ ಹೆಚ್ಚು ಮನೆಗಳು ಹಂಚಿಕೆ ಭಾಗ್ಯವನ್ನೇ ಕಂಡಿಲ್ಲ. ಈ ಪೈಕಿ ಹಲವು ಮನೆಗಳ ಕಿಟಕಿ-ಬಾಗಿಲು ಮುರಿದು ಬೀಳುವ ಹಂತಕ್ಕೂ ಬಂದಿವೆ. ಜೊತೆಗೆ ಅವುಗಳ ಕಳ್ಳತನವೂ ನಡೆಯುತ್ತಿದೆ. ಮೈಸೂರಿನ ಜಿಪಂ ಸಭಾಂಗಣದಲ್ಲಿ ಮಂಗಳ ವಾರ ನಡೆದ ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಾರ್ಯ ಪಾಲಕ ಅಭಿಯಂತರ ಕಪನಿಗೌಡ, ಮಂಡಳಿ ಪ್ರಗತಿ ಅಂಕಿ-ಅಂಶ ನೀಡುವ ವೇಳೆ ಈ ಮಾಹಿತಿ…

ಅರಣ್ಯ ವನ್ಯಜೀವಿ ಸಂಪತ್ತು ರಕ್ಷಣೆಯಲ್ಲೂ ಪೊಲೀಸರ ಸಹಕಾರ
ಮೈಸೂರು

ಅರಣ್ಯ ವನ್ಯಜೀವಿ ಸಂಪತ್ತು ರಕ್ಷಣೆಯಲ್ಲೂ ಪೊಲೀಸರ ಸಹಕಾರ

October 22, 2019

ಮೈಸೂರು, ಅ. 21(ಆರ್‍ಕೆ)- ಅರಣ್ಯ, ವನ್ಯಜೀವಿ ಸಂಪತ್ತಿನ ರಕ್ಷಣೆಯಲ್ಲೂ ಪೊಲೀ ಸರು ಸಹಕರಿಸುತ್ತಿದ್ದಾರೆ ಎಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಇಂದಿಲ್ಲಿ ಶ್ಲಾಘಿಸಿದ್ದಾರೆ. ಮೈಸೂರು ನಗರ, ಜಿಲ್ಲಾ ಪೊಲೀಸ್, ಕೆಎಸ್‍ಆರ್‍ಪಿ ಮತ್ತು ಕೆಎಆರ್‍ಪಿ ಘಟಕ ಗಳ ಸಂಯುಕ್ತಾಶ್ರಯದಲ್ಲಿ ನಜರ್‍ಬಾದಿನ ಎಸ್ಪಿ ಆಫೀಸ್ ಪಕ್ಕದಲ್ಲಿರುವ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಇಂದು ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಅವರು, ಹುತಾತ್ಮ ಪೊಲೀಸರ ಸ್ಮಾರಕಕ್ಕೆ ರೀತ್ ಸಮರ್ಪಿ ಸಿದ ನಂತರ ಮಾತನಾಡುತ್ತಿದ್ದರು. ಸಮಾಜದ ಕಾನೂನು…

ಕನ್ನಡ ರ್ಯಾಪ್ ಗಾಯಕ ಚಂದನ್‍ಶೆಟ್ಟಿ ಜೊತೆ ಬಿಗ್ ಬಾಸ್ ಖ್ಯಾತಿಯ ನಿವೇದಿತಾಗೌಡ ನಿಶ್ಚಿತಾರ್ಥ
ಮೈಸೂರು

ಕನ್ನಡ ರ್ಯಾಪ್ ಗಾಯಕ ಚಂದನ್‍ಶೆಟ್ಟಿ ಜೊತೆ ಬಿಗ್ ಬಾಸ್ ಖ್ಯಾತಿಯ ನಿವೇದಿತಾಗೌಡ ನಿಶ್ಚಿತಾರ್ಥ

October 22, 2019

ಮೈಸೂರು, ಅ.21(ಪಿಎಂ)- ಯುವ ದಸರಾ ವೇದಿಕೆಯಲ್ಲಿ ಬಿಗ್‍ಬಾಸ್ ಖ್ಯಾತಿಯ ನಿವೇದಿತಾಗೌಡರಿಗೆ ರಿಂಗ್ ತೊಡಿಸಿ ಪ್ರೇಮ ನಿವೇದನೆ ಮಾಡಿ ವಿವಾದದ ಅಲೆ ಎಬ್ಬಿಸಿದ್ದ ಕನ್ನಡದ ರ್ಯಾಪ್ ಗಾಯಕ ಚಂದನ್ ಶೆಟ್ಟಿ ಸೋಮ ವಾರ ನಿಶ್ಚಿತಾರ್ಥದ ರಿಂಗ್ ತೊಡಿಸಿ ವಿವಾಹ ಮಹೋ ತ್ಸವಕ್ಕೆ ಮುನ್ನುಡಿ ಬರೆದಿದ್ದಾರೆ. ಸರ್ಕಾರಿ ಪ್ರಾಯೋಜಿತ ಯುವ ದಸರಾದ ವೇದಿಕೆ ಯಲ್ಲಿ ರಿಂಗ್ ತೊಡಿಸಿ ಪ್ರೇಮ ನಿವೇದನೆ ಮಾಡಿ ಪರ-ವಿರೋಧದ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದ ಜೋಡಿ ಇದೀಗ ಸತಿಪತಿಗಳಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ…

ನೇಗಿಲ ಯೋಗಿಯಿಂದ ಇಂಜಿನಿಯರ್ ಸೇವಾ ಪ್ರಶಸ್ತಿ ಪ್ರದಾನ
ಮೈಸೂರು

ನೇಗಿಲ ಯೋಗಿಯಿಂದ ಇಂಜಿನಿಯರ್ ಸೇವಾ ಪ್ರಶಸ್ತಿ ಪ್ರದಾನ

October 22, 2019

ಮೈಸೂರು,ಅ.21(ಎಂಕೆ)-ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸಾಧಕ ಇಂಜಿನಿಯರ್‍ಗಳಿಗೆ ‘ಇಂಜಿನಿಯರ್ ಸೇವಾ ಪ್ರಶಸ್ತಿ’ ಹಾಗೂ ಪ್ರತಿಭಾನ್ವಿತ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿರುವ ನೇಗಿಲಯೋಗಿ ಮರುಳೇಶ್ವರ ಸೇವಾ ಭವನ ದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಆಯೋಜಿಸಿದ್ದ ಇಂಜಿನಿಯರ್ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಾಧವ, ಡಾ.ಆರ್. ಎಂ.ಮಹಾಲಿಂಗೇಗೌಡ, ಎಸ್.ನಾಗ ರಾಜು, ಎಂ.ಬಿ.ಮಂಜೇಗೌಡ, ಅಮರ್ ನಾಥ್ ಆರ್.ಬೋರಯ್ಯ, ಬಿ.ಎನ್. ಶೋಭಾ ಮತ್ತು ಎಂ.ಬಿ.ಇಂದ್ರೇಶ್ ಅವ ರಿಗೆ…

ನಂಜನಗೂಡು ರಸ್ತೆಯಲ್ಲಿ ಟೋಲ್ ಸಂಗ್ರಹಕ್ಕೆ ಮಾಜಿ ಮೇಯರ್ ಪ್ರಕಾಶ್ ತೀವ್ರ ವಿರೋಧ
ಮೈಸೂರು

ನಂಜನಗೂಡು ರಸ್ತೆಯಲ್ಲಿ ಟೋಲ್ ಸಂಗ್ರಹಕ್ಕೆ ಮಾಜಿ ಮೇಯರ್ ಪ್ರಕಾಶ್ ತೀವ್ರ ವಿರೋಧ

October 22, 2019

ಮೈಸೂರು,ಅ.21(ಎಂಟಿವೈ)- ರಾಷ್ಟ್ರೀಯ ಹೆದ್ದಾರಿ 212(766) ಮೈಸೂರು-ನಂಜನ ಗೂಡು, ಟಿ.ನರಸೀಪುರದ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಂದ ಟೋಲ್ ಸಂಗ್ರಹಿಸುವ ಪ್ರಸ್ತಾಪದಿಂದ ಹಿಂದೆ ಸರಿಯುವಂತೆ ಮೈಸೂರು ಮಹಾ ನಗರಪಾಲಿಕೆ ಮಾಜಿ ಮೇಯರ್ ಬಿ.ಕೆ. ಪ್ರಕಾಶ್ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕøತಿಕ ನಗರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ರಸ್ತೆ ಗಳಾದ ಮೈಸೂರು-ನಂಜನಗೂಡು ರಸ್ತೆ, ಮೈಸೂರು-ಟಿ.ನರಸೀಪುರ ರಸ್ತೆಯಲ್ಲಿ ವಾಹನ ಸವಾರರಿಂದ ಟೋಲ್ ಸಂಗ್ರಹಿ ಸಲು ಮುಂದಾಗಿರುವುದು ಸರಿಯಾದ ಕ್ರಮ ವಲ್ಲ. ಮೊದಲ…

ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗ ಖಾತರಿಗೆ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ
ಮೈಸೂರು

ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗ ಖಾತರಿಗೆ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ

October 22, 2019

ಮೈಸೂರು,ಅ.21(ಎಂಟಿವೈ)- ಕನ್ನಡಿ ಗರಿಗೆ ಕಡ್ಡಾಯವಾಗಿ ರಾಜ್ಯದಲ್ಲಿ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಡಾ.ಸರೋ ಜಿನಿ ಮಹಿಷಿ ಸಮಿತಿ ಪರಿಷ್ಕೃತ ವರದಿ ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಲು ಗೋಕಾಕ್ ಚಳವಳಿ ಮಾದರಿ ಹೋರಾಟ ಅನಿವಾರ್ಯವಾಗಿದ್ದು, ಹಿರಿಯ ನಟ ಡಾ. ಶಿವರಾಜ್‍ಕುಮಾರ್ ಇದರ ನೇತೃತ್ವ ವಹಿಸು ವಂತೆ ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋ ಗಾವಕಾಶಗಳು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರಿಗೆ…

ಕಲಾವಿದನಿಗೆ ಪ್ರೋತ್ಸಾಹ ಅತ್ಯಗತ್ಯ
ಮೈಸೂರು

ಕಲಾವಿದನಿಗೆ ಪ್ರೋತ್ಸಾಹ ಅತ್ಯಗತ್ಯ

October 22, 2019

ಮೈಸೂರು, ಅ.21(ಎಂಕೆ)- ಕಲಾವಿದರಿಗೆ ಆರ್ಥಿಕ ಸಹಾಯಕ್ಕಿಂತ ಪ್ರೋತ್ಸಾಹ ಅತ್ಯಗತ್ಯ ಎಂದು ಮೇಲು ಕೋಟೆ ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಹೇಳಿದರು. ನಗರದ ಕಲಾಮಂದಿರದಲ್ಲಿ ಅರ್ಧ ನಾರೀಶ್ವರ ಕಲಾಭಿವೃದ್ಧಿ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹ ಯೋಗದಲ್ಲಿ ಆಯೋಜಿಸಿದ್ದ ‘ಮೋಹಿನಿ -ಭಸ್ಮಾಸುರ’ ಪೌರಾಣಿಕ ನಾಟಕ ಪ್ರದರ್ಶನ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರೇ ಸಾಕು ಅವರಿಗೆ ಪ್ರೋತ್ಸಾಹ ನೀಡಿದಂತೆ ಎಂದರು. ನಾಟಕಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಹಾಭಾರತವನ್ನು ಇಂದಿಗೂ…

1 793 794 795 796 797 1,611
Translate »